10 ಸೀಸನ್ಗಳ ಯಶಸ್ಸಿನ ಬಳಿಕ 11ನೇ ಸೀಸನ್ ಆರಂಭ ಆಗುತ್ತಿದೆ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಹೊಸ ಸೀಸನ್ಗೂ ಕಿಚ್ಚ ಸುದೀಪ್ ಅವರೇ ಸಾರಥ್ಯ ವಹಿಸಿಕೊಂಡಿದ್ದಾರೆ. ಅವರನ್ನು ಬಿಟ್ಟು ಬೇರೆ ನಟರನ್ನು ನಿರೂಪಕರ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದ ಅಭಿಮಾನಿಗಳ ಮಾತು ನಿಜವಾಗಿದೆ.
https://x.com/bengalurubouy2/status/1835313834896081118?ref_src
ಹೌದು ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದೆ. ಅಂತೂ ಇಂತೂ ಪ್ರೇಕ್ಷಕರ ಕುತೂಹಲಕ್ಕೆ ತೆರೆಬಿದ್ದಿದೆ. ಕಿಚ್ಚ ಸುದೀಪ್ ಅವರು ಮಾಸ್ ಡೈಲಾಗ್ ಹೊಡೆದ ನಯಾ ಬಿಗ್ ಬಾಸ್ ಪ್ರೋಮೋವೊಂದು ರಿಲೀಸ್ ಆಗಿದೆ.
Onam 2024: ಓಣಂ ಹಬ್ಬಆಚರಿಸುವ ವಿಧಾನ, ಹಿಂದಿನ ಮಹತ್ವ ಮತ್ತು ವಿಶೇಷತೆ ಏನು ಗೊತ್ತಾ..?
ಸುದೀಪ್ ಅವರು ಬಿಗ್ ಬಾಸ್ ಪ್ರೋಮೋದಲ್ಲಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. 10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ. ಇದು ಹೊಸ ಅಧ್ಯಾಯ ಎಂದು ಸುದೀಪ್ ಮಾಸ್ ಡೈಲಾಗ್ ಹೊಡೆದಿದ್ದಾರೆ. ಸೆ.29ರಿಂದ ಬಿಗ್ ಬಾಸ್ ಶೋ ಶುರುವಾಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ. ಈ ಮೂಲಕ ನಿರೂಪಕ ಬದಲಾಗ್ತಾರೆ ಎಂಬ ಸುದ್ದಿಗೆ ಬ್ರೇಕ್ ಬಿದ್ದಿದೆ. ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹಾಗಾದ್ರೆ ಯಾರೆಲ್ಲಾ ತಾರೆಯರು ಸ್ಪರ್ಧಿಗಳಾಗಿ ಬರಲಿದ್ದಾರೆ ಕಾಯಬೇಕಿದೆ.