ತೂಕ ಇಳಿಕೆಗೆ ಸ್ಟ್ರಾಬೆರಿ ಹೆಚ್ಚು ಸಹಾಯಕವಾಗಿದೆ. 80 ಗ್ರಾಂ ಸ್ಟ್ರಾಬೆರಿಯಲ್ಲಿ ಈ ಪೋಷಕಾಂಶಗಳಿವೆ: 0.6 ಗ್ರಾಂ ಪ್ರೋಟೀನ್, 0.2 ಗ್ರಾಂ ಕೊಬ್ಬಿನ ಅಂಶ, 6 ಗ್ರಾಂ ಕಾರ್ಬೋಹೈಡ್ರೇಟ್ಗಳು, 1.6 ಗ್ರಾಂ ಫೈಬರ್, 136 ಮಿಗ್ರಾಂ ಪೊಟ್ಯಾಸಿಯಮ್, 49 ಎಂಸಿಜಿ ಫೋಲೇಟ್, 46 ಮಿಗ್ರಾಂ ವಿಟ್ ಸಿ ಇದೆ. ಇದಷ್ಟೇ ಅಲ್ಲದೇ ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್, ಫೋಲೇಟ್, ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ. ಇನ್ನೂ ಈ ಹಣ್ಣಿನ ಆರೋಗ್ಯ ಪ್ರಯೋಜನದ ಬಗ್ಗೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ
ರಾಮೇಶ್ವರಂ ಕೆಫೆ ಸ್ಫೋಟದ ಉಗ್ರರಿಗೆ ಐಸಿಸ್ ನಂಟು: ಬೆಂಗಳೂರಿನ ಈ ಏರಿಯಾದಲ್ಲಿ ಬಸ್ ಸ್ಪೋಟಿಸುವ ಟಾಸ್ಕ್!
ತೂಕ ಇಳಿಕೆಗೆ ಸಹಾಯಕವಾಗಿದೆ: ಸ್ಟ್ರಾಬೆರಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಹಣ್ಣಾಗಿದೆ. ಇದನ್ನು ತಿನ್ನುವುದರಿಂದ ದೀರ್ಘಕಾಲ ಹಸಿವಾಗುವುದಿಲ್ಲ ಮತ್ತು ಹೊಟ್ಟೆ ತುಂಬಿದ ಭಾವನೆ ಇರುತ್ತದೆ. ಹಾಗಂತ ಅತಿಯಾಗಿ ತಿನ್ನಬಾರದು. ಆದರೆ ಸ್ಟ್ರಾಬೆರಿಯನ್ನು ನಿರಂತರವಾಗಿ ಪ್ರತಿದಿನ ಸೇವಿಸಿದರೆ, ನೀವು ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತೀರಿ. ಈ ಹಣ್ಣನ್ನು ತಿನ್ನುವುದರೊಂದಿಗೆ ವ್ಯಾಯಾಮವನ್ನು ಮಾಡಿದರೆ, ಶೀಘ್ರದಲ್ಲೇ ಉತ್ತಮ ಫಲಿತಾಂಶವನ್ನು ಕಾಣುತ್ತೀರಿ.
ಹೃದಯದ ಆರೋಗ್ಯ: ಸ್ಟ್ರಾಬೆರಿಗಳು ಫ್ಲೇವನಾಯ್ಡ್, ಪೊಟ್ಯಾಸಿಯಮ್ ಮತ್ತು ಫೈಬರ್ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವು ರಕ್ತದೊತ್ತಡವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತವೆ. ಅಲ್ಲದೇ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯಕ್ಕೂ ಒಳ್ಳೆಯದು.
ದೃಷ್ಟಿ ಸುಧಾರಣೆ: ಸ್ಟ್ರಾಬೆರಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳು ಮತ್ತು ಇತರ ಪೋಷಕಾಂಶಗಳನ್ನು ಹೊಂದಿದ್ದು, ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಸ್ಟ್ರಾಬೆರಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ರೋಗನಿರೋಧಕ ಶಕ್ತಿ: ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ