Author: AIN Author

ಬೆಂಗಳೂರು:  ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ MLC ಟಿ ಎ ಶರವಣ ಅವರನ್ನು ಮಾಜಿ ಸಿಎಂ ಹಾಗೂ ಜೆಡಿಎಸ್‌ ಪಕ್ಷದ ಅಧ್ಯಕ್ಷರಾದ  ಎಚ್ ಡಿ ಕುಮಾರಸ್ವಾಮಿ ಅವರು  ನೇಮಕ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಎಚ್ ಡಿ ಕುಮಾರಸ್ವಾಮಿ ಹಾಗು ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಅವರಿಗೆ   ಪತ್ರವನ್ನು ನೀಡಿ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಪಕ್ಷದ ಕೇಂದ್ರ ಕಚೇರಿಯಾದ ಜೆಪಿ ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ  ಎಚ್ ಡಿ ಕುಮಾರಸ್ವಾಮಿ ಹಾಗು ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರನ್ನು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

Read More

ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರು ವಿಶ್ವಾಸಮತ ಗೆದ್ದಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪರವಾಗಿ ಒಟ್ಟು 129 ಶಾಸಕರು ಮತ ಚಲಾಯಿಸಿದ್ದು, ವಿಶ್ವಾಸ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದ್ದಾರೆ. 243 ಸದಸ್ಯರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 122 ಸದಸ್ಯರ ಬಲ ಬೇಕಿತ್ತು. ಈ ಪೈಕಿ 129 ಮತಗಳು ಸರ್ಕಾರದ ಪರ ಚಲಾವಣೆಗೊಂಡವು. ಬಳಿಕ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಮೈತ್ರಿ ಸಂದರ್ಭದಲ್ಲಿ ಆರ್‌ಜೆಡಿ ಭ್ರಷ್ಟ ಆಚರಣೆಗಳಲ್ಲಿ ತೊಡಗಿಕೊಂಡಿತ್ತು. ಆದ್ರೆ ಪ್ರಸ್ತುತ ಎನ್‌ಡಿಎ ಸರ್ಕಾರವು ಈ ಭ್ರಷ್ಟಚಾರದ ವಿರುದ್ಧ ತನಿಖೆ ನಡೆಸುತ್ತದೆ ಎಂದು ಹೇಳಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಮಹಾಘಟಬಂಧನ್‌ನಿಂದ ಪ್ರತ್ಯೇಕಗೊಂಡು ಎನ್‌ಡಿಎ ಜೊತೆಗೆ ಸೇರಿ ಹೊಸ ಸರ್ಕಾರ ರಚಿಸಿದ ಹಿನ್ನೆಲೆಯಲ್ಲಿ ವಿಶ್ವಾಸ ಮತಯಾಚನೆ ನಡೆಯಿತು. https://ainlivenews.com/a-man-in-bangalore-saw-youtube-and-committed-theft-with-the-police/ ವಿಶ್ವಾಸಮತದ ಮುನ್ನ, ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ತನ್ನ ಶಾಸಕರನ್ನು ಸೋಮವಾರ ಬೆಳಗ್ಗೆ ಪಾಟ್ನಾದ ಚಾಣಕ್ಯ ಹೋಟೆಲ್‌ಗೆ ಸ್ಥಳಾಂತರಿಸಿತ್ತು. ಇದರ ನಡುವೆ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ…

Read More

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಕಲಂನೂರಿ ಶಾಸಕ ಸಂತೋಷ್ ಬಂಗಾರ್ ಅವರು ಹೇಳಿಕೆಯೊಂದನ್ನು ನೀಡಿ ಇದೀಗ ಭಾರೀ ವಿವಾದಕ್ಕೀಡಾಗಿದ್ದಾರೆ. ಚುನಾವಣಾ ಆಯೋಗವು  ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದರ ವಿರುದ್ಧ ನಿರ್ದೇಶನಗಳನ್ನು ನೀಡಿದ ಬಳಿಕ ಸಂತೋಷ್‌ ಬಂಗಾರ್‌ ಹೇಳಿಕೆಯ ವೀಡಿಯೋ ವೈರಲ್‌ ಆಗಿದೆ. https://ainlivenews.com/good-news-for-those-who-have-been-waiting-for-the-pulse-polio-vaccine/ ವೀಡಿಯೋದಲ್ಲಿ ಏನಿದೆ..?: ಹಿಂಗೋಲಿ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕರು, ಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಎರಡು ದಿನ ಊಟ ಮಾಡಬೇಡಿ ಎಂದು ಹೇಳಿದ್ದಾರೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕೆಂದು ಪೋಷಕರ ಮುಂದೆಯೇ ಶಾಲಾ ಮಕ್ಕಳನ್ನು ಕೇಳಿದ್ದಾರೆ. https://twitter.com/RRPSpeaks/status/1756177295029481695?ref_src=twsrc%5Etfw%7Ctwcamp%5Etweetembed%7Ctwterm%5E1756177295029481695%7Ctwgr%5Eacd0b7f3e5f262abdb25c22acd37b0168a83c525%7Ctwcon%5Es1_&ref_url=https%3A%2F%2Fpublictv.in%2Fshiv-sena-mla-santosh-bangar-asks-kids-not-to-eat-for-two-days-if-in-a-viral-video%2F ಶಾಸಕರ ಹೇಳಿಕೆ ವಿರುದ್ಧ ಕಾಂಗ್ರೆಸ್ (Congress) ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (NCP) ಕಿಡಿಕಾರಿದ್ದು, ಕ್ರಮಕ್ಕೆ ಒತ್ತಾಯಿಸಿವೆ. ಎನ್‌ಸಿಪಿ-ಎಸ್‌ಪಿ ವಕ್ತಾರ ಕ್ಲೈಡ್ ಕ್ರಾಸ್ಟೊ ಮಾತನಾಡಿ, ಬಂಗಾರ್ ಅವರು ಶಾಲಾ ಮಕ್ಕಳಿಗೆ ಹೇಳಿರುವುದು ಚುನಾವಣಾ ಆಯೋಗದ ನಿರ್ದೇಶನಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು…

Read More

ಬೆಂಗಳೂರು: ಆತ ಅಂತಿಂಥ ಕಳ್ಳ ಅಲ್ಲ ಆಗಾಗ ಠಾಣೆಗೆ ಹೋಗಿ ಪೊಲೀಸ್ರ ಜೊತೆ ಮಾತಾಡ್ತಾನೂ ಇದ್ದ.. ಅವ್ರ ಜೊತೆ ಕೆಲ ಕೇಸ್ ಗಳಿಗೆ ಸ್ಪಾಟ್ ಗೂ ಹೋಗ್ತಿದ್ದ.. ಪೊಲೀಸರ ಜೊತೆಯಲ್ಲಿದ್ದುಕೊಂಡೇ ಅವ್ರಿಗೇ ಗೊತ್ತಾಗ್ದಂಗೆ ಕಳ್ಳತನ ಮಾಡ್ತಿದ್ದ.. ಕಳ್ಳತನ ಮಾಡೋದು ಹೇಗೆ ಅಂತ ಯೂಟ್ಯೂಬ್ ನೋಡಿ ಸ್ಕೆಚ್ ಹಾಕ್ತಿದ್ದ. ಹೀಗೆ ಕಳ್ಳತನ ಮಾಡುತ್ತಿದ್ದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ.. ಇವನು ಪೊಲೀಸರ ಜೊತೆಯೇ ಇದ್ಕೊಂಡು ಪೊಲೀಸರಿಗೇ ಗೊತ್ತಾಗ್ದಂಗೆ ಮನೆಗಳ್ಳತನ ಮಾಡಿ ತಪ್ಪಿಸಿಕೊಳ್ತಿದ್ದ ಖತರ್ನಾಕ್ ಕಳ್ಳನನ್ನ ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.. ಹೀಗೆ ಐಷಾರಾಮಿ ಬೈಕ್ ನಲ್ಲಿ ಕೂತು ತಾನು ದೊಡ್ಡ ಹೀರೋ ಅನ್ನೋ ಫೀಲ್ ಅಲ್ಲಿ ಪೋಸ್ ಕೊಟ್ಟಿರೋ ಇವ್ನೇ ಆ ಚಾಲಾಕಿ ಕಳ್ಳ.. ಬರಪೀಡಿತ ರೈತರಿಗೆ ಕೊಡಲು ಹಣವಿಲ್ಲ; ಸಂಪುಟ ದರ್ಜೆ ಭಾಗ್ಯಕ್ಕೆ ಹಣವಿದೆ: HDK ಟೀಕೆ! ಅಂದ್ಹಾಗೆ ಇವ್ನ ಹೆಸ್ರು ಸುನೀಲ್ @ ತಮಟೆ ಅಂತಾ.. ಯೂಟ್ಯೂಬ್ ನಲ್ಲಿ ಸಿನಿಮಾ ನೋಡಿಯೇ ಕಳ್ಳತನಕ್ಕೆ ಇಳಿದಿದ್ದ.. ಯೂಟ್ಯೂಬ್ ನಲ್ಲಿ ಕ್ರೈಂ ರಿಲೇಟೆಡ್ ಸಿನಿಮಾಗಳನ್ನ…

Read More

ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ. ಇದೊಂದು ಜಾಹೀರಾತುಗಳಿಂದ ನಡೆಯುತ್ತಿರುವ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ; ಒಂದು ಕಡೆ ಬರಗಾಲ, ಕೇಂದ್ರ ಸರ್ಕಾರದಿಂದ ಹಣ ಬರುತ್ತಿಲ್ಲ ಎನ್ನುವ ಸರ್ಕಾರ ಇಲ್ಲಿ ನೋಡಿದರೆ ಗಂಜಿ ಕೇಂದ್ರಗಳನ್ನು ಸೃಷ್ಟಿ ಮಾಡಿ 90 ಮಂದಿಗೆ ಸಂಪುಟ ದರ್ಜೆ ನೀಡಿದೆ. ಅದರಲ್ಲಿ 77 ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ನೀಡಿದ್ದರೆ, ಸಿಎಂ ಕಚೇರಿಯಲ್ಲಿ 9 ಜನರಿಗೆ ಸಂಪುಟ ಭಾಗ್ಯ ಕರುಣಿಸಲಾಗಿದೆ. ರಾಜ್ಯದ ಆಡಳಿತಾತ್ಮಕ ಇತಿಹಾಸದಲ್ಲಿಯೂ ಇಷ್ಟು ಬೇಕಾಬಿಟ್ಟಿಯಾಗಿ ಅಧಿಕಾರ ಹಂಚಿಕೆ ಮಾಡಿ ಖಜಾನೆಗೆ ನಷ್ಟ ಉಂಟು ಮಾಡಲಾಗಿದೆ ಎಂದು ಅವರು ದೂರಿದರು. ರಾಜ್ಯಪಾಲರ ಬಾಯಲ್ಲಿ ಸರಕಾರ ಹಸೀ ಸುಳ್ಳುಗಳನ್ನು ಹೇಳಿಸಿದೆ: ಟಿ.ಎ.ಶರವಣ ಕಿಡಿ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಲಾದ ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು; ಕ್ಯಾಬಿನೆಟ್ ದರ್ಜೆ ಅದಕ್ಕೊಂದು ಲೆಕ್ಕ ಬೇಡವೇ? ಉಪ ಮುಖ್ಯಮಂತ್ರಿ ಅವರ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಗೂ ಕ್ಯಾಬಿನೆಟ್…

Read More

ನವದೆಹಲಿ: ಫೆಬ್ರವರಿ 13ರಂದು ದೆಹಲಿಯಲ್ಲಿ (New Delhi) ರೈತರ ಪ್ರತಿಭಟನೆ (Farmer’s Protest) ಹಿನ್ನೆಲೆ ಹರಿಯಾಣ (Haryana) ಸರ್ಕಾರವು ರಾಜ್ಯದ ಏಳು ಜಿಲ್ಲೆಗಳಾದ ಅಂಬಾಲಾ, ಜಿಂದ್, ಕುರುಕ್ಷೇತ್ರ, ಹಿಸಾರ್, ಕೈತಾಲ್, ಫತೇಹಾಬಾದ್ ಮತ್ತು ಸಿರ್ಸಾದಲ್ಲಿ ಇಂಟರ್ನೆಟ್ ಸೇವೆಗಳನ್ನು (Internet Service) ನಿಷೇಧಿಸಿದೆ. ಅಲ್ಲದೇ ಚಂಡೀಗಢಕ್ಕೆ ಸಮೀಪವಿರುವ ಪಂಚಕುಲದಲ್ಲಿ ಸೆಕ್ಷನ್ 144ನ್ನು (Section 144) ಜಾರಿಗೊಳಿಸಿದೆ. ಈ ಕುರಿತು ಮಾತನಾಡಿದ ಪಂಚಕುಲ (Panchakula) ಡಿಸಿಪಿ ಸುಮೇರ್ ಸಿಂಗ್ ಪ್ರತಾಪ್, ಪಾದಚಾರಿಗಳು ಅಥವಾ ಟ್ರ‍್ಯಾಕ್ಟರ್ ಟ್ರಾಲಿಗಳು ಮತ್ತು ಇತರ ವಾಹನಗಳಲ್ಲಿ ಯಾವುದೇ ರಾಡ್‌ಗಳು, ಆಯುಧಗಳನ್ನು ಸಾಗಿಸುವಂತಿಲ್ಲ. ಮತ್ತು ರ‍್ಯಾಲಿ, ಪ್ರತಿಭಟನೆಗಳು ಅಥವಾ ಮೆರವಣಿಗೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. https://ainlivenews.com/good-news-for-those-who-have-been-waiting-for-the-pulse-polio-vaccine/ ಫೆಬ್ರವರಿ 13 ರಂದು ರೈತ ಸಂಘಟನೆಗಳು ದೆಹಲಿಗೆ ತಮ್ಮ ಮೆರವಣಿಗೆಯನ್ನು ಘೋಷಿಸಿದ ನಂತರ, ರಾಷ್ಟ್ರ ರಾಜಧಾನಿಯನ್ನು ತಲುಪುವುದನ್ನು ತಡೆಯಲು ಪಂಜಾಬ್-ಹರಿಯಾಣ ಗಡಿ (Punjab-Haryana Border) ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪಂಜಾಬ್-ಹರಿಯಾಣ ಗಡಿಯನ್ನು ಮುಚ್ಚಲಾಗಿದೆ. ಬ್ಯಾರಿಕೇಡ್‌ಗಳು, ಬಂಡೆಗಳು, ಮರಳು ತುಂಬಿದ ಟಿಪ್ಪರ್‌ಗಳು ಮತ್ತು ಮುಳ್ಳುತಂತಿಗಳಿಂದ…

Read More

ಬೆಂಗಳೂರು: ರಾಜ್ಯ ಸರಕಾರ ಸಂಸದೀಯ ಚೌಕಟ್ಟಲ್ಲಿ ಘನತೆಯನ್ನು ಮರೆತು, ಕೇಂದ್ರದ ವಿರುದ್ಧ ಸಂಘ ರ್ಷ ಸಾರುವ ಸುಳಿವನ್ನು ರಾಜ್ಯಪಾಲರ ಮೂಲಕ ಹೇಳಿರುವುದು ಕೆಟ್ಟ ಪರಿಪಾಠ ಆಗಿದೆ ಎಂದು ಜೆಡಿಎಸ್ ಹಿರಿಯ ಉಪಾಧ್ಯಕ್ಷ, ವಿಧಾನಪರಿಷತ್ ಜೆಡಿಎಸ್ ಉಪನಾಯಕ ಟಿ ಎ ಶರವಣ ಟೀಕಿಸಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಸಂಸದೀಯ ಪರಂಪರೆಯಲ್ಲಿ ಘನತೆ ಇರುತ್ತದೆ. ಭಾಷಣವನ್ನು ಸರಕಾರ ಸಿದ್ಧಪಡಿಸುವ ಪರಿಪಾಠ ಇದೆ. ಹೀಗೆಂದ ಮಾತ್ರಕ್ಕೆ ಏನೇನೋ ಬರೆದು ರಾಜ್ಯಪಾಲರ ಬಾಯಲ್ಲಿ ಹೇಳಿಸುವುದು ಸರಿಯಲ್ಲ ಎಂದು ಶರವಣ ಆಕ್ಷೇಪಿಸಿದ್ದಾರೆ. Pulse Polio: ಪಲ್ಸ್‌ ಪೋಲಿಯೋ ಲಸಿಕೆ ಯಾವಾಗ ಎಂದು ಕಾಯುತ್ತಿದ್ದವರಿಗೆ ಇಲ್ಲಿದೆ ಗುಡ್‌ ನ್ಯೂಸ್! ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಘರ್ಷ ಬೀದಿ ಕಾಳಗ ಆಗಬಾರದು. ಈ ವಿಚಾರವನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದು ಖಾರವಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಭೀಕರ ಬರಕ್ಕೆ ಜನ ತತ್ತರಿಸಿದ್ದಾರೆ. ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಇಂಥ ದಯನೀಯ ಸ್ಥಿತಿ ಇರಬೇಕಾದರೆ , ಬಡತನದ ರೇಖೆಯಿಂದ 1.2 ಕೋಟಿ ಜನ ,…

Read More

ಬೆಂಗಳೂರು: ಪಲ್ಸ್ ಪೋಲಿಯೋ (Pulse Polio)ಯಾವಾಗ ಅಂತಾ ಗೊಂದಲಕ್ಕೆ ಒಳಗಾಗಿದ್ದ ಜನರಿಗೆ, ಮುಂದಿನ ತಿಂಗಳು ಅಭಿಯಾನ ಶುರುವಾಗಿಲಿದೆ ಎಂದು ಬಿಬಿಎಂಪಿ  (BBMP) ತಿಳಿಸಿದೆ. ಇನ್ಮುಂದೆ ಕಬ್ಬನ್‌ ಪಾರ್ಕ್‌ ವಾಹನ ಸಂಚಾರಕ್ಕೆ ಅನುಮತಿ: ಯಾವೆಲ್ಲಾ ದಿನದಲ್ಲಿ ಗೊತ್ತಾ? 5 ವರ್ಷದ ಒಳಗಿನ ಮಕ್ಕಳಿಗೆ ಹಾಕುವ ಪೋಲಿಯೋ ಅಭಿಯಾನ ಯಾವಾಗ ಎಂದು ಜನರು ಗೊಂದಲಕ್ಕೆ ಒಳಗಾಗಿದ್ದರು. ಇದೀಗ ಸರ್ಕಾರ ಮುಂದಿನ ತಿಂಗಳು 03 ರಿಂದ 06 ರವರೆಗೆ ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದೆ. ಈ ಅಭಿಯಾನ ಮೂರು ದಿನಗಳು ನಡೆಯಲ್ಲಿದ್ದು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜಾಗೃತಿ ಅಭಿಯಾನವನ್ನು ಬಿಬಿಎಂಪಿ ಕೈಗೊಳುತ್ತಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರ, ನಗರ ಚಿಕಿತ್ಸಾ ಕೇಂದ್ರ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತದೆ

Read More

ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಪ್ರತಿಮೆಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಸಂಪನ್ನಗೊಂಡ ಬಳಿಕ ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ದೇಶದ ವಿವಿದೆಡೆಗಳಿಂದ 200 ವಿಶೇಷ ರೈಲುಗಳನ್ನ ಅಯೋಧ್ಯೆಗೆ ರವಾನಿಸಲು ಭಾರತೀಯ ರೈಲ್ವೆ ತೀರ್ಮಾನಿಸಿದ್ದು, ಈ ವಿಶೇಷ ರೈಲುಗಳಿಗೆ ‘ಆಸ್ಥಾ ಸ್ಪೆಷಲ್’ ಎಂದು ಹೆಸರಿಡಲಾಗಿದೆ. ದೇಶದ ಹಲವು ರಾಜ್ಯಗಳಿಂದ ಅಯೋಧ್ಯೆಗೆ ಆಸ್ಥಾ ವಿಶೇಷ ರೈಲುಗಳು ಸಂಚಾರ ಮಾಡಲಿವೆ ಎಂದು ಭಾರತೀಯ ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. ದೇಶದ ಹಲವು ರಾಜ್ಯಗಳ ಟೈರ್ 1 ಹಾಗೂ ಟೈರ್ 2 ನಗರಗಳಿಂದ ಅಯೋಧ್ಯಾ ಧಾಮ ರೈಲು ನಿಲ್ದಾಣಕ್ಕೆ ರೈಲುಗಳು ಸಂಚಾರ ಮಾಡಲಿವೆ. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಬಳಿಕ 100 ದಿನಗಳ ಕಾಲ ಈ ವಿಶೇಷ ರೈಲುಗಳು ಸಂಚಾರ ಮಾಡಲಿವೆ. ‘ಆಸ್ತಾ ವಿಶೇಷ ರೈಲು’ ಏರಲು ಸಾಧ್ಯವಾಗುವ ಸ್ಥಳ-ರಾಜ್ಯದ ವಿವರ * ಉತ್ತರ ಭಾರತ: ದೆಹಲಿ, ಜಮ್ಮು, ಹರಿದ್ವಾರ, ಕತ್ರಾ ಮತ್ತು ಋಷಿಕೇಶ *…

Read More

ಬೆಂಗಳೂರು: ನಾಳೆ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡಲು ತಿರ್ಮಾನಿಸಲಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭರವಸೆಗಳನ್ನು ನೀಡಿ ಒಂದು ವರ್ಷವಾದರೂ ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಲ್ಲಿ ಫೆ.14ಕ್ಕೆ ಮದ್ಯ ಮಾರಾಟಕ್ಕೆ ಬ್ರೇಕ್‌ : ಪ್ರೇಮಿಗಳಿಗೆ ಫುಲ್‌ ಶಾಕ್! ರೈತರ ಸಾಲ ಮನ್ನಾ, ರೈತರಿಗೆ ಪಿಂಚಣಿ, ಬೆಂಬಲ ಬೆಲೆ ಕಾನೂನು, ಸ್ವಾಮಿನಾಥನ್ ವರದಿ ಅನಿಷ್ಠಾನಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ಈವರೆಗೂ ಬೇಡಿಕೆ ಈಡೇರಿಸಿಲ್ಲ. ಈ ಹಿನ್ನಲೆ ಮತ್ತೆ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ನಾಳಿನ ಪ್ರತಿಭಟನೆಗೂ ಮುನ್ನ ರೈತರನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ. ದೆಹಲಿಗೆ ಆಗಮಿಸುವ ರೈತರನ್ನು ತಡೆಯಲಾಗುತ್ತಿದೆ. ಕರ್ನಾಟಕದಿಂದ ಆಗಮಿಸುತ್ತಿದ್ದ ನೂರಕ್ಕೂ ಅಧಿಕ ರೈತರನ್ನು ಭೂಪಾಲ್ ನಲ್ಲಿ ಬಂಧಿಸಿದೆ. ರೈತರ ಮೇಲೆ ದಬ್ಬಾಳಿಕೆ ನಡೆಸಿದ್ದು, ನನ್ನ ಪತ್ನಿಯೂ ಸೇರಿ ಹಲವು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Read More