ಬೆಂಗಳೂರು:- ಒಂದ್ಸಲ ಶಕ್ತಿ ಯೋಜನೆ ಪರಿಷ್ಕರಣೆ ಎನ್ನುವ ಡಿಕೆಶಿ, ಮತ್ತೊಂದು ದಿನ ಯಾವುದೇ ಪರಿಷ್ಕರಣೆ ಇಲ್ಲ ಅಂತ ಮಾತಿನ ವರಸೆಯನ್ನೇ ಬದಲು ಮಾಡ್ತಾರೆ. ಆದರೆ ಇದಕ್ಕೆ ಕಾರಣ ಮಲ್ಲಿಕಾರ್ಜುನ ಖರ್ಗೆ ಎನ್ನಲಾಗಿದೆ.
ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ: ಒಂದು ವರ್ಷದವರೆಗೆ ಇಂಟರ್ನೆಟ್ ಫ್ರೀ!? ನೀವು ಮಾಡಬೇಕಾದ್ದು ಇಷ್ಟೇ!
ಆದ್ರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಮಾತಿನ ಬಳಿಕ ಡಿಕೆಶಿ ತಮ್ಮ ಹೇಳಿಕೆ ಹಿಂದಿನ ವರಸೆ ಬದಲಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ಡಿಕೆ ನೋಡಿ ಗ್ಯಾರಂಟಿ ಬಗ್ಗೆ ನೀನೇನೋ ಹೇಳಿದ್ಯಲ್ಲಪ್ಪ ಎಂದು ಕೇಳಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್, ನಾನು ಏನೂ ಹೇಳಿಲ್ಲ ಎಂದು ಕೈಸನ್ನೆ ಮಾಡಿದರು. ನೀನು ಪೇಪರ್ ನೋಡಿಲ್ಲಪ್ಪ, ನಾನು ನೋಡುತ್ತೇನೆ. ಪೇಪರ್ನಲ್ಲಿ ನೀನು ಹೇಳಿದ್ದೀಯಾ ಎಂದು ಬಂದಿದೆ ಎಂದು ಖರ್ಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಲ್ಲ ಪರಿಷ್ಕರಣೆ ಅಂತ ಬಂದಿದೆ ಎಂದರು.
ಬಳಿಕ ಮಾತನಾಡಿದ ಖರ್ಗೆ, ಅದನ್ನೇ ಹೇಳ್ತಿರೋದು ನಾನು. ಬಜೆಟ್ನಲ್ಲಿ ಏನಿದೆ ಅದರಂತೆ ಗ್ಯಾರಂಟಿ ಯೋಜನೆ ಕೊಡಿ ಎಂದು ಸಿಎಂ, ಡಿಸಿಎಂಗೆ ಖಡಕ್ ಸೂಚನೆ ನೀಡಿದರು.
ಖರ್ಗೆ ಖಡಕ್ ಸೂಚನೆ ಬಳಿಕ ಡಿಕೆ ಶಿವಕುಮಾರ್ ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ಗ್ಯಾರಂಟಿ ಯೋಜನೆ ಪರಿಷ್ಕರಣೆ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆ ಇರುತ್ತದೆ. ರಾಜ್ಯದಲ್ಲಿ ಮುಂದಿನ ಬಾರಿಯೂ ನಮ್ಮ ಸರ್ಕಾರವೇ ಬರಲಿದೆ. ಹಾಗಾಗಿ ಇನ್ನೂ ಎಂಟೂವರೆ ವರ್ಷ ಗ್ಯಾರಂಟಿ ಯೋಜನೆ ಇರುತ್ತೆ ಎಂದು ಹೇಳಿದರು. ಈ ಮೂಲಕ ಶಕ್ತಿ ಯೋಜನೆ ಪರಿಷ್ಕರಣೆ ತಾವೇ ಹುಟ್ಟುಹಾಕಿದ್ದ ಚರ್ಚೆಗೆ ಈಗ ಅವರೇ ಬ್ರೇಕ್ ಹಾಕಿದ್ದಾರೆ.