ದರ್ಶನ್ “ಡೆವಿಲ್” ಎದುರು ನನ್ನ ಸಿನಿಮಾ ರಿಲೀಸ್ ಮಾಡ್ತೀನಿ ಎಂದು ಪ್ರಥಮ್ ಬಹಿರಂಗ ಸವಾಲ್ ಹಾಕಿದ್ದಾರೆ.
ಯಾವ ಸಮಯದಲ್ಲಿ ಸೀಬೆ ಹಣ್ಣು ತಿನ್ನಬೇಕು ಗೊತ್ತಾ..!?.. ಈ ರೋಗಗಳಿಂದ ಮುಕ್ತಿ ಗ್ಯಾರಂಟಿ!
ಡೆವಿಲ್’ ಸಿನಿಮಾ ಬಿಡುಗಡೆ ಆಗುವ ತನಕ ಬೇರೆ ನಟರ ಸಿನಿಮಾಗಳನ್ನು ನೋಡಬೇಡಿ ಎಂದು ದರ್ಶನ್ ಫ್ಯಾನ್ಸ್ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಕುರಿತು ನಟ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ. ‘
ಹೀಗೆಲ್ಲ ಮಾಡುವವರು ಕನ್ನಡ ದ್ರೋಹಿಗಳು. ಉದ್ದೇಶಪೂರ್ವಕವಾಗಿ ಬೇರೆ ನಟರ ಸಿನಿಮಾ ನೋಡಬೇಡಿ ಎಂದರೆ ತುಳಿದಂತೆ ಆಗುತ್ತದೆ. ಹಾಗಾದರೆ ನಾವು ‘ಡೆವಿಲ್’ ಸಿನಿಮಾದ ವಿರುದ್ಧವೇ ‘ಕರ್ನಾಟಕದ ಅಳಿಯ’ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ. ಅವರ ಸಿನಿಮಾ ಲೇಟ್ ಆದರೆ ನಾವು ಲೇಟ್ ಮಾಡಲ್ಲ. ಒಂದು ವೇಳೆ ಕ್ರಿಸ್ಮಸ್ಗೆ ಡೆವಿಲ್ ತೆರೆಕಂಡರೆ ಆ ಸಿನಿಮಾದ ಎದುರು ನನ್ನ ಸಿನಿಮಾ ರಿಲೀಸ್ ಮಾಡುತ್ತೇವೆ’ ಎಂದು ಪ್ರಥಮ್ ಹೇಳಿದ್ದಾರೆ