Author: AIN Author

ಬೆಂಗಳೂರು: ಜಾತ್ರೆ ಬಂತೆಂದರೆ ಸಾಕು ಎಲ್ಲೆಡೆ ಬಾಂಬೆ ಮಿಠಾಯಿಯದ್ದೇ ಹವಾ. ಗುಲಾಬಿ ಬಣ್ಣದ ಜೊತೆಗೆ ಬಾಯಲ್ಲಿ ಇಟ್ಟೊಡನೆ ಕರಗುವುದರಿಂದ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಸಖತ್​​ ಫೇವರೇಟ್​​. ಆದರೆ ಇದೀಗ ನಮ್ಮ ಸರ್ಕಾರದಿಂದ ಕಾಟನ್ ಪ್ರಿಯರಿಗೆ ಶಾಕ್ ಆಗಿದ್ದು,  ಇನ್ನು ಮುಂದೆ ಕಾಟನ್ ಕ್ಯಾಂಡಿ ಬಾಂಬೆ ಮಿಠಾಯಿ ನೆನಪಲ್ಲೇ ಉಳಿಯುತ್ತದೆ ಎಂದು ಪ್ರಶ್ನೆ ನಿರ್ಮಾಣ ಆಗಿದೆ.. ಅದ್ಯಾಕೆ ಅಂತೀರಾ ಹಾಗಿದ್ದರೆ ಈ ಸ್ಟೋರಿ ನೋಡಿ.. ಮಕ್ಕಳಿಗೆ ಪ್ರಿಯವಾದ ತಿನಿಸು ಆಗಿರುವ ಕಾಟನ್ ಕ್ಯಾಂಡಿಯಲ್ಲಿ ರೋಡಮೈನ್ ಬಿ ಎಂಬ ಕ್ಯಾನ್ಸರ್ ಕಾರಕ, ಬಟ್ಟೆ ತಯಾರಿಕೆಯಲ್ಲಿ ಬಳಕೆ ಮಾಡುವ ಬಣ್ಣ ಪತ್ತೆಯಾದ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ ಸರ್ಕಾರಗಳು ಕಾಟನ್ ಕ್ಯಾಂಡಿ ನಿಷೇಧಿಸಿವೆ. ರಾಜ್ಯ ಸರ್ಕಾರ ಕೂಡ ಮಾದರಿಗಳ ಸಂಗ್ರಹ ಆರಂಭಿಸಿದ್ದು, ನಿಷೇಧಕ್ಕೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಬೆಂಗಳೂರಿಗರೇ ಗಮನಿಸಿ… ಇನ್ನೂ 2 ದಿನ ಕುಡಿಯುವ ನೀರಿಲ್ಲ, ನಿಮ್ಮ ಏರಿಯಾನೂ ಇದೆಯಾ? ಶಾಲಾ-ಕಾಲೇಜುಗಳ ಸಮೀಪ, ಜಾತ್ರೆ, ಉತ್ಸವ, ಪಾರ್ಕ್ ಗಳಲ್ಲಿ ಕಾಟನ್ ಕ್ಯಾಂಡಿ ಮಾರಾಟ…

Read More

ಲಕ್ನೋ: ಲೋಕಸಭಾ ಚುನಾವಣೆಗೂ ಮುನ್ನ ಛಿದ್ರಗೊಂಡ I.N.D.I.A ಒಕ್ಕೂಟಕ್ಕೆ ಇದೀಗ ಉತ್ತರಪ್ರದೇಶದಲ್ಲಿ (Uttarapradesh) ಬೆಂಬಲ ಸಿಕ್ಕಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅವರು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಖಚಿತಪಡಿಸಿದ್ದಾರೆ. ಕಳೆದ ಹಲವು ದಿನಗಳಿಂದ ಉಭಯ ಪಕ್ಷಗಳ ನಡುವಿನ ಹಗ್ಗಜಗ್ಗಾಟದ ಸುದ್ದಿಗಳು ನಿರಂತರವಾಗಿ ಮುನ್ನೆಲೆಗೆ ಬರುತಿತ್ತು. ಈ ನಡುವೆ ಇಂದು ಅಖಿಲೇಶ್ ಯಾದವ್ ಅವರು ಯುಪಿಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ (Congress) ನಡುವೆ ಯಾವುದೇ ವಿವಾದವಿಲ್ಲ. ಈ ಎರಡೂ ಪಕ್ಷಗಳ ನಡುವೆ ಮೈತ್ರಿ ಇರುತ್ತದೆ ಎಂದು ತಿಳಿಸಿದರು. https://ainlivenews.com/here-is-the-solution-for-blisters-rashes-and-itching-in-summer/ ಮೂಲಗಳ ಪ್ರಕಾರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra)  ಅವರು ಅಖಿಲೇಶ್ ಯಾದವ್ ಅವರನ್ನು ಮೈತ್ರಿಗೆ ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಖಿಲೇಶ್ ಮತ್ತು ಪ್ರಿಯಾಂಕಾ ನಡುವೆ ಡೀಲ್‌ ನಡೆದಿದೆ ಎಂದು ಹೇಳಲಾಗುತ್ತಿದೆ. ಡೀಲ್‌ ಏನು..?: INDIA ಮೈತ್ರಿಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ನಡುವಿನ ಹದಗೆಟ್ಟ ಪರಿಸ್ಥಿತಿಯನ್ನು ನಿಭಾಯಿಸಿದ…

Read More

ಬೆಂಗಳೂರು: ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಒಟ್ಟು 2 ಸಾವಿರ ಕೋಟಿ ರೂಪಾಯಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಪ್ರತೀ ತಿಂಗಳು ವರ್ಗಾವಣೆ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಿನಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ 6 ಕಂತುಗಳ ಮೂಲಕ ಸುಮಾರು 12,000 ರೂಪಾಯಿ ಹಣವನ್ನ ಪ್ರತೀ ಕುಟುಂಬದ ಮಹಿಳೆಯರು ಪಡೆದುಕೊಂಡಿದ್ದಾರೆ.   Bigg News: ಸುಮಲತಾಗೆ ಭಾರೀ ಠಕ್ಕರ್‌ ಕೊಟ್ಟ ಜೆಡಿಎಸ್: ಡಾ.ಮಂಜುನಾಥ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಿಜೆಪಿ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಯಶವಂತರಾಯ ಗೌಡ ಪಾಟೀಲ್‌ ಅವರು ಕೇಳಿದ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉತ್ತರವನ್ನು ನೀಡಿದ್ದಾರೆ. ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೂ ಕೂಡ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಸಿಕ್ಕಿಲ್ಲ. ಇದರಿಂದಾಗಿ ಮಹಿಳೆಯರು ಇಲಾಖೆಗಳಿಗೆ ಅಲೆದು ಅಲೆದು ಸುಸ್ತಾಗಿದ್ದರು. ಈ ಕುರಿತು ರಾಜ್ಯದಲ್ಲಿ…

Read More

ಬೆಂಗಳೂರು: ಮಂಡ್ಯ ಕಾಂಗ್ರೆಸ್​ ಎಂಪಿ ಅಭ್ಯರ್ಥಿ ಫೈನಲ್ ಆಗಿದೆ. ಪಾರ್ಟಿ ಘೋಷಣೆ ಮಾಡೋದು, ನಾನು ಮಾಡೋಕೆ ಆಗಲ್ಲಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು. ಬೆಂಗಳೂರಿಗರೇ ಗಮನಿಸಿ… ಇನ್ನೂ 2 ದಿನ ಕುಡಿಯುವ ನೀರಿಲ್ಲ, ನಿಮ್ಮ ಏರಿಯಾನೂ ಇದೆಯಾ? ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರಿಗೂ ಕರೆ ಮಾಡಿಲ್ಲ. ಅವಶ್ಯಕತೆ ಬಂದಾಗ ಮಾಡ್ತಿನಿ ಎಂದು ತಿಳಿಸಿದರು. Bigg News: ಸುಮಲತಾಗೆ ಭಾರೀ ಠಕ್ಕರ್‌ ಕೊಟ್ಟ ಜೆಡಿಎಸ್: ಡಾ.ಮಂಜುನಾಥ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಿಜೆಪಿ ನಾಟಿ ಎನ್ನುವುದನ್ನು ಅಡುಗೆ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂಬ ಸಂಸದೆ ಸುಮಲತಾ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಅವರಷ್ಟು ಬುದ್ದಿವಂತರಲ್ಲ. ನನ್ನ ಮಣ್ಣಿನ ಒಬ್ಬ ಅಭ್ಯರ್ಥಿಯನ್ನು ಹಾಕ್ತೇನೆ ಅಂತ ಹೇಳಿದ್ದೆ. ಅವರು ಏನು ಬೇಕಾದರೂ ವಿವರಣೆ ಕೊಡಲಿ, ನನಗೆ ಬೇಜಾರಿಲ್ಲ ಎಂದು ಕುಟುಕಿದರು.

Read More

ಕಲಬುರಗಿ: ಪೋಲೀಸ್ ಪೇದೆ ಹುದ್ದೆಗಳಿಗಾಗಿ ಫೆಬ್ರವರಿ 25 ರಂದು ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಲಿಖಿತ ಪರೀಕ್ಷೆಗಳು ನಡೆಯಲಿವೆ..ಮಹಿಳಾ ಮತ್ತು ಪುರುಷ ಅಭ್ಯರ್ಥಿ ಸೇರಿದಂತೆ ಒಟ್ಟು 1137 ಹುದ್ದೆಗಳಿಗೆ ಎಕ್ಸಾಂ ನಡೆಯಲಿದೆ..ಈ ನಿಟ್ಟಿನಲ್ಲಿ ಯಾವುದೇ ಎಡವಟ್ಟು ಆಗದಂತೆ ಇಲಾಖೆ ಎಚ್ಚರಿಕೆ ವಹಿಸಿದೆ.. ಕರಿಮಣಿ & ಕಾಲುಂಗರ ಹೊರತು ಪಡಿಸಿ ಉಳಿದಂತೆ ಡ್ರೆಸ್ ಕೋಡ್ ಬಗ್ಗೆ ಕಂಡೀಷನ್ ಹಾಕಲಾಗಿದೆ..ಫುಲ್ ತೋಳಿನ ಡ್ರೆಸ್ ದೊಡ್ಡ ಬಟನ್ ಶರ್ಟ್ ಹಾಕಂಗಿಲ್ಲ. ಇನ್ನು ತೆಳುವಾದ ಚಪ್ಪಲಿ ಬಿಟ್ಟು ಹೈ ಹೀಲ್ಸ್ ತೊಡಂಗಿಲ್ಲ ಅಂತ ಕರಾರು ಮಾಡಿದೆ..ಅಂದಹಾಗೆ ಬೆಳಿಗ್ಗೆ 11 ರಿಂದ 12.30 ರವರೆಗೆ ಎಕ್ಸಾಂ ನಡೆಯಲಿದೆ ಅಂತ ಪೋಲೀಸ್ ಇಲಾಖೆ ತಿಳಿಸಿದೆ.

Read More

ಬೆಂಗಳೂರು: ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ್ದು  ಇನ್ನುಮುಂದೆ ಸರ್ಕಾರಿ ಶಾಲೆಗಳಲ್ಲಿ ಹಾಲು ಮೊಟ್ಟೆ ಜೊತೆಗೆ ರಾಗಿ ಮಾಲ್ಟ್ ವಿತರಣೆ  ಹಾಗೆ 55 ಲಕ್ಷ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ರಾಗಿ ಮಾಲ್ಟ್ ವಿತರಣೆ ಮಾಡಲಾಗುತ್ತೆ ಈಗಾಗ್ಲೇ ಪ್ರಾಯೋಗಿಕವಾಗಿ ಮೂರು ಜಿಲ್ಲೆಗಳಲ್ಲಿ ರಾಗಿ ಮಾಲ್ಟ್ ವಿತರಣಾ ಮಾಡಿದ್ದ ರಾಜ್ಯ ಸರ್ಕಾರ ಇನ್ನುಮುಂದೆ ಎಲ್ಲಾ ಶಾಲೆ ಮಕ್ಕಳಿಗೆ ರಾಗಿ ಮಾಲ್ಟ್ ಇಂದು ಅಧಿಕೃತವಾಗಿ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಕುಡಿಸುವ ಮೂಲಕ ಯೋಜನೆಗೆ ಚಾಲನೆ ಹಾಗೂ ಮಕ್ಕಳ ಜೊತೆಗೆ ತಾವು ರಾಗಿ ಮಾಲ್ಟ್ ಕುಡಿದು ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸೌದ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಾಲನೆ ನೀಡಿದರು. ಚಾಲನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸಚಿವ ಮಧು ಬಂಗಾರಪ್ಪಾ ಇಲಾಖೆಯ ಕಾರ್ಯದರ್ಶಿ ರಿತೇಶ್ ಸಿಂಗ್ ಆಯುಕ್ತೆ BB ಕಾವೇರಿ ಹೀಗೆ ಹಲವಾರು ಜನರು ಭಾಗಿ

Read More

ಕನ್ನಡದಲ್ಲೀಗ ಕಂಟೆಂಟ್ ಆಧಾರಿತ ಸಿನಿಮಾಗಳ ಪ್ರಭೆ ಜೋರಾಗಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಚಿತ್ರ ಫೋಟೋ. ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಲೈಕ್ ಪಡೆದ ಈ ಸಿನಿಮಾದ ಮೊದಲ ನೋಟ ಅನಾವರಣಗೊಂಡಿದೆ. ನಟರಾಕ್ಷಸ ಡಾಲಿ ಧನಂಜಯ್ ಹಾಗೂ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಶ್ರೀರಂಗಪಟ್ಟದಲ್ಲಿರುವ ಪ್ರಕಾಶ್ ರಾಜ್ ಒಡೆತನದ ನಿರ್ದಿಗಂತ ಫಾರಂ ಹೌಸ್ ನಲ್ಲಿ ಫೋಟೋ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಹರಗಾರರು ಹಾಗೂ ಪತ್ರಕರ್ತರಾಗಿರುವ ಜೋಗಿ, ಫೋಟೋ ಚಿತ್ರ ಪ್ರೆಸೆಂಟ್ ಮಾಡಿರುವ ಪ್ರಕಾಶ್ ರಾಜ್, ನಿರ್ದೇಶಕ ಉತ್ಸವ್ ಗೋನವಾರ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಟ್ರೇಲರ್ ಬಿಡುಗಡೆ ಬಳಿಕ ಡಾಲಿ ಧನಂಜಯ್ ಮಾತನಾಡಿ, ಉತ್ಸವ್ ಅವರು ತುಂಬಾ ಚೆನ್ನಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ತುಂಬಾ ಖುಷಿ ವಿಚಾರ ಏನೆಂದರೆ ಇತ್ತೀಚೆಗೆ ಬರುತ್ತಿರುವ ಯುವ ನಿರ್ದೇಶಕರು ಒಳ್ಳೊಳ್ಳೆ ಸಿನಿಮಾಗಳನ್ನು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ನಮ್ಮ ಕನ್ನಡದ ಜನಗಳ ಮುಂದೆ ಬರುತ್ತಿದ್ದಾರೆ.…

Read More

ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗ ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿ ಎದುರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಗದಗ ವಿಭಾಗದಿಂದ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಲಾಯಿತು. ಇದೇ ವೇಳೆ ನಿಗಮದ ಆಡಳಿತದ ವಿರುಧ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 38 ತಿಂಗಳ ಹಿಂದಿನ ವೇತನ ಪರಿಷ್ಕರಣೆ ಬಾಕಿ ಹಣ ಪಾವತಿಸಬೇಕು. ವೇತನ ಪರಿಷ್ಕರಣೆ ಮತ್ತೀತರ ಬೇಡಿಕೆಗಳ ಇತ್ಯರ್ಥ ಮಾಡಬೇಕು ಜೊತೆಗೆ ನಿವೃತ್ತರಾದ ನೌಕರರಿಗೆ ವೇತನ ಪರಿಷ್ಕರಣೆ ಅಳವಡಿಸಿ ಕೂಡಲೇ ನಿವೃತ್ತಿ ಸೌಲಭ್ಯ, ಬಾಕಿ ಹಣ ನೀಡಬೇಕು ಜೊತೆಗೆ ಶಕ್ತಿ ಯೋಜನೆ ಸಂಪೂರ್ಣ ಅನುದಾನ ಕೂಡಲೇ ಸಾರಿಗೆ ನಿಗಮಗಳಿಗೆ ಪಾವತಿಸಬೇಕೆಂದು ಆಗ್ರಹಿಸಿದ್ರು. ಈ ಸಂದರ್ಭದಲ್ಲಿ NWKRTC ಮಹಾಮಂಡಳ ಅಧ್ಯಕ್ಷ ಬಿ ಎಚ್ ರಾಮೇನಹಳ್ಳಿ, AITUC ಅಧ್ಯಕ್ಷ ಶಾಂತಪ್ಪ ಮುಳವಾಡ, ಪ್ರಧಾನ ಕಾರ್ಯದರ್ಶಿ ಎಸ್ ಕೆ ಅಯ್ಯನಗೌಡ್ರ, ಕಾರ್ಯದರ್ಶಿ ಗೋಪಾಲರಾಯ, ಸಹ ಕಾರ್ಯದರ್ಶಿ ಸಂತೋಷ…

Read More

ಮಂಡ್ಯ: ಕುಡಿಯುವ ನೀರಿಗೆ ಬಿಟ್ಟು ಒಂದು ಟಿಎಂಸಿ ನೀರು ಇದ್ರು ಅದನ್ನು ರೈತರಿಗೆ ಕೊಡುವ ಮನಸ್ಥಿತಿ ನಮಗಿದೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು. ಮಂಡ್ಯದಲ್ಲಿ ಮಾತನಾಡಿದ ಅವರು, ಟ್ರಯಲ್ ಬ್ಲಾಸ್ಟಿಂಗ್​ಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದರು. 6 ತಿಂಗಳ ಒಳಗೆ ಟ್ರಯಲ್ ಬ್ಲಾಸ್ಟ್ ಮಾಡಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಟ್ರಯಲ್ ಬ್ಲಾಸ್ಟ್ ಮಾಡಿಸಿ ನಂತರ ಕಲ್ಲು ಗಣಿಗಾರಿಕೆಗೆ ಅನುಮತಿ ಕೊಡುತ್ತಾರೆ ಎಂಬ ಆತಂಕ ಕೆಲವರಲ್ಲಿ ಇದೆ. ರೈತರು ಹೈಕೋರ್ಟ್ ಆದೇಶವನ್ನು ಮನ್ನಿಸಬೇಕು ಎಂಬುದಾಗಿ ಮನವಿ ಮಾಡುತ್ತಿದ್ದೇನೆ ಎಂದು ಚಲುವರಾಯಸ್ವಾಮಿ ಹೇಳಿದರು. ರೈತರನ್ನು ವಿಶ್ವಾಸಕ್ಕೆ ತೆಗದುಕೊಂಡು ಟ್ರಯಲ್ ಬ್ಲಾಸ್ಟ್ ಮಾಡಲಿದ್ದೇವೆ. ಯಾವುದಕ್ಕೂ, ಯಾರಿಗೂ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ರೈತರನ್ನು ಕರೆದು ಈ‌ ಬಗ್ಗೆ ಮಾತಾಡುತ್ತೇವೆ ಎಂದು ಅವರು ತಿಳಿಸಿದರು. ಕೆಆರ್‌ಎಸ್‌ನಿಂದ ನಾಲೆಗಳಿಗೆ ಇನ್ನೊಂದು ಕಟ್ಟು ನೀಡಬೇಕೆಂಬ ರೈತರ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಳೆದ ಬೆಳೆಗೆ ಆಗಲ್ಲ ಎಂದಿದ್ದರೂ ನೀರು ಬಿಟ್ಟು ರಕ್ಷಣೆ ಮಾಡಿದ್ದೇವೆ. ಸಂಕ್ರಾಂತಿ ವೇಳೆ ಅವಕಾಶವಿಲ್ಲದಿದ್ದರೂ 10 ದಿನ…

Read More

ಬೆಂಗಳೂರು : ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿರುವ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡ ಐವರ ಪೈಕಿ 10 ಮತ್ತು 15 ವರ್ಷದ ಬಾಲಕರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಿಯಾನ್ ಪಾಷಾ (10) ಮತ್ತು ಸಾಜಿದ್ (15) ಮೃತ ದುರ್ದೈವಿಗಳು. ಕಳೆದ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಯಾನ್ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ, ಸಾಜಿದ್ ಮೃತಟ್ಟಿದ್ದನು. ಆ ಮೂಲಕ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬೆಂಗಳೂರಿಗರೇ ಗಮನಿಸಿ… ಇನ್ನೂ 2 ದಿನ ಕುಡಿಯುವ ನೀರಿಲ್ಲ, ನಿಮ್ಮ ಏರಿಯಾನೂ ಇದೆಯಾ? ರಿಯಾನ್​ ತಂದೆ ಅಫ್ರೋಜ್​ ಪರ್ಫ್ಯೂಮ್ ಗೋಡೌನ್​ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಊಟ ಕೊಡಲೆಂದು ರಿಯಾನ್​​ ಮತ್ತು ಸಂಬಂಧಿ ಸಾಜಿದ್​​ ಇಬ್ಬರೂ ಫ್ಯಾಕ್ಟರಿಗೆ ಬಂದಿದ್ದರು. ಈ ವೇಳೆ ನಡೆದ ಅಗ್ನಿ ಅವಘಡದಲ್ಲಿ ರಿಯಾನ್, ಸಾಜಿದ್ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ, ಉಳಿದ ಮೂವರ ಸ್ಥಿತಿ ಕೂಡ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ನಿನ್ನೆ ಬೆಳಿಗ್ಗೆ…

Read More