ಕಲಬುರ್ಗಿ:- ಇದೇ ತಿಂಗಳ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದ್ದು ಅಂದು ಎಲ್ಲೆಡೆ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆ ನೀಡಿರೋ ಹಿನ್ನಲೆ ಕಲಬುರಗಿಯಲ್ಲಿ ರಾಮನವಮಿ ಉತ್ಸವ ಸಮಿತಿ ಉಚಿತವಾಗಿ ಹಣತೆಗಳನ್ನ ವಿತರಣೆ ಮಾಡಿತು.
ನಗರದ ಶರಣ ಬಸವೇಶ್ವರ ದೇಗುಲದ ಅಂಗಳದಲ್ಲಿ ಈ ಸೇವಾ ಕಾರ್ಯ ನಡೆದಿದ್ದು ರಾಮ ಭಕ್ತರು ಆಸಕ್ತಿಯಿಂದ ಹಣತೆಗಳನ್ನ ಪಡೆದಿದ್ದು ವಿಶೇಷವಾಗಿತ್ತು.
ಇದೇವೇಳೆ ಜಿಲ್ಲೆಯ108 ಗುಡಿಗಳಿಗೆ ತಲಾ 1008 ಹಣತೆಗಳನ್ನ ವಿತರಿಸಲು ರಾಮ ನವಮಿ ಉತ್ಸವ ಸಮಿತಿ ಸಂಕಲ್ಪ ಮಾಡಿದೆ ಅಂತ ಸಮಿತಿಯ ಮುಖ್ಯಸ್ಥ ರಾಜು ಭವಾನಿ ಹೇಳಿದ್ದಾರೆ…