Author: AIN Author

ಮೈಸೂರು:- ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದಿರುವ ಯದುವೀರ್ ಗೆ ವೋಟ್​ ಕೊಟ್ಟು ರಾಜಮನೆತನಕ್ಕೆ ಋಣ ಸಂದಾಯ ಮಾಡೋಣ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ. ಯದುವೀರ್ ನಮ್ಮ ಎಂಪಿ ಆಗುತ್ತಾರೆ ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆ, ಯದುವೀರ್​ಗೆ ವೋಟ್​ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ. ಹಾಗಾಗಿ ನಮ್ಮ ವೋಟ್​ ಕೊಟ್ಟು ರಾಜಮನೆತನಕ್ಕೆ ಋಣ ಸಂದಾಯ ಮಾಡೋಣ ಎಂದಿದ್ದಾರೆ. ಈ ಹಿಂದೆ ಪತ್ರಕರ್ತನಾಗಿದ್ದ ಪ್ರತಾಪ್ ಸಿಂಹನನ್ನ ಒಂದು ರೂಪಾಯಿ ಪಡೆಯದೇ ಗೆಲ್ಲಿಸಿದ್ದೇವೆ. ಅವರು ಕೂಡ ಒಂದು ರೂಪಾಯಿ ಪಡೆಯದೇ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಪ್ರತಾಪ್ ಸಿಂಹರನ್ನು ಅಭಿನಂದಿಸುತ್ತೇನೆ. ಅವರು 10 ವರ್ಷಗಳಲ್ಲಿ ಎಷ್ಟು ಮನೆಗೆ ಭೇಟಿ ನೀಡಿದ್ದಾನೆ. ಯದುವೀರ್‌ಗೆ ಅವಕಾಶ ಕೊಡಿ, ನಿಮ್ಮ ಮನೆ ಮನೆಗೆ ಬರುತ್ತಾರೆ. ಮಹಾರಾಜರು ಎಂಪಿಯಾದರೆ ನಿಮ್ಮ ಅಭಿವೃದ್ಧಿ ಬಾಗಿಲು ತೆರೆಯುತ್ತದೆ. ಬಡವರ ಕಷ್ಟಕ್ಕೆ ಆಗುತ್ತಾರೆ. ಯದುವೀರ್‌ಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರೇ ಗೌರವ ಕೊಡುತ್ತಾರೆ ಎಂದರು. ಮೈಸೂರು ಮಹರಾಜರ ಕೊಡುಗೆ ನಿಮಗೆ ತಿಳಿದಿದೆ.…

Read More

ಚಿಕ್ಕಬಳ್ಳಾಪುರ:- ಬಿಜೆಪಿ ಅಭ್ಯರ್ಥಿ ಒಂದು ಮತ ಜಾಸ್ತಿ ಪಡೆದರೂ ರಾಜೀನಾಮೆ ಕೊಡ್ತೀರಾ? ಎಂದು ಹೇಳುವ ಮೂಲಕ ಪ್ರದೀಪ್‌ ಈಶ್ವರ್‌ಗೆ ಸುಧಾಕರ್‌ ಮರು ಸವಾಲ್‌ ಹಾಕಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಮತ ಹೆಚ್ಚಿಗೆ ತಗೊಳ್ಳಿ ನೋಡೋಣ ಎಂಬ ಪ್ರದೀಪ್‌ ಈಶ್ವರ್‌ ಅವರ ಸವಾಲಿಗೆ ಪ್ರತಿಕ್ರಿಯಿಸಿದ್ದಾರೆ. ಕ್ಷೇತ್ರ ಅಲ್ಲ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೇ 5,000 ಲೀಡ್‌ ತಗೊಳ್ಳಿ ಅಂತಾ ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರು ಅವರ ಸವಾಲನ್ನು ಸ್ವೀಕರಿಸ್ತಾರೆ. ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ ಒಂದು ವೋಟು ಜಾಸ್ತಿ ಪಡೆದರೂ ನೀವು ರಾಜೀನಾಮೆ ಕೊಡ್ತೀರಾ? ಎಂದು ಮರು ಸವಾಲು ಹಾಕಿದ್ದಾರೆ

Read More

ಹಾವೇರಿ:- ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಈಶ್ವರಪ್ಪ ಪಾತ್ರ ಬಹಳಷ್ಟಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈಶ್ವರಪ್ಪ ಪಕ್ಷೇತರವಾಗಿ ನಿಲ್ಲುತ್ತಿರುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿ ಸಂಸದಿಯ ಮಂಡಳಿಯಲ್ಲಿ ಏನೇನು ನಡೆದಿದೆ ಅದೆಲ್ಲವೂ ಈಶ್ವರಪ್ಪನವರಿಗೆ ತಿಳಿದಿದೆ. ಮೊದಲು ನನ್ನ ಹೆಸರು ಇರಲಿಲ್ಲ. ಆದರೆ ನಾನು ಚುನಾವಣೆಗೆ ನಿಲ್ಲಬೇಕು ಎನ್ನುವುದು ವರಿಷ್ಠರ ತೀರ್ಮಾನ. ನಾನು ಮೋಸ ಮಾಡಿಲ್ಲ ಎಂದು ಹೇಳಿದರು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದು ಹೇಳಿದ್ದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಜೆಪಿ ನಡ್ಡಾ, ಅಮಿತ್‌ ಶಾ ತಿಳಿಸಿದ ಬಳಿಕ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಬೇಕಾಯಿತು ಎಂದರು

Read More

ರಾಮನಗರ: ಧರ್ಮಯುದ್ಧದಲ್ಲಿ ನನ್ನನ್ನು ಗೆಲ್ಲಿಸಿ, ಸತ್ಯಕ್ಕೆ ಜಯಸಿಗಬೇಕು ಎಂದು ಡಾ.ಮಂಜುನಾಥ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನಾನು ಸ್ಪರ್ಧೆ ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರ, ಸಲಹೆ ಮುಖ್ಯ. ಇಲ್ಲಿನ ಜನ ಎಷ್ಟು ಪ್ರೀತಿ ಮಾಡುತ್ತಾರೆ ಎಂದರೆ ನಾನು ಬಂದಾಗ ಪ್ರೀತಿಯ ಸಂಕೇತವಾದ ಗುಲಾಬಿ ಹೂ ನೀಡಿದರು. ಪ್ರಧಾನಿ ನರೇಂದ್ರ ಮೋದಿ ನಿಸ್ವಾರ್ಥ ಸೇವೆ ಮೂಲಕ ಹೊಸ ಭಾರತ ಕಟ್ಟಲು ಮುಂದಾಗಿದ್ದಾರೆ. ಅವರ ಕೆಲಸಕ್ಕೆ ನಾವು ಕೈಜೋಡಿಸಬೇಕು ಎಂದರು ನಾವು ಈ ಚುನಾವಣೆಯಲ್ಲಿ ಒಳ್ಳೆಯ ಈಜುಗಾರರಾಗಬೇಕು. ಆಗಲೇ ಸಮುದ್ರದಲ್ಲಿ ಮುತ್ತು ಸಿಗೋದು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದಶಪಥ ಹೆದ್ದಾರಿ, ರಸ್ತೆ, ರೈಲ್ವೆ, ವಿಮಾನ ಸೇವೆ ಅಭಿವೃದ್ಧಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಕೊಡುವ ಕೆಲಸ ಆಯಿತು. ದೇಶದ ಕೋವಿಡ್ ನಿಯಂತ್ರಣದ ಬಗ್ಗೆ ವಿಶ್ವಸಂಸ್ಥೆ ಕೂಡ ಹೊಗಳಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ನನಗೆ ಪ್ರೇಮಿಗಳ ರೀತಿ ಕಾಣುತ್ತಿದ್ದಾರೆ. ನಾನು ಹೃದ್ರೋಗ ತಜ್ಞನಾಗಿ ಕೆಲಸ ಮಾಡಿದ್ದೇನೆ. ಬಡವರನ್ನು…

Read More

ಶಿವಮೊಗ್ಗ:- ಬಿಜೆಪಿ ಟಿಕೆಟ್ ಮಿಸ್ ಹಿನ್ನೆಲೆ ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈಶ್ವರಪ್ಪ ಘೋಷಣೆ ಮಾಡಿದ್ದಾರೆ. ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹೋಗುವುದಿಲ್ಲ ಎನ್ನುತ್ತಲ್ಲೇ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು. ಸ್ವತಂತ್ರವಾಗಿ ಸ್ಪರ್ಧಿಸಿ ನಾನು ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹೋಗುತ್ತಿಲ್ಲ. ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿರುವುದನ್ನು ಬಿಡಿಸಲು ಸ್ಪರ್ಧೆ ಮಾಡುತ್ತೇನೆ. ನೊಂದ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಸ್ಪತಂತ್ರವಾಗಿ ನಿರ್ಧರಿಸುವೆ ಎಂದು ಹೇಳಿದರು. ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದರು

Read More

ಬೆಂಗಳೂರು:- ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. *ಉಮೇಶ್ ಕುಮಾರ್ .ಎಡಿಜಿಪಿ. ಕೆಎಸ್ ಆರ್ ಪಿ *ಸೀಮಂತ್ ಕುಮಾರ್ ಸಿಂಗ್. ಎಡಿಜಿಪಿ. ಬಿಎಂಟಿಎಫ್ *ಹರಿಸೇಖರನ್ ಎಡಿಜಿಪಿ CTC *ಎಡ ಮಾರ್ಟೀನ್ ಮಾರ್ಬನಿಂಗ ಡಿಐಜಿ ಬೆಳಗಾವಿ ಕಮಿಷನರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Read More

ಚಿಕ್ಕಬಳ್ಳಾಪುರ:- ಪೋಕ್ಸೋ ಕೇಸ್ ಗೆ ಸಂಬಧಪಟ್ಟಂತೆ ಯಡಿಯೂರಪ್ಪ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಪ್ರಕರಣವನ್ನು ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದೆ. ತನಿಖೆಯಲ್ಲಿ ಏನು ವರದಿ ಬರುತ್ತೆ ಅದು ಆಗೇ ಆಗುತ್ತೆ. ಸರಿ ಇದ್ದರೆ ಸರಿ, ತಪ್ಪಿದ್ದರೆ ತಪ್ಪು. ಅದಕ್ಕೆ ಯಾರೂ ಹೊರತಲ್ಲ. ತಪ್ಪಾಗಿದ್ದರೆ ಪೋಕ್ಸೋ ಅಡಿಯಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ತನಿಖಾ ವರದಿ ಬಂದ ಮೇಲೆ ಸತ್ಯ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಅವರ ಸಂಬಂಧಿ ಪುರುಷರೇ ಕಾರಣ. ಎಳೆವಯಸ್ಸಿನ ಮಕ್ಕಳನ್ನು ಗರ್ಭಿಣಿ ಮಾಡಿ ನರಕಕ್ಕೆ ದೂಡುತ್ತಿದ್ದಾರೆ. 7, 8ನೇ ತರಗತಿ ಓದುವಾಗ ಗರ್ಭಿಣಿಯಾದರೆ ಏನು ಮಾಡುವುದು. ಹೆಣ್ಣುಮಕ್ಕಳ ಮೇಲೆ ತಂದೆ, ತಾಯಿ ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದ್ದಾರೆ.

Read More

ದೆಹಲಿ:- ದೆಹಲಿಯಲ್ಲಿ ಇಡಿ ಅಧಿಕಾರಿಗಳಿಂದ ಕೆ.ಕವಿತಾ ಅರೆಸ್ಟ್ ಮಾಡಲಾಗಿದೆ, ಮದ್ಯ ಹಗರಣ ಪ್ರಕರಣದಲ್ಲಿ ಬಿಆರ್‌ಎಸ್ ಎಂಎಲ್‌ಸಿ ಹಾಗೂ ಕೆಸಿಆರ್ ಪುತ್ರಿ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿದೆ. ಬಂಧನಕ್ಕೆ ಮುನ್ನ ಪ್ರಸ್ತುತ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಕವಿತಾ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಏಜೆನ್ಸಿ ನೀಡಿದ ಹಲವಾರು ಸಮನ್ಸ್‌ಗಳಿಗೆ ಗೈರು ಹಾಜರಾದ ನಂತರ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಕವಿತಾ ಅವರು ತೆಲಂಗಾಣದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. ಈಕೆ ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಕವಿತಾ ಅವರನ್ನು ಈ ಹಿಂದೆ ವಿಚಾರಣೆಗೊಳಪಡಿಸಿದ್ದರೂ, ಈ ವರ್ಷ ಅವರು ಎರಡು ಸಮನ್ಸ್‌ಗಳಿಗೆ ಹಾಜರಾಗಿರಲಿಲ್ಲ. ಬಂಜಾರ ಹಿಲ್ಸ್‌ನ ಆಕೆಯ ನಿವಾಸದಲ್ಲಿ ಇಡಿ ತಂಡ ಶೋಧ ನಡೆಸಿದ್ದರಿಂದ ಯಾರನ್ನೂ ಒಳಗೆ ಬಿಡಲಾಗುತ್ತಿಲ್ಲ. ಶೋಧ ಕಾರ್ಯ ಯಾವಾಗ ಪ್ರಾರಂಭವಾಯಿತು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಆದರೆ ಮಧ್ಯಾಹ್ನ ಆಕೆಯ…

Read More

ಬೆಂಗಳೂರು:- ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಹಾಗೂ ಸಿಬ್ಬಂದಿಗಳಿಂದ ಮಾನವ ಕಳ್ಳ ಸಾಗಣೆ ಆರೋಪ ಹಿನ್ನೆಲೆ ದಾಳಿ ನಡೆದಿದೆ. ದಾಳಿ ವೇಳೆ 20 ಬಾಲಕಿಯರು ಪತ್ತೆ ಆಗಿದ್ದಾರೆ. ಪತ್ತೆಯಾದವರನ್ನು ಗಲ್ಫ್​ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ. ದಕ್ಷಿಣ ಭಾರತದಲ್ಲಿ ಇಂತಹ ಪ್ರಕರಣಗಳು ಈಗಾಗಲೇ ವರದಿಯಾಗಿವೆ ಎನ್ನಲಾಗುತ್ತಿದೆ. ಸದ್ಯ ಎಫ್​​ಐಆರ್​ ದಾಖಲಿಸುವಂತೆ ಸಂಪಿಗೇಹಳ್ಳಿ ಠಾಣೆಯಲ್ಲಿ ಎನ್​​ಸಿಪಿಸಿಆರ್ ಅಧ್ಯಕ್ಷ ಹಾಗೂ ಸಿಬ್ಬಂದಿ ಆಗ್ರಹಿಸಿದ್ದಾರೆ. ಸದ್ಯ ಎನ್​ಸಿಪಿಸಿಆರ್​ನಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮದರಸದಲ್ಲಿ ಸುಮಾರು 10-20 ಮಕ್ಕಳು ಇದ್ದರು. ಮಕ್ಕಳಿಗೆ ಸರಿಯಾಗಿ ಶಿಕ್ಷಣವನ್ನು ನೀಡುತ್ತಿಲ್ಲ. ಜೊತೆಗೆ ಧಾರ್ಮಿಕ‌ ಶಿಕ್ಷಣವನ್ನು ನೀಡುತ್ತಿದ್ದಾರೆ. ಯಾವುದೇ ಲೈಸೆನ್ಸ್ ಇಲ್ಲದೆ ಮದರಸವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

Read More

ಬೆಂಗಳೂರು :- ಕರ್ನಾಟಕದಲ್ಲಿ ಕಡಿವಾಣ ಬೀಳಲಿದೆಯೇ ಎನ್ನುವ ಚರ್ಚೆ ಪ್ರಾರಂಭವಾಗಿದೆ. ಕಬಾಬ್, ಪಾನಿಪುರಿ ಅಸುರಕ್ಷತೆಯನ್ನು ಪರಿಶೀಲಿಸಿ ಈ ತಿಂಗಳ ಅಂತ್ಯದಲ್ಲಿಯೇ ವರದಿ ಪ್ರಕಟಿಸಿ ಕ್ರಮಕ್ಕೆ ಮುಂದಾಗಲಿದೆ. ಪಾನಿಪುರಿ ಹಾಗೂ ಕಬಾಬ್‌ನಲ್ಲೂ ಹಾನಿಕಾರಕ ಅಂಶಗಳು ಇದ್ದರೆ ಕೂಡಲೇ ಕಲರ್ ಬಳಕೆ ನೀಷೇಧ ಹೇರಿ ಕ್ರಮ ವಹಿಸುತ್ತಾರೆ ಎನ್ನಲಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಗೋಬಿ ಮಂಚೂರಿಯನ್ ಮತ್ತು ಕಾಟನ್‌ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್ ಬಿ ಬಣ್ಣ ಬಳಕೆ ಮಾಡುತ್ತಿರುವುದು ಕಂಡು ಬಂದ ಬೆನ್ನಲ್ಲೇ ನಿಷೇಧಿಸಿತ್ತು. ಅಷ್ಟೇ ಅಲ್ಲದೇ, ಇದನ್ನು ಉಲ್ಲಂಘಿಸಿದರೇ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದು ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ರೋಡಮೈನ್ ಬಿ ಬಳಕೆಯನ್ನು ದೇಶದ ಆಹಾರ ಸುರಕ್ಷತೆ ನಿಯಂತ್ರಣದ ಅಡಿಯಲ್ಲಿ ಅನುಮತಿಸಲಾಗಿಲ್ಲ. ಇದನ್ನು ಬಳಕೆ ಮಾಡಿದರೇ ಕ್ಯಾನ್ಸರ್‌ನಂತಹ ಭಯಾನಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ. ರೋಡಮೈನ್ ಬಿ ರಾಸಾಯನಿಕ ಬಣ್ಣವಾಗಿದ್ದು, ಬಟ್ಟೆ, ಕಾಗದ, ಚರ್ಮ, ಮುದ್ರಣ ಮತ್ತು ಪ್ಲಾಸ್ಟಿಕ್‌ಗಳಿಗೆ ಬಣ್ಣ…

Read More