Author: AIN Author

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿ ನೇಣಿಗೆ ಶರಣಾದ ಘಟನೆ ನಡೆದಿದೆ. ಕೃಷ್ಣ ನಾಯ್ಡು (88) ಮತ್ತು ಸರೋಜಮ್ಮ (72) ಆತ್ಮಹತ್ಯೆ ಮಾಡಿಕೊಂಡ ವೃದ್ದ ದಂಪತಿ. ಬೆಳಗ್ಗೆ 5.30ರ ಸುಮಾರಿಗೆ ಸ್ಥಳೀಯರು ಬಂದು ಬಾಗಿಲು ಬಡಿದಾಗ ಘಟನೆ ಬೆಳಕಿಗೆ ಬಂದಿದೆ. Breaking: ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ: ಧಗ ಧಗ ಹೊತ್ತಿ ಉರಿಯುತ್ತಿರುವ ಕಾಗದದ ಬಾಕ್ಸ್ ತಯಾರಿಕಾ ಕಾರ್ಖಾನೆ ಆಂಧ್ರ ಮೂಲದ ದಂಪತಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕಟ್ಟಡದ ಮಾಲೀಕರಾಗಿರೋ ದಂಪತಿ ಮೂರು ಅಂತಸ್ತಿನ ಕಟ್ಟಡದ ಟೆರೇಸ್ ನಲ್ಲಿರುವ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿಗೆ ಅಶೋಕ್ ಎಂಬ ಓರ್ವ ಮಗನಿದ್ದು ಪತ್ನಿ ಜೊತೆ ಬೇರೆ ಕಡೆ ವಾಸವಿದ್ದರು. ಸದ್ಯ ಆತ್ಮಹತ್ಯೆಗೆ ಯಾವುದೇ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಿಕೆ ಅಚ್ಚುಕಟ್ಟು ಪೊಲೀಸರಿಂದ ತನಿಖೆ ನಡೆಯುತ್ತಿದೆ.

Read More

ಚಿಕ್ಕಬಳ್ಳಾಪುರ: ಬಾಡಿಗೆ ಮನೆಯೊಂದರಲ್ಲಿ ರಾಡ್ ನಿಂದ ಹೊಡೆದು ವ್ಯಕ್ತಿಯನ್ನು ಬರ್ಭರವಾಗಿ ಕೊಲೆಗೈದ ಘಟನೆ ಚಿಕ್ಕಬಳ್ಳಾಪುರ ನಗರದ 31 ನೇ ವಾರ್ಡ್ ನ ಇಂದಿರಾನಗರದಲ್ಲಿ ನಿನ್ನೆ ಸಂಜೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ವಿವಾಹಿತ ಮಹಿಳೆಯೊಬ್ಬಳನ್ನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ..ಈ ವೇಳೆ ಮಹಿಳೆ  ಅತನನ್ನು ರೂಮ್ ನಲ್ಲಿ ಕೂಡಿ ಹಾಕಿ  ತನ್ನ ಮೈದುನ ರಾಘವೇಂದ್ರ ಗೆ ಕಾಲ್ ಮಾಡಿ ಕರೆಸಿಕೊಂಡು ನಂತರ ಆತನ ಮೇಲೆ ಕಬ್ಬಿಣದ ರಾಡ್ ನಿಂದ  ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಚಿಕ್ಕಬಳ್ಳಾಪುರ ನಗರದ 31 ನೇ ವರ್ಡ್ ಇಂದಿರಾನಗರ ದಲ್ಲಿ ಕಳ್ಳೆಕಾಯಿ ಸೀನಪ್ಪ ಎಂಬುವವರ ಮನೆಯಲ್ಲಿ ಕೊಲೆ ನಡೆದಿದ್ದು ಹೂವಿನ ಅಂಗಡಿಯಲ್ಲಿ  ಕೆಲಸ ಮಾಡುತಿದ್ದ ಪುನಿತ್ ಎಂಬಾತನ ಜತೆ ಆಶಾ ಎಂಬಾಕೆಯೊಂದಿಗೆ ಮದುವೆಯಾಗಿ ಮೂರ್ನಲ್ಕು ವರ್ಷವಷ್ಟೆ ಆಗಿತ್ತು ಎನ್ನಲಾಗಿದ್ದು..   ಆಶಾ ಮೇಲೆ ಅತ್ಯಾಚಾರ ಮಾಡಲು ಬಂದಿದ್ದ ಎನ್ನಲಾಗಿದ್ದು ಕೊಲೆಯಾಗಿರುವ ವ್ಯಕ್ತಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಕಾಂಪೌಂಡ್ ಏರಿ ಬಂದು ನಿನ್ನ…

Read More

ಕಾಗದದ ಬಾಕ್ಸ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಫ್ಯಾಕ್ಟರಿಯಲ್ಲಿದ್ದ ಪೇಪರ್ ಬಾಕ್ಸ್ , ತಯಾರಿಕಾ ವಸ್ತುಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.ಘಟನಾ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

Read More

ವಿಧಾನಪರಿಷತ್‌ :  ಗುರುವಾರ ನಡೆದ ಕಲಾಪದಲ್ಲಿ ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ಧನ ನೀಡದಿರುವ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವರಲ್ಲಿ  ಪರಿಷತ್‌ ಸದಸ್ಯ ಟಿ.ಎ.ಶರವಣ ಅವರು ಪ್ರಶ್ನೆ ಮಾಡಿದರು, ಈ ಬಗ್ಗೆ  ಸರಕಾರ ಕೊಟ್ಟಿರುವ ಉತ್ತರದಲ್ಲಿ ಒಂದೊಂದು ಎಕರೆಗೆ ಒಂದೊಂದು ದರ ನಿಗದಿ ಆಗಿದೆ. 5ಲಕ್ಷ 11ಸಾವಿರದ 208 ಎಕರೆ ಪ್ರದೇಶದ ಇಡೀ ತೋಟಗಾರಿಕೆ ಬೆಳೆ ನಾಶ ಆಗಿದೆ. ಎನ್.ಡಿ.ಆರ್.ಆಫ್ ನಿಗದಿ ಮಾಡಿರುವ ಥರ ಮಳೆಯಾಶ್ರಿತ ತೋಟಗಾರಿಕೆ ಬೆಳೆಗೆ 8500 ರೂಪಾಯಿ, ನೀರಾವರಿ ಬೆಳೆಗೆ 17 ಸಾವಿರ, ಬಹುವಾರ್ಷಿಕ ಬೆಳೆಗೆ 22500 ರೂಪಾಯಿ ನಿಗದಿ ಆಗಿದೆ. ಆದರೆ ಈ ಅಮಾನವೀಯ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ರೈತರಿಗೆ ಭಿಕ್ಷೆ ಎಂಬಂತೆ ಕೇವಲ ಒಬ್ಬೊಬ್ಬರಿಗೆ 2ಸಾವಿರ ರೂಪಾಯಿ ನೀಡಿದೆ. ಭಾಗ್ಯಗಳನ್ನು ನೀಡಿ ಸರ್ಕಾರದ ಬೊಕ್ಕಸದ ಹಣವನ್ನು ಗ್ಯಾರೆಂಟಿಯ ಮೇಲೆ ಖಾಲಿ ಮಾಡಿ, ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕೆಂದು, ಸಚಿವರಲ್ಲಿ ಪರಿಷತ್‌…

Read More

ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ (Kamal Nath) ಅವರು ಬಿಜೆಪಿಗೆ ಜಂಪ್‌ ಮಾಡುತ್ತಾರೆ ಎಂಬ ವದಂತಿಗಳಿಗೆ ಇದೀಗ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ (Digvijay Singh) ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಮಲ್ ನಾಥ್ ಅವರ ನಿಷ್ಠೆ ಕಾಂಗ್ರೆಸ್ (Congress) ಜೊತೆಗಿದೆ. ಕಮಲ್ ನಾಥ್ ಅವರು ಕಾಂಗ್ರೆಸ್ ನ ಭಾಗವಾಗಿದ್ದಾರೆ. ಹೀಗಾಗಿ ಅವರು ಯಾವತ್ತೂ ಬೇರೆ ಪಕ್ಷಕ್ಕೆ ಹಾರಲಾರರು. ಅವರು ಇಂದು, ಮುಂದೆ ಹಾಗೂ ಎಂದೆಂದಿಗೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ ಎಂದು ಒತ್ತಿ ಹೇಳಿದರು. https://ainlivenews.com/challenging-star-threw-a-big-birthday-party-a-friend-gifted-a-chocolate-figurine/ ಛಿಂದ್ವಾರ ಸಂಸದ, ಪುತ್ರ ನಕುಲ್‌ನಾಥ್ ಜೊತೆ ಸೇರಿ ಕಮಲ್‌ನಾಥ್ 12 ಕ್ಕೂ ಹೆಚ್ಚು ಶಾಸಕರ ಜೊತೆಗೆ ಬಿಜೆಪಿ (BJP) ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಧ್ಯಪ್ರದೇಶ ಪ್ರವೇಶವಾಗುವ ಹೊತ್ತಲ್ಲೇ ಈ ವಿಚಾರ ಕೇಳಿಬಂದಿತ್ತು. ಸದ್ಯಕ್ಕೆ ಕಮಲ್ ನಾಥ್ ಕಡೆಯಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ…

Read More

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ಅದ್ದೂರಿಯಾಗಿ  6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನ ಹಮ್ಮಿಕೊಳ್ಳಲಾಗಿತ್ತು.. ಸಮ್ಮೇಳನದ ಅದ್ಯಕ್ಷರಾದ ಸ.ನ.ನಾಗೇಂದ್ರ ರನ್ನ ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಕರೆತಂದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಹಲವು ಕಲಾವಿದರು ನಡೆಸಿಕೊಟ್ಟ ಅದ್ಬುತ ಪ್ರದರ್ಶನ ಸಮ್ಮೇಳನಕ್ಕೆ ಮೆರುಗು ತಂದಿತು.. https://ainlivenews.com/challenging-star-threw-a-big-birthday-party-a-friend-gifted-a-chocolate-figurine/  ಇನ್ನು ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಸಮ್ಮೇಳನದ ಕೂರ್ಮಗಿರಿ ವೇದಿಕೆ ಕಾರ್ಯಕ್ರಮವನ್ನ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಉದ್ಘಾಟಿಸಿದ್ರು. ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅದ್ಯಕ್ಷ ಕೋಡಿರಂಗಪ್ಪ, ತಾಲ್ಲೂಕು ಅಧ್ಯಕ್ಷ ಸುಬ್ಬರಾಯಪ್ಪ ಸೇರಿದಂತೆ ಹಲವು ಅಧಿಕಾರಿಗಳು, ಕವಿಗಳು, ಸಾಹಿತ್ಯಾಸಕ್ತರು ಸೇರಿದಂತೆ ಹಲವರು ಬಾಗಿಯಾಗಿದ್ರು..

Read More

ಕಲಬುರಗಿ: ಮುಖಕ್ಕೆ ಮಾಸ್ಕ್ ತಲೆಗೆ ಮಂಕಿ ಕ್ಯಾಪ್ ಕೈಯಲ್ಲಿ ಮಾರಕಾಸ್ತ್ರ ಎದುರಿಗೆ ಸಿಕ್ರೆ ಹರೋಹರ. ಇಂತಹ ಖತರ್ನಾಕ್ ಗ್ಯಾಂಗ್ ಇದೀಗ ಕಲಬುರಗಿಗೆ ಎಂಟ್ರಿ ಕೊಟ್ಟಿದೆ..ವಿಶೇಷ ಅಂದ್ರೆ CCTV ಬಿಚ್ಚಿಟ್ಟಿದೆ ಖತರ್ನಾಕ್ ಗ್ಯಾಂಗ್ ನ ಚಲನವಲನ..ಹೌದು ವಿವಿ ಠಾಣಾ ವ್ಯಾಪ್ತಿಯಲ್ಲಿ ಈ ಗ್ಯಾಂಗ್ ಬಿಂದಾಸ್ ಆಗಿ ಓಡಾಡೋ ಸೀನ್ ರೆಕಾರ್ಡ್ ಆಗಿದೆ..ಇಂತಹ ಖತರ್ನಾಕ್ ಕಳ್ಳರ ಓಡಾಡಕ್ಕೆ ಬಿಸಿಲೂರ ಜನ ಬೆಚ್ಚಿಬಿದ್ದಿದ್ದು ಕೂಡಲೇ ಪೋಲೀಸರು ಈ ಗ್ಯಾಂಗ್ ಮಟ್ಟ ಹಾಕಬೇಕು ಅನ್ನೋ ಆಗ್ರಹ ಎಲ್ಲೆಡೆ ಕೇಳಿ ಬರ್ತಿದೆ..

Read More

ವಿಜಯನಗರ: ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸೋದು ನೋಡಿದ್ದೇವೆ. ಆದರೆ ಹೊಸಪೇಟೆ ತಾಲೂಕಿನ ಮರಿಯಮ್ಮಹಳ್ಳಿ ಹೋಬಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ತುಂಗಭದ್ರಾ ಜಲಾಶಯ ನಿರ್ಮಾಣಕ್ಕೆ ಮನೆ ಮಠ ತ್ಯಾಗ ಮಾಡಿದ ಜನ್ರಿಗೆ ಕುಡಿಯೋಕೆ ನೀರಿಲ್ಲದೆ ಪರದಾಡುತ್ತಿದ್ದಾರೆ. ದೀಪದ ಕೆಳಗೆ ಕತ್ತಲೂ ಎನ್ನುವ ಹಾಗೆ ಜಲಾಶಯ ಪಕ್ಕದಲ್ಲಿದ್ರು ಇಲ್ಲಿನ‌ ಜನ್ರಿಗೆ ನೀರಿಲ್ಲ, 400 ಕಿ.ಮೀ ದೂರದ ಪಾವಗಡಕ್ಕೆ ನೀರನ್ನ ಒಯ್ಯಲಾಗುತ್ತಿದೆ. ಟಿಬಿ ಡ್ಯಾಂನಿಂದ 3 ಕಿ.ಮೀ ದೂರದ ಮರಿಯಮ್ಮನಹಳ್ಳಿ ಹೋಬಳಿಗೆ ನೀರಿಲ್ಲ, ಜಲಾಶಯ ನಿರ್ಮಿಸಿ 7 ದಶಕ ಕಳೆದ್ರು ಇಲ್ಲಿನ ಜನ್ರಿಗೆ ಕುಡಿಯುವ ನೀರಿನ ಭಾಗ್ಯ ಇಲ್ಲ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಮರಿಯಮ್ಮನಹಳ್ಳಿ ಪ.ಪಂ ವ್ಯಾಪ್ತಿಗೆ 18 ವಾರ್ಡಗಳಲ್ಲಿಯೂ ನೀರಿಲ್ಲದೆ ಪರದಾಡುತ್ತಿದ್ದಾರೆ. 15 ರಿಂದ 20 ದಿನಗಳಿಗೊಮ್ಮ ಮಾತ್ರ ಸಿಹಿ ನೀರು ಬರ್ತಿವೆ. ಅದು ಬಿಟ್ರೆ ಉಪ್ಪು ನೀರನ್ನೇ ನಚ್ಚಿಕೊಂಡು ನೂರಾರು ಕುಟುಂಬ ಜೀವನ ಸಾಗಿಸುತ್ತಿವೆ. ಕುಡಿಯೋದಕ್ಕೆ ನೀರಿಲ್ಲ ಸ್ವಾಮಿ…  ತುಂಗಭದ್ರಾ ಜಲಾಶಯ ಕಟ್ಟಲು ಮನೆ…

Read More

ತುಮಕೂರು: ಪೌರ ಕಾರ್ಮಿಕರೊಂದಿಗೆ ಮಹಾನಗರ ಪಾಲಿಕೆ ಆಯುಕ್ತೆ ಕಾಟೇರ ಸಿನಿಮಾ ವೀಕ್ಷಿಸಿದ್ದಾರೆ. ತುಮಕೂರು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾರ ನಡೆಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.  ಪ್ರತಿದಿನ ನಗರದ ಸ್ವಚ್ಛತೆಗಾಗಿ ಶ್ರಮಿಸುವ ತುಮಕೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಎಸ್ ಮಾಲ್ ಐನಾಕ್ಸ್‌ʼನಲ್ಲಿ ಪ್ರದರ್ಶನದಲ್ಲಿ ಕಾಟೇರ ಚಲನಚಿತ್ರ ವೀಕ್ಷಿಸಿದರು. ಪಾಲಿಕೆ ಆಯುಕ್ತೆ ಬಿ ವಿ ಅಶ್ವಿಜ ಅವರು 196 ಪೌರ ಕಾರ್ಮಿಕರಿಗೆ ಉಚಿತವಾಗಿ ಕಾಟೇರ ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಿದ್ದರು. “ಕಳೆದ ಜನವರಿ 28ರಂದು ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಯಿಂದ ತುಮಕೂರು ಎಂಬ ಕನ್ನಡ ಪದದ ಕಲಾಕೃತಿಯನ್ನು ರಚಿಸಿ ಗಿನ್ನೀಸ್ ದಾಖಲೆ ನಿರ್ಮಿಸುವಲ್ಲಿ ಪೌರಕಾರ್ಮಿಕರ ಪಾತ್ರ ಮರೆಯುವಂತಿಲ್ಲ” ಎಂದು ಪಾಲಿಕೆ ಆಯುಕ್ತೆ ಬಿ ವಿ ಅಶ್ವಿಜ ಹೇಳಿದರು.

Read More

ಬೆಂಗಳೂರು:  ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಈಗಾಗಲೇ ಜೆಡಿಎಸ್ (JDS)ರಂಗ ತಾಲೀಮು ಆರಂಭಿಸಿದೆ ಈ ಹಿನ್ನೆಲೆಯಲ್ಲಿ  ಮಂಡ್ಯ ಹಾಲಿ ಸಂಸದೆ ಸುಮಲತಾ ಶಾಕ್ ನೀಡಿದ ಬಿಜೆಪಿ ದಿಢೀರ್ ದೆಹಲಿ ಪ್ರವಾಸ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ. ಕೇಂದ್ರ ಸಚಿವ ಅಮಿಶ್ ಶಾ (Amit Sha) ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿ ಮಂಡ್ಯ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದಾರೆ. ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್​ಗೆ ಫಿಕ್ಸ್ ಮಾಡಿಸಿಕೊಂಡು ತಮ್ಮ ಗೆಲುವನ್ನು ಸಾಧಿಸಿದ್ದಾರೆ ಈ ಹಿನ್ನೆಲೆಯಲ್ಲಿ  ಮತ್ತೆ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ ಸುಮಲತಾ ಎಂದು ಕಾದು ನೋಡಬೇಕಿದೆ ಹಾಗೆ   ಮಂಡ್ಯ ಬಿಜೆಪಿ- ಜೆಡಿಎಸ್ ಅಭ್ಯರ್ಥಿಯಾಗಿ ಡಾ.ಮಂಜುನಾಥ್ ಸ್ಪರ್ಧೆ ಖಚಿತವಾಘಿದ್ದು   ಡಾ.ಮಂಜುನಾಥ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಿಜೆಪಿ ಈ ಹಿನ್ನೆಲೆಯಲ್ಲಿ ಸುಮಲತಾಗೆ ಭಾರೀ ಠಕ್ಕರ್‌ ಕೊಟ್ಟ ಜೆಡಿಎಸ್. ಹಾಸನ ಲೋಕಸಭೆ ಕ್ಷೇತ್ರದಿಂದ – ಪ್ರಜ್ವಲ್ ರೇವಣ್ಣ ಸ್ಪರ್ಧೆ ಹಾಗೆ ಕೋಲಾರ ಲೋಕಸಭಾ ಕ್ಷೇತ್ರದಿಂದ ನಿಸರ್ಗ ನಾರಾಯಣಸ್ವಾಮಿ ಸ್ಪರ್ಧೆ…

Read More