ಕಲಬುರಗಿ: ಪೋಲೀಸ್ ಪೇದೆ ಹುದ್ದೆಗಳಿಗಾಗಿ ಫೆಬ್ರವರಿ 25 ರಂದು ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಲಿಖಿತ ಪರೀಕ್ಷೆಗಳು ನಡೆಯಲಿವೆ..ಮಹಿಳಾ ಮತ್ತು ಪುರುಷ ಅಭ್ಯರ್ಥಿ ಸೇರಿದಂತೆ ಒಟ್ಟು 1137 ಹುದ್ದೆಗಳಿಗೆ ಎಕ್ಸಾಂ ನಡೆಯಲಿದೆ..ಈ ನಿಟ್ಟಿನಲ್ಲಿ ಯಾವುದೇ ಎಡವಟ್ಟು ಆಗದಂತೆ ಇಲಾಖೆ ಎಚ್ಚರಿಕೆ ವಹಿಸಿದೆ..
ಕರಿಮಣಿ & ಕಾಲುಂಗರ ಹೊರತು ಪಡಿಸಿ ಉಳಿದಂತೆ ಡ್ರೆಸ್ ಕೋಡ್ ಬಗ್ಗೆ ಕಂಡೀಷನ್ ಹಾಕಲಾಗಿದೆ..ಫುಲ್ ತೋಳಿನ ಡ್ರೆಸ್ ದೊಡ್ಡ ಬಟನ್ ಶರ್ಟ್ ಹಾಕಂಗಿಲ್ಲ. ಇನ್ನು ತೆಳುವಾದ ಚಪ್ಪಲಿ ಬಿಟ್ಟು ಹೈ ಹೀಲ್ಸ್ ತೊಡಂಗಿಲ್ಲ ಅಂತ ಕರಾರು ಮಾಡಿದೆ..ಅಂದಹಾಗೆ ಬೆಳಿಗ್ಗೆ 11 ರಿಂದ 12.30 ರವರೆಗೆ ಎಕ್ಸಾಂ ನಡೆಯಲಿದೆ ಅಂತ ಪೋಲೀಸ್ ಇಲಾಖೆ ತಿಳಿಸಿದೆ.