ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸದ್ಯ ರಾಜಕೀಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರು ಒಪ್ಪಿಕೊಂಡಿರುವ ಸಿನಿಮಾಗಳನ್ನು ಕಂಪ್ಲೀಟ್ ಮಾಡಬೇಕಿದೆ. ಇದೀಗ ಪವನ್ ಕಲ್ಯಾಣ್ ನಟನೆಯ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ವೊಂದು ಸಿಕ್ಕಿದ್ದು, ಪವನ್ ಕಲ್ಯಾಣ್ ಜೊತೆ ನಟಿ ಅನಸೂಯ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗುತ್ತಿದೆ.
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಅನಸೂಯ ಮಾತನಾಡಿ, ನಾನು ಇದೇ ಮೊದಲ ಬಾರಿಗೆ ಈ ವಿಚಾರವನ್ನು ರಿವೀಲ್ ಮಾಡುತ್ತಿದ್ದೇನೆ. ನಾನು ಪವನ್ ಸರ್ ಜೊತೆ ಡ್ಯಾನ್ಸ್ ಮಾಡಲಿದ್ದೇನೆ. ಈ ಸಾಂಗ್ ಬಿಗ್ ಸ್ಕ್ರಿನ್ನಲ್ಲಿ ಅಬ್ಬರಿಸಲಿದೆ ಎಂದು ಹೇಳಿದ್ದಾರೆ. ಆದರೆ, ಅವರು ಹೆಜ್ಜೆ ಹಾಕೋದು ಯಾವ ಸಿನಿಮಾದಲ್ಲಿ ಎಂಬ ಗುಟ್ಟನ್ನು ರಟ್ಟು ಮಾಡಿಲ್ಲ.
ಇನ್ನೂ ‘ಉಸ್ತಾದ್ ಭಗತ್ ಸಿಂಗ್’, ‘ಒಜಿ’, `ಹರಿ ಹರ ವೀರ ಮಲ್ಲು’ ಸಿನಿಮಾಗಳು ಪವನ್ ಕೈಯಲ್ಲಿವೆ. ಈ ಪ್ರಾಜೆಕ್ಟ್ಗಳಲ್ಲಿ ಯಾವುದು ಅನಸೂಯ ಹೇಳ್ತಿರುವ ಚಿತ್ರ ಎಂಬುದನ್ನು ಕಾದುನೋಡಬೇಕಿದೆ.
ಇನ್ನೂ ‘ಪುಷ್ಪ’ ಸಿನಿಮಾದ ಮೂಲಕ ಅನಸೂಯ ಜನಪ್ರಿಯತೆ ಸಿಕ್ಕಿದೆ. ‘ಪುಷ್ಪ 2’ಗಾಗಿ ನಟಿ ಎದುರು ನೋಡ್ತಿದ್ದಾರೆ. ಪಾರ್ಟ್ 2ನಲ್ಲಿ ಅನಸೂಯ ಖಡನ್ ಪಾತ್ರದಲ್ಲಿ ಮಿಂಚಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.