ಭಾರತೀಯ ಸಂಪ್ರದಾಯದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಸ್ಥಾನಮಾನವಿದೆ. ವರ್ಷದ ಕೊನೆಯಲ್ಲಿ ಆಚರಿಸುವ ಈ ಹಬ್ಬದ ವಿಶೇಷತೆಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ದೀಪಾವಳಿ ಕೇವಲ ಹಬ್ಬವಲ್ಲ, ಅದೊಂದು ದೀಪಗಳ ಹಬ್ಬ. ಈ ದಿನ ಗಣೇಶ ಮತ್ತು ಲಕ್ಷ್ಮಿ ಪೂಜೆಗೆ ಹೆಚ್ಚಿನ ಮಹತ್ವವಿದೆ. ಪ್ರತೀ ವರ್ಷದಂತೆ ಈ ವರ್ಷವೂ ದೀಪಾವಳಿಯನ್ನು ಆಚರಿಸಲಾಗುತ್ತಿದೆ.
ಖರ್ಗೆ ಮಾತಿಗೆ ನಡುಗಿದ ಬಂಡೆ: ಶಕ್ತಿ ಯೋಜನೆ ಬಗ್ಗೆ ಡಿಕೆಶಿ ವರಸೆ ಬದಲಿಸಿದ್ದು ಇದೇ ಕಾರಣ!
ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ದೀಪಾವಳಿಗೆ ಮಹತ್ವದ ಸ್ಥಾನವಿದೆ. ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾಗಿರದ ಈ ಹಬ್ಬ ವಿವಿಧ ಸಂಪ್ರದಾಯ, ಆಚರಣೆಯೊಂದಿಗೆ ಹಲವಾರು ಕಥೆಗಳನ್ನು ಹೊಂದಿದೆ. ಅಂಗೂ, ಇಂಗೂ ದೀಪಾವಳಿ ಬಂದೇಬಿಡ್ತು. ಈ ಸಮಯದಲ್ಲಿ ದೀಪಾವಳಿ ಕುರಿತು ನಿಮಗೆ ತಿಳಿದಿರದ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನಾವು ತಿಳಿಸುತ್ತೇವೆ.
ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು. ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ, ಇಲ್ಲಿ ಲಕ್ಷ್ಮಿ ದೇವಿಯನ್ನು ನಮ್ಮ ಜೀವನ ವೃದ್ಧಿಯ, ಬೆಳಕಿನ ಸಂಕೇತವಾಗಿ ಕಾಣುತ್ತೇವೆ.
ದೀಪಾವಳಿ ಎನ್ನುವುದು ವಿಶೇಷವಾಗಿ ಋತು ಉತ್ಸವ. ನಮ್ಮ ಸನಾತನ ಧರ್ಮದಲ್ಲಿರುವ ಎಲ್ಲಾ ಹಬ್ಬಗಳನ್ನು ಋತುಗಳನ್ನು, ಪ್ರಕೃತಿಯಲ್ಲಿನ ಬದಲಾವಣೆ, ಮಾಸಗಳು, ತಿಥಿಗಳ ಬದಲಾವಣೆಗಳಿಗೆ ಹೊಂದಿಕೊಂಡು ಅದಕ್ಕೆ ತಕ್ಕಂತೆ ಆಚರಿಸುತ್ತೇವೆ. ಹೀಗಾಗಿ ನಾವು ಆಚರಿಸುವ ಪ್ರತಿಯೊಂದು ಹಬ್ಬವೂ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಪ್ರಕೃತಿಯಲ್ಲಿ ನಾವು ಲಕ್ಷ್ಮಿ ದೇವಿಯನ್ನು ಕಾಣುತ್ತೇವೆ. ನಾವು ಯಾವುದೇ ಪ್ರದೇಶದಲ್ಲಿ ಜೀವಿಸುತ್ತಿರಲಿ, ಆಯಾ ಪರಿಸರದಲ್ಲಿ ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಭಗವಂತನ ಕೃಪೆ, ಲಕ್ಷ್ಮಿಯ ಲೀಲಾವಿಲಾಸ ಎಂದು ಭಾವಿಸಿ ನಾವು ಋತುಗಳ ಹಬ್ಬವನ್ನು ಆಚರಿಸುತ್ತೇವೆ.
ದೀಪಗಳ ತುದಿ ಸರ್ವತೋಮುಖವಾಗಿದೆ, ದೀಪ ಹಚ್ಚಿದರೆ ಸುತ್ತಲೂ ಬೆಳಗುತ್ತದೆ.ಆದರೆ ದೀಪದ ಗಮನ ಊರ್ದ್ವಮುಖವಾಗಿರುತ್ತದೆ. ಅಂದರೆ ದೀಪ ಬೆಳಗುವ ಮನುಷ್ಯನ ಮನಸ್ಸು ಕೂಡ ಸದಾ ಊರ್ದ್ವಗಾಮಿಯಾಗಿರಬೇಕು, ಮನುಷ್ಯ ಸದಾ ಇತಿಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಸಂಕೇತ ಕೂಡ ಇಲ್ಲಿದೆ.
ಒಂದು ಹಬ್ಬ ಹಲವು ಕಥೆಗಳು
ಸರ್ವಧರ್ಮದವರೂ ಆಚರಿಸುವ ದೀಪಾವಳಿ ಹಬ್ಬದ ಹಿಂದೆ ಹಲವು ಕಥೆಗಳಿವೆ. ಇಲ್ಲಿ ಆಚರಣೆ, ಪೂಜೆ ಒಂದೇ ರೀತಿ ಇದ್ದರೂ ಧಾರ್ಮಿಕ ಕಥೆಗಳು ಮಾತ್ರ ಒಂದೊಂದು ಧರ್ಮದಲ್ಲಿ ಒಂದೊಂದು ರೀತಿ ಇದೆ.
ಲಕ್ಷ್ಮೀದೇವಿ ಭೂಮಿಯಲ್ಲಿ ಸಂಚರಿಸುವ ದಿನ
ದೀಪಾವಳಿಯ ದಿನ ಹೊಸ ಬಟ್ಟೆ, ಎಲ್ಲೆಲ್ಲೂ ಬೆಳಗುವ ದೀಪಗಳ ಸಾಲು, ಸಂಭ್ರಮ ಹೆಚ್ಚಲು ಪ್ರಮುಖ ಕಾರಣ ಈ ದಿನದಂದು ಸಮೃದ್ಧಿಯ ದೇವತೆಯಾದ ಲಕ್ಷ್ಮೀಯು ಭೂಮಿಯಲ್ಲಿ ಸಂಚರಿಸುವ ದಿನ ಮತ್ತು ಜನರಿಗೆ ಸಂಪತ್ತನ್ನು ಅನುಗ್ರಹಿಸುವ ದಿನ ಎಂದು ವ್ಯಾಪಕವಾಗಿ ನಂಬಲಾಗಿದೆ.
ಮಹಾವೀರರ ನಿರ್ವಾಣ
ಭಾರತದಲ್ಲಿ ಆರನೇ ಅತಿದೊಡ್ಡ ಧರ್ಮ ಎನ್ನಿಸಿಕೊಂಡ ಜೈನ ಧರ್ಮವು ದೀಪಾವಳಿಯನ್ನು 24 ತೀರ್ಥಂಕರರಲ್ಲಿ ಕೊನೆಯವರಾಗಿರುವ ಮಹಾವೀರರು ನಿರ್ವಾಣ ಪಡೆದ ದಿನ ಎಂದು ಆಚರಿಸುತ್ತದೆ.
ಗ್ವಾಲಿಯರ್ನಿಂದ ಗುರು ಹರಗೋಬಿಂದ್ ಜಿ ಪಾಲಾಯನ
ದೀಪಾವಳಿಯನ್ನು ಸುತ್ತುವರೆದಿರುವ ಹೆಚ್ಚಿನ ಸಂಪ್ರದಾಯಗಳು ಸಾವಿರಾರು ವರ್ಷಗಳ ಹಿಂದಿನದ್ದಾಗಿದ್ದರೂ ಕೂಡ ಇದಕ್ಕೆ ಸಂಬಂಧಿಸಿದ ಇತ್ತೀಚಿನ ಸಂಪ್ರದಾಯವೊಂದು ಸಿಖ್ ಧರ್ಮದಲ್ಲಿದೆ. ಗ್ವಾಲಿಯರ್ನಲ್ಲಿ ಮೊಘಲ್ ದೊರೆ ಜಹಾಂಗೀರ್ನ ಸೆರೆಯಿಂದ ಹಲವಾರು ಹಿಂದೂ ರಾಜರೊಂದಿಗೆ ತಮ್ಮ ಸಿಖ್ ಗುರು ಹರಗೋಬಿಂದ್ ಜಿ ಅವರನ್ನೂ ಬಿಡುಗಡೆ ಮಾಡಿದ ಹಿನ್ನೆಲೆಯ ನೆನಪಿನಲ್ಲಿ ಸಿಖ್ರು ದೀಪಾವಳಿ ಆಚರಿಸುತ್ತಾರೆ.
ದಕ್ಷಿಣ ಭಾರತದಲ್ಲಿ ದೀಪಾವಳಿ ಎರಡು, ಮೂರು ದಿನಗಳ ಆಚರಣೆಯಾದರೆ ಉತ್ತರ ಹಾಗೂ ವಾಯುವ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಇದನ್ನು ಐದು ದಿನಗಳ ಹಬ್ಬವಾಗಿ ಆಚರಿಸಲಾಗುತ್ತದೆ.
ದೀಪಾವಳಿ ಆಚರಣೆಯ ಹಿಂದಿನ ಅತ್ಯಂತ ಜನಪ್ರಿಯ ನಂಬಿಕೆ ಎಂದರೆ ಹಿಂದೂ ದೇವರಾದ ಶ್ರೀ ರಾಮನು ರಾಕ್ಷಸ ರಾಜ ರಾವಣನನ್ನು ಸೋಲಿಸಿ ಅಯೋಧ್ಯೆಗೆ ಮರಳಿದ ದಿನವಿದು. ಪುರಾಣಗಳ ಪ್ರಕಾರ ಶ್ರೀರಾಮನು ತಮ್ಮ ರಾಜ್ಯಕ್ಕೆ ಮರಳಿದ ಖುಷಿಯಲ್ಲಿ ದೇಶದಾದ್ಯಂತ ದೀಪಗಳನ್ನು ಬೆಳಗಿಸಲಾಯಿತು. ಅಂದಿನಿಂದ ದೀಪಾವಳಿ ಆಚರಣೆ ರೂಢಿಯಲ್ಲಿದೆ.
ಭಾರತದ ದಕ್ಷಿಣ ಭಾಗಗಳಲ್ಲಿ ದೀಪಾವಳಿಯನ್ನು ನರಕಚತುರ್ದಶಿ ಎಂದು ಆಚರಿಸುತ್ತಾರೆ. ನರಕ ಚತುರ್ದಶಿ ಎಂದರೆ ಶ್ರೀಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಕೊಂದ ದಿನವೆಂದು ನರಕಚತುರ್ದಶಿ ಆಚರಿಸಲಾಗುತ್ತದೆ. ದಂತಕಥೆಗಳ ಪ್ರಕಾರ ನರಕಾಸುರನು ತನ್ನ ಕೊನೆಯ ಕ್ಷಣಗಳಲ್ಲಿ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಭೂತಾಯಿಯಲ್ಲಿ ತನ್ನ ಮರಣದ ದಿನದ ಹಿನ್ನೆಲೆ ಇಡೀ ಭೂಮಿಯಲ್ಲಿ ಪ್ರತಿವರ್ಷ ದೀಪ ಹಾಗೂ ಬಣ್ಣಗಳ ಮೂಲಕ ಸಂಭ್ರಮ ಹರಡಿರಬೇಕು, ಹಾಗೇ ಮಾಡು ಎಂದುಬೇಡಿಕೊಳ್ಳುತ್ತಾನೆ. ಅದಕ್ಕೆ ಭೂತಾಯಿ ಅಸ್ತು ಎನ್ನುತ್ತಾಳೆ. ಈ ಹಿನ್ನೆಲೆಯಲ್ಲಿ ದೀಪಾವಳಿ ಆಚರಿಸಲಾಗುತ್ತದೆ ಎನ್ನುವುದು ಇನ್ನೊಂದು ನಂಬಿಕೆ
ಭಾರತ ಸ್ವಾತಂತ್ರ್ಯ ಗಳಿಸಿದ್ದು ಹಾಗೂ ಆಮದು ನಿರ್ಬಂಧದ ನಂತರ ತಮಿಳುನಾಡಿನ ದಕ್ಷಿಣದಲ್ಲಿರುವ ಶಿವಕಾಶಿ ಪಟ್ಟಣವು ಇಡೀ ಭಾರತಕ್ಕೆ ಪಟಾಕಿ ಹಾಗೂ ಬೆಂಕಿಕಡ್ಡಿ ತಯಾರಿಸುವ ಪಟ್ಟಣವಾಗಿ ಬೆಳೆದಿದೆ. ದೇಶದಲ್ಲಿ ಶೇ 90ರಷ್ಟು ಪಟಾಕಿ ಮಾರಾಟವಾಗುವುದು ಈ ದೇಶದಲ್ಲೇ ಎನ್ನುವುದು ವಿಶೇಷ.
ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿಯೂ ಸಾಕಷ್ಟು ಭಾರತೀಯ ವಲಸಿಗರೊಂದಿಗೆ, ಶ್ರೀಲಂಕಾ, ಪಾಕಿಸ್ತಾನ, ಇಂಡೋನೇಷ್ಯಾ, ಫಿಜಿ, ಥೈಲ್ಯಾಂಡ್, ಮಾರಿಷಸ್, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಹಲವಾರು ದೇಶಗಳಲ್ಲಿ ದೀಪಾವಳಿಯನ್ನು ಹೆಚ್ಚು ಉತ್ಸಾಹದಿಂದ ಆಚರಿಸಲಾಗುತ್ತದೆ.