ನವದೆಹಲಿ: ಫೆಬ್ರವರಿ 13ರಂದು ದೆಹಲಿಯಲ್ಲಿ (New Delhi) ರೈತರ ಪ್ರತಿಭಟನೆ (Farmer’s Protest) ಹಿನ್ನೆಲೆ ಹರಿಯಾಣ (Haryana) ಸರ್ಕಾರವು ರಾಜ್ಯದ ಏಳು ಜಿಲ್ಲೆಗಳಾದ ಅಂಬಾಲಾ, ಜಿಂದ್, ಕುರುಕ್ಷೇತ್ರ, ಹಿಸಾರ್, ಕೈತಾಲ್, ಫತೇಹಾಬಾದ್ ಮತ್ತು ಸಿರ್ಸಾದಲ್ಲಿ ಇಂಟರ್ನೆಟ್ ಸೇವೆಗಳನ್ನು (Internet Service) ನಿಷೇಧಿಸಿದೆ. ಅಲ್ಲದೇ ಚಂಡೀಗಢಕ್ಕೆ ಸಮೀಪವಿರುವ ಪಂಚಕುಲದಲ್ಲಿ ಸೆಕ್ಷನ್ 144ನ್ನು (Section 144) ಜಾರಿಗೊಳಿಸಿದೆ.
ಈ ಕುರಿತು ಮಾತನಾಡಿದ ಪಂಚಕುಲ (Panchakula) ಡಿಸಿಪಿ ಸುಮೇರ್ ಸಿಂಗ್ ಪ್ರತಾಪ್, ಪಾದಚಾರಿಗಳು ಅಥವಾ ಟ್ರ್ಯಾಕ್ಟರ್ ಟ್ರಾಲಿಗಳು ಮತ್ತು ಇತರ ವಾಹನಗಳಲ್ಲಿ ಯಾವುದೇ ರಾಡ್ಗಳು, ಆಯುಧಗಳನ್ನು ಸಾಗಿಸುವಂತಿಲ್ಲ. ಮತ್ತು ರ್ಯಾಲಿ, ಪ್ರತಿಭಟನೆಗಳು ಅಥವಾ ಮೆರವಣಿಗೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
Pulse Polio: ಪಲ್ಸ್ ಪೋಲಿಯೋ ಲಸಿಕೆ ಯಾವಾಗ ಎಂದು ಕಾಯುತ್ತಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್!
ಫೆಬ್ರವರಿ 13 ರಂದು ರೈತ ಸಂಘಟನೆಗಳು ದೆಹಲಿಗೆ ತಮ್ಮ ಮೆರವಣಿಗೆಯನ್ನು ಘೋಷಿಸಿದ ನಂತರ, ರಾಷ್ಟ್ರ ರಾಜಧಾನಿಯನ್ನು ತಲುಪುವುದನ್ನು ತಡೆಯಲು ಪಂಜಾಬ್-ಹರಿಯಾಣ ಗಡಿ (Punjab-Haryana Border) ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪಂಜಾಬ್-ಹರಿಯಾಣ ಗಡಿಯನ್ನು ಮುಚ್ಚಲಾಗಿದೆ. ಬ್ಯಾರಿಕೇಡ್ಗಳು, ಬಂಡೆಗಳು, ಮರಳು ತುಂಬಿದ ಟಿಪ್ಪರ್ಗಳು ಮತ್ತು ಮುಳ್ಳುತಂತಿಗಳಿಂದ ಗಡಿಗಳನ್ನು ಮುಚ್ಚಲಾಗಿದೆ.
ಇಂಟರ್ನೆಟ್ ನಿಷೇಧ: ಅಧಿಕೃತ ಆದೇಶದ ಪ್ರಕಾರ, ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಫೆಬ್ರವರಿ 11 ರಂದು ಬೆಳಗ್ಗೆ 6 ರಿಂದ ಫೆಬ್ರವರಿ 13 ರಂದು ರಾತ್ರಿ 11.30 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಇನ್ನು ಗಡಿಯನ್ನು ಮುಚ್ಚುವುದರ ಜೊತೆಗೆ ಸಂಚಾರ ಸಲಹೆಯನ್ನು ಸಹ ಬಿಡುಗಡೆ ಮಾಡಲಾಗಿದೆ. ಪಂಜಾಬ್ ಮತ್ತು ಹರಿಯಾಣದ ಪ್ರಮುಖ ಮಾರ್ಗಗಳಲ್ಲಿ ಸಂಭವನೀಯ ಟ್ರಾಫಿಕ್ ಅಡೆತಡೆಗಳನ್ನು ನಿರೀಕ್ಷಿಸುವ ಮೂಲಕ ಹರಿಯಾಣ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದಾರೆ. ಆದರೆ ರಾಜ್ಯದ ಇತರ ಎಲ್ಲ ಮಾರ್ಗಗಳಲ್ಲಿ ಸಂಚಾರ ಮುಂದುವರಿಯಲಿದೆ. ಈ ಸಮಯದಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗದಂತೆ ಮತ್ತು ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸುವಂತೆ ಆಡಳಿತ ಮಂಡಳಿ ಜನರಿಗೆ ಮನವಿ ಮಾಡಿದೆ.