ಫಳಫಳನೆ ಹೊಳೆಯುವ ಹಲ್ಲು ನಮ್ಮ ನಗು, ನಮ್ಮ ವರ್ಚಸ್ಸು ಎರಡನ್ನೂ ಹೆಚ್ಚಿಸುತ್ತದೆ. ಹಳದಿ ಹಲ್ಲುಗಳು ನಮ್ಮ ಆತ್ಮವಿಶ್ವಾಸವನ್ನು ಸಹ ಕುಂದಿಸಬಹುದು. ಹೀಗಾಗಿ ಯಾವಾಗಲೂ ಶುಭ್ರವಾದ, ಹೊಳೆಯುವ ಹಲ್ಲುಗಳನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಬಿಳಿ ಹಲ್ಲುಗಳಿಗೆ ಚಿಕಿತ್ಸೆ ಇದ್ದರೂ ಇದು ಕೆಲ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು. ಅದಕ್ಕಾಗಿ ನೈಸರ್ಗಿಕ ಪರ್ಯಾಯಗಳ ಮೊರೆ ಹೋಗುವುದೇ ಉತ್ತಮ.
ಏ ನಿನಗೆ ಹೆಂಡತಿ ಇಲ್ಲವೇನೋ ಮಗನೇ! ಸುರ್ವಣಸೌಧದಲ್ಲಿ CT ರವಿಗೆ ನಿಂದಿಸಿದ “ಕೈ” ಮುಖಂಡರು!
ಕೆಲವೊಬ್ಬರ ಹಲ್ಲುಗಳು ಹಳದಿ ಬಣ್ಣಕ್ಕೆ ಬದಲಾಗಿರುತ್ತದೆ. ಆರೋಗ್ಯ ಹಾಗೂ ಸೌಂದರ್ಯದ ದೃಷ್ಟಿಯಿಂದ ಈ ಬಣ್ಣ ಒಳ್ಳೆಯದಲ್ಲ. ಹಲ್ಲು ಬೆಳ್ಳಗಿದ್ದರೆ ಚೆಂದ. ಇಲ್ಲವಾದರೆ, ನಮ್ಮನ್ನು ನೋಡುವವರ ಎದುರು ಮುಜುಗರಕ್ಕೆ ಒಳಗಾಗಬೇಕಾಗಬಹುದು.
ಹಲ್ಲುಗಳ ಹಳದಿ ಬಣ್ಣದಿಂದ ಕೂಡಿದರೆ ನೀವು ಮುಜುಗರವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಕೆಲವು ಸುಲಭವಾದ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಹಳದಿ ಹಲ್ಲುಗಳನ್ನು ತೊಡೆದುಹಾಕಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.
1. ಅಡಿಗೆ ಸೋಡಾ ಮತ್ತು ನಿಂಬೆ
ಅಡಿಗೆ ಸೋಡಾ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅನೇಕ ಔಷಧೀಯ ಗುಣಗಳು ನಿಂಬೆಯಲ್ಲಿ ಕಂಡುಬರುತ್ತವೆ. ಈ ಎರಡು ವಸ್ತುಗಳ ಸಂಯೋಜನೆಯು ನಿಮ್ಮ ಬಾಯಿಯ ಆರೋಗ್ಯಕ್ಕೆ ಪ್ರಯೋಜನಕಾರಿ. ಒಂದು ಬಟ್ಟಲಿನಲ್ಲಿ ಒಂದರಿಂದ ಎರಡು ಚಮಚ ಅಡಿಗೆ ಸೋಡಾ ಮತ್ತು ಒಂದು ನಿಂಬೆಯ ರಸವನ್ನು ಮಿಶ್ರಣ ಮಾಡಿ. ಈಗ ಅದನ್ನು ನಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ. ಇದು ಹಳದಿ ಹಲ್ಲನ್ನು ಬಿಳಿಯಾಗಿಸುವುದು ಮಾತ್ರವಲ್ಲದೆ ಹುಳುಕಾಗುವುದನ್ನು ಸಹ ತಡೆಯುತ್ತದೆ.
2. ಕಿತ್ತಳೆ ಮತ್ತು ನಿಂಬೆ
ಕಿತ್ತಳೆ ಮತ್ತು ನಿಂಬೆಯಂತಹ ಹುಳಿ ಹಣ್ಣುಗಳು ಹಲ್ಲುಗಳಲ್ಲಿರುವ ಬ್ಯಾಕ್ಟೀರಿಯಾವನ್ನು ತೊಲಗಿಸುತ್ತವೆ. ಹಲ್ಲುಗಳನ್ನು ಸ್ವಚ್ಛಗೊಳಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಕಿತ್ತಳೆಯನ್ನು ನಿಯಮಿತವಾಗಿ ಸೇವಿಸಿದರೆ ಅದು ಬಾಯಿಯ ಆರೋಗ್ಯಕ್ಕೆ ಒಳ್ಳೆಯದು. ಹಲ್ಲುಗಳ ಮೇಲೆ ಕಿತ್ತಳೆ ಮತ್ತು ನಿಂಬೆ ಸಿಪ್ಪೆಯನ್ನು ಉಜ್ಜುವ ಮೂಲಕವೂ ಸ್ವಚ್ಛಗೊಳಿಸಬಹುದು.
3. ಆಪಲ್ ಸೈಡರ್ ವಿನೆಗರ್
ಆಪಲ್ ವಿನೆಗರ್ ಬ್ಯಾಕ್ಟೀರಿಯಾದ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸಲು ನೀವು ಬಯಸಿದರೆ ನಂತರ ಶುದ್ಧ ನೀರಿನಲ್ಲಿ ಆಪಲ್ ಸೈಡರ್ ವಿನೆಗರ್
ಸೇರಿಸಿ ನಿಮ್ಮ ಬಾಯಿಯನ್ನು ತೊಳೆಯಿರಿ. ಇದು ಒಸಡುಗಳಿಗೆ ಹಾನಿಯಾಗದಂತೆ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ.