Author: AIN Author

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ.  11 ಗಂಟೆಗೆ ಅಧಿಕೃತ ವೆಬ್​​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಮತ್ತು pue.kar.nic ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬ ಹುದಾಗಿದೆ. https://ainlivenews.com/the-woman-who-bought-a-fridge-with-grilakshmi-money-of-the-guarantee-scheme/ 2024 ರ ದ್ವಿತೀಯ ಪಿಯು ಪರೀಕ್ಷೆಗೆ 3.3 ಲಕ್ಷ ಹುಡುಗರು ಮತ್ತು 3.6 ಲಕ್ಷ ಹುಡುಗಿಯರು ಹಾಜರಾಗಿದ್ದರು. ರಾಜ್ಯದಾದ್ಯಂತ 1,124 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 6.98 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಫಲಿತಾಂಶ ಪರಿಶೀಲನೆ ಹೇಗೆ? karresults.nic.in ಅಥವಾ pue.kar.nic ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಮುಖಪುಟದಲ್ಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಗಳ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಲಾಗಿನ್ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಯಾವ ವಿಭಾಗವೆಂದು ಕ್ಲಿಕ್ ಮಾಡಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ಕುರಿತು…

Read More

ರಾಯ್ಪುರ: ಬಸ್ ಪಲ್ಟಿಯಾಗಿ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 12 ಪ್ರಯಾಣಿಕರು ಸಾವನ್ನಪ್ಪಿ, 14 ಮಂದಿ ಗಾಯಗೊಂಡಿರುವ ಘಟನೆ ದುರ್ಗ್ ಜಿಲ್ಲೆಯ ಕುಮ್ಹಾರಿ ಪ್ರದೇಶದಲ್ಲಿ ನಡೆದಿದೆ. ಮಂಗಳವಾರ ರಾತ್ರಿ 8:30 ಕ್ಕೆ ಈ ಘಟನೆ ನಡೆದಿದ್ದು, ದುರ್ಗದಲ್ಲಿ ಕಾರ್ಮಿಕರೊಂದಿಗೆ ತುಂಬಿದ್ದ ಬಸ್ಹ ಳ್ಳಕ್ಕೆ ಬಿದ್ದಿದ್ದರಿಂದ 12 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 14 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ದುರ್ಗದ ಜಿಲ್ಲಾಧಿಕಾರಿ ರಿಚಾ ಪ್ರಕಾಶ್ ಚೌಧರಿ ಮಾಹಿತಿ ನೀಡಿದ್ದಾರೆ. https://ainlivenews.com/the-woman-who-bought-a-fridge-with-grilakshmi-money-of-the-guarantee-scheme/ ಗಾಯಗೊಂಡವರಲ್ಲಿ ಹನ್ನೆರಡು ಜನರನ್ನು ಎಐಐಎಂಎಸ್ (ರಾಯಪುರ)ಗೆ ಕಳುಹಿಸಲಾಗಿದೆ. ಉಳಿದ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ. ನಾವು ಅವರಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಬಸ್ಸಿನೊಳಗೆ ಇನ್ನೂ ಸಿಲುಕಿರುವ ಪ್ರಯಾಣಿಕರನ್ನು ಹೊರತೆಗೆಯುವ ಪ್ರಕ್ರಿಯೆ ನಡೆಯುತ್ತಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. 

Read More

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಲೋಕಸಭಾ ಸಮರ ಗೆಲ್ಲೋಕೆ ಮೈತ್ರಿ ನಾಯಕರು ರಣತಂತ್ರ ಹೂಡುತ್ತಿದ್ದಾರೆ. ಹೊಸತೊಡಕು ನೆಪದಲ್ಲಿ ಇಂದು ಮೈತ್ರಿ ಒಕ್ಕಲಿಗ ನಾಯಕರು ತಂತ್ರ ರೂಪಿಸಿದ್ದಾರೆ. ಹೀಗಾಗಿ ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಅವರ ಬಿಡದಿ ತೋಟದ ಮನೆಯಲ್ಲಿ ಒಕ್ಕಲಿಗ ನಾಯಕರ ಸಭೆ ನಡೆಸಲಾಗುತ್ತಿದೆ. ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಮತ ಬೇಟೆಗೆ ದೋಸ್ತಿ ತಂತ್ರ ರೂಪಿಸಿದೆ. ಹಳೆ ಮೈಸೂರು ಭಾಗವೇ ಮೈತ್ರಿ ನಾಯಕರ ಟಾರ್ಗೆಟ್ ಆಗಿದ್ದು, ಕಾಂಗ್ರೆಸ್ (Congress) ತಂತ್ರಕ್ಕೆ ಪ್ರತಿತಂತ್ರ ಎಳೆಯಲು ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಹಳೆ ಮೈಸೂರು ಭಾಗದಲ್ಲಿ ಮೈತ್ರಿ ಪರಿಣಾಮವಾಗಿ ಕೆಲಸ ಮಾಡಲು ಒಗ್ಗಟ್ಟು ಪ್ರದರ್ಶನ ಹಾಗೂ ಒಕ್ಕಲಿಗ ಮತಗಳು ಕಾಂಗ್ರೆಸ್ ಕಡೆ ವಾಲದಂತೆ ತಂತ್ರಗಾರಿಕೆ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ. https://ainlivenews.com/the-woman-who-bought-a-fridge-with-grilakshmi-money-of-the-guarantee-scheme/ ಒಕ್ಕಲಿಗ ಮತಗಳು ಮೈತ್ರಿ ಅಭ್ಯರ್ಥಿಗಳಿಗೆ ಬರುವ ನಿಟ್ಟಿನಲ್ಲಿ ತಂತ್ರಗಾರಿಕೆ, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ,…

Read More

ಬೆಂಗಳೂರು:- ತನ್ನ ಇಬ್ಬರು ಮಕ್ಕಳನ್ನೇ ತಾಯಿ ಕೊಂದಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ‌ವ್ಯಾಪ್ತಿಯಲ್ಲಿ ಜರುಗಿದೆ. ನಿನ್ನೆ ರಾತ್ರಿ ಈ ಘಟನೆ ಜರುಗಿದ್ದು, ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. https://ainlivenews.com/the-despicable-arrest-of-bharatmatas-photo-edited-and-made-viral/#google_vignette ಮಕ್ಕಳನ್ನ ಕೊಲೆ ಮಾಡಿದ ತಾಯಿ ಗಂಗಾದೇವಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಜಾಲಹಳ್ಳಿ ಪೊಲೀಸರಿಂದ ಬಂಧಿಸಲಾಗಿದೆ. ಲಕ್ಷ್ಮಿ (9) ಗೌತಮ್ (7) ಕೊಲೆಯಾದ ಮಕ್ಕಳು ಎನ್ನಲಾಗಿದೆ. ಮೂಲತಃ ಆಂಧ್ರ ಮೂಲದ ಕುಟುಂಬ ಎಂದು ಹೇಳಲಾಗಿದೆ. ಕೊಲೆ ಆರೋಪಿತೆ ಗಂಗಾದೇವಿ ಪತಿ ಪೊಕ್ಸೊ ಕೇಸ್ ನಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದಾನೆ. ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಆರೋಪಿತೆ ಗಂಗಾದೇವಿ ಕೆಲಸ ಮಾಡ್ತಿದ್ದರು ಎಂದು ತಿಳಿದು ಬಂದಿದೆ.

Read More

ಬೆಂಗಳೂರು:- ಅಶ್ಲೀಲವಾಗಿ ಭಾರತಮಾತೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ನೀಚ ನನ್ನ ಅರೆಸ್ಟ್ ಮಾಡಲಾಗಿದೆ. ಫೋಟೋ ಹರಿಬಿಟ್ಟ ವಿಲ್ಪ್ರೇಡ್ ಎಂಬುವವನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಭಾರತ ಮಾತೆ (Bharat Mata) ಫೋಟೋ​​ವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ‌ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಗಣೇಶ್ ಎಂಬುವರು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. https://ainlivenews.com/haveri-shri-kalika-devi-rathotsava-was-held-in-grand-style/ ದೂರಿನ ಅನ್ವಯ ಇದೀಗ ಅರೆಸ್ಟ್ ಮಾಡಲಾಗಿದೆ.

Read More

ಹಾವೇರಿ:- ಜಿಲ್ಲೆಯ ರಾಣಿಬೇನ್ನೂರು ನಗರದ ಐತಿಹಾಸಿಕ ಶ್ರೀ ಕಾಳಿಕಾ ದೇವಿ ದೇವಸ್ಥಾನ ದ ಕಾಳಿಕಾ ದೇವಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು. https://ainlivenews.com/glenn-maxwell-addicted-to-alcohol/ ಈ ಬಾರಿ ರಥೋತ್ಸವ ವನ್ನು ಮಹಿಳೆಯರು ಎಳೆದು ಭಕ್ತಿ ಮೆರೆದರು. ಯುಗಾದಿ ಅಮವಾಸ್ಯೆ ಯ ಮರುದಿನ ಸಂಜೆ ನಾಲ್ಕು ಗಂಟೆಗೆ ನಗರದ ಕುರುಬಗೇರಿ ಇಂದ ಪ್ರಾರಂಭವಾದ ರಥೋತ್ಸವ ಜಗದ್ಗುರು ಮೌನೇಶ್ವರ ದೇವಸ್ಥಾನ ದ ವರೆಗೂ ಸಾಗಿತು. ದ್ರಾಕ್ಷಿ, ಬಾಳೆ ಅನಾನಸ್ ಹಣ್ಣುಗಳಿಂದ ಶೃಗರಿಸಿದ ರಥೋತ್ಸವ ವನ್ನ ಮಹಿಳೆಯರೆ ಎಳೆದಿದ್ದು ಈ ಬಾರಿ ವಿಶೇಷವಾಗಿ ತ್ತು .

Read More

ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕಂ ಬೌಲರ್ ಗ್ಲೆನ್ ಮ್ಯಾಕ್ಸ್ ವೆಲ್ ಕುಡಿತದ ಚಟಕ್ಕೆ ದಾಸರಾಗಿದ್ದಾರೆ ಎಂಬ ಗಂಭೀರ ಆರೋಪ ಈಗ ಕೇಳಿಬಂದಿದೆ. https://ainlivenews.com/krishnapura-villagers-warned-of-boycott-of-voting-heres-the-reason/ ಗ್ಲೆನ್ ಮ್ಯಾಕ್ಸ್‌ವೆಲ್ 2023ರ ವಿಶ್ವಕಪ್ ಟೂರ್ನಿಯಲ್ಲಿ 128 ಬಾಲ್ ಆಡಿ ಅಫ್ಘಾನ್ ವಿರುದ್ಧ ಭರ್ಜರಿ 201 ರನ್ ಗಳಿಸಿದ್ದರು. 21 ಬೌಂಡರಿ ಮತ್ತು 10 ಸಿಕ್ಸರ್ ಚಚ್ಚಿದ್ದ ಇದೇ ಗ್ಲೆನ್ ಮ್ಯಾಕ್ಸ್‌ವೆಲ್ ಈಗ, ಆರ್‌ಸಿಬಿ ತಂಡಕ್ಕೆ ವಿಲನ್ ಆಗುತ್ತಿದ್ದಾರೆ ಎಂಬ ಆರೋಪ ಸದ್ಯ ಕೇಳಿಬರುತ್ತಿದೆ. ಈ ಆರೋಪಗಳ ನಡುವೆ, ಗ್ಲೆನ್ ಮ್ಯಾಕ್ಸ್‌ವೆಲ್ ಕುಡಿತಕ್ಕೆ ದಾಸರಾಗಿದ್ದಾರೆ. ವಿಪರೀತ ಕುಡಿತದ ಕಾರಣಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಗ್ರತೆ ಕಳೆದುಕೊಂಡಿದ್ದಾರೆ, ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಹಾಗಾದ್ರೆ ಅಸಲಿಗೆ ಆಗಿರೋದು ಏನು? ಮ್ಯಾಕ್ಸ್‌ವೆಲ್ ಕ್ರಿಕೆಟ್ ಭವಿಷ್ಯ ಮುಗಿದೇ ಹೋಯ್ತಾ? ಅಷ್ಟೊಂದು ಕುಡಿತಾ ಇದ್ದಾರಾ ಮ್ಯಾಕ್ಸ್? ಬನ್ನಿ ತಿಳಿಯೋಣ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕುಡಿತದ ಸ್ಟೋರಿ ಇಂದು ನಿನ್ನೆಯದಲ್ಲ, ಈ ಹಿಂದೆ ಕೂಡ ಈ ರೀತಿ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಎಣ್ಣೆ ಹೊಡೆದು…

Read More

ಕೋಲಾರ:- ಮತಗಟ್ಟೆಯನ್ನು ನಮ್ಮ ಗ್ತಾಮದಲ್ಲೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಲಾಗಿದೆ. ಕೋಲಾರ ತಾಲೂಕಿನ ಕೃಷ್ಣಾಪುರ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಲಾಗಿದೆ. ಕೃಷ್ಣಾಪುರ ಗ್ರಾಮದ ಮತಗಟ್ಟೆಯನ್ನು ಪಕ್ಕದ ಗ್ರಾಮವಾದ ಅಮ್ಮನಲ್ಲೂರಿಗೆ ವರ್ಗಾಯಿಸಲಾಗಿದೆ.ಇದಕ್ಕೆ ಆಕ್ರೋಷ ವ್ಯಕ್ತಪಡಿಸಿರುವ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ ಗ್ರಾಮದಲ್ಲಿ ೨೦೦ ಮನೆಗಳಿದ್ದು, 360ಕ್ಕೂ ಹೆಚ್ಚು ಮತದಾರರಿದ್ದಾರೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಗ್ರಾಮ ಕೃಷ್ಣಾಪುರ .ಹೀಗಾಗಿ ಮತದಾರರ ಸಂಖ್ಯೆ ಕಡಿಮೆ ಇರುವ ಕಾರಣ ನೀಡಿ ಅಮ್ಮನಲ್ಲೂರು ಗ್ರಾಮಕ್ಕೆ ಮತಗಟ್ಟೆ ವರ್ಗಾವಣೆಯನ್ನು‌ ಮಾಡಲಾಗಿದೆ . ಆದರೆ 3 ಕಿಲೋ ಮೀಟರ್ ದೂರವಿರುವ ಅಮ್ಮನಲ್ಲೂರು ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲ . ಬಿರು ಬಿಸಿಲಿನಲ್ಲಿ ಬೇರೆ ಗ್ರಾಮಕ್ಕೆ ಮತದಾನಕ್ಕೆ ಹೋಗಲು ಸಾಧ್ಯವಾಗಲ್ಲ. ಕಳೆದ ಎಲ್ಲಾ ಚುನಾವಣೆಯಲ್ಲಿ ನಮ್ಮ ಗ್ರಾಮದಲ್ಲಿಯೇ ಮತದಾನ ಮಾಡಿದ್ದೇವೆ ಹಾಗಾಗಿ ತಮ್ಮ ಗ್ರಾಮದಲ್ಲಿಯೇ ಮತಗಟ್ಟೆ ಸ್ಥಾಪಿಸಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.ಹಾಗಾಗಿ ಈ ಭಾರಿಯ ಚುನಾವಣೆಯಲ್ಲಿ ತಮ್ಮ ಗ್ರಾಮದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಮಾಡುವಂತಿಲ್ಲ ಕೃಷ್ಣಾಪುರ ಗ್ರಾಮಸ್ಥರು…

Read More

ಗದಗ :- ತಾಲೂಕಿನ ಹೊಂಬಳ ಗ್ರಾಮದಲ್ಲಿ ಶ್ರೀ ಈಶ್ವರ ದೇವರ ಜಾತ್ರೆಯು ಅಧ್ಧೂರಿಯಾಗಿ ಜರುಗಿತು. ಜಾತ್ರೆಯ ಹಿನ್ನೆಲೆ ಡೊಳ್ಳು ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಸೇವೆಯನ್ನು ಮಾಡಲಾಯಿತು. ಮಹಿಳೆಯರಿಂದ ಕಳಸ ಹಾಗೂ ಕುಂಭ ಮೆರವಣಿಗೆ ಮಾಡಲಾಯಿತು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವವು ಜರುಗಿತು. ಭಕ್ತಾದಿಗಳು ರಥಕ್ಕೆ ಉತ್ತತ್ತಿ ಎಸೆಯೋ ಮೂಲಕ ತಮ್ಮ ಇಷ್ಟಾರ್ಥ ಸಿಧ್ಧಿಗಾಗಿ ಬೇಡಿಕೊಂಡ್ರು. ವಿವಿಧ ವಾದ್ಯಮೇಳಗಳು, ನಂದಿಕೋಲು ರಥೋತ್ಸವಕ್ಕೆ ಮೆರಗನ್ನು ನೀಡಿದ್ವು. ಹೊಂಬಳ, ಲಿಂಗಧಾಳ, ಬೆಳಹೋಡ, ಗದಗ, ಎಚ್ ಎಸ್ ವೆಂಕಟಾಪೂರ, ಬಳಗಾನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ರು.

Read More

ವಿಜಯಪುರ: ಇತ್ತೀಚೆಗೆ ಕೊಳವೆ ಬಾವಿಗೆ ಬಿದ್ದು ಪವಾಡದಂತೆ ಸಾವಿನ ಮನೆಯಿಂದ ಪಾರಾಗಿ ಬಂದ ಸಾತ್ವಿಕ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಅದರಂತೆ ಪುಟ್ಟ ಕಂದ ಸಾತ್ವಿಕ್ ಕೈಯಲ್ಲಿ ಬೆತ್ತ ಹಿಡಿದು ಗತ್ತಿನ ಹೆಜ್ಜೆ ಹಾಕಿದ್ದ. ಅಲ್ಲದೇ ನಾಯಿ ಜೊತೆ ಸಾತ್ವಿಕ್ ತುಂಟಾಟದ ವಿಡಿಯೋ ಕೂಡ ಸೆರೆಯಾಗಿದೆ. ಸಾತ್ವಿಕ ನೋಡಲು ಲಚ್ಯಾಣದ ತೋಟದ ಮನೆಗೆ ಬೇರೆ ಕಡೆ ಗ್ರಾಮಸ್ಥರು ಬರುತ್ತಿದ್ದು, ಮಗು ನೋಡಿ ಖುಷಿ ಪಡುತ್ತಿದ್ದಾರೆ. ಪವಾಡದಂತೆ ಸಾವಿನ ಮನೆಯಿಂದ ಪಾರಾಗಿ ಬಂದ ಸಾತ್ವಿಕ ನೋಡಲು ಜನ ಅಗಮಿಸುತ್ತಿದ್ದಾರೆ. https://ainlivenews.com/mp-election-by-vijayendra-entry-to-haveri-constituency-today/ ಇನ್ನೂ ಇತ್ತೀಚೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ ಸಾತ್ವಿಕ್ ಬಿದ್ದಿದ್ದ. 20 ಗಂಟೆಗಳ ಕಾಲ ಬೋರ್ ವೆಲ್ ನಲ್ಲಿ ಸಾತ್ವಿಕ್ ಸಿಲುಕಿದ್ದ. NDRF, SDRF ಅಗ್ನಿಶಾಮಕ ದಳ ಪೊಲೀಸರ ಯಶಸ್ವಿ ಕಾರ್ಯಾಚರಣೆ ಯಲ್ಲಿ ಸಾತ್ವಿಕ ಸಾವಿನಿಂದ ಪಾರಾಗಿ ಬಂದ. ಈಗ ಸಾತ್ವಿಕ್ ನೋಡಲು ಬೇರೆ ಬೇರೆ ಕಡೆಗಳಿಂದ ಜನ ಬರುತ್ತಿದ್ದಾರೆ. ಮನೆಯ ಮುಂದೆ…

Read More