ಚಿಕ್ಕಮಗಳೂರು: ಮುಂಬರುವ ಲೋಕಸಭೆ ಚುನಾವಣೆ ದೇಶದ ಚುನಾವಣೆ. ಮಕ್ಕಳು, ಯುವಜನರ ಭವಿಷ್ಯದ ಚುನಾವಣೆ. ದೇಶಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧದ ಸಂದರ್ಭದಲ್ಲಿ ಉಕ್ರೇನ್ನಲ್ಲಿ ಸಿಕ್ಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತರುವ ಸಲುವಾಗಿ ಎರಡೂ ದೇಶಗಳ ನಾಯಕರ ಜೊತೆ ಮಾತನಾಡಿ 48 ಗಂಟೆಗಳ ಕಾಲ ಯುದ್ಧ ನಿಲ್ಲಿಸಿ ವಿಶೇಷ ವಿಮಾನಗಳಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದರು ಎಂದರು.
ಹಾಲಿನ ಜೊತೆ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಬೇಡಿ..! ಆರೋಗ್ಯ ಸಮಸ್ಯೆ ಗ್ಯಾರಂಟಿ
ಒಬ್ಬ ವಿದ್ಯಾರ್ಥಿ ಆಕಸ್ಮಿಕವಾಗಿ ಸಾವಪ್ಪಿದ್ದಕ್ಕೆ ಮೋದಿ ಕಾರಣ ಎಂದು ವಿರೋಧಿಗಳು ಬೊಬ್ಬೆ ಹೊಡೆದರು, ಆದರೆ 32 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಮೋದಿ ಕಾರಣ, ಅದಕ್ಕಾಗಿ ಮೋದಿ ಬೇಕು ಎಂದು ಹೇಳಿದರು. ಅದೇ ರೀತಿ ಸಿರಿಯಾ, ಇಸ್ರೇಲ್, ಇರಾನ್, ಆಫ್ಘಾನಿಸ್ತಾನಗಳಿಂದ ಸುರಕ್ಷಿತವಾಗಿ ಭಾರತೀಯರನ್ನು ಕರೆ ತರಲಾಯಿತು. ಅವರೊಂದಿಗೆ ಪಾಕಿಸ್ತಾನ, ಶ್ರೀಲಂಕ ಸೇರಿದಂತೆ ಹಲವು ದೇಶದ ಜನರು ಭಾರತದ ಬಾವುಟ ಹಿಡಿದು ಜೈಕಾರ ಹಾಕುತ್ತ ಸುರಕ್ಷಿತವಾಗಿ ಅವರ ದೇಶಕ್ಕೆ ಮರಳಿದರು. ಈ ಕಾರಣಕ್ಕೆ ಮೋದಿ ಇದ್ದರೆ ಯಾವುದೂ ಅಸಾಧ್ಯವಲ್ಲ ಅದಕ್ಕಾಗಿ ಮೋದಿ ಬೇಕು ಎಂದರು.