ಗದಗ:- ಸಿಇಎನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸಾರ್ವಜನಿಕವಾಗಿ ಜನನಿಬಿಡ ಬಸ್ ನಿಲ್ದಾಣದ ಬಳಿ ರಸ್ತೆಯ ಮೇಲೆ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಟಂ ಟಂ ಚಾಲಕರ ಮೇಲೆ ದಾಳಿ ಮಾಡಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಸಿಇಎನ್ ಪೊಲೀಸ್ ಠಾಣೆಯ ಎಸ್. ಎಮ್. ಶಿರಗುಪ್ಪಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು, ಹುಲಕೋಟಿ ಗ್ರಾಮದ ಸಾಯಿ ನಗರ ನಿವಾಸಿಗಳಾದ ಟಂ ಟಂ ಚಾಲಕರಾದ ಮಣಿಕಂಠ ತಂದೆ ಕರಿಯಪ್ಪ ಕೊಂಡಿಕೊಪ್ಪ (22), ಹರೀಶ್ ತಂದೆ ಹನಮಂತಪ್ಪ ಹರಕುಣಿ (23) ಎಂಬ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮರಿಯಪ್ಪ ತಂದೆ ಕರಿಯಪ್ಪ ಕವಡಿಕಿ ಎಂಬ ಟಂ ಟಂ ಚಾಲಕ ಪರಾರಿಯಾಗಿದ್ದಾನೆ.
ಬಂಧಿತರಿಂದ 13,440 ರೂ. ಮೌಲ್ಯದ 448 ಗ್ರಾಮ ಗಾಂಜಾ ಹಾಗೂ ಟಂಟಂ ಜಪ್ತಿ ಮಾಡಲಾಗಿದೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.