ನೆಲಮಂಗಲ: ವಿದ್ಯುತ್ ಹರಿದು ತುಂಬು ಗರ್ಭಿಣಿಯಾಗಿದ್ದ ಹಸು ಸಾವನ್ನಪ್ಪಿದ ಘಟನೆ ನೆಲಮಂಗಲದ ಮಲ್ಲಸಂದ್ರ ಗ್ರಾಮದಲ್ಲಿ ಜರುಗಿದೆ.
ಬೆಂಗಳೂರಿನಲ್ಲಿ ಮಳೆ ಎಫೆಕ್ಟ್.. ರಸ್ತೆಯ ನೀರೆಲ್ಲಾ ಅಪಾರ್ಟ್ಮೆಂಟ್ ಗೆ ನುಗ್ಗಿ ಅವಾಂತರ!
ರೈತ ಜಗದೀಶ್ ಎಂಬುವವರಿಗೆ ಸೇರಿದ ಸುಮಾರು 70 ಸಾವಿರ ಬೆಲೆ ಬಾಳುವ ಹಸು ಇದಾಗಿದ್ದು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಟ್ರಾನ್ಸ್ಮಾರ್ಮರ್ ವಿದ್ಯುತ್ ಕಂಬಗಳ ಬಳಿ ತಡೆ ಗೋಡೆ ನಿರ್ಮಾಣ ಮಾಡದ ಹಿನ್ನೆಲೆ ಅವಘಡ ಸಂಭವಿಸಿದೆ. ಮೇಯಲು ಹೋದ ಬಳಿ ವಿದ್ಯುತ್ ಪ್ರವಹಿಸಿ ಹಸು ಸಾವನ್ನಪ್ಪಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..