ಮೈಸೂರು:– ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದಿರುವ ಯದುವೀರ್ ಗೆ ವೋಟ್ ಕೊಟ್ಟು ರಾಜಮನೆತನಕ್ಕೆ ಋಣ ಸಂದಾಯ ಮಾಡೋಣ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.
ಯದುವೀರ್ ನಮ್ಮ ಎಂಪಿ ಆಗುತ್ತಾರೆ ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆ, ಯದುವೀರ್ಗೆ ವೋಟ್ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ. ಹಾಗಾಗಿ ನಮ್ಮ ವೋಟ್ ಕೊಟ್ಟು ರಾಜಮನೆತನಕ್ಕೆ ಋಣ ಸಂದಾಯ ಮಾಡೋಣ ಎಂದಿದ್ದಾರೆ.
ಈ ಹಿಂದೆ ಪತ್ರಕರ್ತನಾಗಿದ್ದ ಪ್ರತಾಪ್ ಸಿಂಹನನ್ನ ಒಂದು ರೂಪಾಯಿ ಪಡೆಯದೇ ಗೆಲ್ಲಿಸಿದ್ದೇವೆ. ಅವರು ಕೂಡ ಒಂದು ರೂಪಾಯಿ ಪಡೆಯದೇ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಪ್ರತಾಪ್ ಸಿಂಹರನ್ನು ಅಭಿನಂದಿಸುತ್ತೇನೆ. ಅವರು 10 ವರ್ಷಗಳಲ್ಲಿ ಎಷ್ಟು ಮನೆಗೆ ಭೇಟಿ ನೀಡಿದ್ದಾನೆ. ಯದುವೀರ್ಗೆ ಅವಕಾಶ ಕೊಡಿ, ನಿಮ್ಮ ಮನೆ ಮನೆಗೆ ಬರುತ್ತಾರೆ. ಮಹಾರಾಜರು ಎಂಪಿಯಾದರೆ ನಿಮ್ಮ ಅಭಿವೃದ್ಧಿ ಬಾಗಿಲು ತೆರೆಯುತ್ತದೆ. ಬಡವರ ಕಷ್ಟಕ್ಕೆ ಆಗುತ್ತಾರೆ. ಯದುವೀರ್ಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರೇ ಗೌರವ ಕೊಡುತ್ತಾರೆ ಎಂದರು.
ಮೈಸೂರು ಮಹರಾಜರ ಕೊಡುಗೆ ನಿಮಗೆ ತಿಳಿದಿದೆ. ಮೀಸಲಾತಿ ಜಾರಿ ಮಾಡಿದ್ದೆ ಮೈಸೂರು ಮಹರಾಜರು. ಇವತ್ತು ಕೆಲವರು ನಾವು ಕೊಟ್ಟೆವು ಎಂದು ಹೇಳುತ್ತಾರೆ. ನಾನು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ರನ್ನ ಭಕ್ತಿಯಿಂದ ನೋಡುತ್ತಿದ್ದೆವು. ಮೈಸೂರು ಮಹರಾಜರ ಕುಟುಂಬದ ಜೊತೆ ಈಗಲೂ ಉತ್ತಮ ಒಡನಾಟ, ಅಭಿಮಾನ ಇದೆ. ನಮ್ಮ ಮತ್ತೆ ಬಿಜೆಪಿ ನಡುವೆ ಸೀಟು ಹಂಚಿಕೆ ವಿಚಾರವಾಗಿ ವೈಮನಸ್ಸಿಲ್ಲ. ಈಗಾಗಲೇ ಬಿಜೆಪಿಯವರು 25 ಕ್ಷೇತ್ರ ಗೆದ್ದಿದ್ದಾರೆ. ಇನ್ನು ಗೆಲ್ಲಬೇಕಿರುವುದು ಮೂರು ಕ್ಷೇತ್ರ. ಆ ಮೂರು ಕ್ಷೇತ್ರ ಮಂಡ್ಯ, ಹಾಸನ, ಕೋಲಾರ ಮಾತ್ರ ಜೆಡಿಎಸ್ ಕೇಳುತ್ತದೆ. 28ಕ್ಕೆ 28 ಕ್ಷೇತ್ರವನ್ನ ಮೈತ್ರಿ ಅಭ್ಯರ್ಥಿಗಳು ಗೆದ್ದರೆ, ನಮ್ಮ ಎಲ್ಲಾ ಕೆಲಸಗಳು ಆಗುತ್ತವೆ ಎಂದರು.