Author: AIN Author

ಹಾವೇರಿ: 2 ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಪ್ರಕಟ ಬಳಿಕ ಫಲಿತಾಂಶ ಸ್ಪಷ್ಟವಾಗಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಹಿರೇಕೆರೂರು ತಾ. ಮಡ್ಲೂರ ಗ್ರಾಮದಲ್ಲಿ ಮಾತನಾಡಿದ ಅವರು, CM ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ 60 ಸಾವಿರ ಮತಗಳ ಅಂತರ ನೀಡಿ ಅಂತಾರೆ, ನಾನು ಸಿಎಂ ಆಗಿ ಮುಂದುವರೆಯಬೇಂದ್ರೆ 60 ಸಾವಿರ ಮತಗಳ ಅಂತ ಮುಖ್ಯ ಎಂದಿದ್ದಾರೆ. ರಾಜ್ಯದಲ್ಲಿ ಅವರ ಅಭ್ಯರ್ಥಿ ಗೆಲ್ದೆ ಇದ್ರೆ ಎಂದು ಈ ಹಿನ್ನಲೆ ಅವರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಇನ್ನೂ ಇಡೀ ದೇಶದಲ್ಲಿ 543 ಲೋಕಸಭಾ ಕ್ಷೇತ್ರದಲ್ಲಿ ಕೇವಲ 200 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ನವರು ದೇಶ ಆಳುತ್ತೇವೆ ಅಂತ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ನಮ್ಮ ನಾಯಕ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮೆಚ್ಚಿ ದೇಶದಲ್ಲಿ ಬಿಜೆಪಿ 400 ಸೀಟು ಬರುತ್ತವೆ ಎಂದು ಎಲ್ಲ ಸಮೀಕ್ಷೆಗಳು ಹೇಳುತ್ತಿವೆ. ಅದರಿಂದ ಭಯಗೊಂಡ ಕಾಂಗ್ರೆಸ್ಸಿಗರು ಜನರ ದಾರಿ ತಪ್ಪಿಸಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರು. ಒಬ್ಬ ಸಚಿವರು ಮೋದಿ,…

Read More

ಕೋಲಾರ: ಜೆಡಿಎಸ್ ಮತ್ತು ಬಿಜೆಪಿ ಸಮನ್ವಯ ಸಭೆಯನ್ನು ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಆರ್.ಜಿ.ಕಲ್ಯಾಣ ಮಂಟಪದಲ್ಲಿ ಸಭೆ ಏರ್ಪಡಿಸಲಾಗಿತ್ತು. ಎನ್‌ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಬಹುಮತದಿಂದ ಗೆಲ್ಲಿಸಿ, ಕಾಂಗ್ರೆಸ್ ನ ಗ್ಯಾರೆಂಟಿಗಳು ಲೋಕಸಭಾ‌‌ ಚುನಾವಣೆ‌ ನಂತರ ಇರುವುದಿಲ್ಲ,  ಆದ್ದರಿಂದ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಿದರು. ಜೆಡಿಎಸ್ ಆಭ್ಯರ್ಥಿ ಮಲ್ಲೇಶ್ ಬಾಬು,ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಮಂಜುನಾಥ್ ಗೌಡ, ರಾಮೇಗೌಡ,ಮತ್ತಿತರರು ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ನೂರಾರು ಮುಖಂಡರು ಭಾಗಿಯಾಗಿದ್ದಾರೆ.

Read More

ಬಳ್ಳಾರಿ: ಲೋಕಸಭಾ ಕ್ಷೇತ್ರದಲ್ಲಿ ಟಾಕ್ ವಾರ್ ಜೋರಾಗಿದೆ. ಸಚಿವ ನಾಗೇಂದ್ರ ಅವರು ಬಿಜೆಪಿಯವರನ್ನು ಕೌರವರಿಗೆ ಹೋಲಿಸಿ ನೀಡಿದ್ದ ಹೇಳಿಕೆಗೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಪ್ರತಿಕ್ರಿಯಿಸಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಸಚಿವ ನಾಗೇಂದ್ರರನ್ನ ಭೂತ, ಮದವೇರಿದ ಆನೆ, ಕುತಂತ್ರ ನರಿಗೆ ಹೋಲಿಕೆ ಮಾಡಿದರು. ಮೊಕಾ ನಂದು, ಮೊಕಾದಲ್ಲಿ ಲೀಡ್ ತಗೊಂಡು ತೋರಿಸು ಎಂದು ಸಾವಲು ಹಾಕಿದ್ದ ಸಚಿವ ನಾಗೇಂದ್ರಗೆ ಮಧ್ಯೆ ರಾತ್ರಿಯಲ್ಲಿ ಹುಟ್ಟಿದ ನಾಯಕ ಎಂದ ಶ್ರೀರಾಮುಲು ಟಾಂಗ್ ಕೊಟ್ಟಿದ್ದಾರೆ. ಮಧ್ಯೆ ರಾತ್ರಿಯಲ್ಲಿ ಹುಟ್ಟಿದವರೆಲ್ಲಾ ಹಂಗೆ ಮಾತಾಡ್ತಾರೆ. ಆನೆಗೆ ಹೆಂಗೆ ಮದ ಹೇರಿದಾಗ ಮಾಡತ್ತೋ ಹಂಗೆ ಇವರಿಗೆ ಮದ ಹೇರಿದೆ. ನರಿಗಳ ರೀತಿ ಕುತಂತ್ರ ಮಾಡ್ತಾ ಇದ್ದಾರೆ. ಇದ್ದಕ್ಕೆಲ್ಲ ಕಾಲ ಉತ್ತರ ಕೊಡುತ್ತೆ ಎಂದು ಜರಿದಿದ್ದಾರೆ.

Read More

ಪೋಲಿಸ್ ಧ್ವಜದಿನಾಚರಣೆ((KARNATAKA POLICE FLAG DAY)) ಪ್ರಯುಕ್ತ ದಾವಣಗೆರೆ ಜಿಲ್ಲಾ ಪೋಲಿಸ್ ಮತ್ತು ಪೋಲಿಸ್ ಕಲ್ಯಾಣ ಸಮಿತಿ ಹಾಗೂ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ಲೈಫ್ ಲೈನ್‌ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಜಿಲ್ಲಾ ಪೋಲಿಸ್ ಕವಾಯತು ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು.ಸ್ವಯಂ ಪ್ರೇರಿತರಕ್ತದಾನ ಶಿಬಿರವನ್ನು ಮಾನ್ಯ ಪೊಲೀಸ್ ಮಹಾ ನಿರೀಕ್ಷಕರವರು ಪೂರ್ವ ವಲಯ ದಾವಣಗೆರೆ ಡಾ. ಕೆ ತ್ಯಾಗರಾಜನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಈ ರಕ್ತದಾನ ಶಿಬಿರದಲ್ಲಿ ಅಪರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಸಂತೋಷ, ನಗರ ಡಿವೈಎಸ್ಪಿ ಮಲ್ಲೆಶ್‌ದೊಡ್ಡಮನಿ, ಚನ್ನಗಿರಿ ಡಿವೈಎಸ್ಪಿ ಶ್ರೀ ಪ್ರಶಾಂತ್ ಮನ್ನೋಳಿ ರಕ್ತದಾನ ಮಾಡಿ ತಮ್ಮ ಸಿಬ್ಬಂದಿಗಳಿಗೆ ರಕ್ತದಾನ ಮಾಡಲು ಪ್ರೇರೆಪಿಸಿದರು. ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಸಿದ್ದಗೌಡರ್, ಡಿಎಆರ್ ಡಿವೈಎಸ್ಪಿ ಶ್ರೀ ನಿಶಿಮಪ್ಪ, ಪೋಲಿಸ್ ನೀರಿಕ್ಷಕ ಹೆಚ್.ಬಿ ಸೋಮಶೇಖರಪ್ಪ ಮತ್ತು ಜಿಲ್ಲೆಯ ಮತ್ತು ತಾಲ್ಲೂಕಿನ ಪೋಲಿಸ್ ನೀರಿಕ್ಷಕರು ಹಾಜರಿದ್ದರು. ನಿವೃತ್ತ ಪೊಲೀಸ್…

Read More

ಬೆಂಗಳೂರು : ಮಾಧುಸ್ವಾಮಿ ಮಾಧುಸ್ವಾಮಿ ಅಂತೀರಲ್ಲ. ಮಾದಪ್ಪನೇ ನನ್ನ ಜೊತೆ ಇದ್ದಾನೆ, ಸಿದ್ದಗಂಗಾ ಸ್ವಾಮಿಯೇ ನನ್ನ ಜೊತೆ ಇದಾರೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಗರಂ ಆದರು. https://ainlivenews.com/bjp-jds-minds-are-like-milk-and-honey-dr-c-n-manjunath/ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿ, ಮಾಧುಸ್ವಾಮಿ ಯಾಕಪ್ಪ? ಪ್ರಚಾರಕ್ಕೆ ಅವರು ಬರಲಿ ಬಿಡಲಿ, ಯಾರಿಗೂ ಬನ್ನಿ ಅಂತ ಬಲವಂತ ಮಾಡಲ್ಲ. ನಾನು ನಾಮಪತ್ರ ಸಲ್ಲಿಕೆ ಮಾಡ್ತಿದ್ದೇನೆ ಎಂದು ಹೇಳಿದರು. ಒಬ್ಬ ಮಾಧುಸ್ವಾಮಿ ಮುನಿಸಿಕೊಂಡಿದ್ದಾರೆ. ಆದರೆ, ಮಾದಪ್ಪನೇ ನಮ್ಮ ಜೊತೆಯಲ್ಲಿ ಇದ್ದಾನೆ. ಅವರೂ ಮುಂದೊಂದು ದಿನ ಬರ್ತಾರೆ. ನಾಳೆ ಮಧ್ಯಾಹ್ನ 1.30ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಮಾಜಿ ಸಿಎಂ ಬಿಎಸ್. ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕರ ಆರ್. ಅಶೋಕ್ ಬರ್ತಾರೆ ಎಂದು ತಿಳಿಸಿದರು.

Read More

ಶಿವಮೊಗ್ಗ: ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಅವರಿಗೆ ಮಂಗಳವಾರ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಕರೆ ಮಾಡಿ ಮಾತನಾಡಿದ್ದು, ಬುಧವಾರ ದೆಹಲಿಗೆ (New Delhi) ಬರುವಂತೆ ಸೂಚಿಸಿದ್ದಾರೆ. ಅಮಿತ್ ಶಾ ಕರೆಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಈಶ್ವರಪ್ಪ ಈ ಬಗ್ಗೆ ಆಪ್ತರ ವಲಯದಲ್ಲಿ ಚರ್ಚಿಸಿದ್ದಾರೆ. ಕರೆ ಮಾಡಿದ್ದಾರೆ. ದೆಹಲಿಗೆ ಹೋಗುತ್ತೇನೆ. ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇನೆ. ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಶಿವಮೊಗ್ಗದಲ್ಲಿ (Shivamogga) ಪ್ರತಿಕ್ರಿಯಿಸಿದ ಈಶ್ವರಪ್ಪ, ಮೋದಿ ಅವರು ಕಾಂಗ್ರೆಸ್‌ನಲ್ಲಿ ಕುಟುಂಬ ಸಂಸ್ಕೃತಿ ಇದೆ ಎನ್ನುತ್ತಿದ್ದರು. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಕುಟುಂಬದ ಕೈಯಲ್ಲಿದೆ. ಆ ಕುಟುಂಬದಿಂದ ಪಕ್ಷ ಮುಕ್ತಿ ಆಗಬೇಕು. ಕಾರ್ಯಕರ್ತರಿಗೆ ನೋವಾಗಿದೆ. ಕಾರ್ಯಕರ್ತರ ನೋವು ನಿವಾರಿಸಲು ಸ್ಪರ್ಧೆ ಮಾಡುತ್ತೇನೆ. ಹಿಂದುತ್ವಕ್ಕೆ ಬೆಲೆ ಸಿಗಬೇಕು, https://ainlivenews.com/big-update-for-credit-card-holders-change-in-rule-from-april-1/ ಸಂಘಟನೆಗೆ ಬೆಲೆ ಸಿಗಬೇಕು. ಹಿಂದುಳಿದವರಿಗೆ ರಾಜ್ಯದಲ್ಲಿ ಟಿಕೆಟ್ ಕೊಟ್ಟಿಲ್ಲ. ಅವ್ಯವಸ್ಥೆ…

Read More

ಗುವಾಹಟಿ: ಲೋಕಸಭಾ ಚುನಾವಣಾ (Lok Sabha Elections) ಸಮೀಪಿಸುತ್ತಿರುವ ಹೊತ್ತಿನಲ್ಲೇ ಅಸ್ಸಾಂ ಸಿಎಂ ಹಿಮಂತ ನಿಸ್ವಾ ಶರ್ಮಾ (Himanta Biswa Sarma) ಅವರು ಸಂಸದರೂ ಆಗಿರುವ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಧುಬ್ರಿ ಸಂಸದರು ಮತ್ತೆ ಮದುವೆಯಾಲು ಬಯಸಿದ್ದರೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಮದುವೆಯಾಗಲಿ. ಇಲ್ಲದಿದ್ದರೆ ಬಂಧನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ಇನ್ನೂ ತುಂಬಾ ಶಕ್ತಿ ಇದೆ, ನಾನು ಮದುವೆಯಾಗುತ್ತೇನೆ. ಮುಖ್ಯಮಂತ್ರಿ ಬಯಸದಿದ್ದರೂ ನಾನು ಆ ಕೆಲಸ ಮಾಡಬಲ್ಲೆ ಅದು ನನ್ನ ಶಕ್ತಿ ಅಷ್ಟೆ ಎಂಬ ಬದ್ರುದ್ದೀನ್ ಅಜ್ಮಲ್ (Badruddin Ajmal) ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ. ಆಗ ಬಹುಪತ್ನಿತ್ವ ಕಾನೂನು ಬಾಹಿರವಾಗಲಿದೆ. ಆಮೇಲೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. https://ainlivenews.com/big-update-for-credit-card-holders-change-in-rule-from-april-1/ ಧುಬ್ರಿ ಸಂಸದರು ಮತ್ತೆ ಮದುವೆಯಾಲು ಬಯಸಿದ್ದರೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಮದುವೆಯಾಗಲಿ. ನಮಗೆ ಆಹ್ವಾನ ಕೊಟ್ಟರೆ…

Read More

ಬೆಂಗಳೂರು : ಬಿಜೆಪಿ, ಜೆಡಿಎಸ್ ಮನಸ್ಸು ಹಾಗೂ ಹೃದಯ ಒಂದಾಗಿದೆ. ಎರಡೂ ಪಕ್ಷ ಹಾಲು ಜೇನು ಇದ್ದ ಹಾಗೆ. ಚಿನ್ನದ ರೀತಿಯೂ ಈ ಮೈತ್ರಿ ಇರಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಹೇಳಿದರು. https://ainlivenews.com/do-not-do-anti-party-activities-for-any-reason-amit-shah-warning/ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬರಬೇಕು ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ, ರಾಜಕೀಯವೇ ನನ್ನನ್ನ ಎಳೆದುಕೊಂಡಿದೆ. ರಾಜಕಾರಣಕ್ಕೆ ಬಂದಿದ್ರೂ ನಾನು‌ ರಾಜಕೀಯ ಮಾಡುವುದಿಲ್ಲ ಎಂದು ಡಿಕೆ ಸಹೋದರರಿಗೆ ತಿರುಗೇಟು ನೀಡಿದರು. ವೈಯಕ್ತಿಕ ಟೀಕೆ ಬದಲಿಗೆ ಅಭಿವೃದ್ಧಿ ಬಗ್ಗೆ ಮಾತನಾಡಿ. ರಾಜ್ಯದ ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲಿಸಬೇಕು. ಬೆಂಗಳೂರು ಗ್ರಾಮಾಂತರದಲ್ಲಿ ಬದಲಾವಣೆಯ ಗಾಳಿಯನ್ನ ಜನ ಬಯಸುತ್ತಿದ್ದಾರೆ. ಅನುದಾನ ಮುಖ್ಯವಲ್ಲ, ಅನುಷ್ಠಾನ ಮುಖ್ಯ. ರೈಲಿನ‌ ಎರಡು ಬದಿ ರೈತರು, ಕೂಲಿ ಕಾರ್ಮಿಕರ ಕಷ್ಟ ಕಾಣುತ್ತೆ. ರೈಲಿನಲ್ಲಿ ಪ್ರಯಾಣ ಮಾಡುವಾಗಲೇ ಜನರ ಸಂಕಷ್ಟ ಗಾಂಧೀಜಿಯವರಿಗೆ ಗೊತ್ತಾಗಿದ್ದು. ಟೀಕೆ ಸಾಯುತ್ತವೆ, ಸಾಧನೆಗಳು ಜೀವಂತವಾಗಿರುತ್ತದೆ ಎಂದು ನಯವಾಗಿಯೇ ಚಾಟಿ ಬೀಸಿದರು.

Read More

ನವದೆಹಲಿ: ಇಂದು ಬೆಳಗ್ಗೆ ಪ್ರಮುಖ ನಗರಗಳಿಂದ ಹೊರಡಬೇಕಿದ್ದ ಕನಿಷ್ಠ 38 ವಿಸ್ತಾರಾ ವಿಮಾನಗಳ ಹಾರಾಟ ರದ್ದಾಗಿದೆ. ಹೌದು ಮುಂಬೈನಿಂದ 15 ವಿಮಾನಗಳು, ದೆಹಲಿಯಿಂದ 12 ಮತ್ತು ಬೆಂಗಳೂರಿನಿಂದ ಹೊರಡಬೇಕಿದ್ದ 11 ವಿಮಾನಗಳು ಹಾರಾಟ ನಡೆಸಿಲ್ಲ. 50ಕ್ಕೂ ಹೆಚ್ಚು ವಿಸ್ತಾರಾ ವಿಮಾನಗಳು ರದ್ದುಗೊಂಡಿದ್ದಲ್ಲದೆ, ಸುಮಾರು 160 ವಿಮಾನಗಳು ತಡವಾಗಿ ಹಾರಾಟ ನಡೆಸಿದ್ದವು. ಇದೀಗ ಮಂಗಳವಾರವೂ ಇದೇ ಬೆಳವಣಿಗೆ ಪುನರಾವರ್ತನೆಯಾಗಿದೆ. ವಿಮಾನ ರದ್ದುಗೊಂಡಿದ್ದರ ಬಗ್ಗೆ ಹಾಗೂ ವಿಳಂಬವಾಗಿರುವ ಬಗ್ಗೆ ತಮಗೆ ಸರಿಯಾದ ಮಾಹಿತಿ ನೀಡಿಲ್ಲ. ವಿಮಾನ ನಿಲ್ದಾಣದಲ್ಲಿ ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಪ್ರಯಾಣಿಕರು ದೂರಿದ್ದು, ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿ ಅಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಳೆದ ಕೆಲವು ದಿನಗಳಲ್ಲಿ ಗಮನಾರ್ಹ ಸಂಖ್ಯೆಯ ವಿಮಾನಗಳ ಪ್ರಯಾಣ ರದ್ದು ಹಾಗೂ ವಿಳಂಬವಾಗಿವೆ ಎಂದು ವಿಸ್ತಾರಾ ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. https://ainlivenews.com/big-update-for-credit-card-holders-change-in-rule-from-april-1/ “ನಮ್ಮ ಗ್ರಾಹಕರಿಗೆ ಉಂಟಾದ ಅನಾನುಕೂಲತೆಯನ್ನು ನಾವು ಒಪ್ಪಿಕೊಳ್ಳುತ್ತೇವೆ ಹಾಗೂ ಇದಕ್ಕಾಗಿ ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ. ನಮ್ಮ ತಂಡಗಳು ಗ್ರಾಹಕರಿಗೆ ಉಂಟಾಗುತ್ತಿರುವ…

Read More

ಬೆಂಗಳೂರು: ಬಿಎಂಟಿಸಿ, ksrtc ಗಳ ಬಗ್ಗೆ ಹೇಳಿದ್ರೆ ಸಾಕು ಸಾಮಾನ್ಯ ಜನರು ಅದರ ಹತ್ರ ಹೋಗೋದು ಹೆದರುತ್ತಾರೆ.. ಎಲ್ಲಿ ಯಾವ ಕ್ಷಣದಲ್ಲಿ ಆಕ್ಸಿಡೆಂಟ್ ಆಗುತ್ತೋ ಎಂದು ತಮ್ಮ ಜೀವನ ಕೈಯಲ್ಲಿ ಹಿಡುಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಇದೀಗ ಸಾರಿಗೆ ಇಲಾಖೆಯು ಅಪಘಾತ ತಡೆಯಲು ಇದೀಗ ಹೊಸ ಪ್ರಯತ್ನಕ್ಕ ಮುಂದಾಗಿದೆ.. ಬಿಎಂಟಿಸಿ,ksrtc ಬರಲು ಕೇಳಿದ್ರೆ ಸಾಕು ಎದೆ ಝಲ್ ಅನ್ನುತ್ತೆ. ಅದರ ಹತ್ತಿರ ಹೋಗಬೇಕು ಅಂದ್ರೆ ಸಾಕು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗುತ್ತದೆ.. ಇದರಿಂದ ಆಗಿರುವ ಅಪಘಾತಗಳು ಒಂದೆರಡಲ್ಲ.. ಕೆಲವರ ಪ್ರಾಣವೇ ಹಾರಿಗೋಗಿದೆ.. ಇದೀಗ ಇದನ್ನು ತಪ್ಪಿಸಲು ಇಲಾಖೆಯಿಂದ ಹೊಸ ಆದೇಶ ಹೊರಡಿಸಿ ದ್ದಾರೆ… ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಎಲ್ಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಕಡ್ಡಾಯವಾಗಿ ಡಿಪೋಗಳಲ್ಲಿ ಬ್ರೆತ್‌ಅಲೈಸರ್ ಪರೀಕ್ಷೆಗೆ ಒಳಗಾಗುವುದು ಖಡ್ಡಾಯ ಮಾಡಿದ್ದಾರೆ.. ಅದರಲ್ಲಿ ಯಶಸ್ವಿಯಾದ ನಂತರವೇ ಚಾಲನೆ ಮಾಡಲು ಅವಕಾಶ ನೀಡಲಾಗುತ್ತದೆ.ಮದ್ಯಪಾನ ಮಾಡಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. https://ainlivenews.com/do-not-do-anti-party-activities-for-any-reason-amit-shah-warning/…

Read More