ಶಿವಮೊಗ್ಗ: ಈ ಬಾರಿ ಜೆಡಿಎಸ್ ನಮ್ಮೊಂದಿಗೆ ಕೈ ಜೋಡಿಸಿರುವುದು ನೂರಕ್ಕೆ ನೂರು ನಮಗೆ ಶಕ್ತಿ ಬಂದಂತಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮೊದಲನೇ ಲೋಕಸಭಾ ಚುನಾವಣೆಯಲ್ಲಿ 50 ಸಾವಿರ, ಎರಡನೇ ಚುನಾವಣೆ ಯಲ್ಲಿ 70 ಸಾವಿರ, ಮೂರನೇ ಚುನಾವಣೆಯಲ್ಲಿ 2 ಲಕ್ಷದ 35 ಸಾವಿರ ಮತಗಳ ಅಂತರದಿಂದ ಜನ ಆಶೀರ್ವಾದ ಮಾಡಿದ್ದಾರೆ.
ಪ್ರತಿ ಚುನಾವಣೆಯಲ್ಲಿಯೂ ಮತದಾರರ ವಿಶ್ವಾಸ ಹೆಚ್ಚಾಗುತ್ತಿದೆ. ಈ ಕಳೆದ ಬಾರಿ ಕೊಟ್ಟ ಲೀಡ್ ಮೀರಿ ಹೆಚ್ಚು ಮತಗಳ ಅಂತರದಿಂದ ಈ ಬಾರಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ. ಈ ಬಾರಿ ಜೆಡಿಎಸ್ ನಮ್ಮೊಂದಿಗೆ ಕೈ ಜೋಡಿಸಿರುವುದು ನೂರಕ್ಕೆ ನೂರು ನಮಗೆ ಶಕ್ತಿ ಬಂದಂತಾಗಿದೆ ಎಂದರು.
ಬಿಸಿಲ ಉರಿಗೆ ಬೆಂದ ಜನರು.! ಬಿಸಿಲ ಬೇಗೆಯಿಂದ ಪಾರಾಗಲು ಹೀಗೆ ಮಾಡಿ ಸಾಕು..
ಇನ್ನೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರ ಮನಸ್ಸು ತುಂಬಾ ದೊಡ್ಡದು. ದೇಶದ ಹಿತದೃಷ್ಟಿಯಿಂದ, ಜನರ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಹಾಗೂ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದ ಅವರು, ರಾಘವೇಂದ್ರ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂಬ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ,
ಅವರು ಒಂದೂಂದು ಹೆಜ್ಜೆ ಇಟ್ಟರೂ ರಾಘಣ್ಣ ಕಟ್ಟಿಸಿದ ಕಟ್ಟೆಗಳು ಕಾಣುತ್ತವೆ. ಅದರ ಪಟ್ಟಿಯನ್ನು ಬೇಕಾದರೆ ಅವರಿಗೆ ಕೊಡುತ್ತೇನೆ. ನೀರಾವರಿ, ರಸ್ತೆ – ಚರಂಡಿ, ವಿದ್ಯುತ್ ದೀಪ, ಸಮುದಾಯ ಭವನ, ಬಿಎಸ್ಎನ್ಎಲ್ ಟವರ್ಗಳಿರಬಹುದು. ಅವರಿಗೆ ಎಲ್ಲೆಲ್ಲಿ ಕಟ್ಟೆ ನೋಡಬೇಕು ಅಂತ ಅನಿಸುತ್ತೆ ಹೇಳಲಿ, ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಪಟ್ಟಿ ಕೊಡುವ ಕೆಲಸ ಮಾಡುತ್ತೇನೆ ಎಂದು ತಿರುಗೇಟು ನೀಡಿದರು.