ಹಾವೇರಿ: ಮೈಕ್ರೋ ಫೈನಾನ್ಸ್ ಕಿರುಕುಳದ ಹೆಚ್ಚಾಗುತ್ತಿದ್ದು, ಇದೀಗ ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟಲು ಮಾಂಗಲ್ಯ ಸರ ಉಳಿಸಿ ಅಭಿಯಾನ ಆರಂಭಿಸಿದ್ದಾರೆ. ಹಾವೇರಿ ಜಿಲ್ಲೆಯ ನೊಂದ ಮಹಿಳೆಯರು ಹಾಗೂ ರೈತ ಮುಖಂಡರು ‘ಮಾಂಗಲ್ಯ ಸರ ಉಳಿಸಿ’ ಎಂಬ ಅಭಿಯಾನ ಆರಂಭಿಸಿದ್ದಾರೆ. ಹಾವೇರಿ ನಗರದ ಅಂಚೆ ಕಚೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಂಗಲ್ಯ ಸರವನ್ನೇ ರವಾನಿಸಿದ್ದಾರೆ. ಜಿಲ್ಲೆಯ ನೊಂದ ಮಹಿಳೆಯರು ಮೈಕ್ರೋ ಫೈನಾನ್ಸ್ ಕಂಪನಿಗಳು ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಮನೆಯಲ್ಲಿ ನೆಮ್ಮದಿಯಾಗಿ ಇರುವಂತಿಲ್ಲ. ಮನೆಗೆ ಬಂದರೆ ಇವರ ಕಿರುಕುಳ, ಇವರು ಬಂದರೆ ಸುತ್ತಮುತ್ತಲಿನವರ ಕೇಳುವಂತಾಗಿದೆ. ಹೀಗಾಗಿ ಕಿರುಕುಳ ತಪ್ಪಿಸಿ, ಮಾಂಗ ಲ್ಯ ಉಳಿಸಿ ಎಂದು ಮಹಿಳೆಯರು ಒತ್ತಾಯಿಸಿದ್ದಾರೆ. ಎಸಿ ಕಚೇರಿಗೆ ಹಾಗೂ ಜಿಲ್ಲಾಡಳಿತ ಹಾಗೂ ಎಸ್ಪಿ ಕಚೇರಿಗೆ ಮಹಿಳೆಯರು ಮೈಕ್ರೋಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣ : ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು..?
ಇನ್ನೊಂದೆಡೆ ಮೈಕ್ರೋ ಫೈನಾನ್ಸ್ ಗಳ ಕಿರುಕುಳದ ಒಂದೊಂದೆ ಘಟನೆಗಳು ಹೊರ ಬರ್ತಿದ್ದಂತೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಹೈಡ್ರಾಮವೊಂದು ನಡೆದಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕ್ಯಾಮರಾ ನೋಡುತ್ತಲೇ ಮುಖ ಮುಚ್ಚಿಕೊಂಡು ಕಳ್ಳರಂತೆ ಓಡಿದ್ದಾರೆ. ಹಾವೇರಿಯಲ್ಲೂ ಸಹ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗುತ್ತಿದ್ದು, ನೀವು ಆತ್ಮಹತ್ಯೆ ಮಾಡಿಕೊಳ್ಳಿ, ನಮಗೆ ಗೊತ್ತಿಲ್ಲ ,ನಮಗೆ ದುಡ್ಡು ಕಟ್ಟಿ ಎಂದು ಕಿರುಕುಳ ನೀಡುತ್ತಿದ್ದರು. ನಗರದ ಸಿದ್ದೇಶ್ವರ ನಗರದಲ್ಲಿರುವ ನ್ಯೂ ಅಂಬಿಕಾ ಸಾವಜಿ ಹೊಟೇಲ್ ನಡೆಸುತ್ತಿದ್ದ ಸೂರಜ್ ಎಂಬುವರ ಕುಟುಂಬದವರು ಹೊಟೇಲ್ ಹಾಗೂ ಮನೆ ಹಿರಿಯರ ಅನಾರೋಗ್ಯದ ನಿಮಿತ್ತ ಸಾಲ ಪಡೆದಿದ್ದರು. ಸುಮಾರು ಎರಡುವರೆ ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ತಿಂಗಳು ಮನೆಯಲ್ಲಿದ್ದ ತಮ್ಮ ಅಜ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ಸಲ ಕಂತು ಕಟ್ಟುತ್ತೇವೆ ಎಂದರೂ ಕೇಳದ ಮೈಕ್ರೋ ಫೈನಾನ್ಸ್ ಸಿಬ್ಬಂದಿ, ಬೆಳಿಗ್ಗೆಯಿಂದಲೂ ಕಂತು ಕಟ್ಟುವಂತೆ ಟಾರ್ಚರ್ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.