ಬೆಂಗಳೂರು: ಮಾಲಿವುಡ್ನಲ್ಲಿ ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿದೆ. ಹೇಮಾ ಕಮಿಟಿಯಂತೆ ಮಹಿಳೆಯರ ಸುರಕ್ಷತೆಗಾಗಿ ಸ್ಯಾಂಡಲ್ವುಡ್ನಲ್ಲಿಯೂ (Sandalwood) ರಚಿಸಲು ಸೆ.16ರಂದು ಫಿಲ್ಮ್ ಚೇಂಬರ್ ಸಭೆ ಆಯೋಜಿಸಿದೆ.
ಮಹಾರಾಷ್ಟ್ರ ಸಿಎಂ ಮನೆಯಲ್ಲಿ ಗಣೇಶ ಹಬ್ಬ ಸಂಭ್ರಮ : ಪೂಜೆಯಲ್ಲಿ ಸಹೋದರಿ ಜೊತೆಗೂಡಿ ಸಲ್ಮಾನ್ ಖಾನ್ ಭಾಗಿ
ಇಂದು ಫಿಲ್ಮ್ ಚೇಂಬರ್ನಲ್ಲಿ ಹೈ-ವೋಲ್ಟೇಜ್ ಸಭೆ ನಡೆಯಲಿದೆ. ಕೇರಳದಲ್ಲಿ ಹೇಮಾ ಕಮಿಟಿ ರಚಿಸಿರುವಂತೆ ಇಲ್ಲೂ ರಚಿಸುವಂತೆ ನಟಿಯರು ಸೆ.6ರಂದು ಫಿಲ್ಮ್ ಚೇಂಬರ್ ಪತ್ರ ಬರೆದ್ದರು. ಅದರಂತೆ ನಾಳೆ ಬೆಳಗ್ಗೆ 11:30ಕ್ಕೆ ಈ ಕುರಿತು ಸಭೆ ಮಾಡಲು ನಿರ್ಧರಿಸಿದ್ದಾರೆ.
ಈ ಸಭೆಯಲ್ಲಿ 100ಕ್ಕೂ ಹೆಚ್ಚು ಮಹಿಳಾ ಕಲಾವಿದೆಯರು ಭಾಗಿಯಾಗಲಿದ್ದಾರೆ. ನಟಿಯರ ಭದ್ರತೆ ಹಾಗೂ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಕಮಿಟಿಗೆ ಮನವಿ ಮಾಡಲಿದ್ದಾರೆ. ಕಮಿಟಿ ವರದಿ ಅನುಸರಿಸಿ ಹಲವು ಕಾರ್ಯಕ್ರಮ ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಲಿದ್ದಾರೆ.