Author: AIN Author

ಕ್ಯಾನ್ಬೆರಾ: ಇಲ್ಲಿನ ಅಡಿಲೇಡ್ ಓವೆಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಆಸೀಸ್ ಸ್ಟಾರ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್‌ (Glenn Maxwell) 120 ರನ್ ಸಿಡಿಸುವ ಮೂಲಕ 5 ಅಂತಾರಾಷ್ಟ್ರೀಯ ಟಿ20 (T20I Cricket) ಶತಕ ಸಿಡಿಸಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ 4 ಶತಕ ಸಿಡಿಸಿರುವ ಸೂರ್ಯಕುಮಾರ್ ಯಾದವ್‌ (Suryakumar Yadav) ಅವರ ದಾಖಲೆಯನ್ನ ಮುರಿದಿದ್ದಾರೆ. ಜೊತೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಶತಕ ದಾಖಲೆಯನ್ನು ಸರಿಗಟ್ಟಿದ್ದಾರೆ. ಇತ್ತೀಚೆಗೆ ಆಫ್ಘಾನಿಸ್ತಾನ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 121 ರನ್ ಸಿಡಿಸುವ ಮೂಲಕ ತಮ್ಮ 5ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದ್ದರು ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಆಸೀಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 241 ರನ್ ಬಾರಿಸಿತು. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಗ್ಲೇನ್ ಮ್ಯಾಕ್ಸ್‌ವೆಲ್‌ 55…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಹೌದು ಈಗಾಗಲೇ  HSRP ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಹಲವು ಗಡುವುಗಳನ್ನು ನೀಡಿ ವಿಸ್ತರಿಸಿದೆ. ಫೆಬ್ರವರಿ 17 ಕೊನಯ ದಿನವಾಗಿದೆ. ಆದರೂ, ಜನರು ಕೊನೇ ಅವಧಿಯಲ್ಲಿ ಹೆಚ್ಚೆಚ್ಚು ರಿಜಿಸ್ಟರ್ ಮಾಡಲು ಮುಂದಾಗುತ್ತಿದ್ದು, ಅಪ್ಲೋಡ್ ಸಮಸ್ಯೆಯಾಗಲಿದೆ. ಈಗ ಪುನಃ ದಿನಾಂಕ ವಿಸ್ತರಣೆಗೆ ಒತ್ತಡ ಕೇಳಿ ಬಂದಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಾರಿಗೆ ಇಲಾಖೆ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನೇಕ ಇಲಾಖೆಗಳನ್ನ ಸಿಎಂ ಸಭೆ ಕರೆದಿದ್ದರು. ಅದೇ ರೀತಿ ಸಾರಿಗೆ ಇಲಾಖೆಯವರು ಕೂಡ  ಭಾಗಿಯಾಗಿದ್ದರು. ಆಟೋ ಟ್ಯಾಕ್ಸಿ, ಲಾರಿ  ಅಸೋಷಿಯಷನ್ ಅವರು ಎಲ್ಲಾ ಬಂದಿದ್ದರು. https://ainlivenews.com/are-you-keeping-peeled-garlic-in-the-fridge-stop-now-and-avoid-the-risk/ ಅವರ ಬೇಡಿಕೆಗಳನ್ನ ಕೂಡ ಇಟ್ಟಿದ್ದಾರೆ. ಜೊತೆಗೆ, ನಮ್ಮ ಸರ್ಕಾರ ಬಂದಮೇಲೆ ಸಾಕಷ್ಟು ಬೇಡಿಕೆ ಈಡೇರಿಸಿದ್ದೇವೆ ಎಂದರು. ಇಂದು ಹೊಸ ಬೇಡಿಕೆಗಳನ್ನೂ ಸಹ ಇಟ್ಟಿದ್ದಾರೆ. ಮುಂದಿನದ್ದು ಬಜೆಟ್…

Read More

ಹಾಸನ:- ನರೇಂದ್ರ ಮೋದಿ ಮತ್ತೊಮ್ಮೆ PM ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ – ಜೆಡಿಎಸ್​ ಮೈತ್ರಿ ಸೀಟು ಹಂಚಿಕೆಯ ಬಗ್ಗೆ ಸಮಸ್ಯೆ ಇಲ್ಲ. ಹಾಸನ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಸಣ್ಣಪುಟ್ಟ ಸಮಸ್ಯೆಗಳಿವೆ, ಅದೆಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಮಂಡ್ಯ ಜಿಲ್ಲೆಯ ಪ್ರತಿದಿನ ಒಂದು ಧಾರವಾಹಿ ಇರಲೇಬೇಕು. ನಿಖಿಲ್​ನನ್ನು ರಾಜಕೀಯವಾಗಿ ಮುಗಿಸಲು ಯಾವ ರೀತಿ ಮಾಡಿದ್ದರು? ಒಂದು ತಿಂಗಳಿನಿಂದ ಧಾರವಾಹಿ ನಡೆಯುತ್ತಿದೆ ಎಂದು ಹೇಳಿದರು. ಹೆಚ್​ಡಿ ರೇವಣ್ಣ ಅವರಿಗೆ ಸ್ವಲ್ಪ ದುಡುಕಿನ ಸ್ವಭಾವ. ಅವರು ದುಡುಕಿನ ಸ್ಚಭಾವದಿಂದ ಜನರ ವಿರೋದ ಕಟ್ಟಿಕೊಳ್ಳುತ್ತಾರೆ. ಹೆಚ್​ಡಿ ದೇವೇಗೌಡರ ಬೆನ್ನೆಲುಭಾಗಿ ನಿಂತು ರೇವಣ್ಣ ಬೆಳೆದರು. ಅವರದ್ದು ದುಡುಕಿನ ಸ್ವಭಾವ ಆದರೂ ಮಾಡಿರುವ ಕೆಲಸ ಏನೂ ಕಡಿಮೆಯಿಲ್ಲ. ಯಾರದ್ದಾದರೂ ಮನಸ್ಸಿಗೆ ನಮ್ಮಿಂದ ನೋವಾಗಿದ್ದರೆ, ತಪ್ಪಾಗಿದ್ದರೆ ಖಂಡಿತಾ ತಿದ್ದಿಕೊಳ್ಳುತ್ತೇವೆ. ತಪ್ಪುಗಳನ್ನು ಕ್ಷಮಿಸಿ ಬೆಳೆಸುವವರು ನೀವೇ ಎಂದು ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೆಲಘಟನಗಳು ಹಾಸನ ಜಿಲ್ಲೆಯಲ್ಲಿ ನಡೆದಿವೆ. ಯಾವುದೇ ಅಪ ಪ್ರಚಾರಗಳಿಗೆ ಕಿವಿಗೊಡಬೇಡಿ. ತಮ್ಮ…

Read More

ಶಂಖಪುಷ್ಪ ಹೂವಿನ ಚಹಾವನ್ನು ಸಾಮಾನ್ಯವಾಗಿ ಬ್ಲೂ ಟೀ ಎಂದು ಕರೆಯಲಾಗುತ್ತದೆ. ಇದರಲ್ಲಿ ಕೆಫೀನ್ ಅಂಶ ಇರುವುದಿಲ್ಲ. ಗಿಡಮೂಲಿಕೆಗಳ ಮಿಶ್ರಣವಾಗಿರುವ ಈ ಟೀ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪಾನೀಯವಾಗಿದೆ. ಕನ್ನಡದಲ್ಲಿ ಶಂಖಪುಷ್ಪ ಎಂದು ಕರೆಯಲಾಗುವ ಕ್ಲೈಟೋರಿಯಾ ಟೆರ್ನೇಟಿಯಾ ಸಸ್ಯದ ಎಲೆ ಮತ್ತು ಹೂವಿನ ಎಸಳುಗಳನ್ನು ಬಿಸಿ ಅಥವಾ ತಣ್ಣನೆಯ ನೀರಿನಲ್ಲಿ ಹಾಕಿ ನೀಲಿ ಚಹಾವನ್ನು ತಯಾರಿಸಲಾಗುತ್ತದೆ. ಈ ಚಹಾವು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಬಹಳ ಜನಪ್ರಿಯವಾಗಿದೆ. ಅಲ್ಲಿ ಇದನ್ನು ಸಾಮಾನ್ಯವಾಗಿ ಊಟದ ನಂತರ ಸೇವಿಸಲಾಗುತ್ತದೆ. ‘ಬ್ಲೂ ಟೀ‘ಪ್ರಯೋಜನಗಳು. ಬ್ಲೂ ಬಟರ್‌ಫ್ಲೈ ಹೂವಿನಿಂದ ತಯಾರಾಗುವ ಚಹಾ ಇದು. ಈ ಚಹಾವು ನೋಡಲು ಬಹಳ ಸುಂದರವಾಗಿರುತ್ತದೆ. ಇದರ ರುಚಿಯೂ ಅಷ್ಟೇ ಅದ್ಭುತ. ಈ ಚಹಾವು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸಿದರೆ ದೇಹದ ಕೊಬ್ಬು ವೇಗವಾಗಿ ಕಡಿಮೆಯಾಗುತ್ತದೆ. ಚಹಾದಲ್ಲಿರುವ ಆಯಂಟಿಒಕ್ಸಿಡೆಂಟ್‌ಗಳು ದೇಹವನ್ನು ರಿಫ್ರೆಶ್ ಮಾಡುತ್ತದೆ ಮತ್ತು ಸೋಮಾರಿತನವನ್ನು ದೂರ ಮಾಡುತ್ತವೆ. https://ainlivenews.com/are-you-keeping-peeled-garlic-in-the-fridge-stop-now-and-avoid-the-risk/ ತೂಕವನ್ನು ಕಡಿಮೆ ಮಾಡುವುದರ…

Read More

ಮಂಡ್ಯ:- ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಗೆಲುವಿನೊಂದಿಗೆ ಅತಿಹೆಚ್ಚು ಲೀಡ್ ಗಳಿಸುವತ್ತ ನಿಗಾ ವಹಿಸಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿಗೆ ಆಗಮಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೈವೋಲ್ಟೇಜ್ ಸಭೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಿನ ಲೀಡ್‌ನೊಂದಿಗೆ ಗೆಲುವು ಸಾಧಿಸುವತ್ತ ಗಮನ ಹರಿಸುವಂತೆ ಪಕ್ಷದ ವರಿಷ್ಠರಿಗೆ ಸೂಚನೆ ನೀಡಿದ್ದಾರೆ. ಭಾನುವಾರ ಅಮಿತ್ ಶಾ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹೈವೋಲ್ಟೇಜ್ ಕಣವಾಗಿರುವ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಕೆಲ ಬಿಜೆಪಿ ನಾಯಕರು ಪಟ್ಟು ಹಿಡಿದಿರುವ ಪ್ರಸಂಗವೂ ಕೇಳಿಬಂದಿದೆ. ಹಾಲಿ ಸಂಸದೆ ಸುಮಲತಾ (umalatha Ambareesh) ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ಸಲಹೆಗಳೂ ಕೇಳಿಬಂದಿವೆ ಸುಮಲತಾ ಅಂಬರೀಶ್ ಅವರಿಗೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಇದೆ. ಅವರಿಗೆ ಮೈತ್ರಿ (BJP-JDS Alliance) ಟಿಕೆಟ್ ನೀಡಿದ್ರೆ ಗೆಲುವು ಸುಲಭ. ಹಾಗಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಪಟ್ಟು ಹಿಡಿದಿದ್ದಾರೆ. ಇದೆಲ್ಲವನ್ನು ಸಮಾಧಾನವಾಗಿಯೇ ಕೇಳಿಸಿಕೊಂಡ ಅಮಿತ್ ಶಾ…

Read More

ಎಲ್ಲಾ ಪ್ರೇಮಿಗಳು ಎದುರು ನೋಡುತ್ತಿದ್ದ ದಿನ ಬಂದಿದೆ. ಇಡೀ ವಿಶ್ವವೇ ಪ್ರತಿ ವರ್ಷ ಆಚರಿಸುವ ವಿಶೇಷ ದಿನಗಳಲ್ಲಿ ವ್ಯಾಲೆಂಟೈನ್‌ ಡೇ ಕೂಡಾ ಒಂದು. ಪರ-ವಿರೋಧ ಚರ್ಚೆಗಳ ನಡುವೆ, ಆಚರಣೆಯ ವಿರೋಧದ ನಡುವೆಯೂ ಪ್ರತಿ ವರ್ಷ ಪ್ರೇಮಿಗಳು ತಮ್ಮ ವಿಶೇಷ ದಿನವನ್ನು ಆಚರಿಸುತ್ತಾ ಬಂದಿದ್ದಾರೆ ಆದ್ರೆ ಅವರಲ್ಲಿ ಅನೇಕರಿಗೆ ಪ್ರೇಮಿಗಳ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ಗೊತ್ತೇ ಇರುವುದಿಲ್ಲ. ಹಾಗಿದ್ರೆ ಈ ದಿನವನ್ನು ಯಾಕೆ ಆಚರಿಸಲಾಗುತ್ತದೆ? ಇದರ ಇತಿಹಾಸವೇನು? ಮಹತ್ವವೇನು ಅನ್ನೋದನ್ನು ನೋಡೋಣ. ವ್ಯಾಲೆಂಟೈನ್ಸ್ ಡೇ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಒಂದು ಮೂಲದ ಪ್ರಕಾರ ವ್ಯಾಲೆಂಟೈನ್ಸ್ ಡೇ ಅನ್ನು 14 ನೇ ಶತಮಾನದವರೆಗೆ ಪ್ರಣಯದ ದಿನವಾಗಿ ಆಚರಿಸಿದ ಬಗ್ಗೆ ದಾಖಲೆಗಳಿಲ್ಲ. 8 ನೇ ಶತಮಾನದ ಗೆಲಾಸಿಯನ್ ಸ್ಯಾಕ್ರಮೆಂಟರಿಯಲ್ಲಿ ಫೆಬ್ರವರಿ 14 ರಂದು ಸೇಂಟ್ ವ್ಯಾಲೆಂಟೈನ್ ಹಬ್ಬದ ಆಚರಣೆ ದಾಖಲಾಗಿದೆ. ಯಾರು ಈ ವ್ಯಾಲೆಂಟೈನ್‌..? ವ್ಯಾಲೆಂಟೈನ್‌, ರೋಮ್‌ಗೆ ಸೇರಿದ ಪಾದ್ರಿ. ಸುಮಾರು 3ನೇ ಶತಮಾನದಲ್ಲಿ ಅಂದರೆ ಕ್ರಿ.ಶ. 260 ಸಮಯದಲ್ಲಿ…

Read More

ಬೆಂಗಳೂರು:- 5 ವರ್ಷದ ಒಳಗಿನ ಮಕ್ಕಳಿಗೆ ಹಾಕುವ ಪೋಲಿಯೋ ಅಭಿಯಾನ ಯಾವಾಗ ಎಂದು ಜನರು ಗೊಂದಲಕ್ಕೆ ಒಳಗಾಗಿದ್ದರು. ಇದೀಗ ಸರ್ಕಾರ ಮುಂದಿನ ತಿಂಗಳು 03 ರಿಂದ 06 ರವರೆಗೆ ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದೆ ಈ ಅಭಿಯಾನ ಮೂರು ದಿನಗಳು ನಡೆಯಲ್ಲಿದ್ದು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜಾಗೃತಿ ಅಭಿಯಾನವನ್ನು ಬಿಬಿಎಂಪಿ ಕೈಗೊಳುತ್ತಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರ, ನಗರ ಚಿಕಿತ್ಸಾ ಕೇಂದ್ರ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತದೆ

Read More

ರಾಯಚೂರು:- ಕರೆಮ್ಮ ನಾಯಕ್ ಪಿ.ಎಗಳ ಮೇಲೆ ಜಾತಿ ನಿಂದನೆ ಕೇಸ್ ದಾಖಲಾದ ಹಿನ್ನೆಲೆ, ಪೊಲೀಸ್ ಠಾಣೆ ಮುಂದೆ ಶಾಸಕಿ ಪ್ರತಿಭಟನೆ ಮಾಡಿದ್ದಾರೆ. ತನಿಖೆ ಮಾಡದೇ ಹೇಗೆ ಅಟ್ರಾಸಿಟಿ ದಾಖಲಿಸಿದ್ದೀರಿ ಎಂದು ಪ್ರತಿಭಟನೆ ನಡೆಸಿದ್ದು, ನಾವೂ ಸಹ ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ದೂರು ತೆಗೆದುಕೊಳ್ಳಲು ದೇವದುರ್ಗ ಪೊಲೀಸರು ನಿರಾಕರಿಸಿದ್ದು, ನ್ಯಾಯ ಬೇಕು ಎಂದು ಶಾಸಕಿ ಪ್ರತಿಭಟನೆಗೆ ಕುಳಿತಿದ್ದಾರೆ. ಅಕ್ರಮ ಮರಳು ಸಾಗಣೆ ಟ್ರಾಕ್ಟರ್ ಜಪ್ತಿ ಮಾಡಿದ್ದಕ್ಕೆ ರಾಯಚೂರಿನ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಪುತ್ರ , ಆಪ್ತ ಸಹಾಯಕರು ಸೇರಿ ಹಲವರು ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿ ದೇವದುರ್ಗ ಠಾಣೆ ಕಾನ್ಸ್‌ಟೇಬಲ್ ಹನುಮಂತರಾಯ ದೂರು ನೀಡಿದ್ದು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವದುರ್ಗ ಪೇದೆ ಹನುಮಂತ್ರಾಯ ನಾಯಕ್ ಮೇಲೆ ಹಲ್ಲೆ, ಜಾತಿನಿಂದನೆ ಮಾಡಿದ್ದಕ್ಕೆ ಶಾಸಕಿ ಪುತ್ರ ಸಂತೋಷ್, ಸಹೋದರ ತಿಮ್ಮಾರೆಡ್ಡಿ, ಆಪ್ತ ಕಾರ್ಯದರ್ಶಿ ಇಲಿಯಾಸ್, ರಫೀಕ್ ಸೇರಿ 8 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಹಿನ್ನೆಲೆ…

Read More

ಬೆಂಗಳೂರು:- ಆರು ವರ್ಷದ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಬೆಂಗಳೂರು ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶಕ್ಕೆ ಬಾರಿ ಬೆಂಬಲ ವ್ಯಕ್ತವಾಗಿದೆ. ಶಾಲೆಗೆ ತೆರಳುವಾಗ ದ್ವಿಚಕ್ರ ವಾಹನಗಳಲ್ಲಿ  ಮಕ್ಕಳಿಗೆ ಹೆಲ್ಮೆಟ್ ಧರಿಸೋದು ಕಡ್ಡಾಯ ಮಾಡಲಾಗಿದ್ದು, ಈ ಹಿಂದೆ ಈ ಬಗ್ಗೆ ಶಿಕ್ಷಣ ಸಂಸ್ಥೆಗಳು ಧ್ವನಿ ಎತ್ತಿದವು. ಪೋಷಕರೊಂದಿಗೆ ಬೈಕ್ ಗಳಲ್ಲಿ ಶಾಲೆಗೆ ಬರುವ ಸಂಧರ್ಭದಲ್ಲಿ ಮಕ್ಕಳಿಗೆ ಸೇಫ್ಟಿ ಒದಗಿಸಲು ಸೂಚನೆ ನೀಡಲಾಗಿತ್ತು. ಶಾಲಾ ಆವರಣಗಳಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲು ಕೆಲ ಖಾಸಗಿ ಶಾಲೆಗಳು ಪತ್ರ ಬರೆದಿದ್ದರು. ಇದೀಗಾ ಪೋಲಿಸ್ ಇಲಾಖೆಯ ನಿರ್ಧಾರಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನಷ್ಟು ಹೆಚ್ಚು ಸ್ಕೂಲ್ ಗಳ ಬಳಿ ಸ್ಪೇಷಲ್ ಡ್ರೈವ್ ನಡೆಸುವಂತೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮನವಿ ಮಾಡಿದ್ದಾರೆ

Read More

ಬಾಗಲಕೋಟೆ:- ಅಯೋಧ್ಯೆ ರಾಮ ಮಂದಿರ ಮಂಡಲಾರಾಧನೆ (Mandalaradhne) ಪೂಜೆಗೆ ಮುಧೋಳ (Mudhol) ಮೂಲದ ಅರ್ಚಕ ಗುರುನಾಥ್ ಜೋಶಿ (Gurunath Joshi) ಆಯ್ಕೆಯಾಗಿದ್ದಾರೆ. ಅರ್ಚಕ ಗುರುನಾಥ್ ಜೋಶಿ ಅವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ಲ ಯಜುರ್ವೇದ ಅಧ್ಯಯನ ಅಧ್ಯಯನ‌ ಮಾಡಿದ್ದಾರೆ. ಅರ್ಚಕ ಗುರುನಾಥ್ ಜೋಶಿ ಅವರನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಸದಸ್ಯರು, ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಶ್ರೀಗಳು ಆಯ್ಕೆ ಮಾಡಿದ್ದಾರೆ. ಅಯೋಧ್ಯೆ ರಾಮ ಮಂದಿರದಲ್ಲಿ 48 ದಿನಗಳ ಕಾಲ ಮಂಡಲಾರಾಧನೆ ನಡೆಯಲಿದೆ. ಫೆ.15, 16 ರಂದು ನಡೆಯಲಿರುವ ಮಂಡಲಾರಾಧನೆ ಪೂಜೆಯಲ್ಲಿ ಅರ್ಚಕ ಗುರುನಾಥ್ ಜೋಶಿ ಅವರು ಭಾಗಿಯಾಗಲಿದ್ದಾರೆ. ಅರ್ಚಕ ಗುರುನಾಥ್ ಜೋಶಿ ಅವರು ಸದ್ಯ ಸದ್ಗುರು ಚಿದಂಬರ ವೈದಿಕ ಜ್ಯೋತಿಷ್ಯಾಲಯ ನಡೆಸುತ್ತಿದ್ದಾರೆ. ಈ ಹಿಂದೆ ಮುಧೋಳದ ಸಾಯಿ ಬಾಬಾ ದೇಗುಲದ ಅರ್ಚಕರಾಗಿದ್ದರು. ಅಯೋಧ್ಯೆ ರಾಮ ಮಂದಿರ‌ ‌ಮಂಡಲಾರಾಧನೆಗೆ ನನ್ನನ್ನು ಆಯ್ಕೆ ಮಾಡಿದ್ದು ನಮ್ಮ ಪೂರ್ವಜರು ‌ಮಾಡಿದ ಪುಣ್ಯ. ಇಂತಹ ಅವಕಾಶ ಸಿಕ್ಕಿದ್ದು ಎಂದು ಮರೆಯಲಾಗದು. ಪ್ರಭು ಶ್ರೀರಾಮಚಂದ್ರ…

Read More