ಭಾರತೀಯ ಚಿತ್ರರಂಗದಲ್ಲಿ ಪ್ರಸ್ತುತ ಇರುವ ಅತ್ಯುತ್ತಮ ಕಲಾವಿದರ ಪಟ್ಟಿಯಲ್ಲಿ ನವಾಜುದ್ದೀನ್ ಸಿದ್ದಿಕಿ ಹೆಸರು ಮೊದಲ ಸಾಲಿನಲ್ಲಿ ಬರುತ್ತದೆ. ಯಾವ ಪಾತ್ರಕ್ಕೂ ಸೈ ಎನ್ನುವ ಅವರ ಅಭಿನಯಕ್ಕೆ ಮಾರುಹೋಗದವರು ವಿರಳ. ರಾಷ್ಟ್ರೀಯ ನಾಟಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ನಟ ಆಕ್ಷನ್ ಚಿತ್ರಗಳಲ್ಲಿ ಮಿಂಚಿದಷ್ಟೇ ರೊಮ್ಯಾಂಟಿಕ್ ಚಿತ್ರಗಳಲ್ಲೂ ಗಮನ ಸೆಳೆದಿದ್ದಾರೆ. ನವಾಜುದ್ದೀನ್ ಅವರ ಸಿನಿಮಾ ಪಯಣ ಮುಳ್ಳಿನ ಹಾದಿಯಾಗಿತ್ತು. ಅವರು ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳಲು ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಂಡರು.
ಅನೇಕ ಅವಮಾನಗಳು ಮತ್ತು ನಿರಾಕರಣೆಗಳ ಹೊರತಾಗಿಯೂ, ಸಿದ್ದಿಕಿ ನಟನೆಯನ್ನು ಬಿಡಲಿಲ್ಲ. ನವಾಜುದ್ದೀನ್ ಉತ್ತರ ಪ್ರದೇಶದ ಬುಧಾನಾ ಪ್ರದೇಶದಲ್ಲಿ ಜನಿಸಿದರು. 8 ಮಂದಿ ಒಡಹುಟ್ಟಿದವರಲ್ಲಿ ಇವರು ಹಿರಿಯರಾಗಿದ್ದಾರೆ. ತಮ್ಮ ಪ್ರೌಢಾವಸ್ಥೆಯ ಬಹುಪಾಲು ಉತ್ತರಾಖಂಡದಲ್ಲಿ ಕಳೆದರು. ಬಿಎಸ್ಸಿ ಕೆಮಿಸ್ಟ್ರಿ ಓದಿದ್ದಾರೆ. ನಂತರ ನವಾಜುದ್ದೀನ್ ದ ನಿರ್ವಹಣೆಯ ಹೊಣೆ ಹೊತ್ತರು. ಈ ಹಿಂದೆ ರಸಾಯನಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಆದರೆ ಮೊದಲಿನಿಂದಲೂ ಅವರಿಗೆ ನಟಿಸುವ ಆಸೆ ಇತ್ತು. ಆದ್ದರಿಂದ ಅವರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್ಡಿ)ಗೆ ಸೇರಿದರು.
ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ರು, ಕೊತ್ತಂಬರಿ ಸೊಪ್ಪು ಸಹ ಮಾರಾಟ ಮಾಡಿದ್ದ ನವಾಜುದ್ದೀನ್, ದೆಹಲಿಗೆ ಬಂದು ನಟನೆಯತ್ತ ಗಮನ ಹರಿಸಿದ್ರು. ಆದರೆ ಕೆಲಸ ಬಿಟ್ಟ ನಂತರ ಹಣದ ಕೊರತೆ ಕಾಡಿತು. ಪರಿಸ್ಥಿತಿ ಬಿಗಡಾಯಿಸಿತು. ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ನವಾಜುದ್ದೀನ್ ಆಗ ಎದುರಿಸಿದ ತೊಂದರೆಗಳನ್ನು ವಿವರಿಸಿದ್ದಾರೆ. ಆ ಸಮಯದಲ್ಲಿ ನಾನು ಸ್ನೇಹಿತರ ಬಳಿ ಸಾಲ ಪಡೆಯುತ್ತಿದ್ದೆ.
ಇನ್ನೆರಡು ದಿನಗಳಲ್ಲಿ ಬರುತ್ತೇನೆ ಎಂದು ಹೇಳುತ್ತಿದ್ದರು. ನಂತರ ಬೇರೆಯವರಿಂದ ಸಾಲ ಪಡೆದು ಹಿಂದಿನ ಸಾಲಗಾರನಿಗೆ ಸಾಲ ಪಾವತಿಸುತ್ತಿದ್ದೆ. ನನಗೆ ಹಣ ಬೇಕಾದಾಗಲೆಲ್ಲಾ ನಾನು ಇದನ್ನು ಮಾಡಿದ್ದೇನೆ. ಆಗ ನಾನು ಒಂದು ಚಿಕ್ಕ ಫ್ಲಾಟ್ ನಲ್ಲಿ 4 ಜನರೊಂದಿಗೆ ವಾಸಿಸುತ್ತಿದ್ದೆ. ನಾನು ಹಣಕ್ಕಾಗಿ ಕಾವಲುಗಾರನಾಗಿ ಕೆಲಸ ಮಾಡಿದ್ದೇನೆ. ಕೆಲವೊಮ್ಮೆ ಕೊತ್ತಂಬರಿ ಸೊಪ್ಪು ಕೂಡ ಮಾರುತ್ತಿದ್ದೆ.
ನವಾಜುದ್ದೀನ್ ಸಿದ್ದಿಕಿ 1999 ರಲ್ಲಿ ಅಮೀರ್ ಖಾನ್ ಅಭಿನಯದ ಸರ್ಫರೋಶ್ ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ಬಾಲಿವುಡ್ ಗೆ ಎಂಟ್ರಿ ಕೊಟ್ರು. ನಂತರ ಅವರು ರಾಮ್ ಗೋಪಾಲ್ ವರ್ಮಾ ಅವರ ‘ಶೂಲ್’, 2000 ರ ‘ಜಂಗಲ್’ ಮತ್ತು ರಾಜ್ಕುಮಾರ್ ಹಿರಾನಿ ಅವರ ಮುನ್ನಾಭಾಯ್ ಎಂಬಿಬಿಎಸ್ (2003) ನಲ್ಲಿ ಕಾಣಿಸಿಕೊಂಡರು. ನಂತರ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ರೂ ಆದರೆ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಅವರು 2005 ರವರೆಗೆ ಖಾಲಿ ಇದ್ದರು. ಆದರೆ ಅವಕಾಶಗಳ ಪ್ರಯತ್ನ ನಿಲ್ಲಲಿಲ್ಲ. 2012ರ ಕಹಾನಿ ಚಿತ್ರದಲ್ಲಿ ಸಿದ್ದಿಕಿ ಕಾಣಿಸಿಕೊಂಡಿದ್ದರು. ಅನುರಾಗ್ ಕಶ್ಯಪ್ ಅವರ ಗ್ಯಾಂಗ್ಸ್ಟರ್ ಚಿತ್ರ ‘ಗ್ಯಾಂಗ್ಸ್ ಆಫ್ ವಾಸೇಪುರ್’ (2012) ನೊಂದಿಗೆ ನವಾಜುದ್ದೀನ್ ಸೂಪರ್ ಹಿಟ್ ಪಡೆದರು. ಒಂದು ಹಿಟ್ ಪಡೆಯಲು ಇಂಡಸ್ಟ್ರಿಯಲ್ಲಿ 12 ವರ್ಷಗಳ ಕಾದಿದ್ದಾರೆ.
ಅಂದಿನಿಂದ ಸಿದ್ದಿಕಿ ಹಿಂತಿರುಗಿ ನೋಡಿಲ್ಲ. ಈಗ ನವಾಜುದ್ದೀನ್ ಬ್ಯುಸಿ ನಟರಲ್ಲಿ ಒಬ್ಬರಾಗಿದ್ದಾರೆ. ಟಾಪ್ OTT ನಟರಾಗಿರುವ ನವಾಜುದ್ಧೀನ್ಗೆ ಡಿಮ್ಯಾಂಡ್ ಹೆಚ್ಚಾಗಿದೆ. ವರದಿಗಳ ಪ್ರಕಾರ, ಸಿದ್ದಿಕಿ ಈಗ ಪ್ರತಿ ಚಿತ್ರಕ್ಕೆ 10 ಕೋಟಿ ರೂ. ಟೈಮ್ಸ್ ನೌ ವರದಿಯ ಪ್ರಕಾರ, ನವಾಜುದ್ದೀನ್ ಸಿದ್ದಿಕಿ ಅವರ ನಿವ್ವಳ ಮೌಲ್ಯ 2024 ರ ಹೊತ್ತಿಗೆ $15 ಮಿಲಿಯನ್ ಆಗಿದೆ. ಅಂದರೆ ಸುಮಾರು 125 ಕೋಟಿ ರೂ ಇದೆ. ಭಾರತದಲ್ಲಿ ವೆಬ್ ಸೀರೀಸ್ ಜನಪ್ರಿಯತೆಗೆ ನಾಂದಿ ಹಾಡಿದ ಸರಣಿಗಳಲ್ಲಿ ಪ್ರಮುಖವಾದ ‘ಸೇಕ್ರೆಡ್ ಗೇಮ್ಸ್’ನ ಪ್ರಮುಖ ಆಕರ್ಷಣೆಯೇ ನವಾಜುದ್ದೀನ್! ಪ್ರಸ್ತುತ ಓಟಿಟಿಯಿಂದ ತುಸು ಅಂತರ ಕಾಯ್ದುಕೊಂಡಿರುವ ನವಾಜುದ್ದೀನ್ ಮತ್ತೆ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ.