ಚಿಕ್ಕಬಳ್ಳಾಪುರ:- ಬಿಜೆಪಿ ಅಭ್ಯರ್ಥಿ ಒಂದು ಮತ ಜಾಸ್ತಿ ಪಡೆದರೂ ರಾಜೀನಾಮೆ ಕೊಡ್ತೀರಾ? ಎಂದು ಹೇಳುವ ಮೂಲಕ ಪ್ರದೀಪ್ ಈಶ್ವರ್ಗೆ ಸುಧಾಕರ್ ಮರು ಸವಾಲ್ ಹಾಕಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಮತ ಹೆಚ್ಚಿಗೆ ತಗೊಳ್ಳಿ ನೋಡೋಣ ಎಂಬ ಪ್ರದೀಪ್ ಈಶ್ವರ್ ಅವರ ಸವಾಲಿಗೆ ಪ್ರತಿಕ್ರಿಯಿಸಿದ್ದಾರೆ.
ಕ್ಷೇತ್ರ ಅಲ್ಲ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೇ 5,000 ಲೀಡ್ ತಗೊಳ್ಳಿ ಅಂತಾ ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರು ಅವರ ಸವಾಲನ್ನು ಸ್ವೀಕರಿಸ್ತಾರೆ. ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ ಒಂದು ವೋಟು ಜಾಸ್ತಿ ಪಡೆದರೂ ನೀವು ರಾಜೀನಾಮೆ ಕೊಡ್ತೀರಾ? ಎಂದು ಮರು ಸವಾಲು ಹಾಕಿದ್ದಾರೆ