Author: AIN Author

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸಿದ್ದ “ಸಾರಥಿ” ಚಿತ್ರವನ್ನು ನಿರ್ಮಿಸಿದ್ದ ಕೆ‌.ವಿ.ಸತ್ಯಪ್ರಕಾಶ್ ಅವರು ಹನ್ನೆರಡು ವರ್ಷಗಳ ನಂತರ “ಸಾರಥಿ ಫಿಲಂಸ್” ಮೂಲಕ ನೂತನ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್ ಅವರ ಪುತ್ರ ಸೂರಜ್ ಗೌಡ ಅವರು ಸಾಥ್ ನೀಡುತ್ತಿದ್ದಾರೆ. “ಜಂಟಲ್ ಮ್ಯಾನ್”, ” ಗುರುಶಿಷ್ಯರು” ಚಿತ್ರಗಳ ನಿರ್ದೇಶಕ ಹಾಗೂ “ಕಾಟೇರ” ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್ ನಾಯಕರಾಗಿ ನಟಿಸುತ್ತಿರುವ 29 ನೇ ಚಿತ್ರ “ವಿ ಕೆ 29” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಮಹಾಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಆರಂಭವಾಯಿತು. ಶಾಸಕ ಶ್ರೀ ಗೋಪಲಯ್ಯ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು. ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ…

Read More

ಗದಗ: ರಾಜ್ಯದಲ್ಲಿ ತೀವ್ರ ಬೇಸಿಗೆಯ ನಡುವೆಯೂ, ಹಲವು ಜಿಲ್ಲೆಗಳಲ್ಲಿ ವರುಣ ತಂಪೆರೆದಿದ್ದಾನೆ. ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ಒಂದು ಘಂಟೆಗೂ ಹೆಚ್ಚು ಕಾಲ‌ ಮಳೆ ಸುರಿದಿದೆ. ಭೀಕರ ಬರಗಾಲ, ನೀರಿನ ಕೊರತೆ ನಡುವೆ ಕೊಂಚ ಖುಷಿ ತಂದಿದೆ. ಮಳೆಯಿಂದಾಗಿ ಜನ್ರಲ್ಲಿ ಹರ್ಷ ವಾಗಿದ್ದು, ಏಕಾ ಏಕಿ ಮಳೆ ಪ್ರಾರಂಭವಾಗಿದ್ರಿಂದ ತರಕಾರಿ ಮಾರುಕಟ್ಟೆಯಲ್ಲಿ ಮಳೆಯಲ್ಲೇ ತರಕಾರಿಗಳು ನೆನೆದಿದೆ.

Read More

ಕಾದು ಕೆಂಡದಂತಾಗಿದ್ದ ಬಿಸಿಲೂರು ಕಲಬುರಗಿಗೆ ವರುಣರಾಯ ಕೃಪೆ ತೋರಿದ್ದು ಬೇಸಿಗೆಯಲ್ಲೂ ಮಳೆ ಬಂದು ಇಳೆ ತಂಪಾಗಿಸಿದ್ದಾನೆ. ಅಫಜಲಪುರ ಚಿತ್ತಾಪುರ ಸೇರಿ ಗ್ರಾಮೀಣ ಭಾಗದಲ್ಲಿ ಮಳೆ ಸುರಿದಿದ್ದು ಜನ ತಂಪನೆ ಹವೆಯಿಂದ ಖುಷ್ ಆಗಿದ್ದಾರೆ.ಕೆಲವರಂತೂ ದಿನಾ ಹೀಗೆ ಮಳೆ ಬಂದು ಹೋಗಲಪ್ಪ ಅಂತ ಆಕಾಶಕ್ಕೆ ಕೈ ಮುಗಿದಿದ್ದಾರೆ.

Read More

ಗದಗ: ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಿರೇಹಾಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭರ್ಜರಿ ಪ್ರಚಾರ ನಡೆಸಿದರು. ಮತಯಾಚನೆ ಸಂದರ್ಭದಲ್ಲೇ ಮಳೆರಾಯನ ಆಗಮನವಾಗಿದ್ದು, ಊರಲ್ಲಿ ಮಳೆ ಬಂದಿರುವುದು ಶುಭ ಸೂಚನೆ ಎಂದು ಬೊಮ್ಮಾಯಿ ಹೇಳಿದರು. ಗುಡುಗು ಸಿಡಿಲು ಕಾಂಗ್ರೆಸ್ ಗೆ , ಮುಖ್ಯಮಂತ್ರಿಗೆ ಮಳೆಹನಿ ನರೇಂದ್ರ ಮೋದಿಗೆ ಆದ್ದರಿಂದ ಕಾಂಗ್ರೆಸ್ ಬಂದ್ರೆ ಬರಗಾಲ ಗ್ಯಾರಂಟಿ, ಭ್ರಷ್ಟಾಚಾರ ಗ್ಯಾರಂಟಿ ಮಳೆ ಬರೋ ಲಕ್ಷಣ ಅಂದ್ರೆ ಮೋದಿ ಸರಕಾರ, ಬಿಜೆಪಿ ಸರಕಾರ ೆಮದು ಹೇಳಿದರು. ನಾನು ಮತ್ತೊಮ್ಮೆ ನಿಮ್ಮೂರಿಗೆ ಬಂದು ನಿಮ್ಮ ಜೊತೆಗಿದ್ದು, ಭಾಷಣ ಮಾಡಿ, ನಿಮ್ಮ ಸಮಸ್ಯೆಗಳನ್ನು ಆಲಿಸ್ತೇನೆ. ನಿಮ್ಮೂರಲ್ಲೇ ಚಹಾ ಕುಡೀತೇನೆ ಎಂದರು. ಪ್ರಚಾರಕ್ಕೆ ಬೊಮ್ಮಾಯಿಗೆ ಮಾಜಿ ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಕಾರ್ಯಕರ್ತರು ಸಾಥ್ ನೀಡಿದರು.  

Read More

ಕೋಲಾರ : ಕ್ಷುಲ್ಲಕ ವಿಚಾರಕ್ಕೆ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಮಗನ ಮೇಲೆ ಗಂಭೀರ ಹಲ್ಲೆ ಮಾಡಿರುವ ಘಟನೆ ಕೋಲಾರ ತಾಲ್ಲೂಕಿನ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿಯ ಮುನೇಶ್ವರ ದೇವಾಲಯ ಬಳಿ ಘಟನೆ, ನಡೆದಿದೆ  ಪಾಪರಾಜನಹಳ್ಳಿ ಗ್ರಾಮದ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ಸಂಜೆ ಧ್ವನಿವರ್ಧಕ ಸೌಂಡ್ ಹೆಚ್ಚು ಮಾಡುತ್ತಿದ್ದರು, ಇಂದು ಬೆಳಿಗ್ಗೆ ಧ್ವನಿವರ್ಧಕ ಸೌಂಡ್ ಕಡಿಮೆ ಮಾಡಿ ಓದಲು ತೊಂದರೆ ಆಗುತ್ತೆ ಎಂದು ಹೇಳಿದ ಕೋಟಿಗಾನಹಳ್ಳಿ ರಾಮಯ್ಯ,ಕೋಟಿಗಾನಹಳ್ಳಿ ರಾಮಯ್ಯ ಬುಡ್ಡಿ ದೀಪದಲ್ಲಿ ಇರಬಾರದು ಎಂದು ಗಲಾಟೆ ಮಾಡಿ ಕಣ್ಣು ಹಾಗೂ ತಲೆಗೆ ಗಂಭೀರವಾಗಿ ಹಲ್ಲೆ ಮಾಡಿದ  ಮಂಜುನಾಥ್, ಬೈರಪ್ಪ, ಸುಬ್ಬು ಸೇರಿದಂತೆ ಇತರರು, ಗಂಭೀರವಾಗಿ ಹಲ್ಲೆಗೆ ಒಳಗಾದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಮಗ ಮೇಘಾವರ್ಷ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ, ಪಡೆದಿದ್ದಾರೆ  ಹಲ್ಲೆ ಮಾಡಿದ ಮಂಜುನಾಥ್ ರನ್ನು  ಗ್ರಾಮಾಂತರ ಪೊಲೀಸರು, ಬಂಧಿಸಿದ್ದಾರೆ . ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ವ್ಯಾಪಕ ಖಂಡನೆ ರಾಮಯ್ಯ ಕುಟುಂಬಕ್ಕೆ ಸೂಕ್ತ ಭದ್ರತೆ…

Read More

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರು ಹರಿಹರ ತಾಲೂಕಿನ ಬೆಳ್ಳೂಡಿ ಶಾಖಾ ಮಠ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳಿಗೆ ನಮನ ಸಲ್ಲಿಸಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹೂವಪ್ಪ ದಾಯಗೋಡಿ, ಅಜ್ಜಪ್ಪ ಮಟ್ಟಿ, ಬಸಣ್ಣ ಬಸಲಗುಂದಿ, ಹಣಮಂತಪ್ಪ ದೊಡಮನಿ, ಗುರುಶಾಂತ ಪಾಟೀಲ, ಮುಂಜು ಜಾಧವ, ಮಹಾಂತೇಶ ಭೋವಿ, ಆಕಾಶ ಕೊನೇರಿ, ಡಿ ಡಿ ಮಾಳಗೇರ ಮತ್ತು ಪಕ್ಷದ ಹಾಗೂ ಇತರ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

Read More

ಹುಬ್ಬಳ್ಳಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರು ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರು ಸಿಟ್ಟಿನಲ್ಲಿ ಈ ರೀತಿ ಟೀಕೆ ಮಾಡುತ್ತಿದ್ದಾರೆ ಎಂದು ರಾಜ್ಯ ವಿಧಾನ ಸಭಾ ವಿರೋಧ ಪಕ್ಷದ ಉಪ ನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಸಮಾಜಾಯಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ವಿನಯ ಕುಲಕರ್ಣಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಹಿಟ್ಲರ್ ಹೋಲಿಕೆ ವಿಚಾರ, ಎಲ್ಲರಿಗೂ ಅತ್ಯಂತ ಪ್ರೀತಿಯಿಂದ ಸಿಗುವ ನಾಯಕ ಪ್ರಹ್ಲಾದ್ ಜೋಶಿ ಅವರು ಆಗಿದ್ದು, ನಮಗೆಲ್ಲರಿಗೂ ಮಾದರಿ ಯಾದಂತಹ ಕಾರ್ಯಕರ್ತ ಪ್ರಹ್ಲಾದ್ ಜೋಶಿ ಅವರು ಹೀಗಾಗಿ ಹಿಟ್ಲರ್  ಜೊತೆ ಅವರಿಗೆ ಹೋಲಿಕೆ ಸರಿಯಾದುದ್ದಲ್ಲ ನಮ್ಮ ಪಕ್ಷದ ಕಾರ್ಯಕರ್ತರು ಎಲ್ಲ ಸಂಘ ಸಂಸ್ಥೆಗಳಲ್ಲಿ ಬೆಳೆದಿದ್ದಾರೆ. ಹಿಂದಿ ಪ್ರಚಾರ ಸಭೆಯಲ್ಲಿ ನಮ್ಮ ಅಜ್ಜ‌ ಸೇರಿದಂತೆ ಹಲವು ಮುಖಂಡರು ಕೆಲಸ‌ ಮಾಡಿದ್ದಾರೆ. ಹೊಸ ನೀರು ಬರುತ್ತೆ ಹಳೇ ನೀರು ಹೋಗುತ್ತೆ ಎಂದರು. ಇನ್ನು ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಕಾಂಗ್ರೆಸ್ ಬಾಹ್ಯ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಬಾಹ್ಯ…

Read More

ಹುಬ್ಬಳ್ಳಿ: ಇಲ್ಲಿಯ ಕಿಮ್ಸ್‌ನಲ್ಲಿ ಪ್ರಾದೇಶಿಕ ಕ್ಯಾನ್ಸ‌ರ್ ಕೇಂದ್ರ ಸ್ಥಾಪನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಕೇಂದ್ರ ಆರಂಭವಾಗಲಿದೆ. ರಾಜ್ಯ ಸರ್ಕಾರ ಸಿಬ್ಬಂದಿಯನ್ನು ಪೂರೈಕೆ ಮಾಡಲಿದೆ ಎಂದರು. ಈಗಾಗಲೇ ಎಂಆರ್‌ಐ, ಎಸ್‌ಎನ್‌ಸಿಯು, ಪಿಐಸಿಯು, ಬ್ರೇಖಿ ಥೆರಪಿ ಯಂತ್ರ ಅಳವಡಿಸಲಾಗಿದ್ದು, ಬಹಳಷ್ಟು ಬಡವರಿಗೆ ಅನುಕೂಲವಾಗಿದೆ. ರಾಜ್ಯ ಸರ್ಕಾರದ ಸಿಬ್ಬಂದಿ ಹಾಗೂ ಅವರ ಅವಲಂಬಿತರಿಗೆ ನಗದುರಹಿತ ಚಿಕಿತ್ಸೆ ನೀಡುವ ಕುರಿತು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 2023-24ನೇ ಸಾಲಿನಲ್ಲಿ ನಮ್ಮ ಕಿಮ್ಸ್ ಸಂಸ್ಥೆಯಲ್ಲಿ ಬಹಳಷ್ಟು ರೋಗಿಗಳು ಚಿಕಿತ್ಸೆ ಪಡೆದಿದ್ದು, ಮೊದಲ ಸ್ಥಾನ ಪಡೆದಿದೆ ಎಂದರು. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿದ್ದರ ಕುರಿತು ಮಾಹಿತಿ ಸಂಗ್ರಹಿಸಲು ಪ್ರಾಚಾರ್ಯರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ವರದಿ ನೀಡಿದ ನಂತರ ಕ್ರಮ ಜರುಗಿಸಲಾಗುವುದು. ಕಾಂಚನಾ ಮಾಲಗಾರ…

Read More

ಹುಬ್ಬಳ್ಳಿ : ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಟಿಕೆಟ್ ಕೊಡುವ ವಿಚಾರವಾಗಿ ನನಗೆ ಏನು ಗೊತ್ತು ಇಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರ ಸಂತೋಷ ಲಾಡ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ನಾನು ಕಳೆದ ಐದೇನದು ದಿನಗಳಿಂದ ಇಲ್ಲೇ ಇದ್ದೇನೆ ಯಾವುದೇ ರೀತಿಯ ಮಾಹಿತಿ ಇಲ್ಲ ಹೈಕಮಾಂಡ್ ನಲ್ಲಿ ಏನು ಚರ್ಚೆ ಆಗಿದೆ ಎಂಬ ಮಾಹಿತಿ ಸಹ ಇಲ್ಲ ಈ ಬಗ್ಗೆ ನಾನು ಏನು ಹೇಳಲಾರೆ. ಆದರೆ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರ ಬಗ್ಗೆ ಅಪಾರ ಗೌರವ ಇದೆ ಎಂದರು. ಅವರೊಬ್ಬ ಮಹಾನ್ ವ್ಯಕ್ತಿ ಭಾವೈಕ್ಯತೆ ಸ್ವಾಮೀಜಿ ಆಗಿದ್ದು ಅವರಿಗೆ ಶಕ್ತಿ ಇದೆ ದೊಡ್ಡ ಪ್ರಮಾಣದಲ್ಲಿ ಲಕ್ಷಾಂತರ ಭಕ್ತರು ಹಿಂಬಾಲಕರು ಇದ್ದಾರೆ. ಧಾರವಾಡ ಜಿಲ್ಲೆ ಅಷ್ಟೇ ಎಲ್ಲಾ ರಾಜ್ಯದ ಎಲ್ಲ ಕಡೆ ಇದ್ದಾರೆ. ಅವರು ರಾಜಕೀಯಕ್ಕೆ ಬರುವುದರಿಂದ ಏನಾಗುತ್ತದೆ ಅಂತಾ ಹೇಳಲು ನನಗೆ…

Read More

ಹುಬ್ಬಳ್ಳಿ: ಆಮ್ ಆದ್ಮಿ ಪಕ್ಷದ ಪ್ರಮುಖರು ಭಾರತೀಯ ಜನತಾ ಪಕ್ಷ ಸೇರ್ಪಡೆಯಾದರು. ನಗರದ ಮಂಜುನಾಥ ನಗರದಲ್ಲಿನ ಶಾಸಕರ ಗೃಹ ಕಚೇರಿಯಲ್ಲಿಂದು ಎಎಪಿ ನಾಯಕ ಶಿವಕಿರಣ ಆರ್. ಅಗಡಿ, ದೀಪಿಕಾ ಭಂಡಾರಿ, ರಾಜೇಂದ್ರ ನಾಯಕ್, ಚಂದ್ರಕಾಂತ ಕುಲಕರ್ಣಿ ಅವರು ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿಗಳಾದ ಪ್ರಹ್ಲಾದ್ ಜೋಶಿ ಅವರಿಗೆ ಬೆಂಬಲ ಸೂಚಿಸಿದರು.

Read More