ನೈರೋಬಿ ರಾಷ್ಟ್ರೀಯ ಉದ್ಯಾನವನದ ಮೇಲೆ ಎರಡು ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಸಣ್ಣ ವಿಮಾನ ಪತನಗೊಡಿದ್ದು ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐವರು ಸಿಬ್ಬಂದಿ ಸೇರಿದಂತೆ 44 ಪ್ರಯಾಣಿಕರನ್ನ ಹೊತ್ತ ಸಫಾರಿಲಿಂಕ್ ಏವಿಯೇಷನ್ ಏರ್ಲೈನ್ ನಿರ್ವಹಿಸುವ ಡ್ಯಾಶ್-8 ದೊಡ್ಡ ವಿಮಾನವು ಕರಾವಳಿ ರೆಸಾರ್ಟ್ ಪಟ್ಟಣ ಡಯಾನಿಗೆ ತೆರಳುತ್ತಿದ್ದಾಗ ವಿಲ್ಸನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೂಡಲೇ ಸಿಬ್ಬಂದಿ ದೊಡ್ಡ ಸ್ಫೋಟವನ್ನ ವರದಿ ಮಾಡಿದೆ ಎಂದು ವಿಮಾನಯಾನ ಸಂಸ್ಥೆ ವರದಿ ಮಾಡಿದೆ.
ಪೊಲೀಸ್ ವರದಿಯ ಪ್ರಕಾರ, ಡ್ಯಾಶ್ 8 99 ಫ್ಲೈಯಿಂಗ್ ಸ್ಕೂಲ್ ನಿರ್ವಹಿಸುವ ಸಿಂಗಲ್ ಎಂಜಿನ್ ಸೆಸ್ನಾ 172 ಗೆ ಡಿಕ್ಕಿ ಹೊಡೆದಿದೆ.