ಬಾಗಲಕೋಟೆ: ಪ್ರಧಾನಿ ಹೇಳಿಕೆ ಗಮನಿಸಿದರೆ ಅವರು ನಮ್ಮ ಸರ್ಕಾರವನ್ನು ಅಲುಗಾಡಿಸುವ ಆಲೋಚನೆ ಮಾಡಿದಂತೆ ಭಾಸವಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ, ಸಿಎಂ, ಡಿಸಿಎಂ ಸೇರಿ ಕರ್ನಾಟಕ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಮೋದಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆಯೂ ಒಮ್ಮೆ ಪ್ರಧಾನಿ ನಮ್ಮ ಸರ್ಕಾರವನ್ನು ಅಲುಗಾಡಿಸುವ ಆಲೋಚನೆ ಮಾಡಿದ್ದರು. ಈಗಲೂ ನಾವು ಅದೇ ರೀತಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಪ್ರಧಾನಿಯವರ ಯಾವ ಪ್ರಯತ್ನವೂ ಈಡೇರುವುದಿಲ್ಲ. ನಮ್ಮಲ್ಲಿ ಒಗ್ಗಟ್ಟಿದೆ, ಸಹಮತವಿದೆ, ನಾವೆಲ್ಲರೂ ಒಂದಾಗಿದ್ದೇವೆ ಎಂದು ಹೇಳಿದರು. ರಾಜ್ಯ-ಕೇಂದ್ರ ಸರ್ಕಾರಗಳ ಸಂಘರ್ಷದಲ್ಲಿ ರಾಜ್ಯದ ಜನರಿಗೆ ಅನ್ಯಾಯ ಆಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು,
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಕೇಂದ್ರ ಸರ್ಕಾರದೊಂದಿಗೆ ಯಾವುದೇ ರೀತಿಯ ಸಂಘರ್ಷ ಮಾಡುವ ಉದ್ದೇಶ ನಮಗಿಲ್ಲ. ನಿಯಮಬದ್ಧವಾಗಿ ನಮಗೆ ಬರಬೇಕಾದ ಹಣದ ಪ್ರತಿ ಪೈಸೆಯನ್ನು ಪಡೆಯುವುದು ನಮ್ಮ ಹಕ್ಕು. ಅದನ್ನು ನಾವು ರಾಜ್ಯದ ಜನರಿಗೆ ತಲುಪಿಸುತ್ತೇವೆ. ಜನರಿಗೆ ಸಲ್ಲಬೇಕಾದ ಹಣವನ್ನು ಸಂವಿಧಾನ ಬದ್ಧವಾಗಿ ನೀಡುವಂತೆ ನಾವು ಕೇಂದ್ರವನ್ನು ಕೇಳಿದ್ದೇವೆ. ಸೆ.23ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರಕ್ಕೆ 8 ಪತ್ರಗಳನ್ನು ಬರೆದಿದ್ದೇವೆ. ಪ್ರಧಾನಿ ಭೇಟಿಗೆ ಅನುಮತಿ ಕೂಡ ಕೇಳಿದ್ದೇವೆ. ಇಲ್ಲಿ ಯಾವುದೇ ಸಂಘರ್ಷ ಇಲ್ಲ. ನಾವು ನಿಯಮಬದ್ಧವಾಗಿ ಹಕ್ಕೊತ್ತಾಯ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.