ವಾಣಿಜ್ಯ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ ಬೆಳೆದು ಅಲ್ಪ ಲಾಭ ಪಡೆದಿದ್ದ ರೈತ ಈಗ ಲಕ್ಷ ಲಕ್ಷ ಎಣಿಸುತ್ತಿದ್ದಾರೆ.
ತಾಲ್ಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಮುದೇಗೌಡರ ಬಸವರಾಜ ಅವರು ಕೇವಲ ₹30 ಸಾವಿರ ಖರ್ಚು ಮಾಡಿ ಒಂದೂ ಮುಕ್ಕಾಲು ಎಕರೆ ಜಮೀನಿನಲ್ಲಿ ಸಿಹಿ ಕುಂಬಳ ಬೆಳೆದು ₹4.5ಲಕ್ಷ ಲಾಭ ಗಳಿಸಿದ್ದಾರೆ.ಮೊದಲ ಕಟಾವಿನಲ್ಲಿ 17ಟನ್ ಇಳುವರಿ ಬಂದಿದೆ. ಕೆ.ಜಿ.ಗೆ ₹12 ರ ವರೆಗೂ ಬೆಲೆ ದೊರೆತಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದ ರೈತರೊಬ್ಬರು ಕುಂಬಳಕಾಯಿ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ.
ಪೋಷಕರೇ ಕೇಳಿ, ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಹೊಸ ನಿಯಮ ಜಾರಿ: ಏನದು ಇಲ್ಲಿದೆ ನೋಡಿ!
ದಾವಣಗೆರೆಯಿಂದ ತಲಾ 100ಗ್ರಾಂ ಪ್ಯಾಕೆಟ್ಗೆ ₹530 ರಂತೆ 20 ಪ್ಯಾಕೆಟ್ ಖರೀದಿಸಿದ್ದಾರೆ. ಜಮೀನು ಮಾಗಿ ಮಾಡಿದ ಬಳಿಕ 3 ಅಡಿ ಅಂತರದಲ್ಲಿ 40 ಸಾಲುಗಳಲ್ಲಿ ಬೀಜಗಳನ್ನು ಊರುವ ಮೂಲಕ ಬಿತ್ತನೆ ಮಾಡಿದ್ದಾರೆ. 6 ದಿನಗಳಲ್ಲಿ ಮೊಳಕೆ ಒಡೆದ ಬಳಿಕ ಒಮ್ಮೆ ನೀರು ಹರಿಸಿ ಒಂದು ಪ್ಯಾಕೆಟ್ ರಾಸಯನಿಕ ಗೊಬ್ಬರ ಹಾಕಿದ್ದಾರೆ, ನಂತರದಲ್ಲಿ ಮೂರು ಬಾರಿ ನೀರು ಹರಿಸಿ ಜತನ ಮಾಡಿದ್ದಾರೆ. ಕೇವಲ 3 ತಿಂಗಳಲ್ಲಿ ಫಲ ಕಟಾವಿಗೆ ಬಂದಿದೆ.
ಬಳ್ಳಿಗಳಲ್ಲಿ ಸುರುಳಿಪೂಚಾ ರೋಗ ತಗುಲದಂತೆ ಮುಂಜಾಗ್ರತಾ ಕ್ರಮವಾಗಿ ಒಮ್ಮೆ ಮಾತ್ರ ಪೌಡರ್ ಔಷಧಿ ಸಿಂಪಡಿಸಿದ್ದಾರೆ. ಕಟಾವಿಗೆ ಮಾತ್ರ ಕೂಲಿ ಆಳುಗಳಿಗೆ ₹5 ಸಾವಿರ ನೀಡಿದ್ದಾರೆ. ಸ್ಥಳಕ್ಕೆ ಖರೀದಿದಾರರೇ ಬಂದು ತಮ್ಮ ವಾಹನಕ್ಕೆ ತುಂಬಿಸಿಕೊಂಡು ಹೋಗುವುದರಿಂದ ಮಾರುಕಟ್ಟೆಯ ಕಿರಿಕಿರಿ ಇಲ್ಲ. ಪಟ್ಟಣದಲ್ಲಿ ತೂಕ ಮಾಡಿಸಿದ ಸ್ಥಳದಲ್ಲಿಯೇ ರೈತರಿಗೆ ಸಂಪೂರ್ಣ ಮೊತ್ತ ಪಾವತಿಯಾಗುತ್ತದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನೆಲ್ಕುದ್ರಿ ಗ್ರಾಮದಲ್ಲಿ ಕುಂಬಳಕಾಯಿ ಕಟಾವು ಮಾಡಿ ಟ್ರ್ಯಾಕ್ಟರ್ನಲ್ಲಿ ತುಂಬುತ್ತಿರುವ ಕಾರ್ಮಿಕರು
ಮೊದಲು ಶೇಂಗಾ ಮೆಕ್ಕೆಜೋಳ ಬೆಳೆದು ಅಲ್ಪ ಲಾಭಕ್ಕಷ್ಟೇ ತೃಪ್ತಿ ಪಡುತ್ತಿದ್ದೆವು. ಕೂಲಿಗೆ ಸಮವಾಗುತ್ತಿತ್ತು. ಕಳೆದ ವರ್ಷ ಬರಗಾಲದಿಂದ ಕೃಷಿ ಕೈ ಹಿಡಿಯಲಿಲ್ಲ ಈ ಬಾರಿ ಕುಂಬಳ ಬೆಳೆಯಿಂದ ಅಧಿಕ ಲಾಭ ಸಿಕ್ಕಿದ್ದು ತುಂಬಾ ಖುಷಿ ಇದೆ ಎಂದು ರೈತ ಮುದೇಗೌಡರ ಬಸವರಾಜಪ್ಪ ಹೇಳಿಕೊಂಡಿದ್ದಾರೆ.