ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಪೊಲೀಸ್ ಗಂಡನಿಂದಲೇ 11 ದಿನಗಳ ಬಾಣಂತಿ ಪತ್ನಿಯ ಕೊಲೆ ನಡೆದಿದೆ. ಚಾಮರಾಜನಗರದಲ್ಲಿ ಪೊಲೀಸ್ ಪೇದೆಯಾಗಿರುವ ಕಿಶೋರ್ ತಮ್ಮ ಬಾಣಂತಿ ಹೆಂಡತಿಯನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಅನುಮಾನ ಹಾಗೂ ಸೈಕೋ ವರ್ತನೆಯಿಂದ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕೊಳತೂರು ನಿವಾಸಿ ಪ್ರತಿಭಾ ಮೃತ ಬಾಣಂತಿ. 11 ದಿನಗಳ ಮಗುವನ್ನು ಅನಾಥ ಮಾಡಿ ಹೋದ ಮಗಳಿಗಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆದಷ್ಟು ಬೇಗ ಅಳಿಯನ್ನು ಬಂಧಿಸುವಂತೆ ಆಕ್ರೋಶ ಹೊರಹಾಕಿದ್ದಾರೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಚಾಮರಾಜನಗರದಲ್ಲಿ ಪೊಲೀಸ್ ಪೇದೆಯಾಗಿರುವ ಕಿಶೋರ್ಗೂ ಪ್ರತಿಭಾಗೆ ಕೇವಲ ಬಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಆರೋಪಿ ಕಿಶೋರ್ಗೆ ತನ್ನ ಪ್ರತಿ ಮೇಲೆ ಅನುಮಾನ ಇತ್ತು. ಆ ಅನುಮಾನವೇ ಇಂದು ಕೊಲೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಿಶೋರ್, ಯಾವಾಗಲೂ ಅನುಮಾನ ಹಾಗೂ ಅವರ ಕಡೆಯವರು ಸರಿಯಾಗಿ ತನ್ನನ್ನು ಉಪಚಾರ ಮಾಡಲ್ಲ ಎಂಬ ಬಗ್ಗೆ ಗಲಾಟೆ ಮಾಡುತ್ತಿದ್ದ. ಮದುವೆಯಾದ ಒಂದು ವರ್ಷದಲ್ಲೇ ಇವರಿಬ್ಬರ ನಡುವೆ ಹಲವು ಬಾರಿ ಗಲಾಟೆ ನಡೆದಿತ್ತು.
ಇನ್ನು 11 ದಿನಗಳ ಹಿಂದಷ್ಟೇ ಪ್ರತಿಭಾಗೆ ಮಗುವಾಗಿತ್ತು. ಹೀಗಾಗಿ ಬಾಣಂತನಕ್ಕೆ ತಂದೆ ಮನೆಗೆ ಬಂದಿದ್ದರು. ನಿನ್ನೆ ಎಂದಿನಂತೆ ಮಾವನ ಮನೆಗೆ ಬಂದವ ಮನೆಯಲ್ಲಿ ಪತ್ನಿ ಒಬ್ಬಳೆ ಇದ್ದ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಫ್ಯಾನಿಗೆ ಸೀರೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಮೃತ ಪ್ರತಿಭಾ ಪೋಷಕರು ಮನೆಗೆ ಎಂಟ್ರಿಕೊಟ್ಟಿದ್ದು ಇದರಿಂದ ಬೆಚ್ಚಿಬಿದ್ದ ಕಿಶೋರ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.