ಇಂದಿನ ಡಿಜಿಟಲ್ ಯುಗದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಉಪಯೋಗಿಸುವ ಎಮೋಜಿಯ ದಿನ. ಅನೇಕರು ಫೇಸ್ಬುಕ್, ವಾಟ್ಸ್ಆ್ಯಪ್ , ಇನ್ಸ್ಟಾಗ್ರಾಮ್, ಟೆಲಿಗ್ರಾಂ ಆ್ಯಪ್ಗಳಲ್ಲಿ ನಮ್ಮ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದೇ ಎಮೋಜಿಯನ್ನು ಕಳಿಸಿ ಮನಸ್ಸಿನ ಮಾತನ್ನು ತಿಳಿಸುತ್ತೇವೆ. ಸಿಟ್ಟು, ಖುಷಿ, ನಗು, ಅಳು ಎಲ್ಲವನ್ನು ತಿಳಿಸಲು ಕೇವಲ ಒಂದು ಎಮೋಜಿ ಸಾಕಾಗುವ ಕಾಲ ಇದಾಗಿದ್ದು, ನೂರಾರು ಪದಗಳ ಮೂಲಕ ಹೇಳುವ ಟೆಕ್ಸ್ಟ್ ಮೆಸೇಜ್ಗಿಂತ ಒಂದು ಎಮೋಜಿ ಭಾವೆನಗಳನ್ನ ವ್ಯಕ್ತಪಡಿಸುತ್ತದೆ. ಅಷ್ಟರ ಮಟ್ಟಿಗೆ ಎಮೋಜಿಗಳು ಇಂದು ಎಲ್ಲರ ನೆಚ್ಚಿನ ಆಯ್ಕೆಯಾಗಿದೆ. ಈ ಎಮೋಜಿ ಪ್ರಾರಂಭವಾಗಿದ್ದು ಯಾವಾಗ? ಎಲ್ಲಿ? ಇದರ ಇತಿಹಾಸವೇನು?, ಅತಿ ಹೆಚ್ಚಾಗಿ ಬಳಕೆಯಲ್ಲಿರುವ ಎಮೋಜಿ ಯಾವುದು? ಎಂಬುದನ್ನು ನೋಡೋಣ.
ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಪ್ರಕಾರ, ಟಿಯರ್ಸ್ ಆಫ್ ಜಾಯ್ ಭಾರತದಲ್ಲಿ ಹೆಚ್ಚು ಬಳಸುತ್ತಿರುವ ಎಮೋಜಿ. ಪ್ರಾರ್ಥನೆ ಮಾಡುವ ಎಮೋಜಿ, ಅಳುವ ಎಮೋಜಿ, ಥಂಬ್ಸ್ ಅಪ್ ಎಮೋಜಿ, ಆರ್ಒಎಫ್ಎಲ್ ಎಮೋಜಿ, ಹೃದಯ ಕಣ್ಣುಗಳ ಎಮೋಜಿ, ಪ್ಲೀಡಿಂಗ್ ಫೇಸ್ ಎಮೋಜಿ, ಸ್ಮೈಲ್ ಎಮೋಜಿ, ಫೈರ್ ಎಮೋಜಿ, ಮತ್ತು ನಗುತ್ತಿರುವ ಕಣ್ಣುಗಳ ಎಮೋಜಿಗಳೊಂದಿಗೆ ಮುಖವನ್ನು ನಗೆಗಡುತ್ತದೆ.
BPL ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 1.73 ಲಕ್ಷ ರೇಷನ್ ಕಾರ್ಡ್ ವಿತರಣೆ – ಕೆಎಚ್ ಮುನಿಯಪ್ಪ ಸ್ಪಷ್ಟನೆ
ಎನ್ಟಿಟಿ ಡೊಕೊಮೊ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿದ್ದ ತಂಡದಲ್ಲಿದ್ದ ಶಿಗೇತಾಕ ಕುರಿಟಾ ಮೊದಲ ಎಮೋಜಿಯನ್ನು ರಚಿಸಿದರು. ಅವರನ್ನು ಎಮೋಜಿಗಳ ಪಿತಾಮಹಾ ಎಂದು ಕರೆಯಲಾಗುತ್ತದೆ. ನಂತರ ಎಮೋಜಿಗಳನ್ನು ಹೆಚ್ಚು ಬಳಕೆಗೆ ತಂದ ಕೀರ್ತಿ ಎನ್ಟಿಟಿ ಡೊಕೊಮೊ, ವೊಡಾಫೋನ್ನಂಥ ಕಂಪನಿಗಳಿಗೆ ಸಲ್ಲುತ್ತದೆ. 2000ನೇ ಇಸವಿಯಲ್ಲಿ 1,000ಕ್ಕೂ ಹೆಚ್ಚು ಗ್ರಾಫಿಕಲ್ ಸ್ಮೈಲಿಗಳನ್ನು ಪರಿಚಯಿಸಲಾಯಿತು. ಈಗ ಕಾಲಕಾಲಕ್ಕೆ ಹೊಸ ಹೊಸ ಎಮೋಜಿಗಳು ಅಭಿವೃದ್ಧಿ ಹೊಂದುತ್ತಿವೆ.
ಸಂದೇಶಗಳ ಮೂಲಕ ನಡೆಸುವ ಸಂವಹನಗಳಿಗಿಂತ ಎಮೋಜಿಗಳು ವೇಗವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಹಾಗಾಗಿ ಎಮೋಜಿ ಇಂದು ಹೆಚ್ಚು ಬಳಕೆಯಲ್ಲಿದೆ. 2010 ರಲ್ಲಿ ಎಮೋಜಿ ಯುನಿಕೋಡ್ ಪ್ರಾರಂಭವಾಯಿತು. ಆ ಸಮಯದಲ್ಲಿ 625 ಸ್ಟ್ಯಾಂಡರ್ಡ್ ಎಮೋಜಿಗಳಿದ್ದವು. ಈಗ ಸುಮಾರು 4 ಸಾವಿರಕ್ಕೂ ಅಧಿಕ ಎಮೋಜಿಗಳು ಬಳಕೆಯಲ್ಲಿದೆ.
2011ರಲ್ಲಿ ಆ್ಯಪಲ್ ತನ್ನ ಐಒಎಸ್ ಕೀಬೋರ್ಡ್ನಲ್ಲಿ ಎಮೋಜಿಯನ್ನು ಸೇರಿಸಿತು. ಆನಂತರ ಆ್ಯಂಡ್ರಾಯ್ಡ್ ಕೂಡ ಈ ಆಯ್ಕೆಯನ್ನು ನಕಲು ಮಾಡಿತು ಎನ್ನಬಹುದು. ಎಮೋಜಿಗಳ ಬಳಕೆ ಹೆಚ್ಚಾಗಿದ್ದು ವ್ಯಾಟ್ಸ್ಆ್ಯಪ್ ಬಂದ ಮೇಲೆ ಎಂದರೆ ತಪ್ಪಾಗಲಾರದು. ವಿಶ್ವದಾದ್ಯಂತ ಅನೇಕರು ವಾಟ್ಸ್ಆ್ಯಪ್ ಅನ್ನು ಬಳಸುತ್ತಿದ್ದಾರೆ. ಹಾಗಾಗಿ ವ್ಯಾಟ್ಸ್ಆ್ಯಪ್ ಕೂಡ ಬಳಕೆದಾರರಿಗೆ ಸಂದೇಶವನ್ನು ಸುಲಭವಾಗಿ ಕಳುಹಿಸಲು ಎಮೋಜಿ ಆಯ್ಕೆಯನ್ನು ನೀಡಿತು. ಇತ್ತೀಚೆಗೆ ವಾಟ್ಸ್ಆ್ಯಪ್ ಮೆಸೇಜ್ ರಿಯಾಕ್ಷನ್ ಎಂಬ ಹೊಸ ಆಯ್ಕೆಯನ್ನು ಕೂಡ ನೀಡಿದೆ. ಸ್ಮಾರ್ಟ್ಫೋನ್ಗಳ ಮೆಸೇಜಿಂಗ್ ಸೇವೆಗಳ ಬಳಕೆ ಹೆಚ್ಚುತ್ತಿದ್ದಂತೆ ಇವುಗಳ ಬಳಕೆಯೂ ಹೆಚ್ಚಾಯಿತು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಬೇರೆ ಬೇರೆ ತಂತ್ರಾಂಶ ಬಳಸುವ ಸಾಧನಗಳಲ್ಲಿ ನಾವು ಬೇರೆ ಬೇರೆ ವಿನ್ಯಾಸದ ಎಮೋಜಿಗಳನ್ನು ನೋಡಬಹುದು. 2013ರಲ್ಲಿ ಆಕ್ಸ್ಫರ್ಡ್ ಡಿಕ್ಷನರಿ ಎಮೋಜಿ ಪದವನ್ನು ಸೇರಿಸಿತು. 2014ರಲ್ಲಿ ಎಮೋಜಿ ಪಿಡಿಯಾದ ಜೆರೆಮಿ ಬರ್ಜ್ ವಿಶ್ವ ಇಮೋಜಿ ದಿನವನ್ನು ಸ್ಥಾಪಿಸಿದರು. ಆಪಲ್ ಸಂಸ್ಥೆ ತಯಾರಿಸಿದ ಐಫೋನ್, ಐಪ್ಯಾಡ್ ಮುಂತಾದ ಸಾಧನಗಳಲ್ಲಿರುವ ಎಮೋಜಿಗಳ ಪೈಕಿ ಕ್ಯಾಲೆಂಡರ್ ಚಿತ್ರವಿರುವ ಇಮೋಜಿಯನ್ನು ಜುಲೈ 17 ರಂದು ಪ್ರದರ್ಶಿಸಲಾಯಿತು. ಹಾಗಾಗಿ ಈ ದಿನವನ್ನು ಇಮೋಜಿ ದಿನವ್ನನಾಗಿ ಆಚರಿಸಲು ಅವರು ಆಯ್ಕೆ ಮಾಡಿಕೊಂಡರು.