ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆ ಆತಂಕಕಾರಿ ವಿಚಾರವಾಗಿದೆ. ಏಕೆಂದರೆ ಇದು ವಿವಿಧ ರೋಗಗಳಿಗೆ ಮುಖ್ಯ ಕಾರಣವಾಗಿದೆ. ವಾಸ್ತವವಾಗಿ, ಬೊಜ್ಜು ಹೃದಯ ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಅಪಾಯವೂ ಕೂಡ ಹೆಚ್ಚು. ಪ್ರಪಂಚದಾದ್ಯಂತ ಸುಮಾರು 2 ಬಿಲಿಯನ್ ಜನರು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ.
ಎಟಿಎಂ ಗೆ ಕನ್ನ ಹಾಕಲು ಯತ್ನಿಸಿದ ದರೋಡೆಕೋರರು! ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ!
ನೀವು ನಿಮ್ಮನ್ನು ಫಿಟ್ ಆಗಿರಿಸಿಕೊಳ್ಳಲು ಬಯಸುವುದಾದರೆ, ಮೊದಲು ತೂಕ ಇಳಿಸಿಕೊಳ್ಳುವುದು ಮುಖ್ಯ. ಕಳಪೆ ಆಹಾರ ಪದ್ಧತಿಯಿಂದಾಗಿ ವೇಗವಾಗಿ ತೂಕ ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ವಿವಿಧ ರೋಗಗಳು ಉಂಟಾಗುತ್ತವೆ. ವಿಶೇಷವಾಗಿ ಬೊಜ್ಜು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗಿದೆ.
ಒಮ್ಮೆ ತೂಕ ಹೆಚ್ಚಾದರೆ, ಇದನ್ನು ಕಳೆದುಕೊಳ್ಳುವುದು ತುಂಬಾ ಕಷ್ಟ. ಗಂಟೆಗಟ್ಟಲೇ ಜಿಮ್ನಲ್ಲಿ ಬೆವರು ಸುರಿಸಬೇಕಾಗುತ್ತದೆ. ಆಹಾರ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ನೀವು ಈ ಎಲ್ಲಾ ಪ್ರಯತ್ನಗಳನ್ನು ಮಾಡಿದ ನಂತರ ಕೂಡ, 1 ವಾರದೊಳಗೆ ಸುಮಾರು 1 ಕೆಜಿ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದರೆ ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ನಿಮ್ಮ ಹೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಹಾಗಾದ್ರೆ ಅವುಗಳು ಯಾವುವು ಅಂತೀರಾ? ಈ ಸ್ಟೋರಿ ಓದಿ.
ವ್ಯಾಯಾಮ: ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡುವುದು ಕೂಡ ತುಂಬಾ ಮುಖ್ಯ. ಇದಕ್ಕಾಗಿ ಪ್ರತಿದಿನ ವಾಕಿಂಗ್ ಹಾಗೂ ಜಾಗಿಂಗ್ ಮಾಡಿ. ಅಲ್ಲದೇ ಮನೆಯಲ್ಲಿ ಮೆಟ್ಟಿಲುಗಳನ್ನು ಹತ್ತುವುದು ಮತ್ತು ಇಳಿಯುವ ಅಭ್ಯಾಸ ಮಾಡಿಕೊಳ್ಳಿ. ಅಲ್ಲದೇ ಹೆಚ್ಚು ಹೊತ್ತು ಕುಳಿತಲ್ಲೇ ಕೂತು ಕೆಲಸ ಮಾಡಬೇಡಿ.
ಸಕ್ಕರೆ ಬಿಟ್ಟುಬಿಡಿ: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಸಿಹಿತಿಂಡಿಗಳ ಸೇವನೆ ಬಿಡುವುದು. ನೀವು ಸಿಹಿತಿಂಡಿಗಳು ಮತ್ತು ಚಾಕೊಲೇಟ್ಗಳಿಂದ ದೂರವಿರುವುದು ಆರೊಗ್ಯಕ್ಕೆ ಸಹ ಒಳ್ಳೆಯದು. ವಾಸ್ತವವಾಗಿ, ಸಿಹಿತಿಂಡಿಗಳನ್ನು ತಿನ್ನುವುದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ.
ಗ್ರೀನ್ ಟೀ: ನಿಮ್ಮ ಚಯಾಪಚಯ ಕ್ರಿಯೆ ಉತ್ತಮವಾಗಿದ್ದರೆ, ನಿಮ್ಮ ದೇಹದ ತೂಕ ಹೆಚ್ಚಾಗುವುದಿಲ್ಲ. ಇದಕ್ಕಾಗಿ ನೀವು ದಿನಕ್ಕೆ 2-3 ಬಾರಿ ಗ್ರೀನ್ ಟೀ ಕುಡಿಯಬಹುದು. ಗ್ರೀನ್ ಟೀ ದೇಹದ ಕೊಲೆಸ್ಟ್ರಾಲ್ ಅನ್ನು ಬೇಗನೆ ಕರಗಿಸುತ್ತದೆ.
ಹೆಚ್ಚು ಪ್ರೋಟೀನ್: ಬೊಜ್ಜು ಕರಗಿಸಿಕೊಳ್ಳಲು ದಿನವಿಡೀ ಉತ್ತಮ ಪ್ರಮಾಣದ ಪ್ರೋಟೀನ್ ಪದಾರ್ಥವನ್ನು ಅವಶ್ಯಕ. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಪನೀರ್, ಮೊಸರು, ಬೇಳೆ ಮತ್ತು ಬೀನ್ಸ್ ಸೇರಿಸಿ. ಪ್ರೋಟೀನ್ ಹಸಿವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮದಿಂದಾಗಿ ನೀವು ಅನಗತ್ಯ ಆಹಾರ ಸೇವಿಸುವುದಿಲ್ಲ
ಬಿಸಿ ನೀರು: ದೇಹದ ಕೊಳೆಯನ್ನು ತೆಗೆದುಹಾಕಲು ಹೆಚ್ಚು ನೀರು ಕುಡಿಯುವುದು ಅವಶ್ಯಕ. ಇದು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ.