Author: AIN Author

ಬೆಂಗಳೂರು:-ಮೋದಿ ಫೋಟೋ ಬಳಕೆ ಮಾಡಿದ ಹಿನ್ನೆಲೆ ಈಶ್ವರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಮೋದಿ ಫೋಟೋ ಬಳಕೆಗೆ ಬ್ರೇಕ್ ಹಾಕಲು ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ, ಛಲವಾದಿ ನಾರಾಯಣ ಸ್ವಾಮಿ ಹಾಗೂ ಪಿ ರಾಜೀವ್ ನೇತೃತ್ವದಲ್ಲಿ ಈಶ್ವರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ https://ainlivenews.com/a-significant-change-in-the-bengaluru-team-in-the-match-against-mumbai/ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ, ಶಿವಮೊಗ್ಗದಲ್ಲಿ ನಮ್ಮ ಅಭ್ಯರ್ಥಿಯಾಗಿ ರಾಘವೇಂದ್ರ ಅವರು ನಿಂತಿದ್ದಾರೆ. ಆದರೆ ಈಶ್ವರಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದು ಹೇಳುತ್ತಿದ್ದಾರೆ. ಈಶ್ವರಪ್ಪ ಅವರು ಪ್ರಧಾನಿ ಮೋದಿ ಅವರ ಭಾವಚಿತ್ರ ಬಳಕೆ ಮಾಡುತ್ತಿದ್ದಾರೆ. ಹಾಗಾಗಿ ಇದರ ಬಗ್ಗೆ ಗಮನ ಹರಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ ಎಂದರು. ಮೋದಿ ಅವರ ಹೆಸರನ್ನು ಕೂಡ ಬಳಕೆ ಮಾಡಬಾರದು. ಒಂದು ಪಕ್ಷದ ನಾಯಕರ ಹೆಸರನ್ನು ಆಗಲಿ ಬಳಸುವ ಹಾಗಿಲ್ಲ. ಅದಕ್ಕೆ ವಿರೋಧ ಮಾಡುತ್ತೇವೆ. ನಮ್ಮ ಪಕ್ಷದ ಲೀಡರ್‌ಗಳ ಹೆಸರನ್ನು ಬಳಸಬಾರದು. ಪ್ರಧಾನ…

Read More

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2024ರ 25ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಸೆಣಸಾಡಲಿದೆ. ಪಂದ್ಯವು ಆರ್​​ಸಿಬಿ ಮತ್ತು ಮುಂಬೈ ಎರಡೂ ತಂಡಗಳಿಗೆ ಮಹತ್ವದ್ದಾಗಿದ್ದು, ಆರ್​ಸಿಬಿ ಗೆಲುವಿನ ಲಯಕ್ಕೆ ಮರಳಬೇಕಿದ್ದು, ಮುಂಬೈ ಗೆಲುವಿನ ಲಯ ಮುಂದುವರೆಸಬೇಕಿದೆ. https://ainlivenews.com/hand-given-luck-crores-and-crores-of-bankrupt-indian-businessmen/ ಈಗಾಗಲೇ ಐಪಿಎಲ್​ 2024ರ 17ನೇ ಸೀಸನ್​ ನಲ್ಲಿ ಆರ್​​ಸಿಬಿ ತಂಡವು ಸತತ ಸೋಲಿನಿಂದ ಕಂಗೆಟ್ಟಿದೆ. ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತಿದ್ದು, ಕೇವಲ 1 ಪಂದ್ಯ ಮಾತ್ರ ಗೆದ್ದಿದೆ. ಹೀಗಾಗಿ ತಂಡ ಪ್ಲೇಆಫ್​ ಹಂತಕ್ಕೆ ತಲುಪಲು ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಈ ಪಂದ್ಯ ಅದಕ್ಕೆ ಮುನ್ನುಡಿಯಾಗಲಿದೆಯೇ ಎಂದು ನೋಡಬೇಕಿದೆ. ಈಗಾಗಲೇ ಆರ್​ಸಿಬಿ ಕಳೆದ 3 ಪಂದ್ಯಗಳಿಂದ ಪ್ಲೇಯಿಂಗ್​ 11ನಲ್ಲಿ ಬದಲಾವಣೆ ಮಾಡುತ್ತಿದ್ದು, ಈ ಪಂದ್ಯದಲ್ಲಿಯೂ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ. ಅಲ್ಲದೇ ಈ ಬಾರಿ ದೊಡ್ಡಮಟ್ಟದಲ್ಲಿ ಬದಲಾವಣೆ ಮಾಡುವ ಸೂಚನೆ ದೊರಕಿದ್ದು, ತಂಡ್ಕಕೆ ಮೇಜರ್​ ಸರ್ಜರಿ ಆಗದಿದ್ದಲ್ಲಿ ಸೋಲಿನ ಸುಳಿಯಿಂದ ಹೊರಬರುವುದು…

Read More

ಲಕ್ ಎನ್ನುವುದೇ ಹಾಗೆ ಯಾವಾಗ ಕೈ ಕೊಡತ್ತೋ, ಯಾವಾಗ ಕೈ ಹಿಡಿಯತ್ತೋ ಒಂದು ತಿಳಿಯಲ್ಲ. ಅದರಂತೆ ಮಾಜಿ ಬಿಲಿಯನೇರ್ ಉದ್ಯಮಿಗಳ ಪಟ್ಟಿಯಲ್ಲಿದ್ದವರು ದಿವಾಳಿ ಆಗಿದ್ದಾರೆ. ಕರ್ನಾಟಕ ಮೂಲದ ಇಬ್ಬರು ಉದ್ಯಮಿಗಳು ಇದಕ್ಕೆ ಹೊರತಾಗಿಲ್ಲ. ಭಾರತದ ಮಾಜಿ ಬಿಲಿಯನೇರ್ ಉದ್ಯಮಿಗಳ ಪಟ್ಟಿ ಇಲ್ಲಿದೆ. https://ainlivenews.com/what-next-after-completing-second-puc/ ಐಪಿಎಲ್ ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ 17 ಭಾರತೀಯ ಬ್ಯಾಂಕ್‌ ಗಳಲ್ಲಿ 9,000 ಕೋಟಿ ಸಾಲದಲ್ಲಿ ಮುಳುಗಿದ್ದು, ದಿವಾಳಿಯಾದ ಬಳಿಕ ಭಾರತದಿಂದ ಪರಾರಿಯಾಗಿ ಯುಕೆಯಲ್ಲಿ ನೆಲೆಸಿದ್ದಾರೆ. ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳ ಸೇರಿದಂತೆ ಹಲವು ಏಜೆನ್ಸಿಗಳು ಹಣಕಾಸು ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಡೆಸುತ್ತಿವೆ. ಯುಕೆ ಹೈಕೋರ್ಟ್‌ನಲ್ಲಿ ಮಲ್ಯ ಹಸ್ತಾಂತರಕ್ಕೆ ಭಾರತ ಮನವಿ ಮಾಡಿದ್ದು, ಪ್ರಕರಣ ವಿಚಾರಣೆಯಲ್ಲಿದೆ. ಪ್ರಸ್ತುತ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿರುವ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ, ಕ್ರಿಮಿನಲ್ ಪಿತೂರಿಗಳು, ನಂಬಿಕೆ ದ್ರೋಹ ಮತ್ತು ಮನಿ ಲಾಂಡರಿಂಗ್‌ಗಾಗಿ ಕೇಸ್‌…

Read More

ಮೊದಲೆಲ್ಲಾ ಹತ್ತನೇ ಮುಗಿಸಿ ಪಿಯುಸಿಗೆ ಎಂಟ್ರಿ ಕೊಟ್ಟರೆ ಸಾಕು, ಮನೆಯಲ್ಲಿರುವವರು, ಸಂಬಂಧಿಕರು ಮತ್ತು ಸ್ನೇಹಿತರು ಕೇಳುತ್ತಿದ್ದ ಮೊದಲ ಪ್ರಶ್ನೆ ಎಂದರೆ ಅದು ದ್ವಿತೀಯ ಪಿಯುಸಿಯಲ್ಲಿ ಯಾವ ವಿಷಯಗಳನ್ನು ತೆಗೆದುಕೊಳ್ಳುತ್ತೀರಾ ಅಂತ. ಆಗ ಯಾರಿಗೆ ಕೇಳಿದರೂ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ ಅಂತ ಹೇಳುತ್ತಿದ್ದರು. ತುಂಬಾ ಕಡಿಮೆ ಅಂಕಗಳನ್ನು ತೆಗೆದುಕೊಂಡವರು ಮತ್ತು ಪರೀಕ್ಷೆಯಲ್ಲಿ ಫೇಲ್ ಆದವರು ಮಾತ್ರ ಹೆಚ್ಚಾಗಿ ಪರೀಕ್ಷೆಯಲ್ಲಿ ಪಾಸಾದ ನಂತರ ಕಲಾ ಮತ್ತು ವಾಣಿಜ್ಯ ವಿಷಯಗಳನ್ನು ಆರಿಸಿಕೊಳ್ಳುತ್ತಿದ್ದರು. https://ainlivenews.com/leaders-of-nirmalanandanath-swamijis-blessed-alliance/ ಇನ್ನೇನು ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ನಿಮ್ಮ ಮುಂದೆ ಹತ್ತಾರು ಕೋರ್ಸ್‌ಗಳಿವೆ. ಆ ಪೈಕಿ ಯಾವುದು ಸೂಕ್ತ? ನನ್ನ ಫಲಿತಾಂಶಕ್ಕೆ ಹೊಂದಬಹುದಾದ ಕೋರ್ಸ್‌ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಪಿಯುಸಿ ಆರ್ಟ್ಸ್‌ ಬಳಿಕ ನಿಮ್ಮ ಮುಂದಿರುವ ಕೆಲವು ಆಯ್ಕೆಗಳು ಬಿಬಿಎ- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಬಿಎಂಎಸ್‌- ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಬಿಎಫ್‌ಎ- ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಬಿಇಎಂ-…

Read More

ಬೆಂಗಳೂರು: ದೇವರು ನಮ್ಮ ಕಣ್ಣಿಗೆ ಕಾಣಿಸೋದಿಲ್ಲ ಅಂತ ತಾಯಿಯನ್ನು ದೇವರ ರೂಪದಲ್ಲಿ ನಮ್ಮ ಜೊತೆಗೆ ಇರಿಸಿದ್ದಾನೆ.. ಹೀಗೆ ತಾಯಿಯ ವರ್ಣನೆ, ಆಕೆಯ ಝುಣ ಎಷ್ಟು ಜನುಮ ಹುಟ್ಟಿದ್ರು ತೀರ್ಸೋಕೆ ಆಗೋಲ್ಲ ತಾಯಿಯ ಬಗ್ಗೆ ಯಷ್ಟು ಹೇಳಿದ್ರು ಕಡಿಮೆನೆ.. ಆದ್ರೆ ಇಲ್ಲಿ ತಾಯಿಯೊಬ್ಬಳು ಒಂದ್ದಲ್ಲ ಅಂತ ತನ್ನ ಇಬ್ಬರು ಮಕ್ಕಳನ್ನು ತನ್ನ ಕೈಯಾರೆ ಸಾಯಿಸಿ ಪೊಲೀಸ್ ಅತಿಥಿ ಆಗಿದಾಳೆ. ಈ ಫೋಟೋದಲ್ಲಿರುವ ಈ ಮುದ್ದಾದ ಮಕ್ಕಳ ನೊಡ್ತಾಯಿದ್ರೆ ನೋಡ್ತಾನೆ ಇರೋನ ಅನ್ನಿಸತ್ತೆ.. ಈ ಪಾಪದ ಮಕ್ಕಳ ಹಣೆಬರಹವನ್ನು ಆ ದೇವರು ಈ ರೀತಿಯಾಗಿ ಬರೀತಾನೆ ಅಂತ ಯಾರು ಸಹ ಅಂದುಕೊಂಡಿರಲಿಲ್ಲ.. ಹೌದು.. ನಮ್ಮನ್ನು ಒಂಬತ್ತು ತಿಂಗಳು ಹೆತ್ತಿ ಹೊತ್ತಿ ಸಾಕಿದ್ದ ತಾಯಿಯೇ ನಮ್ಮ  ಕತ್ತು ಹಿಸುಕಿ ಸಾಯಿಸ್ತಾಳೆ ಅಂತ ಕನಸು ಮನಸ್ಸಲ್ಲಿಯು ಪಾಪ ಈ ಕಂದಮ್ಮಗಳು ಅಂದುಕೊಂಡಿರಲಿಲ್ಲ.. ಯೆಸ್..  ತಾಯಿಯಿಂದಲೇ ಇಬ್ಬರು ಮಕ್ಕಳು ಹತ್ಯೆಯಾದ ದಾರುಣ ಘಟನೆ ತಡರಾತ್ರಿ ಜಾಲಹಳ್ಳಿ‌ ಠಾಣಾ ವ್ಯಾಪ್ತಿಯ ಭೋವಿ ಕಾಲೋನಿಯಲ್ಲಿ ನಡೆದಿದೆ. ಲಕ್ಷ್ಮಿ  ಹಾಗೂ ಗೌತಮ್ ತಮ್ಮ…

Read More

ಬೆಂಗಳೂರು: ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ವಿರುದ್ಧ ಚುನಾವಣೆ ಆಯೋಗಕ್ಕೆ ಬಿಜೆಪಿ (BJP) ಕರ್ನಾಟಕ ದೂರು ನೀಡಿದೆ. ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೀತಾ ಶಿವರಾಜ್ ಕುಮಾರ್ ಅವರು ಚುನಾವಣೆ ಸಮಯದಲ್ಲಿ ತಮ್ಮ ಸಿನಿಮಾದ ಜಾಹೀರಾತನ್ನು ನೀಡಿರುವುದರಿಂದ ಅದನ್ನು ಚುನಾವಣೆ ವೆಚ್ಚಕ್ಕೆ ಸೇರಿಸುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ಗೀತಾ. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಯುಗಾದಿ ಸಂದರ್ಭದಲ್ಲಿ ಈ ಸಿನಿಮಾದ ಜಾಹೀರಾತು ಅನ್ನು ಎಲ್ಲ ದಿನಪತ್ರಿಕೆಗಳಿಗೆ ನೀಡಲಾಗಿತ್ತು. ಜಾಹೀರಾತಿಗೆ ನೀಡಿದ ಹಣದ ಖರ್ಚನ್ನು ಚುನಾವಣೆ ವೆಚ್ಚದಲ್ಲಿ ಸೇರಿಸುವಂತೆ ಶಿಫಾರಸ್ಸು ಮಾಡಬೇಕು ಎಂದು ದೂರಿನಲ್ಲಿ (Complaint) ಹೇಳಲಾಗಿದೆ. ಈ ಹಿಂದೆ ಶಿವರಾಜ್ ಕುಮಾರ್ ಚಿತ್ರಗಳನ್ನು ಮತ್ತು ಜಾಹೀರಾತುಗಳನ್ನು ತಡೆ ಹಿಡಿಯುವಂತೆ ಇದೇ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿತ್ತು. ಆದರೆ, ತಡೆಹಿಡಿಯಲು ಆಯೋಗ ನಿರಾಕರಿಸಿತ್ತು. ಈಗ ಮತ್ತೊಂದು ದೂರನ್ನು ಬಿಜೆಪಿ ನೀಡಿದೆ.

Read More

ಬೆಂಗಳೂರು: ಮದ್ಯಪಾನ ಮಾಡಬೇಡಿ ಎಂದು ಬುದ್ದಿ ಹೇಳಿದ್ದಕ್ಕೆ ಚಾಕು ಇರಿದು ವ್ಯಕ್ತಿಯ ಹತ್ಯೆ ಮಾಡಿರುವ ಘಟನೆ ವಿದ್ಯಾರಣ್ಯಪುರಂನ ರಾಮಚಂದ್ರಪುರದಲ್ಲಿ ತಡರಾತ್ರಿ ನಡೆದಿದೆ. ವೆಂಕಟೇಶ್ (45), ಕೊಲೆಯಾದ ದುರ್ದೈವಿಯಾಗಿದ್ದು, ವಾಟರ್ ಫಿಲ್ಟರ್ ಟ್ಯಾಂಕ್ ಬಳಿಯ ಖಾಲಿ ಜಾಗದಲ್ಲಿ ಮದ್ಯಪಾನ ಮಾಡ್ತಿದ್ದ ಪವನ್ ಕುಮಾರ್ ಮತ್ತು ನಂದಾ, ಈ ವೇಳೆ ನೀವಿನ್ನು ಚಿಕ್ಕ ವಯಸ್ಸಿನವರು ಮದ್ಯಪಾನ ಮಾಡಬೇಡಿ ಎಂದು ಬುದ್ದಿ ಮಾತು ಹೇಳಿದ್ದಾರೆ. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಇದೇ ಒಂದು ಮಾತಿನಿಂದಲೇ ಕೆಂಡಾಮಂಡಲವಾದ ಯುವಕ, ವ್ಯಕ್ತಿಗೆ ಚಾಕು ತೆಗೆದುಕೊಂಡು ಇರಿದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್​ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿದ್ಯಾರಣ್ಯಪುರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

Read More

ನವದೆಹಲಿ : ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಸುಪ್ರೀಂಕೋರ್ಟ್‌‌ಗೆ (Supreme Court) ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಹೈಕೋರ್ಟ್ ನಲ್ಲಿ ತಮ್ಮ ಅರ್ಜಿ ವಜಾ ಆದ ಹಿನ್ನೆಲೆ ಸುಪ್ರೀಂಕೋರ್ಟ್ ನಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಲಾಗಿದೆ. ಅರ್ಜಿ ಸಲ್ಲಿಕೆ ಬೆನ್ನಲ್ಲೇ ದೆಹಲಿ ಹೈಕೋರ್ಟ್ (High Court) ತೀರ್ಪಿನ ವಿರುದ್ಧ ಕೇಜ್ರಿವಾಲ್ ಅವರ ಮನವಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಮನವಿ ಮಾಡಿದರು. ಬಂಧನವು ಅವಲಂಬಿತ ದಾಖಲೆಯನ್ನು ಆಧರಿಸಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಮಾಹಿತಿಯನ್ನು ಇಮೇಲ್ ಕಳುಹಿಸಿ ಪರಿಶೀಲಿಸಲಾಗುವುದು ಎಂದು ಸೂಚಿಸಿದರು. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಹಗರಣದಲ್ಲಿ ಕೇಜ್ರಿವಾಲ್ ಶಾಮೀಲಾಗಿರುವುದನ್ನು ಸಾಬೀತುಪಡಿಸಲು ಪುರಾವೆಗಳಿವೆ ಎಂದು ಇಡಿ ಹೇಳಿದೆ. ಕಿಕ್‌ಬ್ಯಾಕ್ ಆಗಿ ಪಡೆದ ಹಣವನ್ನು 2022 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು…

Read More

ಬೆಂಗಳೂರು: ನಾಳೆ ಪವಿತ್ರವಾದ ರಂಜಾನ್ ಹಬ್ಬ ಹೀಗಾಗಿ ಮುಸಲ್ಮಾಂ ಬಾಂದವರು ಹಬ್ಬಕ್ಕೆ ಬಟ್ಟೆ ಅದು ಇದು ಅಂತ ಖರೀದಿಸೋದ್ರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.. ನಿನ್ನೆಯು ಸಹ ಕೆಲಸ ಮುಗಿಸಿ ಶಾಪಿಂಗ್ ಗೆ ಅಂತ ಹೋಗಿದ್ರು ಮೂವರು ಸ್ನೇಹಿತರು. ಅಂಗಡಿ ಬಳಿ ನಿಂತಿದ್ರು. ಚವರಾಯನ ಹಟ್ಟಹಾಸಕ್ಕೆ. ಇಬ್ಬರು ಇಹಲೋಕಕ್ಕೆ ಹೋಗಿದಾರೆ. ಮತ್ತೊಬ್ಬ ಆಸ್ಪತ್ರೆ ಪಾಲಾಗಿದ್ದಾನೆ. ಹೀಗೆ ವೇಗವಾಗಿ ಬಂದಂತಹ ಟಾಟಾಎಸ್ ಒಂದಲ್ಲ ಅಂತ ಇಬ್ಬರ ಜೀವವನ್ನು ಬಲಿ ಪಡೆದುಕೊಂಡಿದೆ.. ಹೌದು.‌. ಮಂಗಳವಾರ ರಾತ್ರಿ 11_ಘಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು ಈ ದೃಶ್ಯ ನೋಡೋದಕ್ಕೆ ಭಯಂಕರವಾಗಿದೆ.. ಹೌದು ನಿಂತಿದ್ದ ಬೈಕಿಗೆ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಡರಾತ್ರಿ ರಾಜಗೋಪಾಲನಗರದ ಹೆಗ್ಗನಹಳ್ಳಿ ಬಳಿ ನಡೆದಿದೆ. ಮೊಹಮ್ಮದ್ ಫಾರೂಕ್ ಹಾಗೂ ಅಬ್ರಾರ್ ಅಹಮದ್ ಮೃತ ದುರ್ದೈವಿಗಳು ಎಂದು ಗೊತ್ತಾಗಿದೆ.. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಮೂವರು ಯುವಕರು ರಾತ್ರಿ 11 ಗಂಟೆ ಸುಮಾರಿಗೆ‌ ಹೆಗ್ಗನಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದಿದ್ದ…

Read More

ಹುಬ್ಬಳ್ಳಿ: ಕೇವಲ ೨೦೦ ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್, ೫೪೩ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅತಿಯಾದ ವಿಶ್ವಾಸ ಹೊಂದಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿದೆ. ಹೀಗಾಗಿ ಚುನಾವಣಾ ಪ್ರನಾಳಿಕೆಯಲ್ಲಿ ಪೊಳ್ಳು ಆಶ್ವಾಸನೆಗಳನ್ನು ನೀಡಿದ್ದಾರೆ. ಇಂಡಿ ಒಕ್ಕೂಟದಲ್ಲೇ ಹಲವು ಗೊಂದಲಗಳಿವೆ. ಟಿಎಂಸಿ ಪ್ರನಾಳಿಕೆ, ಆಪ್ ಪ್ರನಾಳಿಕೆ ಹೀಗೆ ಅನೇಕ ಪ್ರನಾಳಿಕೆಗಳನ್ನು ಹೊಂದಿರುವ ಇಂಡಿ ಒಕ್ಕೂಟವನ್ನು ಜನ ನಂಬುವ ಸ್ಥಿತಿಯಲ್ಲಿಲ್ಲ ಎಂದು ವ್ಯಂಗ್ಯವಾಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ೮-೧೦ ತಿಂಗಳ ನಂತರ ಬರ ಪರಿಹಾರ ನೀಡಿದ ಉದಾಹರಣೆಗಳಿವೆ. ನಾಡಿನ ರೈತರು, ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಬೊಕ್ಕಸದಿಂದ ಸಹಾಯ ಮಾಡುವ ಕೆಲಸ ರಾಜ್ಯ ಸರ್ಕಾರ ಆಧ್ಯತೆಯ ಮೇರೆಗೆ ಮಾಡಬೇಕು. ತುರ್ತು ಪರಿಸ್ಥಿತಿ ಎದುರಾದಾಗ ಸಕಾಲಕ್ಕೆ ನೀರು, https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಮೇವು ನೀಡಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತೀವೃ ಪ್ರವಾಹ…

Read More