Author: AIN Author

ಕಲಬುರ್ಗಿ:- ಎರಡು ಕಾರ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಶಹಬಾದ್ ತಾಲೂಕಿನ ಭಂಕೂರು ಬಳಿ ಘಟನೆ ನಡೆದಿದ್ದು ಮೃತರನ್ನ ಜಾಹೀದ್ ಪಠಾಣ್ & ಶಾಕೀರ್ ಅಂತ ಗುರುತಿಸಲಾಗಿದೆ.. ಮೃತರು ಉತ್ತರಪ್ರದೇಶ ಮೂಲದ ಬಟ್ಟೆ ವ್ಯಾಪಾರಿಗಳಾಗಿದ್ದು ರಂಜಾನ್ ಹಿನ್ನಲೆ ಬಟ್ಟೆ ಖರೀದಿಸಿ ಕಲಬುರಗಿಯಿಂದ ಯಾದಗಿರಿಗೆ ಹೊರಟಾಗ ಅವಘಡ ಸಂಭವಿಸಿದೆ.. ಶಹಬಾದ್ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಕಾರು ಡಿಕ್ಕಿಹೊಡೆದಿದ್ದು ಓರ್ವ ಸ್ತಿತಿ ಗಂಭೀರವಾಗಿದೆ.. ಶಹಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ..

Read More

ಬೆಂಗಳೂರು:- ಚಿನ್ನದ‌ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಚಿಮ್ಮನೂರು ಜ್ಯವೆಲರ್ ನಲ್ಲಿ ಜರುಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಭಂದ ಯಾವುದೇ ಪ್ರಾಣಪಾಯವಾಗಿಲ್ಲ.. ‌ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಕೊಪ್ಪಳ:- ಲೋಕಸಭಾ ಟಿಕೆಟ್ ಮಿಸ್ ಆದ್ರೂ ಸಂಸದ ಕರಡಿ ಸಂಗಣ್ಣ ಅವರು ಮೋದಿ ಹಾಡಿ ಹೊಗಳಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಜನ್ರಿಗೆ ನಾನು ಋಣಿಯಾಗಿದ್ದೇನೆ. ಭಾರತವನ್ನು ಈ ಹಿಂದೆ‌ ಹಾವಾಡಿಗರ ದೇಶ ಎಂದು ಬೇರೆ ದೇಶದವರು ಕರೆಯುತ್ತಿದ್ದರು. ಭಾರತವನ್ನು ಇಂದು ಜಗತ್ತು ತಿರುಗಿ ನೋಡುವಂತೆ ಮೋದಿ ಮಾಡಿದ್ದಾರೆ. 80 ಏರ್ಪೋರ್ಟ್ ಇದ್ದವು, ಇದೀಗ 120 ಏರ್ಪೋರ್ಟ್​ಗಳು ಆಗಿವೆ. ಇಲ್ಲಿನ ಏರ್ಪೋರ್ಟ್ ಅಭಿವೃದ್ಧಿಗಳ ಬಗ್ಗೆ ಅಮೆರಿಕಾದಲ್ಲಿ ಚರ್ಚೆ ಆಗುತ್ತಿದೆ. ಇಷ್ಟೊಂದು ಅಭಿವೃದ್ಧಿಗೆ ಮೋದಿ ಅವರೇ ಕಾರಣ ಎಂದಿದ್ದಾರೆ. ಇನ್ನು ನನ್ನ ಅವಧಿಯಲ್ಲಿ ಅತೀ ಹೆಚ್ಚು ತಾಲೂಕುಗಳಲ್ಲಿ ರೇಲ್ವೆ ಲೈನ್​ಗಳು ಆಗಿವೆ. ಮೋದಿಯವರು ಸರ್ವಾಜನಾಂಗಕ್ಕೂ ಅಭಿವೃದ್ಧಿ ಯೋಜನೆ ನೀಡುತ್ತಿದ್ದಾರೆ ಎಂದರು. ಟಿಕೆಟ್​ ಕೈ ತಪ್ಪುತ್ತಿದ್ದಂತೆ ಬೇಸರ ಹೊರಹಾಕಿದ್ದ ಕರಡಿ ಸಂಗಣ್ಣ, ತಮ್ಮ ಆಪ್ತರ ಮುಂದೆ ನೋವು ತೋಡಿಕೊಂಡಿದ್ದರು. ಕಳೆದ 10 ವರ್ಷದಲ್ಲಿ ಚೆನ್ನಾಗಿ ಕೆಲಸವನ್ನ ಮಾಡಿದ್ದೇನೆ. ಕ್ಷೇತ್ರದಲ್ಲಿ ಜನ, ಕಾರ್ಯಕರ್ತರ ಜೊತೆ ಸಂಪರ್ಕ ಇತ್ತು. ನನಗೇ ಟಿಕೆಟ್ ಎನ್ನುತ್ತಿದ್ದರು.…

Read More

ಬೆಂಗಳೂರು:- ಕರ್ನಾಟಕದ ಹಲವೆಡೆ ಮಾರ್ಚ್ 22 ರಿಂದ ಮೂರು ದಿನ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗೊಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿಯಲ್ಲಿ ಒಣಹವೆ ಮುಂದುವರೆಯಲಿದೆ. ಕಲಬುರಗಿಯಲ್ಲಿ 40.2 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಬೆಳಗಾವಿ ವಿಮಾನ ನಿಲ್ದಾಣದಲ್ಲಿ 19.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ಬೆಂಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ, ಎಚ್​ಎಎಲ್​ನಲ್ಲಿ 34.4 ಡಿಗ್ರಿ ಸೆಲ್ಸಿಯಸ್​…

Read More

ಶಿವಮೊಗ್ಗ:- ಈಶ್ವರಪ್ಪ ಪುತ್ರನಿಗೆ ಟಿಕೆಟ್ ಸಿಗದಿರಲು ನಾನು ಕಾರಣ ಅಲ್ಲ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷಕ್ಕೆ ಜನ ಆಶೀರ್ವಾದ ಮಾಡುತ್ತಾರೆಂದು ವಿಶ್ವಾಸವಿದೆ. ನನ್ನ ಅವಶ್ಯಕತೆ ಎಲ್ಲಿದೆ ಆ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡುತ್ತೇನೆ ಎಂದರು. ಕೆಎಸ್​​ ಈಶ್ವರಪ್ಪ ಪುತ್ರ ಕಾಂತೇಶ್​ಗೆ ಟಿಕೆಟ್​ ತಪ್ಪಲು ನಾನು ಕಾರಣ ಅಲ್ಲ. ಬಿಜೆಪಿಯ ಕೇಂದ್ರ ಚುನಾವಣೆ ಸಮಿತಿ ಟಿಕೆಟ್ ನಿರ್ಧಾರ ಮಾಡಿದೆ. ಈಶ್ವರಪ್ಪ ಪಕ್ಷ ಕಟ್ಟಿ ಬೆಳೆಸಿದವರು, ಮನಸ್ಸಿಗೆ ನೋವಾಗಿರಬಹುದು. ರಾಜ್ಯ ನಾಯಕರು ಈಶ್ವರಪ್ಪ ಜತೆ ಮಾತಾಡುವ ಪ್ರಯತ್ನ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಎಲ್ಲರೂ ಬರುತ್ತಾರೆ. ಕಾರ್ಯಕ್ರಮಕ್ಕೆ ಬಂದು ಕೆ.ಎಸ್.ಈಶ್ವರಪ್ಪ ಮಾತನಾಡುವ ವಿಶ್ವಾಸ ಇದೆ. ಅವರನ್ನು ಮತ್ತೆ ಕರೆತರುವ ಪ್ರಯತ್ನ ಪಕ್ಷದ ಹಿರಿಯರು ಮಾಡುತ್ತಿದ್ದಾರೆ. ತಮ್ಮ ಮನಸ್ಸಿಗೆ ಆದ ನೋವಿನಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಅಂದಿದ್ದಾರೆ. ಟಿಕೆಟ್​ ವಿಚಾರದಲ್ಲಿ ನಮ್ಮ ಪಾತ್ರ ಏನೂ ಇಲ್ಲ…

Read More

ನಾವೆಲ್ಲರೂ ಬೆಳಗ್ಗೆ ಎದ್ದ ಬಳಿಕ ನಿತ್ಯಕರ್ಮಗಳನ್ನು ಪೂರೈಸಿಕೊಂಡು, ಒಂದು ಕಪ್ ಟೀ ಅಥವಾ ಕಾಫಿಗೆ ಎರಡು ಚಮಚ ಸಕ್ಕರೆ ಹಾಕಿಕೊಂಡು ಕುಡಿಯುವುದು ಅಭ್ಯಾಸವಾಗಿ ಬಿಟ್ಟಿದೆ. ಬೆಳಗ್ಗೆ ಟೀ ಕುಡಿಯದೆ ಇದ್ದರೆ ಆಗ ಆ ದಿನ ಸರಿಯಾಗಿ ಸಾಗುವುದೇ ಇಲ್ಲ, ಮನಸ್ಥಿತಿಯು ಉತ್ತಮವಾಗಿ ಇರದು. ನಿದ್ರೆಯಿಂದ ಎದ್ದ ಬಳಿಕ ಮರಳಿ ನಮ್ಮನ್ನು ದಿನದ ಚಟುವಟಿಕೆಳಿಗೆ ತಯಾರು ಮಾಡುವಂತಹ ಕೆಲಸವನ್ನು ಚಾ ಮಾಡುವುದು.ಆದರೆ ನಾವು ಟೀ ಕುಡಿಯುತ್ತಿರುವ ರೀತಿಯು ಸರಿಯಾಗಿ ಇದೆಯಾ? ಖಂಡಿತವಾಗಿಯೂ ಇಲ್ಲ. ಯಾಕೆಂದರೆ ಚಹಾದ ಇತಿಹಾಸವನ್ನು ಗಮನಿಸಿದರೆ ಆಗ ನಾವು ಟೀ ಕುಡಿಯುತ್ತಿರುವ ರೀತಿಯು ತಪ್ಪಾಗಿರುವುದು. ಚಹಾದ ಇತಿಹಾಸವನ್ನು ಗಮನಿಸುತ್ತಾ ಹೋದರೆ ಸಕ್ಕರೆ ಮತ್ತು ಹಾಲು ಇತ್ತೀಚಿನ ಸೇರ್ಪಡೆ ಎಂದು ತಿಳಿದುಬರುವುದು. ಹಿಂದೆ ಕೇವಲ ಬ್ಲ್ಯಾಕ್ ಟೀ ಮಾತ್ರ ಸೇವನೆ ಮಾಡುತ್ತಲಿದ್ದರು. ಆದರೆ ನಾವು ಅದಕ್ಕೆ ಹಾಲು ಹಾಗೂ ಸಕ್ಕರೆ ಬೆರೆಸಿಕೊಂಡು ಅದರಿಂದ ಸಿಗುವಂತಹ ಪೋಷಕಾಂಶಗಳಿಗೆ ಕತ್ತರಿ ಹಾಕಿದ್ದೇವೆ. ಟೀ ಆರೋಗ್ಯಕ್ಕೆ ಒಳ್ಳೆಯದು ಎಲ್ಲಾ ರೀತಿಯ ಚಾದಲ್ಲಿ ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್…

Read More

ಬೆಂಗಳೂರು:  2024ರ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ದೇಶಾದ್ಯಂತ 543 ಲೋಕಸಭೆ ಕ್ಷೇತ್ರಗಳಿಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹಾಗೂ ಕೆಎಸ್ಸಾರ್ಟಿಸಿ ಅಧ್ಯಕ್ಷರ ಶ್ರೀನಿವಾಸ್ ನಿರ್ದೇಶನದಂತೆ ಸಾರಿಗೆ ನಗಮದ ನೌಕರರ ತುಟ್ಟಿಭತ್ಯೆ ಹಿಂಬಾಕಿ, ಗಳಿಕೆ ರಜೆ ನಗದೀಕರಣ ಹಾಗೂ ಉಪಧನದ ಬಾಕಿ ಮೊತ್ತ ಒಟ್ಟು ರೂ. 84 ಕೋಟಿ ಪಾವತಿಸಲು ಆದೇಶ ಹೊರಡಿಸಲಾಗಿದೆ. KSRTC ಸಿಬ್ಬಂದಿಗೆ (ಸದರಿ ಅವಧಿಯಲ್ಲಿನ ನಿವೃತ್ತ ಸಿಬ್ಬಂದಿಗಳನ್ನು ಸೇರಿ) 2022-23 ಮೇ ಸಾಲಿನ ಗಳಿಕೆ ರಜೆ ನಗದೀಕರಣದ ಮೊತ್ತ ರೂ.24 ಕೋಟಿಯನ್ನು, ಹಾಗೂ ಜುಲೈ-2022 ರಿಂದ ನವೆಂಬರ್-2022 ರ ಮಾಹೆಯ 5 ತಿಂಗಳು, https://ainlivenews.com/a-man-who-used-to-sell-coriander-leaves-is-now-a-bollywood-star-actor/ ಜನವರಿ-2023 ರಿಂದ ಜುಲೈ-2023 ರವರೆಗಿನ 7 ತಿಂಗಳು ಮತ್ತು ಜುಲೈ-2023 ರಿಂದ ಅಕ್ಟೋಬರ್-2023 ರವರೆಗಿನ…

Read More

ಇಂದು ದಿವಂಗತ ನಟ ಪುನೀತ್ ರಾಜ್​ಕುಮಾರ್ ಅವರ 49ನೇ ಹುಟ್ಟುಹಬ್ಬ. ಮುಂಜಾನೆಯಿಂದಲೇ ಅವರ ಸ್ಮಾರಕದ ಬಳಿ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದಾರೆ. ಅಸಲಿಗೆ ಕಳೆದ ಎರಡು ದಿನಗಳಿಂದಲೂ ಸ್ಮಾರಕಕ್ಕೆ ಭೇಟಿ ನೀಡುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಇಂದು ಹುಟ್ಟುಹಬ್ಬವಾದ್ದರಿಂದ ಮಧ್ಯರಾತ್ರಿಯಿಂದಲೇ ಹಲವು ರೀತಿಯ ಕಾರ್ಯಕ್ರಮಗಳು ಕಂಠೀರವ ಸ್ಟುಡಿಯೋನಲ್ಲಿನ ಅಪ್ಪು ಸ್ಮಾರಕ ಬಳಿ ಪ್ರಾರಂಭವಾಗಿವೆ. ರಾತ್ರಿಯೇ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ ಹುಟ್ಟುಹಬ್ಬದ ಅಂಗವಾಗಿ ಅಪ್ಪುವಿನ ಸಮಾಧಿಯನ್ನು ಕೆಂಪು ಗುಲಾಬಿ ಹೂವುಗಳಿಂದ ಸಿಂಗರಿಸಲಾಗಿದೆ. ಅಭಿಮಾನಿಗಳ ಸುಗಮ ದರ್ಶನಕ್ಕೆ ಸಕಲ ರೀತಿಯ ವ್ಯವಸ್ಥೆ ಮಾಡಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಇಂದು ಒಂದೇ ದಿನ ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಅನ್ನದಾನ ವ್ಯವಸ್ಥೆಯನ್ನು ದೊಡ್ಮನೆ ಕುಟುಂಬ ಮಾಡಿದೆ. ಬಂದವರಿಗೆಲ್ಲ ಚಿಕನ್ ಬಿರಿಯಾನಿ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರ ಜವಾಬ್ದಾರಿಯನ್ನು ಯುವ ರಾಜ್​ಕುಮಾರ್ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ ಸಿನಿಮಾದ ಹಾಡುಗಳು ಇಂದು ಸ್ಮಾರಕದ ಬಳಿ ಕೇಳಿ ಬರಲಿವೆ. ಇವುಗಳ ಜೊತೆಗೆ ಅಭಿಮಾನಿಗಳು ಸ್ಮಾರಕದ ಬಳಿಯೇ ರಕ್ತದಾನ,…

Read More

ಕಲಬುರ್ಗಿ:- ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ಬೇಕಾ!? ಎಂದು PM ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ದುಡ್ಡಿಲ್ಲ. ಯೋಜನೆಗಳ ಹಣವವನ್ನು ಕಡಿತ ಮಾಡಿದೆ. ಕಾಂಗ್ರೆಸ್ ಚುನಾವಣೆ ಘೋಷಣೆ ‌ಮಾಡಿದ ಯೋಜನೆ ಜಾರಿ ಬಿಡಿ. ಬೇರೆ ಯೋಜನೆ ಮಾಡಲು ಅವರ ಬಳಿ ದುಡ್ಡಿಲ್ಲ ಎಂದರು. ಗೃಹಜ್ಯೋತಿ ಎಂದು ಹೇಳಿ ವಿದ್ಯುತ್‌ ನೀಡುತ್ತಿಲ್ಲ. ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್‌ ಕೊಡುತ್ತಿಲ್ಲ. ನಾವು ಪಿಎಂ‌ ಕಿಸಾನ್ ಯೋಜನೆಯಡಿ ನಮ್ಮ ರಾಜ್ಯ ಸರ್ಕಾರ 4 ಸಾವಿರ ರೂ. ಸೇರಿಸಿ ರೈತರಿಗೆ ಹಣ ನೀಡುತ್ತಿತ್ತು. ಆದರೆ‌ ಕಾಂಗ್ರೆಸ್ ಅಧಿಕಾರಕ್ಕೆ ಬಂದ‌ಮೇಲೆ ಪಿಎಂ‌ಕಿಸಾನ್ ಅಡಿ ರಾಜ್ಯ ಸರ್ಕಾರ ನೀಡುತ್ತಿದ ಹಣಕ್ಕೆ ಕತ್ತರಿ ಹಾಕಿದೆ ಎಂದು ದೂರಿದರು. ಕಾಂಗ್ರೆಸ್‌ ಶಾಸಕರೇ ನಮ್ಮ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ಸರ್ಕಾರ ನಡೆಯಬೇಕಾ? ನಿಮ್ಮ‌ಕನಸು ಈಡೇರುತ್ತಾ ಎಂದು ಮೋದಿ ಪ್ರಶ್ನಿಸಿದರು ಸರ್ಕಾರ ಯುವಜನತೆಗೆ ಹಣ ನೀಡುತ್ತಿದೆ ಎಂದು ಹೇಳುತ್ತಿದೆ. ಆದರೆ ಸ್ಕಾಲರ್‌ಶಿಪ್‌ ಹಣಕ್ಕೆ…

Read More

ರಾಮನಗರ:- ರಾಮನಗರ ಜಿಲ್ಲಾ‌ ಕಾರಗೃಹ ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಜಿಲ್ಲಾ ಕಾರಗೃಹಕ್ಕೆ ಸೇರಿದ ಜಾಗವನ್ನ ಇತರ ಅಭಿವೃದ್ಧಿ ಕಾರ್ಯಕ್ಕೆ ಬಳಸಲು ಮತ್ತು ರಾಮನಗರ-ಚನ್ನಪಟ್ಟಣ ಮಧ್ಯೆ ನೂತನ ಕಾರಗೃಹ ನಿರ್ಮಾಣಕ್ಕೆ ಸೂಚಿಸಿದ್ದಾರೆ. ಕೂಡಲೇ‌ ಕಾರಗೃಹ ಬೇರೆಡೆ‌ ಶಿಫ್ಟ್ ಮಾಡುವ ಉದ್ದೇಶದ ಹಿನ್ನಲೆ ಜಾಗಕ್ಕಾಗಿ ಹುಡುಕಾಟ ನಡೆಸಿದ್ದಾರೆ. 4 ರಿಂದ 5 ಎಕರೆ ಜಾಗ ಸಿಕ್ಕ ಬಳಿಕ ರಾಮನಗರ ಕಾರಗೃಹ ಶಿಫ್ಟ್ ಆಗಲಿದೆ. ಇನ್ನು 2007‌ರಲ್ಲಿ ನಿರ್ಮಾಣವಾಗಿರುವ ರಾಮನಗರ ಬಂಧಿಖಾನೆಯಲ್ಲಿ ಬರೊಬ್ಬರಿ 300‌ಕ್ಕೂ ಅಧಿಕ ಖೈದಿಗಳಿದ್ದಾರೆ. ಈ ಖೈದಿಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಜೈಲಿನ‌ ಅಧಿಕಾರಿಗಳು ಕೂಡ ಜೈಲು ಶಿಫ್ಟ್​ ಮಾಡುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಇದೀಗ ಡಿಸಿಎಂ ಕೂಡ ಇದಕ್ಕೆ ಅಸ್ತು ಎಂದಿದ್ದು, ಸಾಮಾನ್ಯ ಜೈಲಿನಿಂದ ಸೆಂಟ್ರಲ್ ಜೈಲ್ ಮಾಡಲು ಜಾಗಕ್ಕಾಗಿ ಹುಡುಕಾಟ ನಡೆದಿದೆ.

Read More