ಹಲವು ಜನರಿಗೆ ಬೂದು ಕೂದಲು ಅಥವಾ ಬಿಳಿ ಕೂದಲು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಅದರಲ್ಲಿಯೂ ಕೆಲವರು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಬಿಳಿ ಕೂದಲು ಹೊಂದುತ್ತಿದ್ದಾರೆ. ಹೆಚ್ಚಿನ ಒತ್ತಡ ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳಿಂದ ಕೂದಲು ಬೆಳ್ಳಗಾಗುತ್ತಿರುವ ಸಮಸ್ಯೆ ಕಾಡುತ್ತಿರಬಹುದು. ಕೆಲವು ಮನೆ ಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಕೂದಲು ಉದುರುವಿಕೆಯನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು.
ಸೀಬೆಯ ಹಣ್ಣಿನ ಎಲೆಗಳಲ್ಲಿ ಕಂಡುಬರುವ ದೊಡ್ಡ ಪ್ರಮಾಣದ ವಿಟಮಿನ್ ಬಿ ಮತ್ತು ಸಿ ಕಿರುಚೀಲಗಳ ಪೋಷಣೆಗೆ ಮತ್ತು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿನ ಇತರ ಅನೇಕ ಔಷಧೀಯ ಪ್ರಯೋಜನಗಳ ಪೈಕಿ,ಪೇರಲ ಎಲೆಗಳಲ್ಲಿನ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡ ಬಲ್ಲವು.
ಇದರಿಂದಾಗಿ ಇದು ಕೂದಲು ಹಾನಿಯಾಗುವುದನ್ನು ತಡೆಯುತ್ತದೆ. ಸೀಬೆಯ ಎಲೆಯಲ್ಲಿರುವ ನೋವು ನಿವಾರಕ, ಆಂಟಿ ಮೈಕ್ರೋಬಿಯಲ್, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಲಕ್ಷಣಗಳು ಅತ್ಯುತ್ತಮ ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ತಲೆಹೊಟ್ಟು ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಇದರ ಸಾರವನ್ನು ನಿಮ್ಮ ನೆತ್ತಿಗೆ ಹಾಳಾಗಿ ಮಸಾಜ್ ಮಾಡುವ ಮೂಲಕ ನೀವು ಇದನ್ನು ಮಾಡಬಹುದು.
ಸೀಬೆ ಎಲೆ
ನಿಮ್ಮ ಕೂದಲನ್ನು ಪೋಷಿಸಲು ಯಾವಾಗಲೂ ನೈಸರ್ಗಿಕವಾಗಿ ಲಾಭ ನೀಡುವಂತಹ ಪದಾರ್ಥಗಳನ್ನು ಬಳಸಿ. ಅಂತಹ ನೈಸರ್ಗಿಕ ಪದಾರ್ಥಗಳಲ್ಲಿ ಸೀಬೆ ಎಲೆ ಪ್ರಮುಖವಾಗಿದೆ. ಸೀಬೆ ಎಲೆಗಳನ್ನು ಪ್ರಾಚೀನಕಾಲದಿಂದಲೂ ಸೌಂದರ್ಯ ಪರಿಹಾರವೆಂದು ಪರಿಗಣಿಸಲಾಗಿದೆ. ಏಕೆಂದರೆ ಅವುಗಳು ವಿಟಮಿನ್ ಬಿ ಸಂಕೀರ್ಣದಿಂದ ತುಂಬಿರುತ್ತವೆ.
ಇದು ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನಿಮ್ಮ ಆರೋಗ್ಯಕರ ಕೂದಲಿಗೆ ಇದರ ಎಲೆಗಳನ್ನು ಹಲವು ವಿಧಗಳಲ್ಲಿ ಬಳಸಬಹುದು. ಅಂದರೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಇದರ ಎಲೆಗಳನ್ನು ಬಳಸಿಕೊಳ್ಳಿ.
ಕೂದಲು ಸೊಂಪಾಗಿ ಬೆಳೆಯಲು ಸಹಕಾರಿ
ಸೀಬೆ ಮರದ ಎಲೆಗಳು ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ. ಸೀಬೆ ಹಣ್ಣಿನಲ್ಲಿ ಮನುಷ್ಯನ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ದೊರೆಯುತ್ತವೆ. ಕೂದಲು ಉದುರುವಿಕೆಗೆ ಹಲವಾರು ರೀತಿಯ ಸಮಸ್ಯೆಗಳು ಇರುತ್ತವೆ.ಸಮಸ್ಯೆಗಳು ಯಾವುದೇ ಇರಲಿ ಕೂದಲು ಉದುರುವಿಕೆಯನ್ನು ನಿಯಂತ್ರಣಕ್ಕೆ ತರಲು ಉತ್ತಮ ಪರಿಹಾರ ಆಗುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಕೂದಲಿನ ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡುವಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಅಲ್ಲದೆ ಸೀಬೆ ಎಲೆಯು ಸುಲಭವಾಗಿ ದೊರೆಯುತ್ತದೆ.
ವಾರಕ್ಕೆ ಕನಿಷ್ಠ ಮೂರು ಬಾರಿ ಬಳಸಿ
ಕೂದಲು ಯಾವ ಪ್ರಮಾಣದಲ್ಲಿ ಉದುರುತ್ತಿದೆ ಎನ್ನುವ ಆಧಾರದ ಮೇಲೆ ಇದನ್ನು ಬಳಸಿ. ನಿಮ್ಮ ಕೂದಲು ವಿಪರೀತವಾಗಿ ಉದುರುತ್ತಿದ್ದರೆ ವಾರಕ್ಕೆ ಕನಿಷ್ಠ ಮೂರು ಬಾರಿ ಸೀಬೆ ಮರದ ಎಲೆಗಳನ್ನು ಬಳಸಿ.ನಿಮಗೆ ಯಾವುದೇ ರೀತಿಯ ಕೂದಲು ಉದುರುವ ಸಮಸ್ಯೆ ಇಲ್ಲ ಅದರ ಬದಲಾಗಿ ಕೂದಲು ಸೊಂಪಾಗಿ ಬೆಳೆಯಬೇಕೆಂಬ ಬಯಕೆ ಇದ್ದರೆ ವಾರಕ್ಕೆ ಎರಡು ಬಾರಿ ಉಪಯೋಗಿಸಿದರೆ ಸಾಕು.
ಇದನ್ನು ಬಳಸಿದ ನಂತರ ನಿಮ್ಮ ಕೂದಲನ್ನು ತೊಳೆಯಲು ತಣ್ಣೀರನ್ನು ಬಳಸಿ. ಅತಿ ಹೆಚ್ಚಾದ ಬಿಸಿನೀರನ್ನು ಬಳಸುವುದರಿಂದ ನಿಮ್ಮ ಕೂದಲು ಒರಟಾಗುತ್ತದೆ.ಕೂದಲು ಉದುರುವುದನ್ನು ತಡೆಗಟ್ಟುವುದರ ಜೊತೆಗೆ ಇತರ ಯಾವುದೇ ರೀತಿಯ ಸೋಂಕಿಗೆ ನಿಮ್ಮ ಕೂದಲು ಒಳಗಾಗಿದ್ದರು ಸಹ ಅದನ್ನು ಪರಿಹಾರ ಮಾಡುತ್ತದೆ. ನೀವೇನಾದರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ , ಸೀಬೆ ಎಲೆಯಿಂದ ತಯಾರಿಸಿದ ಸೀರಮ್ ಅನ್ನು ಬಳಸಿ. ಇದು ನಿಮ್ಮ ಕೂದಲು ಉದುರುವ ಸಮಸ್ಯೆಗೆ ಪರಿಹಾರ ವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.