ಪೇರಲದ ಸೇವನೆಯು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.
ಹೊಸ ರೂಪ ಪಡೆದ ನಳಂದಾ ವಿಶ್ವವಿದ್ಯಾಲಯ..! ಪ್ರಧಾನಿಯಿಂದ ಉದ್ಘಾಟನೆ..! ಏನಿದರ ವಿಶೇಷತೆ?
ಪೇರಲವು ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್ಗಳು, ಆಹಾರದ ಫೈಬರ್ ಮತ್ತು ಪ್ರೋಟೀನ್ಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ವಿಟಮಿನ್ ಸಿ, ವಿಟಮಿನ್ ಬಿ 6, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ನೂರು ಗ್ರಾಂ ಪೇರಲದಲ್ಲಿ (ಸೀಬೆಹಣ್ಣು) ಸುಮಾರು ಮುನ್ನೂರು ಮಿಲಿಗ್ರಾಂ ಆಸ್ಕೋರ್ಬಿಕ್ ಆಮ್ಲ ಅಂದರೆ ವಿಟಮಿನ್-ಸಿ ಇರುತ್ತದೆ.
ಇದಲ್ಲದೇ ಪೇರಲವು ಫೈಟೊನ್ಯೂಟ್ರಿಯೆಂಟ್ಗಳಲ್ಲಿ ಸಮೃದ್ಧವಾಗಿದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಂತಹ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪೇರಲದ ಸೇವನೆಯು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಅದರಲ್ಲೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಪೇರಲ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಮೈ ಹೆಲ್ತ್ ಪ್ರಕಾರ, ಹೊಟ್ಟೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪೇರಲದ ಬಳಕೆ ತುಂಬಾ ಪ್ರಯೋಜನಕಾರಿಯಾಗಿದೆ. ತಜ್ಞರ ಹೇಳುವಂತೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪೇರಳೆಯು ಹೊಟ್ಟೆಯ ಸಮಸ್ಯೆಗಳಿಗೆ ಹೇಗೆ ಉಪಯುಕ್ತವಾಗಿದೆ ಮತ್ತು ಅದನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿಯೋಣ.
ಹೊಟ್ಟೆಗೆ ಒಳ್ಳೆಯದು: ಪೇರಲದಲ್ಲಿ ಫೈಬರ್ ಸಮೃದ್ಧವಾಗಿದೆ. ಆದ್ದರಿಂದ ನೀವು ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಪೇರಲವನ್ನು ತಿನ್ನಬಹುದು. ಪೇರಲವನ್ನು ಡ್ರೈ ಫ್ರೂಟ್ಸ್ನೊಂದಿಗೆ ತಿಂದರೆ ಕೆಲವರಿಗೆ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಅಂತಹವರು ಡ್ರೈ ಫ್ರೂಟ್ಸ್ನೊಂದಿಗೆ ತಿನ್ನಬಾರದು. ಅಲ್ಲದೇ ಅತಿಯಾಗಿ ಪೇರಲವನ್ನು ತಿನ್ನುವುದರಿಂದ ಹೊಟ್ಟೆ ನೋವು ಉಂಟಾಗುತ್ತದೆ.
ಮಲಬದ್ಧತೆಯನ್ನು ನಿವಾರಣೆ: ಪೇರಲ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ. ಅದಕ್ಕಾಗಿಯೇ ನೀವು ಮಲಬದ್ಧತೆ ಇರುವಾಗ ಪೇರಲವನ್ನು ಸೇವಿಸುವಂತೆ ಅನೇಕ ವೈದ್ಯರು ಶಿಫಾರಸು ಮಾಡುತ್ತಾರೆ.
ಅಸಿಡಿಟಿಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ: ಪೇರಲವನ್ನು ಸೇವಿಸುವುದರಿಂದ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ನಿವಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ ಪೇರಲ ಕೂಡ ಆಮ್ಲೀಯ ಹಣ್ಣಾಗಿದೆ. ಆದ್ದರಿಂದ, ಪೇರಲವನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.
ಮಲಬದ್ಧತೆಗೆ ಒಳ್ಳೆಯದು: ಪೇರಲವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಮಲಬದ್ಧತೆ ಸಮಸ್ಯೆಗೆ ಒಳ್ಳೆಯದು. ವಾಸ್ತವವಾಗಿ ಅನೇಕ ಮಂದಿಗೆ ಈ ವಿಚಾರ ತಿಳಿದಿಲ್ಲ. ಆದರೆ ಪೇರಲ ಹಣ್ಣನ್ನು ಸೇವಿಸುವ ಮೂಲಕ ಮಲಬದ್ಧತೆ ನಿವಾರಣೆಯಾಗುತ್ತದೆ.
ಹಾಗಾದ್ರೆ ಪೇರಲವನ್ನು ಯಾವಾಗ ತಿನ್ನಬೇಕು?: ಸಂಜೆ ಅಥವಾ ರಾತ್ರಿ ಹೊತ್ತು ಪೇರಲ ಹಣ್ಣನ್ನು ತಿನ್ನುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ರಾತ್ರಿ ಹೊತ್ತು ಪೇರಲವನ್ನು ತಿನ್ನುವುದು ಸರಿಯಾದ ಜೀರ್ಣಕ್ರಿಯೆಯನ್ನು ತಡೆಯುತ್ತದೆ. ಹಾಗಾಗಿ ಪೇರಲ ಹಣ್ಣನ್ನು ಹಗಲು ಮತ್ತು ಮಧ್ಯಾಹ್ನ ಹೊತ್ತು ಮಾತ್ರ ಸೇವಿಸಬೇಕು. ಊಟ ಮಾಡಿ ಒಂದೂವರೆ ಗಂಟೆಗಳ ಕಾಲ ಕಳೆದ ನಂತರ ಪೇರಲ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.