Author: AIN Author

ಕಲಬುರಗಿ: ಅಳಂದ ಪಟ್ಟಣದಲ್ಲಿರುವ ಲಾಡ್ಲೆ ಮಶಾಕ್ ದರ್ಗಾಕ್ಕೆ ಕಲಬುರಗಿ ನೂತನ SP ಅಕ್ಷಯ್ ಹಾಕೈ ಭೇಟಿ ನೀಡಿದ್ದಾರೆ. ಮಾರ್ಚ್ 8 ಶಿವರಾತ್ರಿ ಅಂಗವಾಗಿ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಪೂಜೆ ಹಿನ್ನಲೆ ಭೇಟಿ ಮಹತ್ವ ಪಡೆದಿದೆ. ಶಿವಲಿಂಗದ ಜಿರ್ಣೋದ್ದಾರಕ್ಕಾಗಿ ಈಗಾಗಲೇ ಹಿಂದುಪರ ಸಂಘಟನೆಗಳು ಆಗ್ರಹ ಮಾಡಿವೆ..ಅದಕ್ಕಾಗಿ ಮುಂಜಾಗ್ರತಾ ಕ್ರಮಾನುಸಾರ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

Read More

ಬೆಳಗಾವಿ:  ಪ್ರಮುಖ ದಾಖಲೆಗಳ ಸಂಗ್ರಹವಿದ್ದ ನಾಲ್ಕು ಲ್ಯಾಪ್‌ಟಾಪ್ ಕಳ್ಳತನ ಮಾಡಿ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಳ್ಳರು ಕೈಚಳಕ ತೋರಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಬಸವೇಶ್ವರ ವೃತ್ತದಲ್ಲಿನ ಪಾಲಿಕೆ ದಕ್ಷಿಣ ವಲಯದ ಕಂದಾಯ ಕಚೇರಿಯಲ್ಲಿದ್ದ ಲ್ಯಾಪ್‌ಟಾಪ್‌ ಕಳ್ಳತನ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಚೇರಿಯೊಳಗೆ ಕಿಡಕಿ ಗಾಜು ಒಡೆದು ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಲ್ಯಾಪ್‌ಟಾಪ್ ಎಗರಿಸಿ ಪರಾರಿಯಾಗಿದ್ದಾರೆ. ಅಲ್ಲದೇ ಇನ್ನು ಏನೆಲ್ಲ ಕದ್ದಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ಆಸ್ತಿ ಮಾಲೀಕತ್ವ ದಾಖಲಾತಿ, ಆಸ್ತಿ ಮಾಲೀಕರ ಗುರುತಿನ ಚೀಟಿ, ತೆರಿಗೆ ಚೀಟಿ, ಕಟ್ಟಡ ಪರವಾನಗಿ ಪತ್ರ, ಹೀಗೆ 26 ವಾರ್ಡ್‌ಗಳ ನಿವಾಸಿಗಳ ದಾಖಲೆಗಳ ಸಂಗ್ರಹವಿದ್ದ ನಾಲ್ಕು ಲ್ಯಾಪ್‌ಟಾಪ್​ಗಳನ್ನು ಕಳ್ಳರು ಕದ್ದಿದ್ದಾರೆ. ಸಿಬ್ಬಂದಿ ಕಚೇರಿಗೆ ಸೋಮವಾರ ಬೆಳಗ್ಗೆ ಬಂದು ನೋಡಿದಾಗ, ನಿನ್ನೆ ತಡರಾತ್ರಿ ಕಳ್ಳರು ಕಚೇರಿಗೆ ನುಗ್ಗಿ ತಿಜೋರಿಯಲ್ಲಿಟ್ಟಿದ್ದ ನಾಲ್ಕು ಲ್ಯಾಪ್‌ಟಾಪ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಟಿಳಕವಾಡಿ ಠಾಣೆ ಪೊಲೀಸರು ಹಾಗೂ ಶ್ವಾನದಳ ಸಿಬ್ಬಂದಿ ಭೇಟಿ ನೀಡಿ…

Read More

ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಯಾರು ಯಾರಿಗೆ ಕಾಲ್ ಮಾಡುತ್ತಿದ್ದಾರೆ. ಯಾರು ಯಾರಿಗೆ ಧಮ್ಕಿ ಹಾಕ್ತಿದ್ದಾರೆ ಎಲ್ಲರೂ ಬಂದು ನನಗೆ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದರು. ರಾಜ್ಯಸಭೆ ಚುನಾವಣೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಏನೇನೋ ಹೇಳಿದ್ದಾರಲ್ಲ.. ನಂದು, ಗೋಪಾಲಯ್ಯ ಅವರದು ಹಾಗೂ ಎಸ್‌.ಟಿ. ಸೋಮಶೇಖರ್ ಅವರದು ವೈಯಕ್ತಿಕ ಸಂಬಂಧ ಇದೆ ಎಂದು ಕುಟುಕಿದರು. ನಮಗೆ ಯಾರ ಅಗತ್ಯವೂ ಇಲ್ಲ. ನಾವು 136 ಸೀಟು ಗೆದ್ದಿದ್ದೇವೆ. ಇಬ್ಬರು ಪಕ್ಷೇತರರು ನಮ್ಮ ಜೊತೆಗೆ ಇದ್ದಾರೆ. ಇದು ಅಲ್ಲದೇ ಇನ್ನೂ ಯಾರು ಯಾರೋ ನಮ್ಮ ಜೊತೆ ಇದಾರೆ. ಎಲ್ಲವನ್ನೂ ತೋರಿಸಿ ಆಮೇಲೆ ಮಾತನಾಡುತ್ತೇನೆ ಎಂದು ತಿಳಿಸಿದರು. ಕ್ರಾಸ್ ವೋಟಿಂಗ್​ಗೆ ಪ್ರಯತ್ನ ಮಾಡುತ್ತಿದ್ದಾರಾ? ಎಂಬ ಪ್ರಶ್ನೆಗೆ, ಬಿಜೆಪಿ ಸ್ಟ್ರಾಟರ್ಜಿ ಏನು ಅಂತ ಎಲ್ಲಾ ಗೊತ್ತಾಗುತ್ತಿದೆ. ಸುಮ್ಮನೆ ಅರ್ಜಿ ಹಾಕ್ತಾರಾ..? ನೋಡೋಣ ಫೆ.27ಕ್ಕೆ ಏನು ಅಂತ ಗೊತ್ತಾಗುತ್ತದೆ. ಕುಮಾರಸ್ವಾಮಿ ಮಾತಾಡಿದ್ದಾರೆ, ಕಾಲ್…

Read More

ಮಂಡ್ಯ: ಐದು ಗ್ಯಾರಂಟಿಗಳು. ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳು. ಈ ಯೋಜನೆಗಳನ್ನೇ ಮುಂದೆ ಇಟ್ಟುಕೊಂಡು ಲೋಕಸಮರವನ್ನ ಗೆಲ್ಲಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ. ಈ ಮೂಲಕ ಹಳೇ ಮೈಸೂರು ಭಾಗವನ್ನ ಕಜ್ಬ ಮಾಡಲು ಸಕ್ಕರಿನಗರಿ ಮಂಡ್ಯದಿಂದಲೇ ರಣಕಹಳೆ ಹೂದಿದೆ. ಹೌದು ಲೋಕಸಮರಕ್ಕೆ ಇನ್ನೇನೂ ಕೆಲವೇ ತಿಂಗಳು ಬಾಕಿ ಇವೆ. ಈ ಬಾರಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಕೈಪಡೆ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ. ಇದಕ್ಕಾಗಿ ಈಗಿನಿಂದಲೇ ಸಾಕಷ್ಟು  ತಯಾರಿ ಕೂಡ ನಡೆಸುತ್ತಿದೆ. ಅದರಲ್ಲೂ ಕೂಡ ಗ್ಯಾರಂಟಿ ಅಸ್ತ್ರಗಳನ್ನೇ ಪ್ರಯೋಗ ಮಾಡಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಭರ್ಜರಿ ತಯಾರಿ ಮಾಡುತ್ತಿದ್ದು, ಸಕ್ಕರಿನಗರಿ  ಮಂಡ್ಯವನ್ನ ಕಬ್ಜ ಶತಯ-ಗತಾಯ ಪ್ರಯತ್ನ ಪಡೆಯುತ್ತಿದೆ.  ಈ ನಿಟ್ಟಿನಲ್ಲಿ ಇವತ್ತು ಸಕ್ಕರಿನಗರಿ ಮಂಡ್ಯದಲ್ಲಿ ಬೃಹತ್ ಆದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶವನ್ನ ಆಯೋಜನೆ ಮಾಡುವ ಮೂಲಕ  ಲೋಕ ಅಖಾಡಕ್ಕೆ ಚಾಲನೆ ನೀಡಿದ್ದಾರೆ. ಅಂದಹಾಗೆ ಇವತ್ತು ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ರಾಜ್ಯ ಸರ್ಕರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ…

Read More

ಬೆಂಗಳೂರು: ರಾಕ್‌ಲೈನ್‌ ಮಾಲ್‌ಗೆ ಬಿಬಿಎಂಪಿ ಹಾಕಿರುವ ಸೀಲ್‌ ಓಪನ್‌ ಮಾಡುವಂತೆ ಕರ್ನಾಟಕ ಹೈಕೋರ್ಟ್‌ ಆದೇಶ ಹೊರಡಿಸಿದೆ. ಮಾಲ್‌ಗೆ ಬಿಬಿಎಂಪಿ ಬೀಗ ಹಾಕಿದ್ದ ಕ್ರಮವನ್ನು ಪ್ರಶ್ನಿಸಿ ರಾಕ್‌ಲೈನ್‌ ಮಾಲ್‌ ಆಡಳಿತ ಮಂಡಳಿ ಹೈಕೋರ್ಟ್‌ಗೆ ಮನವಿ ಮಾಡಿತ್ತು. ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ಅವರ ಪೀಠವು ಈ ಆದೇಶ ಹೊರಡಿಸಿದೆ. Gruha Lakshmi Scheme: ಅರ್ಜಿ ಸಲ್ಲಿಸಿದ್ರೂ ಇನ್ನೂ ಹಣ ಬಂದಿಲ್ಲವೇ : ಹೀಗೆ ಮಾಡಿ ಖಂಡಿತಾ ಬರುತ್ತೆ ನೋಡಿ! ಕಳೆದ ಬುಧವಾರ ಬಿಬಿಎಂಪಿ ಜಾಲಹಳ್ಳಿ ಕ್ರಾಸ್ ಬಳಿ ಇರೋ ರಾಕ್‌ಲೈನ್ ಮಾಲ್ ಸೀಜ್ ಮಾಡಲಾಗಿತ್ತು. ಸೀಜ್ ಮಾಡಿದ್ದನ್ನ ಪ್ರಶ್ನಿಸಿ ರಾಕ್‌ಲೈನ್‌ ಮಾಲ್‌ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿತ್ತು. ಇಂದು (ಸೋಮವಾರ) ಹೈಕೋರ್ಟ್‌ ಸೀಲ್ ತೆರವಿಗೆ ಸೂಚನೆ ನೀಡಿದೆ. ತಕ್ಷಣವೇ ಸೀಲ್ ಓಪನ್ ಮಾಡಬೇಕು. ವ್ಯಾಪಾರಕ್ಕೆ ಯಾವುದೇ ತೊಂದರೆಗಳನ್ನು ಮಾಡಬಾರದು. ತೆರಿಗೆ ಹಣದ ವಿಚಾರವಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಎಂದು ಬಿಬಿಎಂಪಿಗೆ ಕೋರ್ಟ್‌ ಸೂಚಿಸಿದೆ.

Read More

ಲೋಕಸಭಾ ಚುನಾವಣೆಯ ಸೋಲಿನ ಭಯದಿಂದ ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಸೀಜ್ ಮಾಡುವ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ, ಇದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ ಎಂದು  ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ  ಅಹ್ಮದ್ ಹೇಳಿದರು. ಅವರು ಹಿರಿಯೂರಿನ ತಾಲೂಕಿನ ಗುಯಿಲಾಳು ಟೋಲ್ ಬಳಿ  ದಾವಣಗೆರೆ ಕಡೆ ಹೋಗುವಾಗ ಮಾರ್ಗ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದರು. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಬಜೆಟ್ ಮಂಡನೆಗೂ ಮೊದಲೇ ಬಿಜೆಪಿ ಪಕ್ಷದ ಶಾಸಕರು ಬಜೆಟ್ ಕೇಳಿಲ್ಲ, ನೋಡಿಲ್ಲದೆ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದು ದುರಂತ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಈ ಹಿಂದೆ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಘೋಷಿಸಿತ್ತು. https://ainlivenews.com/people-with-high-bp-must-read-this-useful-information-once/ ಸರ್ಕಾರ ಜಾರಿಗೆ ಬಂದ ಕೂಡಲೇ ಎಂಟು ತಿಂಗಳಲ್ಲಿ ನುಡಿದಂತೆ ನಡೆಯುವ ಮೂಲಕ ಐದು ಐತಿಹಾಸಿಕ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ತಲುಪಿಸುವಲ್ಲಿ ನಮ್ಮ ಸರ್ಕಾರ ಐತಿಹಾಸಿಕ…

Read More

ಬೆಂಗಳೂರು: : ಉತ್ತರ ಭಾರತದ ಹಲವೆಡೆ ಹಿಮಪಾತದ ಜತೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ, ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತ ಮತ್ತು ಬಯಲು ಸೀಮೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ಇದು ಮುಂದುವರೆಯುವ ಸಾಧ್ಯತೆಯಿದೆ. ಸೋಮವಾರದಿಂದ ಪಂಜಾಬ್, ಹರಿಯಾಣ, ದೆಹಲಿ ಸೇರಿದಂತೆ ಬಯಲುಸೀಮೆ ರಾಜ್ಯಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಹವಾಮಾನ ವೈಪರೀತ್ಯದಿಂದ ಕನಿಷ್ಠ ತಾಪಮಾನವೂ ಕುಸಿದಿದೆ. ಫೆಬ್ರವರಿ 21 ರವರೆಗೆ ಜಮ್ಮು-ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದಲ್ಲಿ ಹವಾಮಾನವು ಕೆಟ್ಟದಾಗಿರುತ್ತದೆ. ಸೋಮವಾರ ಈ ಪ್ರದೇಶಗಳಲ್ಲಿ ಭಾರೀ ಮಳೆ, ಹಿಮಪಾತ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯನ್ನು ಸೂಚಿಸಿ ರೆಡ್ ಅಲರ್ಟ್ ಘೋಷಿಸಲಾಗಿದೆ. Gruha Lakshmi Scheme: ಅರ್ಜಿ ಸಲ್ಲಿಸಿದ್ರೂ ಇನ್ನೂ ಹಣ ಬಂದಿಲ್ಲವೇ : ಹೀಗೆ ಮಾಡಿ ಖಂಡಿತಾ ಬರುತ್ತೆ ನೋಡಿ! ರಾಜ್ಯದ ವಿಜಯಪುರದಲ್ಲಿ 15.0 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ…

Read More

ಬೆಂಗಳೂರು: ವಿಧಾನಸೌಧದಲ್ಲೇ ಶಾಸಕರಿಗೆ (Vidhanasoudha MLA) ಮಧ್ಯಾಹ್ನದ ಬಿಸಿಯೂಟ ನೀಡಲಾಗುವುದು ಎಂದು ಸ್ಪೀಕರ್ ಖಾದರ್ (UT Khader) ಅವರು ಇಂದು ಸದನದಲ್ಲಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಬೆಳಗ್ಗೆ ತಿಂಡಿಯ ವ್ಯವಸ್ಥೆ ಮಾಡಿರುವ ಸ್ಪೀಕರ್, ಇದೀಗ ತಿಂಡಿ ಜೊತೆಗೆ ಊಟವೂ ಫ್ರೀ ಎಂದು ಹೇಳಿದ್ದಾರೆ. ಶಾಸಕರಿಗೆ ಮಧ್ಯಾಹ್ನದ ಊಟಕ್ಕೂ ವಿಧಾನಸೌಧದಲ್ಲೇ ವ್ಯವಸ್ಥೆ ಮಾಡಲಾಗುವುದು. ನೀವು ಎಲ್ಲಿ ಹೋದರೂ ಇಲ್ಲಿಗಿಂತ ಬೆಸ್ಟ್‌ ಊಟ ನಿಮಗೆ ಸಿಗಲ್ಲ ಎಂದು ಖಾದರ್ ಹೇಳಿದ್ದಾರೆ. ಸ್ಪೀಕರ್ ಮಾತಿಗೆ ಮಾಜಿ ಸಚಿವ ಆರಗ ಜ್ಞಾನೆಂದ್ರ (Araga Jnanendra) ತಮಾಷೆ ಮಾಡಿದ್ದಾರೆ. ಜೊತೆಗೆ ಹಾಸಿಗೆ, ದಿಂಬು ಕೊಟ್ಬಿಡಿ, ಇಲ್ಲೇ ಸುಖವಾಗಿ ನಿದ್ದೇನೂ ಮಾಡಿಬಿಡ್ತೀವಿ ಎಂದು ಹೇಳುವ ಮೂಲಕ ಖಾದರ್ ಕಾಲೆಳೆದಿದ್ದಾರೆ. ಶಾಸಕರು ಸಮಯಕ್ಕೆ ಸರಿಯಾಗಿ ಬರದೇ ಮಧ್ಯಾಹ್ನದ ಕಲಾಪ ಆರಂಭ ವಿಳಂಬ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಈ ಘೋಷಣೆಯನ್ನು ಮಾಡಿದ್ದಾರೆ. Gruha Lakshmi Scheme: ಅರ್ಜಿ ಸಲ್ಲಿಸಿದ್ರೂ ಇನ್ನೂ ಹಣ ಬಂದಿಲ್ಲವೇ : ಹೀಗೆ ಮಾಡಿ ಖಂಡಿತಾ ಬರುತ್ತೆ ನೋಡಿ!…

Read More

ಚಿತ್ರದುರ್ಗ: ದೇಶವನ್ನು ಹೊಡೆಯುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸುತ್ತಿದೆ. ರಾಹುಲ್ ಗಾಂಧಿ ರಾಮ ಮಂದಿರ ಕಾರ್ಯಕ್ರಮದಲ್ಲಿ  ದಲಿತರಿಗೆ ಆಹ್ವಾನವಿರಲಿಲ್ಲ ಎಂದು ನೀಡಿರುವ ಹೇಳಿಕೆ ತುಂಬಾ ಬೇಸರವಾಗಿದ್ದು, ದೇಶದ ಜನತೆ ಕ್ಷಮೆ ಕೇಳಬೇಕೆಂದು  ಮಾಜಿ ಸಚಿವ ಕೆ ಎಸ್ ಈಶ್ವರಪ್ಪ  ಒತ್ತಾಯಿಸಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ರಾಮ ಮಂದಿರದ ಕಾರ್ಯಕ್ರಮ ಇಡೀ‌ದೇಶವನ್ನು ಒಂದು ಗೂಡಿಸುವ ಕಾರ್ಯಕ್ರಮ. ಎಲ್ಲಾ ಸಮಾಜದ ಹಿಂದೂ ಶ್ರೀಗಳು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಹೋಗಿದ್ದರು.ಇಂತಹ ಸುಳ್ಳು ಹೇಳಿಕೆ ನೀಡಿರುವ ರಾಹುಲ್ ಗಾಂಧಿ‌  ದೇಶದ ಜನತೆಯ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಇನ್ನು ನಮ್ಮ ಸರ್ಕಾರದಲ್ಲಿ ಭ್ರಷ್ಠಾಚಾರ ಇಲ್ಲ ಎಂದು ‌ನಾನು ಹೇಳಲ್ಲ, ಇದೆ ಎಂದು ಸಿಎಂ ಹೇಳಿದ್ದಾರೆ. ಆದ್ದರಿಂದ ಹಿಂದಯೇ ವರ್ಗಾವಣೆಯಲ್ಲಿ ಆಗಿದ್ದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವಂತೆ ಒತ್ತಾಯಿಸಿದ್ದೆ ಆದರೆ ಸಿಎಂ ರಚಿಸಲಿಲ್ಲ. ರಾಮ‌ಂಮದಿರದ ಬಗ್ಗೆ ಮಾತಾಡುವ ಯೋಗ್ಯತೆಯೇ ಸಂತೋಷ್ ಲಾಡ್ ಗಿಲ್ಲ. ವಸತಿ ಶಾಲೆಗಳಲ್ಲಿ ಕೈಗಿ ಮುಗಿದು ಬಾ ಜ್ಞಾನ ದೇಗುಲಕೆ ಎಂಬ ಬರಹ ಬದಲಾಯಿಸಿದ್ದು,…

Read More

ಬೆಂಗಳೂರು:  ಜಯನಗರದ ಬಿ ಎಂ ಟಿಸಿ ಬಸ್ ನಿಲ್ದಾಣದಲ್ಲಿ  ಬಸ್ ಚಕ್ರಕ್ಕೆ ಸಿಲುಕಿ ಬಿಎಂಟಿಸಿ ಸಿಬ್ಬಂದಿ ಕಾಲು ಕಟ್ ಆಗಿದ್ದು  ಬಸ್ ನಲ್ಲಿ ಕೆಲಸಕ್ಕೆಂದು ಬರುತ್ತಿದ್ದ ಕಂಡೆಕ್ಟರ್ ಜಯನಗರದ ಬಿಎಂಟಿಸಿ ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ನಡೆದ  ಘಟನೆಯಾಗಿದೆ. Gruha Lakshmi Scheme: ಅರ್ಜಿ ಸಲ್ಲಿಸಿದ್ರೂ ಇನ್ನೂ ಹಣ ಬಂದಿಲ್ಲವೇ : ಹೀಗೆ ಮಾಡಿ ಖಂಡಿತಾ ಬರುತ್ತೆ ನೋಡಿ! ಡ್ಯೂಟಿಗೆ ಟೈಮ್ ಆಗಿದೆ ಎಂದು ಬಸ್ ಸ್ಟ್ಯಾಂಡ್ ಸಮೀಪಿಸುತ್ತಿದ್ದಂತೆ ಇಳಿಯಲು ಮುಂದಾಗಿದ್ದ ಸಿಬ್ಬಂದಿ ಬಸ್ ಸ್ಟ್ಯಾಂಡ್ ಸಮೀಪ ರಸ್ತೆ ತಡೆಯಿದ್ದ ಕಾರಣ ಬಸ್ ನಿಧಾನ ಮಾಡಿದ್ದ ಡ್ರೈವರ್ ಡೀಪೊ ಎಂಟ್ರಿ ಪಡೆಯುತ್ತಿದ್ದಂತೆ   ಕೆಲಸದ ಅವಸರದಲ್ಲಿ ಇಳಿಯಲು ಹೋಗಿ  ಕಾಲು ಜಾರಿ ಬಸ್ ಚಕ್ರಕ್ಕೆ ಸಿಲುಕಿ ಸಿಬ್ಬಂದಿ ಕಾಲು ಕಟ್ ಗಾಯಾಳು  ಜಯನಗರದ ಅಪೋಲೊ ಆಸ್ಪತ್ರೆಗೆ  ದಾಖಲು ಮಾಡಲಾಗಿದ್ದು  ಚಂದ್ರಶೇಖರ್ ಕಾಲು ಕಳೆದುಕೊಂಡ ಬಿಎಂಟಿಸಿ ನೌಕರನಾಗಿರುತ್ತಾನೆ. ಬಿಎಂಟಿಸಿ ದಕ್ಷಿಣ ವಿಭಾಗದ ಟಿಸಿಯಾಘಿ ಕೆಲಸ ನಿರ್ವಹಿಸುತ್ತಿದ್ದರು. ಸದ್ಯ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು…

Read More