ಬೆಂಗಳೂರು: ದೇವರು ನಮ್ಮ ಕಣ್ಣಿಗೆ ಕಾಣಿಸೋದಿಲ್ಲ ಅಂತ ತಾಯಿಯನ್ನು ದೇವರ ರೂಪದಲ್ಲಿ ನಮ್ಮ ಜೊತೆಗೆ ಇರಿಸಿದ್ದಾನೆ.. ಹೀಗೆ ತಾಯಿಯ ವರ್ಣನೆ, ಆಕೆಯ ಝುಣ ಎಷ್ಟು ಜನುಮ ಹುಟ್ಟಿದ್ರು ತೀರ್ಸೋಕೆ ಆಗೋಲ್ಲ ತಾಯಿಯ ಬಗ್ಗೆ ಯಷ್ಟು ಹೇಳಿದ್ರು ಕಡಿಮೆನೆ.. ಆದ್ರೆ ಇಲ್ಲಿ ತಾಯಿಯೊಬ್ಬಳು ಒಂದ್ದಲ್ಲ ಅಂತ ತನ್ನ ಇಬ್ಬರು ಮಕ್ಕಳನ್ನು ತನ್ನ ಕೈಯಾರೆ ಸಾಯಿಸಿ ಪೊಲೀಸ್ ಅತಿಥಿ ಆಗಿದಾಳೆ. ಈ ಫೋಟೋದಲ್ಲಿರುವ ಈ ಮುದ್ದಾದ ಮಕ್ಕಳ ನೊಡ್ತಾಯಿದ್ರೆ ನೋಡ್ತಾನೆ ಇರೋನ ಅನ್ನಿಸತ್ತೆ.. ಈ ಪಾಪದ ಮಕ್ಕಳ ಹಣೆಬರಹವನ್ನು ಆ ದೇವರು ಈ ರೀತಿಯಾಗಿ ಬರೀತಾನೆ ಅಂತ ಯಾರು ಸಹ ಅಂದುಕೊಂಡಿರಲಿಲ್ಲ..
ಹೌದು.. ನಮ್ಮನ್ನು ಒಂಬತ್ತು ತಿಂಗಳು ಹೆತ್ತಿ ಹೊತ್ತಿ ಸಾಕಿದ್ದ ತಾಯಿಯೇ ನಮ್ಮ ಕತ್ತು ಹಿಸುಕಿ ಸಾಯಿಸ್ತಾಳೆ ಅಂತ ಕನಸು ಮನಸ್ಸಲ್ಲಿಯು ಪಾಪ ಈ ಕಂದಮ್ಮಗಳು ಅಂದುಕೊಂಡಿರಲಿಲ್ಲ.. ಯೆಸ್.. ತಾಯಿಯಿಂದಲೇ ಇಬ್ಬರು ಮಕ್ಕಳು ಹತ್ಯೆಯಾದ ದಾರುಣ ಘಟನೆ ತಡರಾತ್ರಿ ಜಾಲಹಳ್ಳಿ ಠಾಣಾ ವ್ಯಾಪ್ತಿಯ ಭೋವಿ ಕಾಲೋನಿಯಲ್ಲಿ ನಡೆದಿದೆ. ಲಕ್ಷ್ಮಿ ಹಾಗೂ ಗೌತಮ್ ತಮ್ಮ ತಾಯಿಯಿಂದಲೇ ಕೊಲೆಯಾಗಿದ್ದಾರೆ. ದಿಂಬಿನಿಂದ ಉಸಿರುಗಟ್ಟಿಸಿ ಮಕ್ಕಳನ್ನು ಕೊಂದಿರುವ ಗಂಗಾದೇವಿಯನ್ನ ಜಾಲಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ..
![Demo](https://ainlivenews.com/wp-content/uploads/2023/12/spoorthi-1.jpg)
ಕಾಫಿ ಪ್ರಿಯರಿಗೆ ಗುಡ್ ನ್ಯೂಸ್..! ಪ್ರತಿದಿನ 3 ಕಪ್ ಫಿಲ್ಟರ್ ಕಾಫಿ ಕುಡಿದರೆ ಡಯಾಬಿಟಿಸ್ ಕಂಟ್ರೋಲ್
ಆಂಧ್ರಪ್ರದೇಶದವರಾದ ಗಂಗಾದೇವಿ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು.ಆರೋಪಿ ಗಂಗಾದೇವಿ ಖಾಸಗಿ ಕಂಪನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ, ಆಕೆಯ ಪತಿ ಬಿಬಿಎಂಪಿಯ ಗುತ್ತಿಗೆ ಆಧಾರದ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಮಾರ್ಚ್ ತಿಂಗಳಿನಲ್ಲಿ ಗಂಡನ ವಿರುದ್ಧ ಗಂಗಾದೇವಿಯೇ ನೀಡಿದ್ದ ದೂರಿನನ್ವಯ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನ ಬಂಧಿಸಿ ನ್ಯಾಯಾಂಗ ಬಂದ್ನಕ್ಕೊಪ್ಪಿಸಿದ್ದರು. ಮಂಗಳವಾರ ಇಬ್ಬರು ಮಕ್ಕಳೊಂದಿಗೆ ಯುಗಾದಿ ಹಬ್ಬ ಆಚರಿಸಿದ್ದ ಗಂಗಾದೇವಿ, ತಡರಾತ್ರಿ ಮಕ್ಕಳಿಬ್ಬರನ್ನ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ.
ಬಳಿಕ ರಾತ್ರಿ 1 ಗಂಟೆ ಸುಮಾರಿಗೆ ತಾನೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಗಲಾಟೆಯಾಗಿದೆ ಎಂದು ಪೊಲೀಸರ ನೆರವು ಕೇಳಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರ ಎದುರು ತಾನೇ ಮಕ್ಕಳನ್ನ ಹತ್ಯೆಗೈದಿರುವುದಾಗಿ ಗಂಗಾದೇವಿ ಒಪ್ಪಿಕೊಂಡಿದ್ದಾಳೆ.. ಇನ್ನು ಗಂಡ ಹೀಗೆ ಮಾಡಿದ್ನಲ್ಲಾ ಅಂತ ತೀರ ನೊಂದಿದ್ದ ಈಕೆ ಮಾನಸಿಕವಾಗಿಯು ನೊಂದಿದ್ದಳು ಎನ್ನಲಾಗಿದೆ.. ಇದರ ಜೊತೆಗೆ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿದ್ದುದರಿಂದ ಮಾನಸಿಕ ಒತ್ತಡಕ್ಕೊಳಪಟ್ಟು ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.. ಸದ್ಯ ಆರೋಪಿಯನ್ನ ಜಾಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ..
![](https://ainlivenews.com/wp-content/uploads/2024/01/Ad-Banner-copy-scaled.jpg)