Author: AIN Author

ನವದೆಹಲಿ: ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಮತ್ತು ನನ್ನ ನಡುವೆ ಯಾವುದೇ ಮನಸ್ತಾಪ ಇಲ್ಲ, ನಾನು ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಹಿನ್ನೆಲೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ಮಾಜಿ ಶಾಸಕ ಸಿ.ಟಿ ರವಿ (CT Ravi) ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಭವನದಲ್ಲಿ ಮಾತನಾಡಿದ ಅವರು, ನಾನು ಮಧ್ಯಪ್ರದೇಶಕ್ಕೆ ತೆರಳುವ ಮುನ್ನ ಬಿ.ವೈ ವಿಜಯೇಂದ್ರ ಜೊತೆಗೆ ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಪಕ್ಷದ ವಿಚಾರದಲ್ಲಿ ಯಾರನ್ನೂ ಬಿಟ್ಟುಕೊಟ್ಟಿಲ್ಲ, ನನ್ನ ಪಕ್ಷ ನಿಷ್ಠೆಗೆ ಕಾಂಗ್ರೆಸ್ (Congress) ನಿಂದ ಸರ್ಟಿಫಿಕೇಟ್ ಬೇಕಿಲ್ಲ, ನನಗೆ ಅಸಮಾಧಾನ ಇಲ್ಲ. ಯಾರೇ ಅಧ್ಯಕ್ಷರಾದರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. https://ainlivenews.com/how-to-make-hotel-style-palak-paneer-antira-here-it-is/ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಮಾತನಾಡಿ, ಪಕ್ಷದ ವೀಕ್ಷಕರರಾಗಿ ನಿರ್ಮಲಾ ಸೀತಾರಾಮನ್, ದುಷ್ಯಂತ್ ಕುಮಾರ್ ಹೋಗಿದ್ದಾರೆ. ಎಲ್ಲ ನಾಯಕರ ಅಭಿಪ್ರಾಯ ಪಡೆಯಲಿದ್ದಾರೆ. ಹಿಂದೆಯೂ ಅಭಿಪ್ರಾಯ ಪಡೆದು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಆದಷ್ಟು ಬೇಗ ಆಯ್ಕೆಯಾಗಲಿ ಅನ್ನೊದು ಎಲ್ಲರ ಆಶಯ…

Read More

ಕನ್ನಡದ ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಬಾಲಿವುಡ್‌ನಲ್ಲಿ (Bollywood) ನಂಬರ್ ಒನ್ ನಟಿಯಾಗಿ ಮಿಂಚ್ತಿದ್ದಾರೆ. ಹೀಗಿರುವಾಗ ಭಾರತ ಬಿಟ್ಟು ವಿದೇಶದಲ್ಲಿ ಸೆಟಲ್ ಆಗಿ ಹಾಲಿವುಡ್‌ನಲ್ಲಿ ಮಿಂಚ್ತಿರುವ ಪ್ರಿಯಾಂಕಾ ಚೋಪ್ರಾಗೆ (Priyanka Chopra) ದೀಪಿಕಾ ಟಾಂಗ್ ಕೊಟ್ಟಿದ್ದಾರೆ. ಗೋಬ್ಲಲ್ ಸ್ಟಾರ್ ಆಗಲು ಭಾರತ ಬಿಟ್ಟು ಹೋಗಬೇಕು ಎಂದೇನೂ ಇಲ್ಲ ಅಂತ ಪ್ರಿಯಾಂಕಾಗೆ ದೀಪಿಕಾ ಮಾತಿನ ಚಾಟಿ ಬೀಸಿದ್ದಾರೆ. ಈ ಮೂಲಕ ಗ್ಲೋಬಲ್ ಸ್ಟಾರ್ ಎನಿಸಿಕೊಳ್ಳಲು ಭಾರತ ಬಿಟ್ಟು ಹೋದ ಪ್ರಿಯಾಂಕಾ ಚೋಪ್ರಾಗೆ ಟಾಂಗ್ ನೀಡಿದ್ದಾರೆ. ವಿಶ್ವಮಟ್ಟದಲ್ಲಿ ಗುರುತು ಮೂಡಿಸಲು ನಾನೇಕೆ ನನ್ನ ಲಗೇಜು ಎತ್ತಿಕೊಂಡು ದೇಶ ಬಿಟ್ಟು ಹೊರಡಬೇಕು. ನನಗೆ ಮಾಡೆಲಿಂಗ್ ಸಮಯದಲ್ಲೇ ಹಾಲಿವುಡ್‌ನಿಂದ ಆಫರ್ಸ್ ಬಂದಿತ್ತು ಎಂದು ನಟಿ ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ. ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ಚಿತ್ರರಂಗವನ್ನ ಆಳುತ್ತಿದ್ದಾರೆ. ಪಠಾಣ್, ಜವಾನ್ ಸಕ್ಸಸ್ ನಂತರ ದೀಪಿಕಾಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

Read More

ವಿಭಿನ್ನ ಕಥೆಗಳ ಸಿನಿಮಾಗಳನ್ನು ನಿರ್ದೇಶಿಸಿ ಪ್ರಸಿದ್ದಿ ಪಡೆದಿರುವ ನಿರ್ದೇಶಕ ‘ಸಿದ್ದು ಪೂರ್ಣಚಂದ್ರ’ ಮತ್ತೊಂದು ಅಂತಹದ್ದೇ ಕಥೆ ಚಿತ್ರಕಥೆ  ಬರೆದು ನಿರ್ದೇಶಿಸಿರುವ ಚಿತ್ರ ತಾರಿಣಿ (Tarini).  ಪ್ರತಿಷ್ಟಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೊಂದಾದ (Chirotsava) “ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ಗೆ ಈ ಸಿನಿಮಾ ಆಯ್ಕೆಯಾಗಿದೆ. ಜನವರಿ ತಿಂಗಳಲ್ಲಿ ರಾಜಸ್ಥಾನದ ಜೈಪುರ್ ನಲ್ಲಿ ತಾರಿಣಿ ಚಿತ್ರ ಪ್ರದರ್ಶನವಿದೆ. ದೇಶದ ವಿವಿಧ ಭಾಗಗಳಿಂದ ಬರುವ ಚಿತ್ರ ಪ್ರೇಮಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳುವರು ಎಂದು ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ  (Siddu Poornchandra) ಮಾಹಿತಿ ನೀಡಿದ್ದಾರೆ. ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸುರೇಶ್ ಕೋಟ್ಯಾನ್ ಚಿತ್ರಾಪು ಬಂಡವಾಳ ಹೂಡಿದ್ದಾರೆ. ಜೊತೆಗೆ  ಒಂದು ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದಾರೆ. ಗರ್ಭಿಣಿ ಮಹಿಳೆ ಕುರಿತಾದ ಕಥಾ ಸಾರಾಂಶ ಹೊಂದಿರುವ ತಾರಿಣಿ ಚಿತ್ರದಲ್ಲಿ ನಿಜವಾಗಿಯೂ ಪ್ರಗ್ನೆಂಟ್ ಆಗಿಯೇ ಮಮತಾ ರಾಹುತ್ ಅಭಿನಯಿಸಿದ್ದಾರೆ. ಆಗಷ್ಟೇ ಹುಟ್ಟಿದ ಮಮತಾ ರಾಹುತ್ (Mamata Rahut) ಅವರ ಮಗುವಿನ ದೃಶ್ಯಗಳೂ ‘ತಾರಿಣಿ’ ಚಿತ್ರದಲ್ಲಿರುವುದು ವಿಶೇಷ.

Read More

ಬಿಗ್‌ ಬಾಸ್‌ ಮನೆಯ (Bigg Boss House) ಚೆಂದದ ಜೋಡಿ ಅಂದರೆ ಸಂಗೀತಾ ಮತ್ತು ಕಾರ್ತಿಕ್. ಮನೆಯೊಳಗೂ ಮನೆಹೊರಗೂ ಈ ಜೋಡಿ ಸಖತ್ ಹೈಪ್ ಕ್ರಿಯೆಟ್ ಮಾಡಿದೆ. ಇದೀಗ ಬಿಗ್ ಮನೆಯಲ್ಲಿ ಸಂಗೀತಾಗೆ ರಕ್ತಪಿಪಾಸು ಎಂದು ಕಾರ್ತಿಕ್ ಕರೆದಿದ್ದಾರೆ. ನನ್ನ ರಕ್ತಹೀರಿಕೊಂಡು ಬಿಟ್ಟಿದ್ದಾರೆ ಎಂದು ಸಂಗೀತಾಗೆ ರೇಗಿಸಿದ್ದಾರೆ ಕಾರ್ತಿಕ್.‌ ಸಂಗೀತಾ ಮತ್ತು ಕಾರ್ತಿಕ್ ಅದ್ಯಾವಾಗ ಜಗಳ ಮಾಡಿಕೊಳ್ಳುತ್ತಾರೆ. ಅದ್ಯಾವಾಗ ಒಂದಾಗುತ್ತಾರೆ. ಮನೆಯೊಳಗೆ ಇರುವವರಿಗೂ ಪ್ರೇಕ್ಷಕರಿಗೂ ಇಬ್ಬರಿಗೂ ಅಚ್ಚರಿ ಮೂಡಿಸಿದೆ. ಟಾಸ್ಕ್‌ವೊಂದರಲ್ಲಿ ಒಬ್ಬರನೊಬ್ಬರು ಸೇಫ್ ಮಾಡಿಲ್ಲ ಎಂಬ ವಿಚಾರಕ್ಕೆ ಕಾರ್ತಿಕ್- ಸಂಗೀತಾ (Sangeetha Sringeri) ಇಬ್ಬರೂ ಸೂರು ಕಿತ್ತು ಹೋಗುವ ಹಾಗೆ ಜಗಳವಾಡಿದ್ದಾರೆ. ಇದರ ನಡುವೆ ಗಾಳಿಯಲ್ಲಿ ಗುಂಡು ಎಂಬಂತೆ ಇಬ್ಬರೂ ಇನ್ ಡೈರೆಕ್ಟ್ ಆಗಿ ಮಾತನಾಡಲು ಶುರುಮಾಡಿದ್ದಾರೆ. ಕಾರ್ತಿಕ್ (Karthik Mahesh) ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವಾಗ ಕೈಗೆ ಕೊಂಚ ಚಾಕು ತಾಗಿ ಗೆರೆ ಬಿದ್ದಿದೆ. ಬ್ಯಾಂಡೇಜ್ ಬೇಕಾ ಅಂತ ನಮ್ರತಾ ಕೇಳುತ್ತಾರೆ. ಆಗ ರಕ್ತ ಬರುತ್ತಿಲ್ಲ, ರಕ್ತ ಹೀರಿಕೊಳ್ಳುವವರೆಲ್ಲಾ ಆಗಲೇ…

Read More

ಮೈಸೂರು: ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್​ ವಿಚಾರ ಸಂಬಂಧ ಯತೀಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ. ಸಿಎಸ್​ಆರ್ ಫಂಡ್​​ ಬಗ್ಗೆ ನಾನು ಅವತ್ತು ಮಾತನಾಡಿದ್ದು ಎಂದು ಮೈಸೂರಿನಲ್ಲಿ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಒಬ್ಬ ಸಿಎಂ ಮೇಲೆ ಆರೋಪ ಮಾಡಬೇಕಾದ್ರೆ ಸಾಕ್ಷ್ಯ ಇಟ್ಟುಕೊಳ್ಳಬೇಕು. ನಮ್ಮ ತಂದೆ ಆಗಲಿ, ನಾನಾಗಲಿ ಯಾವುದೇ ದಂಧೆ ನಡೆಸುತ್ತಿಲ್ಲ. ವಿವೇಕಾನಂದ ಯಾರು ಅಂತಾ ನನಗೆ ಗೊತ್ತಿಲ್ಲ. https://ainlivenews.com/how-to-make-hotel-style-palak-paneer-antira-here-it-is/ ಇನ್ಸ್​ಪೆಕ್ಟರ್​​ ವಿವೇಕಾನಂದ ವರ್ಗಾವಣೆಗೂ ನನಗೂ ಸಂಬಂಧವಿಲ್ಲ. ನಮ್ಮ ಕ್ಷೇತ್ರದಲ್ಲಿ ವಿವೇಕಾನಂದ ಅಂತಾ ಬಿಇಒ ಕೂಡ ಇದ್ದಾರೆ. ವಿಪಕ್ಷಗಳು ಹತಾಶರಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ. ಇವರು ಅಧಿಕಾರದಲ್ಲಿದ್ದರು, ಸಿಎಂ ಆಗಿಯೂ ಕೆಲಸ ಮಾಡಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ದಂಧೆಯನ್ನೇ ಮಾಡುತ್ತಿದ್ರಾ? ಭ್ರಷ್ಟಾಚಾರ, ದಂಧೆ ಆಗ್ತಿದೆ ಎಂದು ಸುಳ್ಳು ಆರೋಪ ಮಾಡಬಾರದು ಎಂದರು.

Read More

ಬೆಂಗಳೂರು: ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದೇ ಗೆಲ್ಲುತ್ತೆ. ಈ ಸಲ ಕಪ್ ನಮ್ದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. https://ainlivenews.com/ashok-was-unanimously-elected-leader-of-opposition-by-vijayendra/ ನಗರದಲ್ಲಿ ಮಾತನಾಡಿ, ನಾಡಿದ್ದು ನಡೆಯಲಿರುವ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲುತ್ತದೆ. ನಾನು ಬೆಂಗಳೂರಿನಲ್ಲಿ ಒಂದು ಪಂದ್ಯ ನೋಡಿದ್ದೆ. ಮುಂದಿನ ಫೈನಲ್ ಪಂದ್ಯವನ್ನ ವೀಕ್ಷಿಸುತ್ತೇನೆ. ಟೀಂ ಆಗಿ ಆಡಿದರೆ ಗೆಲುವು ಸಾಧ್ಯ ಎಲ್ಲರೂ ಒಗ್ಗೂಡಿ ಉತ್ತಮ ಪ್ರದರ್ಶನ ನೀಡಿದರೆ ಜಯ ಖಚಿತ ಎಂದಿದ್ದಾರೆ.

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ನಡುವಿನ ಫೋನ್‌ ಸಂಭಾಷಣೆಯಲ್ಲಿ ಪ್ರಸ್ತಾಪಗೊಂಡಿದ್ದ ವಿವೇಕಾನಂದ ಎನ್ನುವ ಹೆಸರು ಕಳೆದ ರಾತ್ರಿ ಹೊರಬಿದ್ದ ಪೊಲೀಸ್‌ ಇನಸ್ಪೆಕ್ಟರ್‌ʼಗಳ ವರ್ಗಾವಣೆ ಪಟ್ಟಿಯಲ್ಲಿ ಪ್ರತ್ಯಕ್ಷವಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಟೀಕಾಪ್ರಹಾರ ನಡೆಸಿರುವ ಅವರು; ಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಎಂದು ಪ್ರಶ್ನೆ ಮಾಡಿದ್ದಾರೆ. https://ainlivenews.com/eskom-online-service-will-be-suspended-for-these-2-days-in-the-state/ ಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ… ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ. ಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಓಹ್! ಒಂದು…

Read More

ಹುಬ್ಬಳ್ಳಿ: ವಿಶ್ವಕಪ್ ಕ್ರಿಕೆಟ್ ಹಿನ್ನಲೆಯಲ್ಲಿ, ಈಗಾಗಲೇ ಭಾರತ ತಂಡ 10 ಪಂದ್ಯಗಳನ್ನು ಗೆಲವು ಸಾಧಿಸಿ ಈಗ ಪೈನಲ್‌ಗೆ ಬಂದಿದ್ದು ಇಡೀ ಭಾರಿತಿಯರಲ್ಲಿ ಕುತೂಹಲ ಮೂಡಿಸಿದೆ. ನಾಳೆ ಇಂಡಿಯಾ vs ಆಸ್ಟ್ರೇಲಿಯಾ ನಡೆಯುವ ವಿಶ್ವಕಪ್ ಕ್ರಿಕೆಟ್  ಪಂದ್ಯದಲ್ಲಿ ಭಾರತ ಅತೀ ಹೆಚ್ಚು ರನ್‌ಗಳಿಂದ ವಿಜಯ ಪತಾಕಿ ಹಾರಿಸಲೆಂದು ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ,  ಹಾಗೂ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಆಡುವುದರ ಮೂಲಕ ಶುಭಕೋರಿದರು. ಇನ್ನು ಅಭಿಮಾನಿಗಳು ಕೈಯಲ್ಲಿ ಆಟಗಾರರ ಭಾವಚಿತ್ರ ಹಿಡಿದು ವಂದೇ ಮಾತರಂ, ಇಂಡಿಯಾ ಇಂಡಿಯಾ ಎಂದು ಘೋಷಣೆ ಕೂಗುತ್ತ ಶುಭ ಹಾರೈಸಿದರು.

Read More

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಹಿರಿಯ ಶಾಸಕ ಆರ್. ಅಶೋಕ ಅವರ ಆಯ್ಕೆಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಶಾಸಕರಲ್ಲಿ ಇಲ್ಲ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ವಿರೋಧ ಪಕ್ಷದ ನಾಯಕನ ಆಯ್ಕೆ ಗೆ ಶಾಸಕರ ಅಪಸ್ವರ ಹಿನ್ನೆಲೆಯಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟ ಅವರು, ಭಾರತೀಯ ಜನತಾ ಪಕ್ಷದ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಭಾರತೀಯ ಜನತಾ ಪಕ್ಷದ ಹಿರಿಯ ಕಿರಿಯ ಶಾಸಕರ ಅಭಿಪ್ರಾಯ ಸಂಗ್ರಹಿಸಿ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಿದೆ ಶುಕ್ರವಾರಬೆಳಿಗ್ಗೆ ಮೊದಲು ಶಾಸಕರನ್ನ ಪ್ರತ್ಯೇಕವಾಗಿ ಮಾತನಾಡಿಸಲಾಯಿತು ಈ‌ ಸಂದರ್ಭದಲ್ಲಿ ವೀಕ್ಷಕರಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಚ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ ಗೌತಮ ಆಗಮಿಸಿದ್ದರು. ಯಾವುದೇ ಭಿನ್ನಾಭಿಪ್ರಾಯ ಬರದಂತೆ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಎಲ್ಲ…

Read More

ಹಿಂದೂಗಳ ಪವಿತ್ರ ಸ್ಥಳ ವಾರಣಾಸಿಯ (Varanasi) ನೆಲವನ್ನು ಸ್ಪರ್ಶಿಸಬೇಕು ಎನ್ನುವುದು ಹಲವರ ಗುರಿಯಾಗಿರುತ್ತದೆ. ಅದರಲ್ಲೂ ಗಂಗಾ ಆರತಿಯ ಪೂಜೆಯಲ್ಲಿ ಭಾಗಿಯಾಗುವುದು ಪುಣ್ಯದ ಕೆಲಸವೆಂದೇ ಭಾವಿಸಲಾಗಿದೆ. ಇಂತಹ ಗಂಗಾ ಆರತಿ ಪೂಜೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ) ಭಾಗಿಯಾಗಿದ್ದಾರೆ. ಸನ್ನಿ ಲಿಯೋನ್ ಜೊತೆ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ (Abhishek Singh) ಕೂಡ ಪವಿತ್ರ ಗಂಗಾ ಆರತಿಯ ಪೂಜೆಯಲ್ಲಿ ಭಾಗಿಯಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಪಿಂಕ್ ಸಲ್ವಾರ್ ಧರಿಸಿ, ಕುತ್ತಿಗೆಗೆ ಚಂಡು ಹೂವಿನ ಮಾಲೆ ಹಾಕಿಕೊಂಡಿರುವ ಸನ್ನಿ, ಪೂಜೆಗೆ ಉತ್ಸಾಹದಿಂದಲೇ ಭಾಗಿಯಾಗಿದ್ದಾರೆ. ಸನ್ನಿ ಲಿಯೋನ್ ಜೊತೆ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ (Abhishek Singh) ಕೂಡ ಪವಿತ್ರ ಗಂಗಾ ಆರತಿಯ ಪೂಜೆಯಲ್ಲಿ ಭಾಗಿಯಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಪಿಂಕ್ ಸಲ್ವಾರ್ ಧರಿಸಿ, ಕುತ್ತಿಗೆಗೆ ಚಂಡು ಹೂವಿನ ಮಾಲೆ ಹಾಕಿಕೊಂಡಿರುವ ಸನ್ನಿ, ಪೂಜೆಗೆ ಉತ್ಸಾಹದಿಂದಲೇ ಭಾಗಿಯಾಗಿದ್ದಾರೆ.

Read More