ಮಲಯಾಳಂ (Malayalam) ಸಿನಿಮಾ (Music) ರಂಗದ ಹೆಸರಾಂತ ಸಂಗೀತ ನಿರ್ದೇಶಕ, ಸಿನಿಮಾ ಸಂಗೀತದಲ್ಲಿ ಸಾಕಷ್ಟ ಪ್ರಯೋಗಗಳನ್ನು ಮಾಡಿರುವ ಕೆ.ಜೆ. ಜಾಯ್ (KJ Joy) ನಿಧನರಾಗಿದ್ದಾರೆ (Passed Away). ಅವರಿಗೆ 77 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಲವ್ ಲೆಟರ್ ಸಿನಿಮಾದ ಮೂಲಕ 1975ರಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿದ್ದರು ಜಾಯ್. ನಂತರ ಸರ್ಪಂ, ಪ್ರಿಯಾಪುತ್ರನ್, ಸ್ನೇಹ ಯಮುನಾ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದ ಹೆಗ್ಗಳಿಕೆ ಇವರದ್ದು.
ಸಿನಿಮಾ ಸಂಗೀತದ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ ಜಾಯ್. ಮಲಯಾಳಂ ಸಿನಿಮಾ ರಂಗಕ್ಕೆ ಕೀ ಬೋರ್ಡ್ ಸೇರಿದಂತೆ ಅನೇಕ ಆಧುನಿಕ ವಾದ್ಯವನ್ನು ಪರಿಚಯಿಸಿದವರು. ಹಾಗಾಗಿ ಮಲಯಾಳಂ ಸಿನಿಮಾ ಕ್ಷೇತ್ರ ಮೊದಲ ಟೆಕ್ನೋ ಸಂಗೀತಾಗಾರ ಎಂದು ಕರೆಯುತ್ತಿದೆ.