ದಾವಣಗೆರೆ: 15 ದಿನಗಳೊಳಗೆ ಸಂತ್ರಸ್ತರಿಗೆ ಬೆಳೆಹಾನಿ ಪರಿಹಾರ ಒದಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಿರೇಮಲ್ಲನಕೆರೆ, ಭರಮಸಮುದ್ರ, ಉಚ್ಚಂಗಿಪುರ, ದೊಣ್ಣೆಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮಳೆಹಾನಿ ಪ್ರದೇಶವನ್ನು ಪರಿಶೀಲನೆ ನಡೆಸಿದರು. ಮಳೆಯಿಂದ ಮನೆಹಾನಿ, ಬೆಳೆಹಾನಿಯಾಗಿರುವ ಬಗ್ಗೆ ವೀಕ್ಷಿಸಿದರು.
ಜೊತೆಗೆ ಆಯಾಯ ಮಾಲೀಕರಿಗೆ ಪರಿಹಾರ ಹಾಗು ಮನೆ ಕಟ್ಟಿಕೊಳ್ಳಲು ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಬಳಿಕ ಮೆಕ್ಕೆಜೋಳ ಜಮೀನಿಗೆ ತೆರಳಿ ರೈತರ ನೋವನ್ನು ಅಲಿಸಿದ್ದಾರೆ. ಮನೆ ಬಿದ್ದಿರುವುದನ್ನು ಗಮನಿಸಿ ಮನೆಗಳನ್ನು ಮಂಜೂರು ಮಾಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಿದರು.
ʼPAN CARDʼ ನಲ್ಲಿ ಹೆಸರು, ವಿಳಾಸ ತಪ್ಪಾಗಿದೆಯೇ.? ಮನೆಯಲ್ಲೇ ಕುಳಿತು ಸುಲಭವಾಗಿ ತಿದ್ದುಪಡಿ ಮಾಡಿ
ಅದಲ್ಲದೆ ಹಿಂಗಾರು ಮಳೆ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ವಾಡಿಕೆ ಪ್ರಕಾರ ಮಳೆ ಆಗ್ಬೇಕಿತ್ತು. ಅಕ್ಟೋಬರ್ ತಿಂಗಳ ಮಳೆ ನೋಡಿದ್ರೆ 104 ಮಿಮೀ ಮೀಟರ್ ಮಳೆ ಆಗ್ಬೇಕಿತ್ತು. ಅದರೆ 160 ಮಿ.ಮೀ ಮಳೆ ಆಗಿದೆ. 56,993 ಹೆಕ್ಟೇರ್ (ಇದು ಹೆಚ್ಚಾಗುವ ಸಾಧ್ಯತೆ ಇದೆ) ಬೆಳೆಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ. ಇದೀಗ ಸರ್ವೇ ಮಾಡಲಾಗುತ್ತಿದೆ. ಕೃಷಿ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಬೇಕೆಂದು ಸಿಎಂ ತಿಳಿಸಿದ್ದಾರೆ” ಎಂದು ಹೇಳಿದರು.
ಮಳೆಯಿಂದಾಗಿರುವ ಹಾನಿಗೆ ನೀಡುವ ಪರಿಹಾರ ಸಾಲುವುದಿಲ್ಲ ಎಂಬ ಕೂಗಿನ ಬಗ್ಗೆ ಪ್ರತಿಕ್ರಿಯಿಸಿ, “ಸರ್ಕಾರ ನೀಡುವ ಪರಿಹಾರ ಮನುಷ್ಯನಿಗೆ ಸಾಕಾವುದಿಲ್ಲ. ಪರಿಹಾರ ಕೊಡುತ್ತೇವೆ, ಮನೆಯನ್ನು ಕೂಡ ಮಂಜೂರು ಮಾಡಿಕೊಡುತ್ತೇವೆ. ಅನಧಿಕೃತ ಮನೆಗಳಿಗೆ ಪರಿಹಾರ ಕೊಡಲು ಬರುವುದಿಲ್ಲ. ಇಂತಹವರಿಗೆ 1 ಲಕ್ಷ ರೂ. ಪರಿಹಾರ ಕೊಡುತ್ತಿದ್ದೇವೆ. ಕೊಡುತ್ತಿರುವ ಪರಿಹಾರ ಸಾಲುವುದಿಲ್ಲ ಎಂದು ಪರಿಹಾರ ಪರಿಷ್ಕರಿಸಿ ಹೆಚ್ಚು ಮಾಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದರು.