Author: AIN Author

ಹಸಿ ಹಾಲು ಚರ್ಮಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುವುದಲ್ಲದೇ, ಇಡೀ ದಿನ ಚರ್ಮವನ್ನು ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ. ಎಣ್ಣೆಯ ಚರ್ಮಕ್ಕಾಗಿ ಅತ್ಯುತ್ತಮ ಟಾನಿಕ್ ಕಚ್ಚಾ ಹಾಲು. ಇದರಿಂದ ತ್ವಚೆಗೆ ಏನೆಲ್ಲಾ ಪ್ರಯೋಜನಗಳಿವೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಹಾಲು ಆರೋಗ್ಯಕ್ಕೆ ಮಾತ್ರವಲ್ಲ, ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಹಸಿ ಹಾಲಿನಲ್ಲಿ ವಿಟಮಿನ್-ಬಿ, ಆಲ್ಫಾ ಹೈಡ್ರಾಕ್ಸಿ ಆಸಿಡ್, ಕ್ಯಾಲ್ಸಿಯಂ ಮತ್ತು ಇತರ ಪ್ರಬಲ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದ್ದು, ಇದು ಚರ್ಮಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ.  ಹಸಿ ಹಾಲು ಚರ್ಮದ ಕೋಶಗಳನ್ನು ಆಳವಾಗಿ ಪೋಷಣೆ ಮಾಡುತ್ತದೆ ಮತ್ತು ದಿನವಿಡೀ ಚರ್ಮವನ್ನು ತೇವಾಂಶದಿಂದ ಇರುವಂತೆ ಮಾಡುತ್ತದೆ. ಚರ್ಮವು ಎಣ್ಣೆಯ ಅಂಶದಿಂದ ಕೂಡಿದ್ದರೆ ಮತ್ತು ಮುಖದಲ್ಲಿ ಒಂದು ಪಿಂಪಲ್ ಆಗಿದ್ದರೆ, ಹಸಿ ಹಾಲನ್ನು ಬಳಸಿ ಸಮಸ್ಯೆ ನಿವಾರಿಸಬಹುದು. ಪಿಂಪಲ್ ಅನ್ನು ಹಸಿ ಹಾಲು ಬಳಸುವ ಮೂಲಕ ತೆಗೆದು ಹಾಕಬಹುದು. ಎಣ್ಣೆಯುಕ್ತ ಚರ್ಮದಿಂದ ಎಣ್ಣೆಯನ್ನು ಹೊರತೆಗೆಯಲು ಹಸಿ ಹಾಲು ಉಪಯುಕ್ತ ಮತ್ತು ದೊಡ್ಡ ಚರ್ಮದ ಪೊರೆಗಳನ್ನು ಬಿಗಿಯಾಗಿಸುತ್ತದೆ. ಮೃದುವಾದ ಮತ್ತು ಕಲೆರಹಿತ ತ್ವಚೆ ಪಡೆಯಲು ಬಯಸುವುದಾದರೆ ಹಸಿ ಹಾಲನ್ನು ಬಳಸಿ.…

Read More

ದೇಹದ ರಕ್ತದಲ್ಲಿ ಒಮ್ಮೆ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ ಹಲವಾರು ಆರೋಗ್ಯ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಪ್ರಮುಖವಾಗಿ ಹೃದಯದ ಆರೋಗ್ಯಕ್ಕೆ, ಸರಾಗವಾಗಿ ರಕ್ತ ಸಂಚಾರವನ್ನು ಪೂರೈಸಲು ಆಗದೇ, ಹೃದಯಘಾತದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯ ತಜ್ಞರು ಕೂಡ ಎಚ್ಚರಿಸುತ್ತಾರೆ! ಈ ಬಗ್ಗೆ ಆರೋಗ್ಯ ತಜ್ಞರು ಕೂಡ ಹೇಳುವ ಪ್ರಕಾರ, ಇಂದಿನ ದಿನಗಳಲ್ಲಿ ಸಣ್ಣ-ವಯಸ್ಸಿನವರಿಗೂ ಕೂಡ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ, ಬಹಳ ಬೇಗನೆ ಹೃದಯಾಘಾತದಿಂದ ತಮ್ಮ ಪ್ರಾಣ ಕಳೆದು ಕೊತ್ತಿದ್ದಾರೆ ಎಂದು ಎಚ್ಚರಿಕೆಯನ್ನು ನೀಡುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಕೂಡ, ಕೆಟ್ಟಕೊಲೆ ಸ್ಟ್ರಾಲ್ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇದ ಕ್ಕಾಗಿ ಸರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯ ಕಾರಿ ಜೀವನ ಶೈಲಿಯನ್ನು ಅನುಸರಿಸಬೇಕು. ಮೊದಲಿಗೆ ಇಂತಹ ಆಹಾರಗಳಿಂದ ದೂರವಿರಿ ಹೆಚ್ಚು ಕೊಬ್ಬಿನ ಅಂಶ ಇರುವ ಆಹಾರಗಳಿಂದ ದೂರವಿರಿ, ಉದಾಹರಣೆಗೆ ಕೆಂಪು ಮಾಂಸಗಳು, ಸಂಸ್ಕರಿಸಿದ ಆಹಾರಗಳು, ಜಂಕ್‌ ಫುಡ್‌ನಂತಹ ಆಹಾರಗಳು, ಎಣ್ಣೆಯಾಂಶ ಇರುವ ಆಹಾರಗಳು, ಚೀಸ್, ಕೆನೆ ಭರಿತ ಹಾಲು, ಸಿಹಿ…

Read More

ಭಾರತೀಯ ಚಿತ್ರರಂಗದಲ್ಲಿ ಪ್ರಸ್ತುತ ಇರುವ ಅತ್ಯುತ್ತಮ ಕಲಾವಿದರ ಪಟ್ಟಿಯಲ್ಲಿ ನವಾಜುದ್ದೀನ್ ಸಿದ್ದಿಕಿ ಹೆಸರು ಮೊದಲ ಸಾಲಿನಲ್ಲಿ ಬರುತ್ತದೆ. ಯಾವ ಪಾತ್ರಕ್ಕೂ ಸೈ ಎನ್ನುವ ಅವರ ಅಭಿನಯಕ್ಕೆ ಮಾರುಹೋಗದವರು ವಿರಳ. ರಾಷ್ಟ್ರೀಯ ನಾಟಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ನಟ ಆಕ್ಷನ್ ಚಿತ್ರಗಳಲ್ಲಿ ಮಿಂಚಿದಷ್ಟೇ ರೊಮ್ಯಾಂಟಿಕ್ ಚಿತ್ರಗಳಲ್ಲೂ ಗಮನ ಸೆಳೆದಿದ್ದಾರೆ. ನವಾಜುದ್ದೀನ್ ಅವರ ಸಿನಿಮಾ ಪಯಣ ಮುಳ್ಳಿನ ಹಾದಿಯಾಗಿತ್ತು. ಅವರು ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳಲು ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಂಡರು. ಅನೇಕ ಅವಮಾನಗಳು ಮತ್ತು ನಿರಾಕರಣೆಗಳ ಹೊರತಾಗಿಯೂ, ಸಿದ್ದಿಕಿ ನಟನೆಯನ್ನು ಬಿಡಲಿಲ್ಲ. ನವಾಜುದ್ದೀನ್ ಉತ್ತರ ಪ್ರದೇಶದ ಬುಧಾನಾ ಪ್ರದೇಶದಲ್ಲಿ ಜನಿಸಿದರು. 8 ಮಂದಿ ಒಡಹುಟ್ಟಿದವರಲ್ಲಿ ಇವರು ಹಿರಿಯರಾಗಿದ್ದಾರೆ. ತಮ್ಮ ಪ್ರೌಢಾವಸ್ಥೆಯ ಬಹುಪಾಲು ಉತ್ತರಾಖಂಡದಲ್ಲಿ ಕಳೆದರು. ಬಿಎಸ್ಸಿ ಕೆಮಿಸ್ಟ್ರಿ ಓದಿದ್ದಾರೆ. ನಂತರ ನವಾಜುದ್ದೀನ್ ದ ನಿರ್ವಹಣೆಯ ಹೊಣೆ ಹೊತ್ತರು. ಈ ಹಿಂದೆ ರಸಾಯನಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಆದರೆ ಮೊದಲಿನಿಂದಲೂ ಅವರಿಗೆ ನಟಿಸುವ ಆಸೆ ಇತ್ತು. ಆದ್ದರಿಂದ ಅವರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್ಡಿ)ಗೆ…

Read More

ಹಾಸನ:- ತಾಲ್ಲೂಕಿನ, ಶಾಂತಿ ಗ್ರಾಮದಲ್ಲಿ ಪ್ರಿಯಕರ ಮದುವೆ ನಿರಾಕರಿಸಿದ್ದಕ್ಕೆ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಅಮೃತ (19) ಮೃತ ಯುವತಿ. ಹಾಸನದ ಗೋಕುಲದಾಸ್ ಗಾರ್ಮೆಂಟ್ಸ್ ಕೆಲಸಕ್ಕೆ ಬರುತ್ತಿದ್ದ ಅಮೃತ ಹಿರಿಸಾವೆ ಹೋಬಳಿ, ಮಸಕನಹಳ್ಳಿ ಗ್ರಾಮದ ದಿಲೀಪ್ ಎಂಬಾತನನ್ನು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಇಬ್ಬರ ಪ್ರೀತಿಯ ವಿಚಾರ 2 ತಿಂಗಳ ಹಿಂದೆ ಅಮೃತ ಪೋಷಕರಿಗೆ ತಿಳಿದಿದ್ದು, ಮಾ.11 ರಂದು ದಿಲೀಪ್‌ನನ್ನು ಯುವತಿಯ ಮನೆಗೆ ಬರಲು ಹೇಳಿದ್ದರು. ಆದರೆ ದಿಲೀಪ್ ನುಗ್ಗೇಹಳ್ಳಿಯಲ್ಲಿ ಅಮೃತಳಾನ್ನು ಭೇಟಿಯಾಗಿ, ಮದುವೆಯಾಗಲು ಸಾಧ್ಯವಿಲ್ಲ. ನನಗೂ ನಿನಗೂ ಸಂಬಂಧವಿಲ್ಲ. ನಮ್ಮಿಬ್ಬರ ಜಾತಿ ಬೇರೆ-ಬೇರೆ ಎಂದು ಏರುಧ್ವನಿಯಲ್ಲಿ ಹೇಳಿ ಅಲ್ಲಿಂದ ವಾಪಸ್ಸಾಗಿದ್ದಾನೆ. ನಂತರ ಅಮೃತ ಕೆಲಸಕ್ಕಾಗಿ ಹಾಸನದ ಬಸ್ ಹತ್ತಿ ಬಂದಿದ್ದರು. ಅಲ್ಲಿಂದ ತಾನು ಕೆಲಸಕ್ಕೆ ಬರುವುದಿಲ್ಲ ಎಂದು ಸ್ನೇಹಿತೆಗೆ ತಿಳಿಸಿ ಶಾಂತಿಗ್ರಾಮದಲ್ಲಿ ಬಸ್ ಇಳಿದಿದ್ದರು. ಸಂಜೆ ಅಮೃತ ಮನೆ ಬಾರದೇ ಫೋನ್ ಸಹ ಸಂಪರ್ಕಕ್ಕೆ ಸಿಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ನುಗ್ಗೇಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ…

Read More

ಮಂಡ್ಯ:- ಜನರ ಋಣ ತೀರಿಸಿದ ಮೇಲೆ ನನ್ನ ಜೀವ ಮಣ್ಣಿಗೆ ಹೋಗತ್ತೆ ಎಂದು ಹೇಳುವ ಮೂಲಕ HD ಕುಮಾರಸ್ವಾಮಿ ಭಾವುಕರಾಗಿದ್ದಾರೆ. ಜಿಲ್ಲೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜನರ ಋಣ ತೀರಿಸಿದ ಮೇಲೆ ಈ ಜೀವ ಮಣ್ಣಿಗೆ ಹೋಗುತ್ತೆ. ಅಲ್ಲಿಯವರೆಗೆ ನಾನು ಮಣ್ಣಿಗೆ ಹೋಗುವುದಿಲ್ಲ. H.D.ದೇವೇಗೌಡರು ಜ್ಯೋತಿಷಿಗಳ ಮಾತು ಕೇಳಿ ಬದುಕಿದ್ದಾರೆ ಎಂದು ಹೇಳಿದ್ದಾರೆ. ನಾನು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಅಂದುಕೊಂಡವನಲ್ಲ. ಸಿನಿಮಾ ಹಂಚಿಕೆದಾರನಾಗಿದ್ದೆ, ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನಾನು ಮಂಡ್ಯ ಜಿಲ್ಲೆಯ ಜನರ ಜೊತೆ ಮೊದಲಿನಿಂದಲೂ ಇದ್ದೇನೆ. 2019ರ ಚುನಾವಣೆಯಲ್ಲಿ ಹೊಂದಾಣಿಕೆ ಎಂದು ಕುತ್ತಿಗೆ ಕೊಯ್ದರು. ಅದಕ್ಕೆ ಉತ್ತರ ಕೊಡುವ ಶಕ್ತಿ ಮಂಡ್ಯ ಜನರ ಕೈಯಲ್ಲಿದೆ ಎಂದರು. ಜನ್ಮ ಭೂಮಿ ಹಾಸನ, ರಾಜಕೀಯ ಭವಿಷ್ಯ ನೀಡಿದ್ದು ರಾಮನಗರ. ಆದರೆ ನನ್ನ ಜೀವ ಮಿಡಿಯುವುದು ಮಂಡ್ಯಕ್ಕಾಗಿ. ಸ್ವಾಭಿಮಾನ ಎನ್ನುವುದು ಮಾತಿನಲ್ಲಿ ಅಲ್ಲ, ಕೆಲಸದಲ್ಲಿರಬೇಕು. ನಾಟಿ ಸ್ಟೈಲ್ ಅಂತಾರೆ, ದುಡ್ಡಿನಿಂದ ರಾಜಕೀಯ ಮಾಡೋದಲ್ಲ. ಈ ಚುನಾವಣೆ ಕೆಲವರಿಗೆ ಕಲೆಕ್ಷನ್ ಮಾಡಿಕೊಳ್ಳಲು…

Read More

ಧಾರವಾಡ:- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹಠಾತ್ ಹೃದಯಾಘಾತಗಳನ್ನ ತಡೆಯುವಲ್ಲಿ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಗೆ ಧಾರವಾಡದಲ್ಲಿ ಚಾಲನೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಲ್ಲಿ ಹೃದಯಾಘಾತ ಕಾಣಿಸಿಕೊಂಡು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಸಾವಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ದಿ. ಪುನೀತ್ ರಾಜಕುಮಾರ್‌ ಅವರ ಹೆಸರಿನಲ್ಲಿ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಡಾ.ಪುನೀತ್ ರಾಜಕುಮಾರ್‌ ಅವರ ಹೆಸರಿನಲ್ಲಿ ʻಹೃದಯ ಜ್ಯೋತಿʼ ಯೋಜನೆ ಜಾರಿಗೆ ತಂದಿದ್ದು, 2ನೇ ಹಂತದ ಈ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಧಾರವಾಡದ ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಹೃದಯಾಘಾತವಾದ ಕೆಲವೇ ಸಮಯದಲ್ಲಿ ಬಡವರಿಗೂ ಲಭ್ಯವಾಗುವ ರೀತಿಯಲ್ಲಿ ಎಲ್ಲ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ 28,000 ರೂ. ಮೌಲ್ಯದ Tenecteplase ಇಂಜಕ್ಷನ್‌ ಅನ್ನು ಉಚಿತವಾಗಿ ನೀಡುವ ಯೋಜನೆ ಇದಾಗಿದೆ. ಹೃದಯಾಘಾತವಾದ ಕೆಲ ಸಮಯದಲ್ಲಿ ತಕ್ಷಣ ಇಸಿಜಿ ಮಾಡುವ…

Read More

ಮಹಿಳಾ ಪ್ರೀಮಿಯರ್​​ ಲೀಗ್​ 2024 ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಮುಂಬೈ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ಆರ್​ಸಿಬಿ ಚೊಚ್ಚಲ ಬಾರಿಗೆ ಫೈನಲ್​ ಹಂತಕ್ಕೆ ಎಂಟ್ರಿಕೊಟ್ಟಿದೆ. ಈ ಮೂಲಕ ರವಿವಾರ ಮಾರ್ಚ್​ 17ರಂದು ನಡೆಯಲಿರುವ ಡಬ್ಲ್ಯೂಪಿಎಲ್​ 2024ರ ಫೈನಲ್​ ಪಂದ್ಯದಲ್ಲಿ ಬೆಂಗಳೂರು​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಸೆಣಸಾಡಲಿದೆ. ಈ ಮೂಲಕ ಆರ್​ಸಿಬಿ ಕಪ್​ ಗೆಲ್ಲುವ ಕನಸು ಜೀವಂತವಾಗಿದೆ. ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಆರ್​ಸಿಬಿ ತಂಡ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭಿಸುವ ಮೂಲಕ 20 ಓವರ್​ಗೆ 136 ರನ್​ ಗಳಿಸಿತು. ಈ ಸುಲಭ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್​ ತಂಡವು ನಿಗದಿತ 20 ಓವರ್​ಗೆ 6 ವಿಕೆಟ್ ನಷ್ಟಕ್ಕೆ 130 ರನ್​ ಗಹಳಿಸುವ ಮೂಲಕ 5 ರನ್​ ಗಳಿಂದ ಸೋಲನ್ನಪ್ಪಿತು. ಇನ್ನು, ಕಡಿಮೆ ಸ್ಕೋರ್​ ಪಂದ್ಯವನ್ನು ಗೆಲ್ಲುವಲ್ಲಿ ಆರ್​ಸಿಬಿ ಬೌಲರ್​ ಗಳ ಪಾತ್ರ ಪ್ರಮುಖವಾಗಿದೆ. ರಾಯಲ್​ ಚಾಲೆಂಜರ್ಸ್​​…

Read More

ಗಂಗಾವತಿ:- ಆನೆಗುಂದಿ ಗ್ರಾಮ ಪಂಚಾಯತಿ ಪಿಡಿಒ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಆನೆಗುಂದಿ ಗ್ರಾಮ ಪಂಚಾಯತಿ ಯ ಪಿಡಿಒ ಆಗಿ ಕೆಲಸ ಮಾಡುತ್ತಿರುವ ಕೃಷ್ಣಪ್ಪ ಯಾವ ZP‌ ಸಿಇಒ‌ ಗೆ ಕಡಿಮೆ ಇಲ್ಲ. ಗಂಗಾವತಿಯ ಮಲ್ಲಾಪುರದಲ್ಲಿ ಕಾರ್ಯದರ್ಶಿ ಯಾದ ನೇಮಕವಾದ ಕೃಷ್ಣಪ್ಪ ಮ‌ೂಲತಃ ಖಾಸಗಿ ಶಾಲೆಯ ಶಿಕ್ಷಕ, ಕಳೆದ ಐದು ವರ್ಷಕ್ಕಿಂತ ಹೆಚ್ಚಾಗಿ ಆನೆಗುಂದಿ ಪಿಡಿಒ ಕೆಲಸ ಮಾಡುತ್ತಿರುವ ಕೃಷ್ಣಪ್ಪನ ಆಸ್ತಿಗೆ ಲೆಕ್ಕವಿಲ್ಲ, ಇದಕ್ಕೆ ಕಾರಣ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಅಧಿಕಾರಿಗಳ ಸಹಕಾರವೇ ಎಂಬ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ಬಿಸಿಯೂಟ ನೇಮಕಾತಿ ವಿಷಯದಲ್ಲಿ ವಿಧವೆಗೆ ಬಿಟ್ಟು ವಿಧ್ಯಾಭ್ಯಾಸ ಅರ್ಹತೆ ಎಂದೇಳಿ ಅಕ್ರಮ ನೇಮಕಾತಿ ಮಾಡಿದ್ದು ಒಂದು, ಆರು ತಿಂಗಳ ಹಿಂದೆ ಮತ್ತೆ ಬಿಸಿಯೂಟ ನೌಕರರ ನೇಮಕಾತಿಯಲ್ಲಿ ವಿಷ ಬೀಜ ‌ಬಿತ್ತಿದ್ದೇ ಇದೇ ಪಿಡಿಒ‌ ಕೃಷ್ಣಪ್ಪ. ಉದ್ಯೋಗ ಖಾತ್ರಿ ಯಲ್ಲಿ ಲಕ್ಷಾನುಗಟ್ಟಲೇ ನಡೆಯದೇ ಇರುವ ಅಕ್ರಮ ಕಾಮಗಾರಿ ಹೆಸರಿನಲ್ಲಿ ಆನೆಗುಂದಿಯ ಗ್ರಾಮ ಪಂಚಾಯತಿ ಪಿಡಿಒ ಲೂಟಿ…

Read More

ರೈತರ ಜಮೀನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅನೇಕ ನಿಯಮವನ್ನು ಜಾರಿಗೊಳಿಸುತ್ತಿದೆ. ಇನ್ನು ರಾಜ್ಯದಲ್ಲಿ ರೈತರಿಗಾಗಿ ವಿಶೇಷ ಸೌಲಭ್ಯವನ್ನು ಕೂಡ ರಾಜ್ಯ ಸರ್ಕಾರ ನೀಡುತ್ತಿದೆ. ಸದ್ಯ ರೈತರ ಬರ ಪರಿಹಾರಕ್ಕಾಗಿ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಒಟ್ಟಾರೆ 70 % ರಷ್ಟು ಸಣ್ಣ ರೈತರಿದ್ದಾರೆ ಆದರೆ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಶೇ. 44 ರಷ್ಟು ಮಾತ್ರ. ಇದರಿಂದಾಗಿ ಕೇಂದ್ರದಿಂದ ಲಭ್ಯವಾಗುವ ಬರ ಪರಿಹಾರದಿಂದ ಸಾಕಷ್ಟು ರೈತರು ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಿಕೊಳಲು ರಾಜ್ಯದ ರೈತರು ತಮ್ಮ RTC ಜೊತೆ Aadhaar Link ಮಾಡುವುದು ಕಡ್ಡಾಯವಾಗಿದೆ. RTC ಜೊತೆ ಆಧಾರ್ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿ ಅಂಶಗಳ ಬಗ್ಗೆ ಮಾಹಿತಿ ಲಭಿಸುತ್ತದೆ. ಹೀಗಾಗಿ ಎಲ್ಲ ರೈತರು ತಮ್ಮ RTC ಜೊತೆ Aadhaar Link ಮಾಡಿಕೊಳ್ಳುವ ಮೂಲಕ ಸರ್ಕಾರ ಸೌಲಭ್ಯವನ್ನು ಪಡೆದುಕೊಳಬಹುದಾಗಿದೆ. RTC ಜೊತೆ ಆಧಾರ್ ಲಿಂಕ್ ಮಾಡಲು ಪ್ರತ್ಯೇಕ App ಬಿಡುಗಡೆ ಜಿಲ್ಲೆಯಲ್ಲಿ ಈಗಾಗಲೇ…

Read More

ದೈತ್ಯ ಟೆಕ್‌ ಕಂಪನಿ ಮೆಟಾದ ಪ್ರಮುಖ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಜಾಗತಿಕ ಮಟ್ಟದಲ್ಲಿ ಸ್ಥಗಿತಗೊಂಡಿದ್ದವು. ಇದಾದ ಬೆನ್ನಲ್ಲೇ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಒಂದೇ ದಿನದಲ್ಲಿ ಸುಮಾರು 23,100 ಕೋಟಿ ರೂ.ಗಳಷ್ಟು (3 ಬಿಲಿಯನ್ ಡಾಲರ್‌) ನಷ್ಟ ಅನುಭವಿಸಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ಪ್ರಕಾರ ಮಾರ್ಜ್‌ ಜುಕರ್‌ಬರ್ಗ್ ಅವರ ನಿವ್ವಳ ಸಂಪತ್ತಿನ ಮೌಲ್ಯ ಒಂದು ದಿನದಲ್ಲಿ 2.79 ಬಿಲಿಯನ್‌ ಡಾಲರ್‌ಗಳಷ್ಟು ಕುಸಿತ ಕಂಡಿದೆ. ಈ ಮೂಲಕ 176 ಬಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದೆ. ಹೀಗಿದ್ದೂ ಅವರು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಒಂದು ಗಂಟೆಗಳ ಕಾಲ ಜಾಗತಿಕ ಮಟ್ಟದಲ್ಲಿ ಮೆಟಾ ಸೇವೆಗಳು ಸ್ಥಗಿತಗೊಂಡಿದ್ದವು. ಇದಾದ ಬೆನ್ನಲ್ಲೇ ಕಳೆದ ರಾತ್ರಿ ಮೆಟಾ ಷೇರುಗಳು ಶೇ. 1.6ರಷ್ಟು ಕುಸಿತ ಕಂಡಿವೆ. ಇದರಿಂದ ಮಾರ್ಕ್ ಜುಕರ್‌ಬರ್ಗ್ ಅವರ ನಿವ್ವಳ ಆಸ್ತಿಯೂ ಇಳಿಕೆಯಾಗಿದೆ. ಅಮೆರಿಕದ ಷೇರು ಮಾರುಕಟ್ಟೆ ವಾಲ್ ಸ್ಟ್ರೀಟ್‌ನಲ್ಲಿ ಕಳೆದ ರಾತ್ರಿಯ ವಹಿವಾಟಿನಲ್ಲಿ ಮೆಟಾ ಷೇರುಗಳು ಶೇ. 1.6ರಷ್ಟು ಕುಸಿತ ಕಂಡು…

Read More