ಬೆಂಗಳೂರು: ಆತ ಅಂತಿಂಥ ಕಳ್ಳ ಅಲ್ಲ ಆಗಾಗ ಠಾಣೆಗೆ ಹೋಗಿ ಪೊಲೀಸ್ರ ಜೊತೆ ಮಾತಾಡ್ತಾನೂ ಇದ್ದ.. ಅವ್ರ ಜೊತೆ ಕೆಲ ಕೇಸ್ ಗಳಿಗೆ ಸ್ಪಾಟ್ ಗೂ ಹೋಗ್ತಿದ್ದ.. ಪೊಲೀಸರ ಜೊತೆಯಲ್ಲಿದ್ದುಕೊಂಡೇ ಅವ್ರಿಗೇ ಗೊತ್ತಾಗ್ದಂಗೆ ಕಳ್ಳತನ ಮಾಡ್ತಿದ್ದ.. ಕಳ್ಳತನ ಮಾಡೋದು ಹೇಗೆ ಅಂತ ಯೂಟ್ಯೂಬ್ ನೋಡಿ ಸ್ಕೆಚ್ ಹಾಕ್ತಿದ್ದ. ಹೀಗೆ ಕಳ್ಳತನ ಮಾಡುತ್ತಿದ್ದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ..
ಇವನು ಪೊಲೀಸರ ಜೊತೆಯೇ ಇದ್ಕೊಂಡು ಪೊಲೀಸರಿಗೇ ಗೊತ್ತಾಗ್ದಂಗೆ ಮನೆಗಳ್ಳತನ ಮಾಡಿ ತಪ್ಪಿಸಿಕೊಳ್ತಿದ್ದ ಖತರ್ನಾಕ್ ಕಳ್ಳನನ್ನ ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.. ಹೀಗೆ ಐಷಾರಾಮಿ ಬೈಕ್ ನಲ್ಲಿ ಕೂತು ತಾನು ದೊಡ್ಡ ಹೀರೋ ಅನ್ನೋ ಫೀಲ್ ಅಲ್ಲಿ ಪೋಸ್ ಕೊಟ್ಟಿರೋ ಇವ್ನೇ ಆ ಚಾಲಾಕಿ ಕಳ್ಳ..
ಬರಪೀಡಿತ ರೈತರಿಗೆ ಕೊಡಲು ಹಣವಿಲ್ಲ; ಸಂಪುಟ ದರ್ಜೆ ಭಾಗ್ಯಕ್ಕೆ ಹಣವಿದೆ: HDK ಟೀಕೆ!
ಅಂದ್ಹಾಗೆ ಇವ್ನ ಹೆಸ್ರು ಸುನೀಲ್ @ ತಮಟೆ ಅಂತಾ.. ಯೂಟ್ಯೂಬ್ ನಲ್ಲಿ ಸಿನಿಮಾ ನೋಡಿಯೇ ಕಳ್ಳತನಕ್ಕೆ ಇಳಿದಿದ್ದ.. ಯೂಟ್ಯೂಬ್ ನಲ್ಲಿ ಕ್ರೈಂ ರಿಲೇಟೆಡ್ ಸಿನಿಮಾಗಳನ್ನ ನೋಡ್ತಿದ್ದವ ಹೇಗ್ ಕಳ್ಳತನ ಮಾಡ್ಬೇಕು, ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಬೇಕು ಅಂತಾ ತಿಳ್ಕೋತಿದ್ದ.. ನಂತರ ನೀಟಾಗಿ ಪ್ಲಾನ್ ಮಾಡಿ ಮನೆಗಳ್ಳತನ ಮಾಡಿ ಕೊಳ್ಳೆ ಹೊಡೀತಿದ್ದ.. ಇಷ್ಟೆಲ್ಲಾ ಮಾಡ್ದೋನು ಮನೆ ಮಾಡಿಕೊಂಡಿದ್ದ ಇದೇ ಮೈಕೋ ಲೇಔಟ್ ಠಾಣೆ ಬಳಿ.. ಬಹಳ ಚಾಲಾಕಿ ತನ ಉಪಯೋಗಿಸ್ತಿದ್ದ ಆರೋಪಿ ಠಾಣೆ ಹತ್ರವೇ ಮನೆ ಮಾಡ್ಕೊಂಡು ಆಗಾಗ ಠಾಣೆಗೆ ಭೇಟಿ ನೂ ಕೊಡ್ತಿದ್ದ.. ಅಲ್ಲಿರೋರನ್ನ ಪರಿಚಯ ಮಾಡ್ಕೊಂಡು ಆಗಾಗ ಅವ್ರ ಜೊತೆ ಕೆಲ ಕೇಸ್ ಗಳಿಗೆ ಅವ್ರ ಜೊತೆ ಹೋಗಿ ತಿಳ್ಕೋತಾನೂ ಇದ್ದ.. ಪೊಲೀಸರು ಹೇಗೆ ಇನ್ವೆಷ್ಟಿಗೇಷನ್ ಮಾಡ್ತಾರೆ.. ಹೇಗೆ ಸಾಕ್ಷಿ ಕಲೆ ಹಾಕ್ತಾರೆ ಅಂತಾ ತಿಳ್ಕೋತಿದ್ದ.. ಪೊಲೀಸರ ಮೂಮೆಂಟ್ ಗಳನ್ನ ನೀಟಾಗಿ ಅಬ್ಸರ್ವ್ ಮಾಡ್ತಿದ್ದವ ಗ್ಯಾಪ್ ನಲ್ಲಿ ಮನೆ ಕಳ್ಳತನ ಮಾಡಿ ದುಡ್ ಮಾಡ್ಕೋತಿದ್ದ.. ಕೆಲ ತಿಂಗಳುಗಳಿಂದ ಸಾಲು ಸಾಲು ಮನೆಗಳ್ಳತನ ಮಾಡ್ತಿದ್ದವ ಇಷ್ಟು ದಿನ ಪೊಲೀಸರಿಂದ ತಪ್ಪಿಸಿಕೊಂಡಿದ್ದ.. ಈತನ ಮೇಲೆ ಡೌಟ್ ಬಂದು ಒಂದು ಕಣ್ಣಿಟ್ಟಿದ್ದ ಪೊಲೀಸರು ಮನೆಯೊಂದರಲ್ಲಿ ಕಳ್ಳತನ ಮಾಡೋವಾಗ್ಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ..
ಆರೋಪಿ ಪೊಲೀಸರಿಗೇನೋ ಸಿಕ್ಬಿದ್ದಿದ್ದಾನೆ ಆದ್ರೆ ಈತನಿಂದ ರಿಕವರಿ ಮಾತ್ರ ಕಷ್ಟವೇ.. ಯಾಕಂದ್ರೆ ಪೊಲೀಸರ ಇನ್ವೆಷ್ಟಿಗೇಷನ್ ಆ್ಯಂಗಲ್ ನ ಹತ್ರ ಇದ್ಕೊಂಡೇ ಅಬ್ಸರ್ವ್ ಮಾಡಿದ್ದವ ಅದನ್ನ ರಿಕವರಿ ಆಗ್ದಂಗೆ ಖರ್ಚು ಮಾಡೋದು ಕಲ್ತಿದ್ದ.. ಸದ್ಯ ಈತನಿಂದ ರಿಕವರಿ ಮಾಡೋಕೆ ಪೊಲೀಸರು ಮುಂದಾಗಿದ್ದಾರೆ.