ಹುಬ್ಬಳ್ಳಿ: ವಿಶ್ವಕಪ್ ಕ್ರಿಕೆಟ್ ಹಿನ್ನಲೆಯಲ್ಲಿ, ಈಗಾಗಲೇ ಭಾರತ ತಂಡ 10 ಪಂದ್ಯಗಳನ್ನು ಗೆಲವು ಸಾಧಿಸಿ ಈಗ ಪೈನಲ್‌ಗೆ ಬಂದಿದ್ದು ಇಡೀ ಭಾರಿತಿಯರಲ್ಲಿ ಕುತೂಹಲ ಮೂಡಿಸಿದೆ. ನಾಳೆ ಇಂಡಿಯಾ vs ಆಸ್ಟ್ರೇಲಿಯಾ ನಡೆಯುವ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಅತೀ ಹೆಚ್ಚು ರನ್‌ಗಳಿಂದ ವಿಜಯ ಪತಾಕಿ ಹಾರಿಸಲೆಂದು ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ,
ಹಾಗೂ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಆಡುವುದರ ಮೂಲಕ ಶುಭಕೋರಿದರು. ಇನ್ನು ಅಭಿಮಾನಿಗಳು ಕೈಯಲ್ಲಿ ಆಟಗಾರರ ಭಾವಚಿತ್ರ ಹಿಡಿದು ವಂದೇ ಮಾತರಂ, ಇಂಡಿಯಾ ಇಂಡಿಯಾ ಎಂದು ಘೋಷಣೆ ಕೂಗುತ್ತ ಶುಭ ಹಾರೈಸಿದರು.


