ದೇಹದ ರಕ್ತದಲ್ಲಿ ಒಮ್ಮೆ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ ಹಲವಾರು ಆರೋಗ್ಯ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಪ್ರಮುಖವಾಗಿ ಹೃದಯದ ಆರೋಗ್ಯಕ್ಕೆ, ಸರಾಗವಾಗಿ ರಕ್ತ ಸಂಚಾರವನ್ನು ಪೂರೈಸಲು ಆಗದೇ, ಹೃದಯಘಾತದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಆರೋಗ್ಯ ತಜ್ಞರು ಕೂಡ ಎಚ್ಚರಿಸುತ್ತಾರೆ!
- ಈ ಬಗ್ಗೆ ಆರೋಗ್ಯ ತಜ್ಞರು ಕೂಡ ಹೇಳುವ ಪ್ರಕಾರ, ಇಂದಿನ ದಿನಗಳಲ್ಲಿ ಸಣ್ಣ-ವಯಸ್ಸಿನವರಿಗೂ ಕೂಡ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ, ಬಹಳ ಬೇಗನೆ ಹೃದಯಾಘಾತದಿಂದ ತಮ್ಮ ಪ್ರಾಣ ಕಳೆದು ಕೊತ್ತಿದ್ದಾರೆ ಎಂದು ಎಚ್ಚರಿಕೆಯನ್ನು ನೀಡುತ್ತಾರೆ.
- ಹೀಗಾಗಿ ಯಾವುದೇ ಕಾರಣಕ್ಕೂ ಕೂಡ, ಕೆಟ್ಟಕೊಲೆ ಸ್ಟ್ರಾಲ್ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇದ ಕ್ಕಾಗಿ ಸರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯ ಕಾರಿ ಜೀವನ ಶೈಲಿಯನ್ನು ಅನುಸರಿಸಬೇಕು.
ಮೊದಲಿಗೆ ಇಂತಹ ಆಹಾರಗಳಿಂದ ದೂರವಿರಿ
ಹೆಚ್ಚು ಕೊಬ್ಬಿನ ಅಂಶ ಇರುವ ಆಹಾರಗಳಿಂದ ದೂರವಿರಿ, ಉದಾಹರಣೆಗೆ ಕೆಂಪು ಮಾಂಸಗಳು, ಸಂಸ್ಕರಿಸಿದ ಆಹಾರಗಳು, ಜಂಕ್ ಫುಡ್ನಂತಹ ಆಹಾರಗಳು, ಎಣ್ಣೆಯಾಂಶ ಇರುವ ಆಹಾರಗಳು, ಚೀಸ್, ಕೆನೆ ಭರಿತ ಹಾಲು, ಸಿಹಿ ತಿಂಡಿಗಳು ಹಾಗೂ ತಂಪು ಪಾನೀಯಗಳಿಂದ ಮೊದಲು ದೂರವಿರಿ ಯಾಕೆಂದ್ರೆ, ಇವುಗಳು, ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚು ಮಾಡುವುದು ಮಾತ್ರದಲ್ಲಿ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗು ವಂತೆ ಮಾಡುವುದು.
ಬೆಳ್ಳುಳ್ಳಿ ಹಾಗೂ ಶುಂಠಿ
ಶುಂಠಿ-ಬೆಳ್ಳುಳ್ಳಿ ಜೋಡಿಯಿಂದ ನಮ್ಮ ದೇಹಕ್ಕೆ ಉಪ ಯೋಗ ವಾಗುವಂತಹ ಹಲವಾರು ಪ್ರಯೋಜನ ಗಳು ಸಿಗುತ್ತವೆ.
ಪ್ರಮುಖವಾಗಿ, ಈ ಎರಡು ಜೋಡಿಯಲ್ಲಿ ನಮ್ಮ ದೇಹದ ರಕ್ತದಲ್ಲಿ ಬೆರೆತಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹಾಗೂ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಶಕ್ತಿ ಇದೆ.
ಇದರ ಜೊತೆಗೆ ಹೃದಯದ ಆರೋಗ್ಯಕ್ಕೆ, ಸರಾಗವಾಗಿ ರಕ್ತ ಸಂಚಾರವನ್ನು ಪೂರೈಸಲು ನೆರವಾಗುತ್ತದೆ. ಇದ ರಿಂದ ಹೃದಯದ ಆರೋಗ್ಯ ಚೆನ್ನಾಗಿ ಇರುವುದರ ಜೊತೆಗೆ, ರಕ್ತದೊತ್ತಡದಂತಹ ಸಮಸ್ಯೆಗಳು ಕೂಡ ದೂರವಾಗುತ್ತದೆ
ಹೀಗೆಮಾಡಿ:
ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಸ್ವಲ್ಪ ಶುಂಠಿ ಮತ್ತು ನಿಂಬೆ ಹಣ್ಣಿನ ರಸದೊಂದಿಗೆ ಮಿಶ್ರಣ ಮಾಡಿ ಬಾಯಲ್ಲಿ ಇಟ್ಟುಕೊಂಡು, ಇದರ ರಸವನ್ನು ನಿಧಾನಕ್ಕೆ ಹೀರುತ್ತಾ ಬಂದರೆ, ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿವಾರಣೆಯಾಗುತ್ತದೆ
ತ್ರಿಫಲ ಚೂರ್ಣ ನೀರು!
ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಆಗುವಷ್ಟು ತ್ರಿಫಲ ಚೂರ್ಣವನ್ನು ಚೆನ್ನಾಗಿ ಕದಡಿ, ಕುಡಿಯುವ ಅಭ್ಯಾಸ ಇಟ್ಟುಕೊಂಡರೆ, ದೇಹದಿಂದ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರಹೋಗಿ, ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಕೆಟ್ಟ ಕೊಬ್ಬಿನ ಅಂಶಗಳು ಅಂಶಗಳು ಕ್ರಮೇಣವಾಗಿ ದೂರ ವಾಗುತ್ತದೆ.
ನೆನೆಸಿಟ್ಟ ಬಾದಾಮಿ ಬೀಜಗಳು ಹಾಗೂ ಖರ್ಜೂರಗಳು
ಪ್ರತಿದಿನ ರಾತ್ರಿಯ ಸಮಯದಲ್ಲಿ ಐದಾರು ಬಾದಾಮಿ ಬೀಜ ಗಳನ್ನು ನೀರಿನಲ್ಲಿ ನೆನೆಹಾಕಿ ಮರುದಿನ ಬೆಳಗ್ಗೆ ಖಾಲಿ ಹೊಟ್ಟೆ ಯಲ್ಲಿ ಸೇವನೆ ಮಾಡಬೇಕು.
ಇಲ್ಲಾಂದ್ರೆ ಪ್ರತಿದಿನ ಎರಡು-ಮೂರು ಒಣ ಅಥವಾ ಹಸಿ ಖರ್ಜೂರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳ ಪ್ರಮಾಣ ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ.
ಓಟ್ಸ್ ಸೇವನೆ ಮಾಡಿ
ಬೆಳಗಿನ ಸಮಯದಲ್ಲಿ ಹಾಲಿನೊಂದಿಗೆ ಓಟ್ಸ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದಕ್ಕೆ ಪ್ರಮುಖ ಕಾರಣ ಓಟ್ಸ್ ನಲ್ಲಿ ಕರಗುವ ನಾರಿನಾಂಶ ಹೆಚ್ಚಾಗಿರುವ ಕಾರಣ ನೈಸರ್ಗಿಕವಾದ ರೀತಿ ಯಲ್ಲಿ, ದೇಹದ ರಕ್ತದಲ್ಲಿ ಶೇಖರಣೆಗೊಂಡಿರುವ ಕೆಟ್ಟ ಕೊಲೆ ಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಹೃದಯದ ಆರೋ ಗ್ಯಕ್ಕೂ ಕೂಡ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳು ತ್ತದೆ.
ದಾಲ್ಚಿನ್ನಿ:
ದಾಲ್ಚಿನ್ನಿ ದೈನಂದಿನ ಸೇವನೆಯು ಹೆಚ್ಚಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬಹಳ ಪರಿಣಾಮಕಾರಿ. ಇದಕ್ಕಾಗಿ ಮೊದಲು ಈ ಮಸಾಲೆಯ ತುಂಡುಗಳನ್ನು ತೆಗೆದುಕೊಂಡು ಮಿಕ್ಸರ್ ಗ್ರೈಂಡರ್ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿಡಿ. ಬೆಳಗ್ಗೆ ಎದ್ದ ನಂತರ ಒಂದು ಚಿಟಿಕೆಯಷ್ಟು ಸೇವಿಸಿರಿ. ಇದರ ಪ್ರಯೋಜನಗಳು ಕೆಲವೇ ದಿನಗಳಲ್ಲಿ ಗೋಚರಿಸುತ್ತವೆ. ಆದರೆ ಈ ಮಸಾಲೆಯನ್ನು ಅತಿಯಾಗಿ ಸೇವಿಸಬಾರದು. ಏಕೆಂದರೆ ಇದು ದೇಹಕ್ಕೆ ಅನೇಕ ರೀತಿಯ ಹಾನಿಯನ್ನುಂಟುಮಾಡುತ್ತದೆ.
ಅಗಸೆ ಬೀಜ:
ಅಗಸೆ ಬೀಜಗಳು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನಿಯಮಿತವಾಗಿ ಇವುಗಳನ್ನು ಸೇವಿಸಿರಿ. ಇದಕ್ಕಾಗಿ ಅಗಸೆ ಬೀಜಗಳನ್ನು ತೆಗೆದುಕೊಂಡು ಮಿಕ್ಸರ್ ಗ್ರೈಂಡರ್ನಲ್ಲಿ ಪುಡಿಮಾಡಬೇಕು. ಬಳಿಕ ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಪ್ರತಿದಿನವೂ ಕುಡಿಯಿರಿ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಲ್ಲದೆ, ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.