ರಾಯಚೂರು: ರಾಯಚೂರಿನಲ್ಲಿ ಜೆಡಿಎಸ್ ಶಾಸಕಿ ಮನೆಗೆ ಆಗಂತುಕರು ಎಂಟ್ರಿ ಕೊಟ್ಟಿದ್ದು, ಆತಂಕ ಹುಟ್ಟಿಸಿದೆ. ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿರುವ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮಾ ನಾಯಕ್ ಅವರ ನಿವಾಸದಲ್ಲಿ ಅಪರಿಚಿತರ ತಂಡವೊಂದು ಎಂಟ್ರಿ ಕೊಟ್ಟಿದೆ. ಇದೇ ಜ.23 ರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಾಸಕಿ ಕರೆಮ್ಮಾ ಮನೆಯ ಕೂಗಳತೆ ದೂರದಲ್ಲಿ ಬೈಕ್ ನಿಲ್ಲಿಸಿದ ಅಪರಿಚಿತರ ಗುಂಪು ಶಾಸಕಿ ಮನೆಗೆ ಹಿಂಬಾಗಿಲಿನಿಂದ ಎಂಟ್ರಿ ಕೊಟ್ಟಿದೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ಕೂಗಿದಾಗ ಅಪರಿಚಿತರು ಎಸ್ಕೇಪ್ ಆಗಿದ್ದಾರೆ. ಘಟನೆ ಬಳಿಕ ಶಾಸಕಿ ಕರೆಮ್ಮಾ ಅವರು ದೇವದುರ್ಗ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಯಾಕೆ ಮನೆಗೆ ನುಗ್ಗಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ ಅಂತ ಪೊಲೀಸರಿಗೆ ಸೂಚನೆ ನೀಡಿದ್ದಾರೆ.