ಬಿಗ್ ಬಾಸ್ ಮನೆಯ (Bigg Boss House) ಚೆಂದದ ಜೋಡಿ ಅಂದರೆ ಸಂಗೀತಾ ಮತ್ತು ಕಾರ್ತಿಕ್. ಮನೆಯೊಳಗೂ ಮನೆಹೊರಗೂ ಈ ಜೋಡಿ ಸಖತ್ ಹೈಪ್ ಕ್ರಿಯೆಟ್ ಮಾಡಿದೆ. ಇದೀಗ ಬಿಗ್ ಮನೆಯಲ್ಲಿ ಸಂಗೀತಾಗೆ ರಕ್ತಪಿಪಾಸು ಎಂದು ಕಾರ್ತಿಕ್ ಕರೆದಿದ್ದಾರೆ. ನನ್ನ ರಕ್ತಹೀರಿಕೊಂಡು ಬಿಟ್ಟಿದ್ದಾರೆ ಎಂದು ಸಂಗೀತಾಗೆ ರೇಗಿಸಿದ್ದಾರೆ ಕಾರ್ತಿಕ್.
ಸಂಗೀತಾ ಮತ್ತು ಕಾರ್ತಿಕ್ ಅದ್ಯಾವಾಗ ಜಗಳ ಮಾಡಿಕೊಳ್ಳುತ್ತಾರೆ. ಅದ್ಯಾವಾಗ ಒಂದಾಗುತ್ತಾರೆ. ಮನೆಯೊಳಗೆ ಇರುವವರಿಗೂ ಪ್ರೇಕ್ಷಕರಿಗೂ ಇಬ್ಬರಿಗೂ ಅಚ್ಚರಿ ಮೂಡಿಸಿದೆ. ಟಾಸ್ಕ್ವೊಂದರಲ್ಲಿ ಒಬ್ಬರನೊಬ್ಬರು ಸೇಫ್ ಮಾಡಿಲ್ಲ ಎಂಬ ವಿಚಾರಕ್ಕೆ ಕಾರ್ತಿಕ್- ಸಂಗೀತಾ (Sangeetha Sringeri) ಇಬ್ಬರೂ ಸೂರು ಕಿತ್ತು ಹೋಗುವ ಹಾಗೆ ಜಗಳವಾಡಿದ್ದಾರೆ. ಇದರ ನಡುವೆ ಗಾಳಿಯಲ್ಲಿ ಗುಂಡು ಎಂಬಂತೆ ಇಬ್ಬರೂ ಇನ್ ಡೈರೆಕ್ಟ್ ಆಗಿ ಮಾತನಾಡಲು ಶುರುಮಾಡಿದ್ದಾರೆ.

ಕಾರ್ತಿಕ್ (Karthik Mahesh) ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವಾಗ ಕೈಗೆ ಕೊಂಚ ಚಾಕು ತಾಗಿ ಗೆರೆ ಬಿದ್ದಿದೆ. ಬ್ಯಾಂಡೇಜ್ ಬೇಕಾ ಅಂತ ನಮ್ರತಾ ಕೇಳುತ್ತಾರೆ. ಆಗ ರಕ್ತ ಬರುತ್ತಿಲ್ಲ, ರಕ್ತ ಹೀರಿಕೊಳ್ಳುವವರೆಲ್ಲಾ ಆಗಲೇ ರಕ್ತ ಹೀರಿಕೊಂಡು ಬಿಟ್ಟಿದ್ದಾರೆ. ರಕ್ತಪಿಪಾಸುಗಳು ಎಂದು ಸಂಗೀತಾಗೆ ಉರಿಸಿದ್ದಾರೆ ಕಾರ್ತಿಕ್.

