ಶಿವಮೊಗ್ಗ: ಕೆಇಎ ನಡೆಸಿದ ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿ ತಪ್ಪಿಸಿಕೊಂಡಿರುವ ಆರ್ಡಿ ಪಾಟೀಲ್ ಕುರಿತು ಮಾತನಾಡಿದ ಮಾಜಿ ಗೃಹಸಚಿವ, ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಎಲ್ಲಾ ಪರೀಕ್ಷೆಗಳಲ್ಲೂ ಆರ್.ಡಿ.ಪಾಟೀಲ್ ಅಕ್ರಮ ಮಾಡಿದ್ದಾನೆ. ನಮ್ಮ ಸರ್ಕಾರ ಇದ್ದಾಗ ಹೆಡೆಮುರಿ ಕಟ್ಟಿ ಅರೆಸ್ಟ್ ಮಾಡಿದ್ದೆವು. ಬಳಿಕ ಜಾಮೀನಿನ ಮೇಲೆ ಆರ್.ಡಿ.ಪಾಟೀಲ್ ಹೊರ ಬಂದಿದ್ದ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಈಗ R.D.ಪಾಟೀಲ್ ತಪ್ಪಿಸಿಕೊಂಡು ಹೋಗಲು ಬಿಟ್ಟಿದ್ಯಾರು? ಪೊಲೀಸರ ಕೈವಾಡವಿಲ್ಲದೆ ಆತ ತಪ್ಪಿಸಿಕೊಂಡು ಹೋಗಲು ಆಗಲ್ಲ. ಆರ್.ಡಿ.ಪಾಟೀಲ್ ರಕ್ಷಣೆಗೆ ಪ್ರಿಯಾಂಕ್ ಖರ್ಗೆ ನಿಂತಿದ್ದಾರೆ. ಪರೀಕ್ಷಾ ಕೇಂದ್ರ ಸೆಲೆಕ್ಟ್ ಮಾಡುವುದು ಸಹ ಆರ್.ಡಿ.ಪಾಟೀಲ್. ಇಂತಹ ವ್ಯಕ್ತಿಗಳಿಗೆ ರಕ್ಷಣೆ ಕೊಡುವುದು ಕಾಂಗ್ರೆಸ್ ಸರ್ಕಾರದವರು. ಪೊಲೀಸರ ವಿರುದ್ಧವೂ ತನಿಖೆ ಮಾಡಲಿ ಎಂದರು.