ತಮ್ಮ 29ನೇ ವಯಸ್ಸಿಗೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಪಂಜಾಬಿ ಗಾಯಕ ನಟ ಸಿಧು ಮೂಸೆವಾಲಾ ಅವರ ತಾಯಿ ಚರಣ ಸಿಂಗ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಪಂಜಾಬ್ ಸಂಗೀತ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿದ್ದ ಸಿಧು ಮೂಸೆವಾಲಾ ಹತ್ಯೆಯಿಂದ ಮಗನನ್ನು ಕಳೆದುಕೊಂಡ ಅವರ ತಂದೆ ತಾಯಿ ಅಕ್ಷರಶಃ ಆಕಾಶವೇ ಕಳಚಿ ಬಿದ್ದವರಂತಾಗಿದ್ದರು. ಇದೀಗ ಎರಡು ವರ್ಷದ ನಂತರ ಗಾಯಕನ ಪೋಷಕರು ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ಸ್ವತಃ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ತನ್ನ ಪತ್ನಿ, ಸಿಧು ಮೂಸೆವಾಲಾ ತಾಯಿ ಚರಣ್ ಕೌರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ತಮ್ಮ ಪುಟ್ಟ ಮಗನ ಫೋಟೋವನ್ನು ಹಂಚಿಕೊಂಡಿರುವ ಸಿದು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್, ‘ಶುಭದೀಪ್ ಅವರನ್ನು ಪ್ರೀತಿಸುವ ಲಕ್ಷಾಂತರ ಮನಸ್ಸುಗಳ ಆಶೀರ್ವಾದದಿಂದ ಆ ದೇವರು ಶುಭ್ ಅವರ ಛೋಟಾ ಸಸಹೋದರನನ್ನು ನಮ್ಮ ಮಡಿಲಿಗೆ ಹಾಕಿದ್ದಾರೆ. ಭಗವಂತನ ಆಶೀರ್ವಾದದಿಂದ ಕುಟುಂಬವು ಆರೋಗ್ಯವಾಗಿದೆ ಮತ್ತು ಎಲ್ಲಾ ಹಿತೈಷಿಗಳ ಅಪಾರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ
ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು 2022 ರಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಸಿದು ಮೂಸೆವಾಲ ಅವರು ತನ್ನ ತಂದೆ ತಾಯಿಗೆ ಒಬ್ಬನೇ ಮಗ ಆಗಿದ್ದರು. ಅಂತಹ ಪರಿಸ್ಥಿತಿಯಲ್ಲಿ, ತನ್ನ ಮಗನನ್ನು ಕಳೆದುಕೊಂಡು ಅಕ್ಷರಶಃ ದುಖಸಾಗರದಲ್ಲಿ ಮುಳುಗಿದ್ದ ಅವರ ಪೋಷಕರು ಕುಟುಂಬದ ಉತ್ತರಾಧಿಕಾರಿಯ ಸಲುವಾಗಿ ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಧರಿಸಲು ನಿರ್ಧರಿಸಿದರು.
ಸಿದು ಮೂಸೆವಾಲ ಅವರ ತಮ್ಮನ ಜನನದ ಸುದ್ದಿ ಹೊರಬಿದ್ದ ತಕ್ಷಣ ಮೂಸೆವಾಳ ಅಭಿಮಾನಿಗಳಲ್ಲಿ ಸಂತಸದ ಅಲೆ ಎದ್ದಿದೆ